Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಶಿವನನ್ನು ಆರಾಧಿಸಲು ಪರಿಣಾಮಕಾರಿ ಸುಲಭ ಮಂತ್ರಗಳು
ದೇವರುಗಳಲ್ಲಿ ಶಿವನನ್ನು ಮನಃಸ್ಪೂರ್ತಿಯಾಗಿ ಆರಾಧಿಸಿದರೆ ಬೇಗ ಒಲಿದು ಬಿಡುತ್ತಾನೆ ಮತ್ತು ಬೇಡಿದ ವರವನ್ನು ಕರುಣಿಸುತ್ತಾನೆ ಎಂಬುದು ಅಚಲವಾಗಿರುವ ನಂಬಿಕೆ. ಶಿವನ ಆರಾಧನೆಯಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ ಎಂದು ಹೇಳಲಾಗುತ್ತದೆ.

ಶಿವನ ಆರಾಧನೆಗೆ ಹಲವು ಮಂತ್ರಗಳಿವೆ. ಅದರಲ್ಲಿ ನಿಮ್ಗೆ ಹೊಂದಿಕೆಯಾಗುವ ಸುಲಭವಾಗಿರುವ ಕೆಲವು ಮಂತ್ರಗಳ ಬಗ್ಗೆ ನಾವಿಲ್ಲಿ ನಿಮಗೆ ತಿಳಿಸಿಕೊಡುತ್ತಿದ್ದೇವೆ.

ಪಂಚಾಕ್ಷರಿ ಶಿವ ಮಂತ್ರ
ಓಂ ನಮಃ ಶಿವಾಯ
ಇದರ ಅರ್ಥ -ನಾನು ಶಿವನಿಗೆ ನಮಸ್ಕರಿಸುತ್ತೇನೆ
ಓಂ ನಮಃ ಶಿವಾಯದ ಅರ್ಥವೇನೆಂದರೆ ಶಿವನಿಗೆ ನಾನು ನಮಸ್ಕರಿಸುತ್ತಿದ್ದೇನೆ. ಶಿವ ಇಲ್ಲಿ ಸರ್ವೋಚ್ಛ. ಇನ್ನೊಂದು ರೀತಿಯಲ್ಲಿ ಹೇಳುವುದಾದರೆ ಶಿವ ಇಲ್ಲಿ ಆಂತರಿಕ ಆತ್ಮ. ಈ ಮಂತ್ರವನ್ನು ಪಠಿಸುವುದರಿಂದಾಗಿ ನೀವು ನಿಮ್ಮ ಅಂತರಾತ್ಮವನ್ನು ಕರೆಯುತ್ತೀರಿ, ಭಜಿಸುತ್ತೀರಿ. ಸುರಕ್ಷತೆ ಮತ್ತು ರಕ್ಷಣೆಯನ್ನು ಬಯಸುತ್ತಿರುವವರಿಗಾಗಿ ಶಿವ ಪಂಚಾಕ್ಷರಿ ಮಂತ್ರ ಬಹಳ ಒಳ್ಳೆಯದು. ನಿಮ್ಮೊಳಗಿನ ಶಕ್ತಿಯನ್ನು ಇದು ಅಭಿವೃದ್ಧಿ ಪಡಿಅಉತ್ತದೆ ಮತ್ತು ಜೀವನವನ್ನು ಧನಾತ್ಮಕ ಶಕ್ತಿಯಿಂದ ಭರ್ತಿ ಮಾಡುತ್ತದೆ. ಈ ಮಂತ್ರವನ್ನು ಪ್ರತಿಯೊಬ್ಬರೂ ಹೇಳಬಹುದು ಮತ್ತು ಇದಕ್ಕೆ ಯಾವುದೇ ನಿಯಮಗಳಿಲ್ಲ. ನೀವಿದನ್ನು ಎಲ್ಲಿ ಬೇಕಿದ್ದರೂ ಯಾವಾಗ ಬೇಕಿದ್ದರೂ ಪುನರಾವರ್ತಿಸುತ್ತಾ ಇರಬಹುದು.

ಮಹಾಮೃತ್ಯುಂಜಯ ಮಂತ್ರ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||
ಶಿವನ ಬಹಳ ಶಕ್ತಿಶಾಲಿ ಮಂತ್ರ ಎಂದು ಮಹಾಮೃತ್ಯುಂಜಯ ಮಂತ್ರಕ್ಕೆ ಹೇಳಲಾಗುತ್ತದೆ. ಓಂ ನಮಃ ಶಿವಾಯವನ್ನು ನೀವು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಹೇಳಬಹುದು ಆದರೆ ಈ ಮಂತ್ರಕ್ಕೆ ಕೆಲವು ನಿಯಮಗಳಿವೆ. ಈ ಮಂತ್ರವನ್ನು ಯಾವಾಗ ಮತ್ತು ಹೇಗೆ ಹೇಳಬೇಕು ಎಂಬುದನ್ನು ನೀವು ಅರಿತಿರಬೇಕಾದ ಅಗತ್ಯತೆ ಇದೆ. ಈ ಮಂತ್ರವನ್ನು ಹೇಳುವುದರಿಂದಾಗಿ ನಿಮ್ಮ ಜೀವನಕ್ಕೆ ಶಕ್ತಿ ಮತ್ತು ಇತರೆ ಕೆಲವು ಪ್ರಮುಖ ಲಾಭಗಳಾಗುತ್ತದೆ. ಸಂಸ್ಕ್ರತ ಶಬ್ದವಾಗಿರುವ ಮಹಾ ಮೃತ್ಯುಂಜಯ ಎಂದರೆ ಸಾವನ್ನು ಗೆಲ್ಲುವವನು ಎಂದರ್ಥ. ನಿಮ್ಮ ಸಾವಿನ ಬಗ್ಗೆ ನಿಮಗಿರುವ ಭಯವನ್ನು ಹೋಗಲಾಡಿಸಿಕೊಳ್ಳಲು ಮತ್ತು ಆ ನಿಟ್ಟಿನಲ್ಲಿ ನೀವು ಯಾವುದಾದರೂ ಕಾಯಿಲೆಯಿಂದ ಬಳಲುತ್ತಿರುವಾಗ ಈ ಮಂತ್ರವನ್ನು ಪಠಿಸುವುದು ಒಳ್ಳೆಯದು.

ರುದ್ರ ಮಂತ್ರ
ಓಂ ನಮೋ ಭಗವತೇ ರುದ್ರಾಯ
ಈ ರುದ್ರ ಮಂತ್ರವು ಶಿವನನ್ನು ತಲುಪಲು ಇರುವ ಹತ್ತಿರದ ಮಾರ್ಗ ಎಂದು ಹೇಳಬಹುದು. ಮಹಾಶಿವನಿಂದ ಆಶೀರ್ವಾದ ಪಡೆಯುವುದಕ್ಕಾಗಿ ಈ ಮಂತ್ರವನ್ನು ಬಳಸಲಾಗುತ್ತದೆ.ಶಿವನಿಂದ ನಿಮ್ಮ ಇಷ್ಟಾರ್ಥ ಸಿದ್ಧಿಸುವುದಕ್ಕಾಗಿ ಈ ಮಂತ್ರ ಪಠಣೆ ಮಾಡಬಹುದು.

ಶಿವ ಗಾಯತ್ರಿ ಮಂತ್ರ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರ ಪ್ರಚೋದಯಾತ್
ಹಿಂದೂ ಮಂತ್ರಗಳಲ್ಲಿ ಗಾಯತ್ರೀ ಮಂತ್ರವು ಅತ್ಯಂತ ಶಕ್ತಿಶಾಲಿಯಾಗಿರುವ ಮಂತ್ರ ಎಂಬುದು ಎಲ್ಲರಿಗೂ ತಿಳಿದಿದೆ. ಅದರಲ್ಲಿ ಇದು ಶಿವ ಗಾಯತ್ರೀ ಮಂತ್ರ. ನಿಮ್ಮ ಮನಶಾಂತಿಮನ್ನು ನೀವು ಬಯಸುತ್ತಿದ್ದರೆ ಮತ್ತು ಶಿವನನ್ನು ಭಜಿಸಬೇಕು ಎಂದು ಅಂದುಕೊಳ್ಳುತ್ತಿದ್ದರೆ ಈ ಮಂತ್ರವನ್ನು ಹೇಳಬಹುದು.

ಶಿವ ಧ್ಯಾನ ಮಂತ್ರ
ಕರ್ಚರನ್‌ಕೃತಂ ವಾ ಕೈಜಮ್ ಕರ್ಮಜಂ ವಾ ಶ್ರಾವಣ್ಣನಂಜಂ ವಾ ಮಾನ್ಸಮ್ ವಾ ಪರಧಮ್
ವಿಹಿತಂ ವಿಹಿತಂ ವಾ ಸರ್ವ್ ಮೆಟಾಟ್ ಕ್ಷಮಾಸ್ವ ಜೇ ಜೇ ಕರುನಾಬ್ಧೆ ಶ್ರೀ ಮಹಾದೇವ್ ಶಂಭೋ
ಒಂದು ವೇಳೆ ನೀವು ಶಿವನನ್ನು ಧ್ಯಾನ ಮಾಡಲು ನೀವು ಬಯಸುತ್ತಿದ್ದರೆ ಶಿವ ಧ್ಯಾನ ಮಂತ್ರ ನಿಮಗಾಗಿ ಇಲ್ಲಿದೆ ನೋಡಿ. ನೀವು ನಿಮ್ಮ ಜೀವನದಲ್ಲಿ ಮಾಡಿದ ಎಲ್ಲಾ ತಪ್ಪುಗಳಿಗೆ ಕ್ಷಮೆ ಕೇಳಲು ಅಥವಾ ಹಿಂದೆ ಮಾಡಿದ ಪಾಪಕರ್ಮಗಳ ವಿಮೋಚನೆಗಾಗಿ ಈ ಮಂತ್ರವನ್ನು ಹೇಳಬಹುದು. ಒಟ್ಟಿನಲ್ಲಿ ನಿಮ್ಮ ಜೀವನದ ಋಣಾತ್ಮಕ ಶಕ್ತಿಗಳನ್ನು ಹೊಡೆದೋಡಿಸಲು ಈ ಮಂತ್ರ ಸಹಕಾರಿ.



Click it and Unblock the Notifications