Latest Updates
-
ಪರಿಸರ ಸ್ನೇಹಿ ಡೇಟಿಂಗ್: ₹300 ರೊಳಗೆ ನಿಮ್ಮ ಪ್ರೀತಿಯನ್ನು ಹಸಿರಾಗಿಸುವ 12 ಅದ್ಭುತ ಐಡಿಯಾಗಳು! -
ಬೆಂಗಳೂರು ಮಳೆ: ಮನೆಯಲ್ಲಿ ನೀರು ನುಗ್ಗಿದೆಯೇ? ತೇವ ಮತ್ತು ದುರ್ವಾಸನೆ ಹೋಗಲಾಡಿಸಲು ಇಲ್ಲಿವೆ ಸರಳ ಟಿಪ್ಸ್! -
ಡೆಂಗ್ಯೂ ಆತಂಕ: ಮಧುಮೇಹಿಗಳು ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿದೆ ವಿಶೇಷ ಆಹಾರ ಪ್ಲಾನ್ -
iPhone 18 ಸೇಲ್: ನಿಮ್ಮ ಹೊಸ ಫೋನ್ ಪಡೆಯಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ದೆಹಲಿ-ಎನ್ಸಿಆರ್ ಮಳೆ ಎಚ್ಚರಿಕೆ: ಹೊರಗೆ ಹೋಗುವ ಬದಲು ಮನೆಯಲ್ಲೇ ಮಾಡಿ 12 ನಿಮಿಷದ ವರ್ಕೌಟ್! -
ಸೆಪ್ಟೆಂಬರ್ 15ರ ಲವ್ ರಾಶಿಫಲ: ನಿಮ್ಮ ಸಂಗಾತಿಯ ಮನ ಗೆಲ್ಲಲು ಈ 2 ನಿಮಿಷದ ಸೂತ್ರ ಬಳಸಿ! -
ಮಳೆಗಾಲದ ಎಚ್ಚರಿಕೆ: ಮುಂಬೈ-ಪುಣೆಯಲ್ಲಿ ಮನೆ ಸೋರಿಕೆ ತಡೆಯಲು 30 ನಿಮಿಷದ ಸಿಂಪಲ್ ಟಿಪ್ಸ್ -
ಅಡುಗೆಮನೆ ಬಜೆಟ್ ಏರಿಕೆ: ₹30 ಕ್ಕಿಂತ ಕಡಿಮೆ ವೆಚ್ಚದಲ್ಲಿ ಆರೋಗ್ಯಕರ ಪ್ರೋಟೀನ್ ಆಹಾರ ಪಡೆಯುವುದು ಹೇಗೆ? -
iOS 27 ಅಪ್ಡೇಟ್ ನಂತರ ಫೋನ್ ಬ್ಯಾಟರಿ ಬೇಗ ಖಾಲಿಯಾಗುತ್ತಿದೆಯೇ? ಗಾಬರಿಯಾಗಬೇಡಿ, ಈ ಟಿಪ್ಸ್ ಫಾಲೋ ಮಾಡಿ! -
ಗಣೇಶ ವಿಸರ್ಜನೆ: ಮೂರ್ತಿ ಹೊರುವಾಗ ಬೆನ್ನು ನೋವು ಕಾಡದಿರಲು ಈ ಸರಳ ಟಿಪ್ಸ್ ಪಾಲಿಸಿ
ನೀವು ಬಯಸಿದ್ದು ನೆರವೇರಲು ದೇವರ ಪೂಜೆಯಲ್ಲಿ ಸಾಂಪ್ರದಾಯಿಕವಾದ ಈ 16 ಪೂಜಾವಿಧಿ ಪಾಲಿಸಿ
ನಾವು ಪೂಜೆಯನ್ನು ಮಾಡುವಾಗ ನಮ್ಮ ದೇಹ ಹಾಗೂ ಮನಸ್ಸನ್ನು ಶುದ್ಧ ಮಾಡಿ ದೇವರ ಪೂಜೆ ಮಾಡಬೇಕು. ಸ್ನಾನ ಮಾಡಿ, ಮಡಿ ವಸ್ತ್ರ ಧರಿಸಿದರೆ ದೇಹ ಶುದ್ಧವಾಗುತ್ತದೆ, ಮನಸ್ಸಿನಲ್ಲಿರುವ ಕೆಟ್ಟ ಆಲೋಚನೆಗಳನ್ನು ಹೊರಹಾಕಿ ದೇವರ ಪ್ರಾರ್ಥನೆ ಮಾಡಿ.

ನೀವು ದೇವರ ಪೂಜೆ ಮಾಡುವಾಗ 16 ವಿಧಿಗಳಿವೆ, ಅದರಂತೆ ಪೂಜೆ ಮಾಡಿದರೆ ಹೆಚ್ಚಿನ ಫಲ ಸಿಗುವುದು:
1. ದೇವರ ಕೋಣೆಯನ್ನು, ಮೂರ್ತಿಯನ್ನು ಸ್ವಚ್ಛಮಾಡಬೇಕು
ನೀವು ಸ್ನಾನ ಮಾಡಿ ಬಂದ ಮೇಲೆ ದೇವರ ಕೋಣೆಯನ್ನು ಸ್ವಚ್ಛ ಮಾಡಿ, ದೇವರ ಮೂರ್ತಿಯನ್ನು ಸ್ವಚ್ಛ ಮಾಡಿ.
2. ನಿಮ್ಮನ್ನು ಶುದ್ಧ ಮಾಡಿ
ನೀವು ಸ್ನಾನ ಮಾಡಿದ್ದರೂ ಕೂಡ ಸ್ವಲ್ಪ ಗಂಗಾಜಲವನ್ನು ಎಡಗೈಯಿಂದ ಸ್ಪೂನ್‌ನಲ್ಲಿ ತೆಗೆದು ಬಲಗೈಗೆ ಹಾಕಿ ಮಂತ್ರಗಳನ್ನು ಹೇಳುತ್ತಾ ಕುಡಿಯಿರಿ.
3. ದೀಪ ಜ್ಯೋತಿ ಬೆಳಗಿ
ಮಣ್ಣಿನ ದೀಪ ಅಥವಾ ಹಿತ್ತಾಳೆಯ, ಅಥವಾ ಬೆಳ್ಳಿಯ ದೀಪಕ್ಕೆ ತುಪ್ಪ ಅಥವಾ ಎಣ್ಣೆ ಹಾಕಿ ಎರಡು ಬತ್ತಿ ಹಾಕಿ ದೀಪ ಬೆಳಗಿ.
4.ಮೊದಲು ವಿಘ್ನೇಶನನ್ನು ಪೂಜಿಸಿ
ನೀವು ಮೊದಲು ವಿಘ್ನೇಶನನ್ನು ಪೂಜಿಸಿ, ವಿಘ್ನೇಶನ ಮಂತ್ರಗಳನ್ನು ಹೇಳಿ ಪೂಜಿಸಿ. ನಿಮ್ಮ ಎಲ್ಲಾ ದಿನದ ಕಾರ್ಯಗಳು ನಿರ್ವಿಘ್ನವಾಗಿ ನೆರವೇರಲಿ ಎಂದು ಪ್ರಾರ್ಥಿಸಿ.
5. ಪ್ರಾಣಯಾಮ ಮಾಡಿ
ಉಸಿರನ್ನು ನಿಧಾನವಾಗಿ ತೆಗೆದು ಹೊರಗಡೆ ಬಿಡಿ, ಈ ರೀತಿ ಮಾಡಿದಾಗ ನಿಮ್ಮ ಮನಸ್ಸು ಮತ್ತಷ್ಟು ಪ್ರಶಾಂತವಾಗುವುದು. ಬಲಗೈ ಜ್ಞಾನ ಮುದ್ರೆಯಲ್ಲಿರಲಿ, ಎಡಗೈಯ ಒಂದು ಬೆಳನಿಂದ ಬಲ ಮೂಗಿನ ಹೊಳ್ಳೆಯನ್ನು ಮುಚ್ಚಿ ಎಡಭಾಗದ ಮೂಗಿನಿಂದ ನಿಧಾನಕ್ಕೆ ಉಸಿರು ತೆಗೆಯಿರಿ. ಈಗ ಬಲಭಾಗದ ಮೂಗಿನಿ ಹೊಳ್ಳೆಯಿಂದ ಕೈ ತೆಗೆದು ಎಡಭಾಗದ ಹೊಳ್ಳೆಯನ್ನು ಮುಚ್ಚಿ ಬಲಭಾಗದ ಮೂಗಿನ ಮೂಲಕ ಉಸಿರು ಬಿಡಿ, ನಂತರ ಬಲಭಾಗದ ಮೂಗಿನಿಂದ ಉಸಿರು ತೆಗೆದು ಎಡಭಾಗದ ಮೂಗಿನ ಮೂಲ ಬಿಡಿ, ಈ ಬಾರಿ ಒಂದೆರಡು ಬಾರಿ ಅಥವಾ 9 ಬಾರಿ ಮಾಡಿದ ಮೇಲೆ ಎಡಭಾಗದ ಮೂಗಿನಿಂದ ಉಸಿರು ತೆಗೆದು ಎಡಭಾಗದಿಂದಲೇ ಬಿಡಬೇಕು.
ಈ ರೀತಿ ಮಾಡಿದಾಗ ಧ್ಯಾನದ ಕಡೆ ನಿಮ್ಮ ಗಮನ ಹೆಚ್ಚಾಗುವುದು.
6. ಸಂಕಲ್ಪ ಮಾಡಿ
ನೀವು ನಿಮಗೆ ಏನಾಗಬೇಕು ಆ ಸಂಕಲ್ಪ ಮಾಡಿ. ಒಂದು ವಿಷಯ ನೆನಪಿಡಿ ಸಂಕಲ್ಪ ಮಾಡುವಾಗ ಒಳಿತನ್ನೇ ಬಯಸಬೇಕು.
7. ಆಸನ ಪೂಜೆ ಮಾಡಿ
ದೇವರ ಮೂರ್ತಿಗಳನ್ನು ನೀವು ಭೂಮಿ ಮೇಲೆ ಇಟ್ಟಿರುತ್ತೀರಿ, ಆದ್ದರಿಂದ ಭೂ ದೇವತೆಯನ್ನು ಆರಾಧಿಸಿ.
8. ಘಂಟೆ ಪೂಜೆ
ಘಂಟೆ ಪೂಜೆ ಮಾಡುವುದರಿಂದ ಋಣಾತ್ಮಾಕ ಶಕ್ತಿಗಳು ಹೊರ ಹೋಗುವುದು, ಧನಾತ್ಮಕ ಶಕ್ತಿ ಹೆಚ್ಚುವುದು.
9. ಕಳಸ ಪೂಜೆ ಮಾಡಿ
ನೀವು ಪೂಜೆಯಲ್ಲಿ ಕಳಸವನ್ನು ಇಟ್ಟು ಪೂಜಿಸಬೇಕು. ಕಳಸದಲ್ಲಿ ಪಂಚ ಧಾನ್ಯಗಳಿರಬೇಕು.
10. ಆತ್ಮ ಪೂಜೆ
ನಮ್ಮ ದೇಹವೇ ಒಂದು ದೇಗುಲ, ಮೊದಲು ನಮ್ಮ ದೇಹದಲ್ಲಿರುವ ಆತ್ಮವನ್ನು ಪೂಜಿಸಬೇಕು, ಆತ್ಮ ಪೂಜೆ ಮಾಡುವುದರಿಂದ ದೇವರ ಬಗ್ಗೆ ನಂಬಿಕೆ ಹೆಚ್ಚಾಗುವುದು, ದೇವರಿಗೆ ಮತ್ತಷ್ಟು ಸಮೀಪವಾಗುವುದು.
11. ಗುರು ಧ್ಯಾನ
ಗುರು ವಿಷ್ಣು ಗುರು ದೇವೋ ಮಹೇಶ್ವರ| ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರುವೇ ನಮಃ ಅಂತ ಮಂತ್ರ ಹೇಳಿ ನಿಮ್ಮ ಗುರುವನ್ನು ವಂದಿಸಿ.
12.ಶೋಡೋಪಚಾರ ಪೂಜೆ
ಇದರಲ್ಲಿ 16 ಬಗೆಗಳಿವೆ
1. ಧ್ಯಾನ ಹಾಗೂ ಆಹ್ವಾನ
ನೀವು ದೇವರನ್ನು ಧ್ಯಾನ ಮಾಡಿ ನಂತರ ಆಹ್ವಾನೆ ಮಾಡಿ.
2. ಆಸನಂ
ದೇವರಿಗೆ ನೆಲಸಲು ಸ್ಥಳವನ್ನು ನೀಡಿ
3. ಆರ್ಘ್ಯ
ಮನೆಗೆ ಆಗಮಿಸಿದ ದೇವರಿಗೆ ಆರ್ಘ್ಯ ಅರ್ಪಿಸಿ
4. ನೈವೇದ್ಯ
ದೇವರಿಗೆ ಪಂಚಾಮೃತದ ನೈವೇದ್ಯ ಅರ್ಪಿಸಿ
5. ಅಭಿಷೇಕ
ದೇವರಿಗೆ ಜೇನು, ಸಕ್ಕರೆ, ಹಾಲು, ಮೊಸರು, ತುಪ್ಪದಿಂದ ಅಭಿಷೇಕ ಮಾಡಿ.
6. ವಸ್ತ್ರಂ
ನಂತರ ದೇವರಿಗೆ ವಸ್ತ್ರವನ್ನು ಹಾಕಿ ಅಲಂಕರಿಸಿ.
7. ದೇವರಿಗೆ ಪವಿತ್ರ ದಾರ ಅರ್ಪಿಸಿ
8. ದೇವರಿಗೆ ಆಭರಣಗಳನ್ನು ಅರ್ಪಿಸಿ
9. ಗಂಧವನ್ನು ಹಚ್ಚಿ
10. ಪುಷ್ಪಗಳನ್ನು ಅರ್ಪಿಸಿ
11. ಧೂಪ ಹಚ್ಚಿ
12. ದೀಪ ಹಚ್ಚಿ
13. ನೈವೇದ್ಯ
14. ತಾಂಬೂಲ
15. ಕರ್ಪೂರ ಪೂಜೆ
16. ಪ್ರದಕ್ಷಿಣೆ



Click it and Unblock the Notifications




