Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಮಲೆಯಾಳಿಗರ ಅಚ್ಚುಮೆಚ್ಚಿನ ಹಬ್ಬ ಓಣಂ 2019: ವಿಶೇಷತೆ ಹಾಗೂ ಮಹತ್ವ
ಓಣಂ ಹಬ್ಬವು ಕೇರಳದ ರಾಷ್ಟ್ರೀಯ ಹಬ್ಬವಾಗಿದ್ದು ಇದನ್ನು ಇಲ್ಲಿನ ಜನತೆ ಹೆಚ್ಚು ಸಂಭ್ರಮ ಮತ್ತು ಸಡಗರದಿಂದ ಆಚರಿಸುತ್ತಾರೆ. ಆಗಸ್ಟ್ ಮತ್ತು ಸೆಪ್ಟೆಂಬರ್ ಮಾಸದಲ್ಲಿ ಬರುವ ಈ ಹಬ್ಬವು ಮಲಯಾಳಂ ಮಾಸದ ಚಿಂಗಮ್ ಮಾಸದಂದೇ ಬರುತ್ತದೆ. ಕ್ಯಾಲೆಂಡರ್ ಪ್ರಕಾರವಾಗಿ ಚಿಂಗಮ್ ಮಾಸವು ವರ್ಷದ ಆರಂಭ ಮಾಸದಲ್ಲೇ ಬರುತ್ತದೆ. ಹತ್ತು ದಿನಗಳ ಕಾಲ ಈ ಹಬ್ಬವನ್ನು ಆಚರಿಸಲಾಗುತ್ತಿದ್ದು ಜನರು ರಾಷ್ಟ್ರೀಯ ಹಬ್ಬವನ್ನು ಪ್ರತ್ಯೇಕವಾಗಿ ತಮ್ಮದೇ ಶೈಲಿಯಲ್ಲಿ ಆಚರಿಸುತ್ತಾರೆ.
ಈ ಬಾರಿ ಸೆಪ್ಟೆಂಬರ್ 1 ರಿಂದ 13ರವರೆಗೆ ಓಣಂ ಹಬ್ಬವನ್ನು ಆಚರಿಸುತ್ತಿದ್ದು, 11ರಂದು ಪ್ರಮುಖವಾದ ದಿನ ತಿರು ಓಣಂ ಅನ್ನು ಆಚರಿಸಲಾಗುತ್ತಿದೆ.

ಪೂರ್ಣ ಕೇರಳ ರಾಜ್ಯವೇ ಈ ಹಬ್ಬವನ್ನು ಆಚರಿಸುತ್ತದೆ ಎಂಬುದು ಇಲ್ಲಿ ಗಮನಿಸಬೇಕಾದ ಅಂಶವಾಗಿದೆ. ಸಂಕ್ರಾಂತಿ ಪದದಿಂದ ಓಣಂ ಪದವನ್ನು ಬೇರ್ಪಡಿಸಲಾಗಿದೆ. ಸಂಕ್ರಾಂತಿ ಎಂದರೆ 27 ನಕ್ಷತ್ರಗಳ ಒಗ್ಗೂಡುವಿಕೆ ಎಂಬ ಅರ್ಥವೂ ಇದೆ. ತಿರು ಎಂಬುದು ಭಗವಾನ್ ವಿಷ್ಣುವಿಗೆ ಸಂಬಂಧಪಟ್ಟದ್ದಾಗಿದೆ. ತಿರುವೋಣಂ ಎಂಬುದು ವಿಷ್ಣುವಿನ ನಕ್ಷತ್ರವಾಗಿದೆ. ಈ ದಿನದಂದೇ ಮಹಾಬಲಿ ರಾಜನ ತಲೆಯ ಮೇಲೆ ವಾಮನ ಅವತಾರದಲ್ಲಿದ್ದ ಕೃಷ್ಣನು ಕಾಲಿಟ್ಟಿದ್ದನು ಎಂಬುದಾಗಿ ಐತಿಹ್ಯವಿದೆ.
ಕೇರಳ ರಾಜ್ಯವನ್ನು ಮಹಾಬಲಿಯು ಆಳುತ್ತಿದ್ದ ಸಮಯವದು. ದಯಾಮಯನು ಕರುಣಾಳುವೂ ಆಗಿದ್ದ ಮಹಾಬಲಿಯು ಅಸರು ರಾಜನಾಗಿದ್ದನೂ ಪ್ರಜೆಗಳಿಗೆ ಒಳ್ಳೆಯದನ್ನೇ ಮಾಡುತ್ತಿದ್ದನು. ಅದಾಗ್ಯೂ ವಿಷ್ಣುವು ಮುಂದೆ ಅಸುರನಿಂದ ಉಂಟಾಗಬಹುದಾದ ಅಪಾಯವನ್ನು ಅರಿತುಕೊಂಡು ವಾಮನ ಅವತಾರವನ್ನು ತಾಳಿ ಬಲಿಯ ಮುಂದೆ ಭಿಕ್ಷೆಯನ್ನು ಕೇಳುತ್ತಾರೆ. ಮೊದಲೇ ಕೇಳಿದ್ದನ್ನು ಕೊಡುವ ರಾಜನು ಬ್ರಾಹ್ಮಣ ವಟುವು ಬೇಡಿದ ವರವನ್ನು ಇಲ್ಲವೆನ್ನುವುದಿಲ್ಲ.
ಅಂತೆಯೇ ವಾಮನನು ಒಂದು ಕಾಲನ್ನು ಆಕಾಶಕ್ಕೂ ಇನ್ನೊಂದನ್ನು ಭೂಮಿಗೂ ಇಟ್ಟು ನಂತರ ಇನ್ನೊಂದು ಅಪೇಕ್ಷೆಯನ್ನು ನೆರವೇರಿಸುವುದಕ್ಕಾಗಿ ಬಲಿ ಚಕ್ರವರ್ತಿಯ ತಲೆಯ ಮೇಲೆ ಇಡುತ್ತಾರೆ. ವಿಷ್ಣುವು ಬಲಿಯ ಹೃದಯವಂತಿಕೆಗೆ ಮೆಚ್ಚುತ್ತಾರೆ. ಅಂತೆಯೇ ವರ್ಷಕ್ಕೊಮ್ಮೆ ಭೂಮಿಗೆ ಬಂದು ತನ್ನ ಪ್ರಜೆಗಳನ್ನು ನೋಡುವ ವರವನ್ನು ಅನುಗ್ರಹಿಸುತ್ತಾರೆ. ಇದನ್ನೇ ಓಣಂ ಹಬ್ಬವನ್ನಾಗಿ ಆಚರಿಸುತ್ತಾರೆ.
ಬಲಿಯು ಈ ಹಬ್ಬದಂದು ಭೂಮಿಗೆ ಭೇಟಿ ಇತ್ತು ಪ್ರಜೆಗಳ ಯೋಗಕ್ಷೇಮವನ್ನು ನೋಡಿಕೊಳ್ಳುತ್ತಾರೆ ಎಂಬುದು ಜನರ ನಂಬಿಕೆಯಾಗಿದೆ.
ಓಣಂ ಹಬ್ಬವನ್ನು ಕೇರಳದ ಜನತೆ ವಿಜೃಂಭಣೆಯಿಂದ ಆಚರಿಸುತ್ತಾರೆ. ಇಂದಿನ ಲೇಖನದಲ್ಲಿ ಈ ವಿಜೃಂಭಣೆ ಯಾವ ಬಗೆಯದ್ದು ಎಂಬುದನ್ನು ನಾವು ನೋಡೋಣ...

ಪೂಕಳಂ
ಬೇರೆ ಬೇರೆ ಹೂಗಳಿಂದ ರಂಗೋಲಿಯನ್ನು ಬಿಡಿಸುವುದೇ ಪೂಕಳಂವಾಗಿದೆ. ಓಣಂನ ಪ್ರತಿಯೊಂದು ದಿನದಂದು ಹೊಸ ಹೊಸ ಹೂಗಳ ಪದರವನ್ನು ನಿರ್ಮಿಸಲಾಗುತ್ತದೆ. ಕೇರಳದ ವಿವಿಧ ಭಾಗಗಳಲ್ಲಿ ಪೂಕಳಂ ಅನ್ನು ಸ್ಪರ್ಧೆಯ ರೂಪದಲ್ಲಿ ಕೂಡ ಕೊಂಡಾಡುತ್ತಾರೆ.

ಓಣಂ ಸದ್ಯ
ಓಣಂನ ಕೊನೆಯ ದಿನದಂದು ಈ ಔತಣಕೂಡವನ್ನು ಏರ್ಪಡಿಸಲಾಗುತ್ತದೆ. ಆ ದಿನ ತಿರುವೋಣಂ ಆಗಿರುತ್ತದೆ. ಬಾಳೆಎಲೆಯಲ್ಲಿ ಖಾದ್ಯಭಕ್ಷ್ಯಗಳನ್ನು ಇರಿಸಿ ಈ ಕೂಟವನ್ನು ಏರ್ಪಡಿಸಲಾಗುತ್ತದೆ. ಪೂರ್ಣವಾಗಿ ತರಕಾರಿಗಳನ್ನು ಈ ಸದ್ಯದಲ್ಲಿ ಬಳಸಲಾಗುತ್ತದೆ.

ಓಣಕಳಿಗಳ್
ಓಣಂ ಸಮಯದಲ್ಲಿ ಬೇರೆ ಬೇರೆ ಆಟಗಳನ್ನು ಏರ್ಪಡಿಸಲಾಗುತ್ತದೆ. ತಲಕ್ ಪಂತ್ ಕಲಿ ಎಂಬುದು ಹೆಚ್ಚು ಪ್ರಸಿದ್ಧ ಆಟವಾಗಿದೆ. ಮಹಿಳೆಯರು ಬೇರೆ ಬೇರೆ ನೃತ್ಯ ಪ್ರಕಾರಗಳನ್ನು ಇಲ್ಲಿ ಪ್ರದರ್ಶಿಸಿ ತೋರಿಸುತ್ತಾರೆ.

ವಳ್ಳಂ ಕಳಿ ಬೋಟ್ ರೇಸ್
ಓಣಂ ಹಬ್ಬದಂದು ಈ ಬೋಟ್ ರೇಸ್ ಅನ್ನು ವಿಶೇಷವಾಗಿ ಏರ್ಪಡಿಸಲಾಗುತ್ತದೆ. ನೂರಕ್ಕಿಂತ ಹೆಚ್ಚಿನ ಬೋಟ್ ಚಲಾಯಿಸುವವರು ಸ್ಪರ್ಧೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ನೀರಿನಲ್ಲಿ ಬೋಟ್ ರೇಸಿಂಗ್ ಅನ್ನು ಮಾಡುತ್ತಾರೆ. ಈ ಬೋಟ್ ರೇಸ್ ನೋಡಲೆಂದೇ ವಿಶ್ವದ ನಾನಾ ಕಡೆಯಿಂದ ಜನರು ಕೇರಳಕ್ಕೆ ಬರುತ್ತಾರೆ.

ಆನೆ ಮೆರವಣಿಗೆ
ಆನೆ ಮೆರವಣಿಗೆಯು ಹೆಚ್ಚು ಆಸಕ್ತಿಕರವಾದ ಸಂಗತಿಯಾಗಿದೆ. ಆನೆಯನ್ನು ಅಲಂಕರಿಸಿ ಆಭರಣಗಳನ್ನು ತೊಡಿಸಿ ರಸ್ತೆಯಲ್ಲಿ ಮೆರವಣಿಗೆಯನ್ನು ಮಾಡಲಾಗುತ್ತದೆ. ಅಂತೆಯೇ ಆನೆಯು ಜನರು ಕೊಡುವ ಫಲಾಹಾರಗಳನ್ನು ಸೇವಿಸುತ್ತದೆ. ಕೇರಳದ ಸಾಂಸ್ಕೃತಿಕ ಹಬ್ಬವೂ ಆಗಿರುವ ಓಣಂ ಸಮಯದಲ್ಲಿ ನೀವು ಕೇರಳಕ್ಕೆ ಭೇಟಿ ನೀಡುವುದು ಉಚಿತವಾಗಿದೆ.



Click it and Unblock the Notifications
