Latest Updates
-
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್!
ಹೋಲಿಕಾ ದಹನ್ 2023 : ಈ ದಿನ ಈ ರೀತಿ ಪರಿಹಾರ ಮಾಡಿದರೆ ಸಂಪತ್ತು ವೃದ್ಧಿಯಾಗುವುದು
ಹೋಳಿಯ ಮುನ್ನ ದಿನ ಹೋಲಿಕಾ ದಹನ ಎಂದು ಆಚರಿಸಲಾಗುವುದು. ಈ ವರ್ಷ ಮಾರ್ಚ್ 8 ರಂದು ಬುಧವಾರ ಆಚರಿಸಲಾಗುವುದು. ಕೆಟ್ಟದರ ವಿರುದ್ಧ ಒಳ್ಳೆಯದ ವಿಜಯದ ಪ್ರತೀಕವಾಗಿ ಆಚರಿಸಲಾಗುವುದು.

ಈ ವರ್ಷ ಹೋಲಿಕಾ ದಹನವನ್ನು ಗುರುವಾರದಂದು ಆಚರಿಸಲಾಗುವುದು. ಇದು ತುಂಬಾ ಮಂಗಳಕರ ಯೋಗವಾಗಿದೆ. ಈ ವರ್ಷ ಹಿಂದೆಂದೂ ಸೃಷ್ಟಿಯಾಗದಂತಹ ಮಂಗಳಕರ ರಾಜಯೋಗ ರೂಪುಗೊಂಡಿದೆ ಎಂದು ಜ್ಯೋತಿಷ್ಯಿಗಳು ಹೇಳುತ್ತಿದ್ದಾರೆ. ಹೋಲಿಕಾ ದಹನದಂದು ಹನುಮಂತನ ಪೂಜೆ ಮಾಡಬೇಕು, ಜೊತೆಗೆ ಕೆಲವು ಪರಿಹಾರಗಳನ್ನು ಮಾಡುವುದರಿಂದ ದಾರಿದ್ರ್ಯ ಹೋಗಿ ಸಂಪತ್ತು ದೊರೆಯುವುದು.

ಹೋಲಿಕಾ ದನದಂದು ಹನುಮಂತನ ಪೂಜಿಯ ಮಹತ್ವ
* ಈ ದಿನ ಹನುಮಂತನನ್ನು ಸಮರ್ಪಣಾ ಭಾವದಿಂದ ಪೂಜಿಸಿದರೆ ಎಲ್ಲಾ ದುಃಖ ದೂರಾಗುವುದು, ಪಾಪಗಳಿಂದ ಮುಕ್ತಿ ದೊರೆಯುವುದು ಎಂದು ನಂಬಲಾಗಿದೆ. ಈ ದಿನ ಹನುಮಂತನನ್ನು ಪೂಜಿಸಿದರೆ ಅದು ತುಂಬಾ ಮಂಗಳಕರವಾಗಿದೆ.

ಹೋಲಿಕಾ ದಹನ ದಿನ ಈ ರೀತಿ ಮಾಡಿದರೆ ಸಂಪತ್ತು ವೃದ್ದಿಸುವುದು
ಹೋಲಿಕಾ ದಹನ ಭಸ್ಮವನ್ನು ನಿಮ್ಮ ಮನೆಗೆ ತಂದು ನಿಮ್ಮ ಮನೆಯ ಆಗ್ನೇಯ ದಿಕ್ಕಿನಲ್ಲಿ ಇರಿಸಿ. ಇದನ್ನು ವಾಸ್ತು ಪ್ರಕಾರ ಪವಿತ್ರವೆಂದು ಪರಿಗಣಿಸಲಾಗಿದೆ. ಇದರಿಂದ ಮನೆಯಲ್ಲಿ ವಾಸ್ತು ದೋಷವನ್ನು ತೊಡೆದುಹಾಕಬಹುದು.
ನಿಮ್ಮ ಜೀವನದ ಎಲ್ಲಾ ಆಸೆಗಳನ್ನು ಪೂರೈಸಲು ಮತ್ತು ಯಶಸ್ಸನ್ನು ಪಡೆಯಲು ಹೋಳಿಯಲ್ಲಿ ಸರಿಯಾದ ಆಚರಣೆಗಳೊಂದಿಗೆ ಶಿವನನ್ನು ಆರಾಧಿಸಿ.
ನಿಮ್ಮ ಜೀವನದಲ್ಲಿ ಹಣಕಾಸಿನ ಸಮಸ್ಯೆಗಳಿದ್ದರೆ, ನೀವು ಹೋಲಿಕಾ ದಿನದಂದು ಲಕ್ಷ್ಮಿ ದೇವಿಯನ್ನು ಸರಿಯಾದ ಆಚರಣೆಗಳೊಂದಿಗೆ ಪೂಜಿಸಬೇಕು ಮತ್ತು ಶಾಸ್ತ್ರನಾಮವನ್ನು ಪಠಿಸಬೇಕು.
ಹೋಲಿಕಾ ದಹನದ ರಾತ್ರಿ ಮನೆಯ ಮುಖ್ಯ ದ್ವಾರದ ನಾಲ್ಕೂ ದಿಕ್ಕಿನಲ್ಲಿ ಸಾಸಿವೆ ಎಣ್ಣೆಯಿಂದ ನಾಲ್ಕು ದಿಕ್ಕಿನಲ್ಲಿ ದೀಪವನ್ನು ಹಚ್ಚಿ
ಇದರಿಂದ ಎಲ್ಲಾ ಅಡೆತಡೆಗಳು ನಿವಾರಣೆಯಾಗುತ್ತವೆ.

ವ್ಯಾಪಾರದ ಬೆಳವಣಿಗೆ ಹಾಗೂ ಆರೋಗ್ಯ ಪ್ರಾಪ್ತಿಗಾಗಿ
ವ್ಯಾಪಾರದ ಬೆಳವಣಿಗೆ ಮತ್ತು ಉದ್ಯೋಗ ಪ್ರಗತಿಗಾಗಿ 21 ಗೋಮತಿ ಚಕ್ರಗಳನ್ನು ತೆಗೆದುಕೊಂಡು ಅದನ್ನು ಹೋಲಿಕಾ ದಹನದ ರಾತ್ರಿ ಶಿವಲಿಂಗದ ಮೇಲೆ ಅರ್ಪಿಸಿ. ಈ ಪರಿಹಾರವು ನಿಮ್ಮ ವ್ಯವಹಾರಕ್ಕೆ ಪ್ರಯೋಜನವನ್ನು ನೀಡುತ್ತದೆ ಮತ್ತು ನೀವು ಉದ್ಯೋಗದಲ್ಲಿ ಬಡ್ತಿಯನ್ನು ಸಹ ಪಡೆಯುತ್ತೀರಿ.
ನಿಮ್ಮ ಜೀವನದಲ್ಲಿ ಶತ್ರುಗಳ ಭಯ ಹೆಚ್ಚಾಗಿದ್ದರೆ, ಹೋಲಿಕಾ ದಹನದ ಸಮಯದಲ್ಲಿ ಏಳು ಗೋಮತಿ ಚಕ್ರಗಳನ್ನು ತೆಗೆದುಕೊಂಡು ದೇವರನ್ನು ಪ್ರಾರ್ಥಿಸಿ. ಪ್ರಾರ್ಥನೆಯ ನಂತರ, ಹೋಲಿಕಾದಲ್ಲಿ ಭಕ್ತಿ ಮತ್ತು ನಂಬಿಕೆಯಿಂದ ಗೋಮತಿ ಚಕ್ರಗಳನ್ನು ಅರ್ಪಿಸಿ.
ಹೋಲಿಕಾ ದಹನದ ಸಮಯದಲ್ಲಿ ಹೋಲಿಕಾ ಅಗ್ನಿಯ ಸುತ್ತಲೂ ಏಳು ಸುತ್ತುಗಳನ್ನು ಹಾಕುವುದರಿಂದ ಭಕ್ತರು ಅಕ್ಷಯ ಪುಣ್ಯವನ್ನು ಪಡೆಯಬಹುದು.
ಆರೋಗ್ಯ ಪ್ರಯೋಜನಗಳಿಗಾಗಿ, ನೀವು ಹೋಲಿಕಾ ದಹನದ ಅಗ್ನಿಯಲ್ಲಿ ಹಸಿ ಗೋಧಿಯನ್ನು ಬೇಯಿಸಿ, ತಿನ್ನಬೇಕು. ಹೀಗೆ ಮಾಡುವುದರಿಂದ ನೀವು ಹಲವಾರು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.



Click it and Unblock the Notifications
