Latest Updates
-
ಮುಂಬೈನಲ್ಲಿ ವರುಣನ ಆರ್ಭಟ: ರೆಡ್ ಅಲರ್ಟ್ ಘೋಷಣೆ, ಪ್ರಯಾಣಿಕರೇ ಎಚ್ಚರ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಆರ್ಭಟ: ಹೊರಗೆ ಹೋಗುವ ಮುನ್ನ ಎಚ್ಚರ, ಮನೆಯಲ್ಲೇ ಫಿಟ್ ಆಗಿರಲು ಈ 8 ನಿಮಿಷದ ಟಿಪ್ಸ್! -
ಟೆಲಿಗ್ರಾಂ ಬಳಕೆದಾರರೇ ಗಮನಿಸಿ: ಸೇವೆ ಆರಂಭವಾದರೂ ಈ ಬದಲಾವಣೆ ಮರೆಯದಿರಿ! -
ಬಿಸಿಗಾಳಿಯ ಎಚ್ಚರಿಕೆ: ಅಡುಗೆ ಮಾಡದೆಯೇ ದೇಹಕ್ಕೆ ತಂಪು ನೀಡುವ ಪ್ರೋಟೀನ್ ಆಹಾರಗಳಿವು! -
ಮಳೆಯ ನಡುವೆ ಯುಜಿಸಿ ನೆಟ್ ಪರೀಕ್ಷೆ: ಸಂಗಾತಿಯ ಈ ಸಣ್ಣ ಬೆಂಬಲವೇ ಯಶಸ್ಸಿನ ಗುಟ್ಟು -
ಮಳೆಗಾಲದಲ್ಲಿ ಮನೆಯ ಪೀಠೋಪಕರಣ ಹಾಳಾಗುತ್ತಿದೆಯೇ? ಬೂಸು ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮುಂಬೈ ಆರೆಂಜ್ ಅಲರ್ಟ್: ಮಳೆಯಲ್ಲಿ ಆಫೀಸ್ ಹೋಗುವವರೇ, ಈ 'ನೋ-ಕುಕ್' ಪ್ರೋಟೀನ್ ಮೀಲ್ಸ್ ಮಿಸ್ ಮಾಡ್ಬೇಡಿ! -
ಅಮೆಜಾನ್ ಪ್ರೈಮ್ ಡೇ ಸೇಲ್: ಕಡಿಮೆ ಬೆಲೆಗೆ ವಸ್ತುಗಳನ್ನು ಖರೀದಿಸಲು ಈ ಸ್ಮಾರ್ಟ್ ಟ್ರಿಕ್ಸ್ ಮಿಸ್ ಮಾಡ್ಬೇಡಿ! -
ಯೋಗದ ನಂತರ ಮೈಕೈ ನೋವು ಕಾಡುತ್ತಿದೆಯೇ? ಕಚೇರಿಯಲ್ಲಿ ಕೆಲಸ ಮಾಡುವಾಗ ಈ 12 ನಿಮಿಷದ ಟಿಪ್ಸ್ ಪಾಲಿಸಿ -
NEET ಮರುಪರೀಕ್ಷೆ ಮುಗಿದಿದೆ: ಮಕ್ಕಳ ಆತಂಕ ದೂರ ಮಾಡಲು ಪೋಷಕರು ಮಾಡಬೇಕಾದ ಅತ್ಯಗತ್ಯ ಕೆಲಸಗಳಿವು!
ನ. 24ಕ್ಕೆ ಗುರು ಮಾರ್ಗಿ: ಮೇಷ, ಸಿಂಹ, ಮಕರ ರಾಶಿಯವರೇ ಜಾಗ್ರತೆ, ಈ ಪರಿಹಾರ ಮಾಡಿ
ಮಂಗಳ ಮೀನ ರಾಶಿಯಲ್ಲಿ ಮಾರ್ಗಿಯಾಗಿದ್ದಾನೆ. ಗುರು ಮಾರ್ಗಿಯಾಗಿರುವುದು ಕೆಲವು ರಾಶಿಗಳಿಗೆ ತುಂಬಾನೇ ಅದೃಷ್ಟಕರವಾಗಿದ್ದರೆ ಮೇಷ, ಸಿಂಹ ಮತ್ತು ಮಕರ ರಾಶಿಯವರು ತುಂಬಾನೇ ಜಾಗ್ರತೆವಹಿಸಬೇಕಾಗಿದೆ. ಗುರು ಗ್ರಹ ನಮ್ಮ ಅದೃಷ್ಟ, ನಮ್ಮ ವೈವಾಹಿಕ ಜೀವನ ಎಲ್ಲದರ ಮೇಲೂ ಪ್ರಭಾವ ಬೀರುತ್ತದೆ, ಇನ್ನು ಗುರು ಜಾತಕದಲ್ಲಿ ಯಾವುದೇ ದೋಷಪೂರಿತ ಗ್ರಹದೊಂದಿಗೆ ಕುಳಿತಿದ್ದರೆ ಅದು ಅಶುಭ ಚಿಹ್ನೆಗಳು ಸಹ ನೀಡಲು ಪ್ರಾರಂಭಿಸುತ್ತವೆ.
ಗುರು ದೋಷ ತಡೆಯಲು ಏನು ಮಾಡಬೇಕು? ಯಾವ ಮಂತ್ರ ಜಪಿಸಿದರೆ ಗುರು ದೋಷದಿಂದ ತೊಂದರೆಯಿರಲ್ಲ ನೋಡೋಣ ಬನ್ನಿ:

ವಿಷ್ಣು ಸಹಸ್ರನಾಮ ಪಾರಾಯಣ
ಎಷ್ಟೇ ಪ್ರಯತ್ನ ಪಟ್ಟರೂ ನಿಮ್ಮ ಕೆಲಸದಲ್ಲಿ ಯಶಸ್ಸು ಸಿಗದಿದ್ದರೆ ಮತ್ತು ನಿಮ್ಮ ಮನಸ್ಸಿನಲ್ಲಿ ವಿಷಯಗಳ ಬಗ್ಗೆ ಗೊಂದಲವಿದ್ದರೆ, ನಿಯಮಿತವಾಗಿ ವಿಷ್ಣು ಸಹಸ್ರನಾಮವನ್ನು ಪಠಿಸಿ. ನಿಯಮಿತವಾದ ಪಠಣವು ಅಡೆತಡೆಗಳನ್ನು ನಿವಾರಿಸುತ್ತದೆ ಮತ್ತು ಕಾರ್ಯಗಳಲ್ಲಿ ಯಶಸ್ಸನ್ನು ತರುತ್ತದೆ.
ಈ ಮಂತ್ರ ಜಪ ಮಾಡಿ
ಜೀವನದಲ್ಲಿ ನಕಾರಾತ್ಮಕತೆಯನ್ನು ತೊಡೆದುಹಾಕಲು ಪ್ರತಿದಿನ 108 ಬಾರಿ 'ಓಂ ಬೃಹಸ್ಪತಯೇ ನಮಃ' ಎಂದು ಜಪಿಸಿ.
ಬೃಹಸ್ಪತಿಯನ್ನು ಮೆಚ್ಚಿಸಲು ಪ್ರತಿದಿನ 'ಓಂ ಭಗವತೇ ವಾಸುದೇವಾಯ ನಮಃ' ಮಂತ್ರವನ್ನು ಪಠಿಸಿ.
ಗುರುವಾರ ವಿಷ್ಣುವನ್ನು ಆರಾಧಿಸಿ
ಗುರುವಾರದಂದು ವಿಷ್ಣುವಿಗೆ ಹಳದಿ ಹಣ್ಣುಗಳು, ಹೂಗಳನ್ನು ಅರ್ಪಿಸಿ ಪೂಜಿಸಿ.
ಭಗವಾನ್ ವಿಷ್ಣುವಿನ ಆರಾಧನೆ
ಪ್ರತಿದಿನ ವಿಷ್ಣುವಿನ ಪೂಜೆಯ ನಂತರ ಅರಿಶಿನ ಮತ್ತು ಶ್ರೀಗಂಧದ ತಿಲಕವನ್ನು ಹಣೆಗೆ ಹಚ್ಚಿ, ಯಾವುದೇ ಶುಭ ಕಾರ್ಯವನ್ನು ಹೊರಡುವ ಮುನ್ನ ಶ್ರೀಗಂಧದ ತಿಲಕ ಹಚ್ಚಿ.
ಸತ್ಯನಾರಾಯಣನ ಕತೆ ಓದಿ
ಗುರು ಬೃಹಸ್ಪತಿಯನ್ನು ಪ್ರಸನ್ನಗೊಳಿಸಲು ಸತ್ಯನಾರಾಯಣನ ಕಥೆಯನ್ನು ಓದುವುದು, ಕೇಳುವುದು ಮಾಡಿ.
ನೀವು ಗುರುವಾರ ಉಪವಾಸವಿದ್ದರೆ ಮತ್ತಷ್ಟು ಫಲ ಸಿಗುವುದು.
ರಾಮ ರಕ್ಷಾ ಸ್ತೋತ್ರದ ಪಠಣ
ರೋಗಗಳು, ಶತ್ರುಗಳು ಇತ್ಯಾದಿಗಳಿಂದ ಸಮಸ್ಯೆಗಳನ್ನು ಎದುರಿಸುತ್ತಿರುವವರು ಮತ್ತು ತಮ್ಮ ಕೆಲಸದಲ್ಲಿ ಇದ್ದಕ್ಕಿದ್ದಂತೆ ಎಲ್ಲಾ ರೀತಿಯ ತೊಂದರೆಗಳನ್ನು ಎದುರಿಸುತ್ತಿರುವವರು ನಿಯಮಿತವಾಗಿ ರಾಮರಕ್ಷಾ ಸ್ತೋತ್ರವನ್ನು ಪಠಿಸಬೇಕು.
ಹನುಮಾನ್ ಚಾಲೀಸಾದ ನಿಯಮಿತ ಪಠಣ ಮಾಡಿ.
ಇತರ ಪರಿಹಾರ:
* ಸ್ನಾನದ ನೀರಿಗೆ ಅರಿಶಿನ ಸೇರಿಸಿ ಆ ನೀರಿನಿಂದ ಸ್ನಾನ ಮಾಡಿ. ಹೀಗೆ ಮಾಡುವುದರಿಂದ ಗುರುವಿನ ಅಶುಭ ಪರಿಣಾಮ ಕಡಿಮೆಯಾಗುತ್ತದೆ.
* ಗುರುವಾರ ಆಲದ ಮರಕ್ಕೆ ಅರಿಶಿನ, ಬೆಲ್ಲ ಮತ್ತು ಬೇಳೆಯನ್ನು ಅರ್ಪಿಸಿ.
* ಗುರುವಾರದಂದು ಬಡವರು ಅಥವಾ ನಿರ್ಗತಿಕರಿಗೆ ಹಳದಿ ಬೇಳೆ, ಬಾಳೆಹಣ್ಣು ಮತ್ತು ಹಳದಿ ಸಿಹಿತಿಂಡಿಗಳನ್ನು ದಾನ ಮಾಡಿ.



Click it and Unblock the Notifications
