Latest Updates
-
Weekly Horoscope: ಮಾರ್ಚ್ 15 ರಿಂದ ಮಾರ್ಚ್ 22ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಗ್ಯಾಸ್ ಹಚ್ಚೋದೆ ಬೇಡ; ಸುಲಭವಾಗಿ ಮಾಡಿ ಈ ಅದ್ಭುತ ರುಚಿಯ ಸ್ವೀಟ್! -
ಕೆಲಸ ಮಾಡಲು ದೇಹಕ್ಕೆ ಬಲಬೇಕಾದರೆ ಈ ಹೆಸರುಕಾಳಿನ ಸೂಪರ್ಫುಡ್ ತಿನ್ನಿ! ವಾರಕ್ಕೊಂದು ಉಂಡೆ ಸಾಕು! -
ಅರ್ಧದಷ್ಟು ಭಾರತೀಯರಲ್ಲಿ 6 ಗಂಟೆಗೂ ಕಡಿಮೆ ನಿದ್ರೆ: ಸಮೀಕ್ಷೆಯಲ್ಲಿದೆ ಆತಂಕಕಾರಿ ವಿಚಾರ! -
ವಿವಾಹ ಯೋಗ ಕೂಡುವ ಸಾಧ್ಯತೆ ಇದೆ! ಸಂಗಾತಿಗೆ ಗಿಫ್ಸ್ ನೀಡಬಹುದು -
ಮಹಿಳೆಯರು ಕಾಲುಂಗುರ ಏಕೆ ಧರಿಸಬೇಕು? ಎಷ್ಟು ಸುತ್ತು ನಿಮ್ಗೆ ಯಶಸ್ಸು ತರುತ್ತೆ? ರಹಸ್ಯ ತಿಳಿಯಿರಿ -
March 14 Horoscope: ಪ್ರಯಾಣಗಳ ಮಾಡುವ ದಿನವಾಗಲಿದೆ! -
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು!
ಗಣೇಶನ ಶಾಪದಿಂದ ಶ್ರೀಕೃಷ್ಣನು ಗಣೇಶನಿಗೆ ಪೂಜೆ ಮಾಡಲು ಪ್ರಾರಂಭಿಸಿದನಂತೆ!
ಭಗವಾನ್ ಗಣೇಶ ಮತ್ತು ಶ್ರೀಕೃಷ್ಣನು ಹಿಂದೂ ಧರ್ಮದಲ್ಲಿ ಅತ್ಯಂತ ಶ್ರೇಷ್ಠ ಸ್ಥಾನವನ್ನು ಪಡೆದುಕೊಂಡಿರುವ ದೇವರು. ಅತ್ಯಂತ ಶಕ್ತಿಯುತವಾದ ದೇವರು. ಶ್ರೀಕೃಷ್ಣ ಹಾಗೂ ಹಾಗೂ ಗಣೇಶನ ಬಾಲ್ಯ ಮತ್ತು ಜೀವನದಲ್ಲಿ ಅನೇಕ ಕುತೂಹಲಕಾರಿ ಘಟನೆಗಳು ನಡೆದಿವೆ. ಅವು ಮನುಕುಲಕ್ಕೆ ಮಾರ್ಗದರ್ಶನವನ್ನು ಜೀಡುತ್ತವೆ. ಜೊತೆಗೆ ಜೀವನದ ಅರ್ಥ ಹಾಗೂ ಸನ್ನಡತೆಯನ್ನು ಹೇಳಿಕೊಡುತ್ತವೆ. ಬಗವಾನ್ ಗಣೇಶನ ಆರಾಧನೆ ಮಾಡುವುದರ ಮೂಲಕ ಕೆಲಸವನ್ನು ಕೈಗೊಂಡರೆ ಯಾವುದೇ ವಿಘ್ನಗಳಿಲ್ಲದೆ ಸುಲಭವಾಗಿ ನೆರವೇರುವುದು. ಜೊತೆಗೆ ಕೈಗೊಂಡ ಕೆಲಸವು ಸುಲಭವಾಗಿ ಯಶಸ್ಸನ್ನು ತಂದುಕೊಡುವುದು. ಜೀವ ಸಂಕುಲದ ರಕ್ಷಣೆಗೆ ಹಾಗೂ ದುಷ್ಟ ಶಕ್ತಿಯ ನಿವಾರಣೆಗಾಗಿ ವಿಷ್ಣು ದೇವರು ಕೃಷ್ಣನ ಅವತಾರದಲ್ಲಿ ಭೂ ಲೋಕಕ್ಕೆ ಬಂದ ಎನ್ನಲಾಗುವುದು.
ಶ್ರೀಕೃಷ್ಣನ ಬಾಲ್ಯವು ಅತ್ಯಂತ ಕಷ್ಟ ಹಾಗೂ ದುಷ್ಟ ಶಕ್ತಿಯ ಸಂಹಾರವನ್ನು ಒಳಗೊಂಡಿತ್ತು. ತುಂಟಾಟದ ಮೂಲಕ ಜನರ ಮನಸ್ಸನ್ನು ಗೆದ್ದ ಬುದ್ಧಿವಂತ ಬಾಲಕನಾಗಿದ್ದ. ತನ್ನ ಸಾಹಸದ ಮೂಲಕ ಗೋಕುಲದಲ್ಲಿ ಬಹಳ ಪ್ರೀತಿಯನ್ನು ಪಡೆದ ಹುಡುಗನಾಗಿ ಬೆಳೆದ. ನಂತರ ಜಗದೊದ್ಧಾರಕನಾದ ಎಂದು ಹೇಳಲಾಗುವುದು. ಶ್ರೀಕೃಷ್ಣನಿಗೆ ಸಂಬಂಧಿಸಿದಂತೆ ಅನೇಕ ಕಥೆಗಳು ಹಾಗೂ ನಂಬಿಕೆಗಳು ಇರುವುದನ್ನು ಕಾಣಬಹುದು. ಅವುಗಳಿಗೆ ಸಂಬಂಧಿಸಿದ ಅನೇಕ ಕಥೆಗಳು ನಮಗೆ ತಿಳಿದಿಲ್ಲ ಎಂದು ಸಹ ಹೇಳಬಹುದು. ಅಂತಹ ಒಂದು ಕಥೆ ಇಲ್ಲಿದೆ.

ಒಮ್ಮೆ ಗಣೇಶ ಮತ್ತು ಶ್ರೀಕೃಷ್ಣನ ನಡುವೆ ನಡೆದ ಘಟನೆ ಅಥವಾ ಸನ್ನಿವೇಶವು ಶ್ರೀ ಕೃಷ್ಣನು ಪೂಜೆ ಮಾಡುವಂತೆ ಒತ್ತಾಯಿಸಿತು. ಇದರಿಂದಾಗಿ ನಂತರ ಶ್ರೀಕೃಷ್ಣನು ಪೂಜೆಯನ್ನು ಗೈದನು ಎಂದು ಹೇಳಲಾಗುವುದು. ಇಬ್ಬರ ನಡುವೆ ನಡೆದ ಈ ಕಥೆಯು ಅತ್ಯುತ್ತಮ ಸಂದೇಶವನ್ನು ನೀಡುವುದರ ಮೂಲಕ ಭಕ್ತರಿಗೊಂದು ಮಾರ್ಗದರ್ಶನವನ್ನು ನೀಡುತ್ತದೆ.

ಭಗವಾನ್ ಗಣೇಶ ಮತ್ತು ಶ್ರೀಕೃಷ್ಣನ ಶಾಪದ ಕಥೆ
ಪ್ರಥಮ ಪೂಜೆಯನ್ನು ಪಡೆಯುವ ಗಣೇಶನು ಅತ್ಯಂತ ಶ್ರೇಷ್ಠ ದೇವರು. ಭಕ್ತರ ಜೀವನದಲ್ಲಿ ಉಂಟಾಗುವ ಎಲ್ಲಾ ಬಗೆಯ ಅಡೆತಡೆಗಳನ್ನು ಸುಲಭವಾಗಿ ನಿವಾರಿಸುವನು. ಪಾರ್ವತಿಯ ಸೃಷ್ಟಿಯಿಂದ ಜೀವವನ್ನು ಪಡೆದುಕೊಂಡ ಬಾಲಕನೇ ಗಣೇಶನು. ತಾಯಿಯ ಮಾತಿನಂತೆ ಕಾವಲು ಕಾಯುತ್ತಿರುವಾಗ ಶಿವನು ಆವರಣಕ್ಕೆ ಬಂದನು. ಆಗ ಗಣೇಶನು ತನ್ನ ತಂದೆ ಎನ್ನುವುದು ತಿಳಿಯದೇ ಇರುವುದರಿಂದ ಒಳಗೆ ಪ್ರವೇಶಿಸುವುದನ್ನು ತಡೆದನು. ಅವನ ಆಣತಿಯಿಂದ ಕೋಪಗೊಂಡ ಶಿವನು ಗಣೇಶನ ಕುತ್ತಿಗೆಯನ್ನು ಕತ್ತರಿಸಿದನು. ನಂತರ ಆನೆಯ ಮುಖವನ್ನು ಪಡೆದು ಅನೇಕ ಕಥೆಗಳನ್ನು ನೀಡಿದನು. ಇಂತಹ ಕಥೆಯಲ್ಲಿ ಗಣೇಶನ ಶಾಪದಿಂದ ಕೃಷ್ಣನು ಗಣೇಶನಿಗೆ ಪೂಜೆ ಮಾಡಲು ಪ್ರಾರಂಭಿಸಿದನು ಎನ್ನುವ ಕಥೆಯು ಬೆಸೆದುಕೊಂಡಿದೆ. ಆ ಕಥೆಯ ವಿವರಣೆಯು ಲೇಖನದ ಮುಂದಿನ ಭಾಗದಲ್ಲಿದೆ.

ಗಣೇಶನು ಚಂದ್ರನಿಗೆ ಶಾಪ ನೀಡಿರುವುದು ನೆನಪಿಡಬೇಕು
ಗಣೇಶನು ಚೌತಿಯ ದಿನ ಭಕ್ತರು ನೀಡಿರುವ ತಿನಿಸುಗಳನ್ನು ಸ್ವೀಕರಿಸಿ ಹೊಟ್ಟೆ ತುಂಬಿಸಿಕೊಂಡಿದ್ದನು. ಇಲಿಯ ಮೇಲೆ ಕುಳಿತು ಹಿಂತಿರುಗುವಾಗ ದಾರಿಯಲ್ಲಿ ಹಾವೊಂದು ಅಡ್ಡ ಬಂದಿತು. ಆಗ ಭಯದಿಂದ ಇಲಿಯು ಹಿಂದೆ ಸರಿಯಿತು. ಈ ಸಮಯದಲ್ಲಿ ಬಿದ್ದ ಗಣೇಶನಿಗೆ ಹೊಟ್ಟೆಯು ಒಡೆಯಿತು. ಇದನ್ನು ನೋಡಿ ಚಂದ್ರನು ಹಾಸ್ಯ ಮಯವಾಗಿ ನಗಲು ಪ್ರಾರಂಭಿಸಿದನು. ಇದರಿಂದ ಕೋಪಗೊಂಡ ಗಣೇಶನು ಚಂದ್ರನಿಗೆ ಶಾಪ ನೀಡಿದನು. ಚೌತಿಯ ದಿನ ಚಂದ್ರನನ್ನು ಯಾರು ನೋಡುತ್ತಾರೋ ಅವರಿಗೆ ಸುಳ್ಳು ಅಪವಾದ ಅಥವಾ ಮಾನನಷ್ಟವನ್ನು ಎದುರಿಸಬೇಕಾಗುವುದು ಎಂದನು. ಈ ಕಥೆಯು ಸಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಸಂಗತಿ. ಅಂತೆಯೇ ಸ್ಯಮಂತಕನ ಕಥೆಯು ಸಹ ಗಣೇಶನ ಶಾಪದಿಂದ ಕೂಡಿತ್ತು ಎನ್ನುವುದು ತಿಳಿಸುತ್ತದೆ. ಗಣೇಶನ ಕೋಪ ಹಾಗೂ ಶಾಪವು ಅತ್ಯಂತ ಪ್ರಭಲವಾಗಿರುತ್ತದೆ ಎನ್ನುವುದು ಈ ಕಥೆಗಳು ತಿಳಿಸುತ್ತದೆ.

ಭಗವಾನ್ ಶ್ರೀಕೃಷ್ಣ, ರಾಜ ಸತ್ರಜಿತ್ ಮತ್ತು ಸ್ಯಮಂತಕ ಮಣಿ
ಭಗವಾನ್ ಶ್ರೀಕೃಷ್ಣನ ತಾಯ್ನಾಡಾದ ದ್ವಾರಕದಲ್ಲಿ ಸೂರ್ಯನ ಮಹಾನ್ ಭಕ್ತನಾದ ಸತ್ರಜಿತ ಎಂಬ ಓರ್ವ ಶಕ್ತಿವಂತ ರಾಜನಾಗಿದ್ದನು. ಸೂರ್ಯನನ್ನು ಅತ್ಯಂತ ಪ್ರಬಲವಾಗಿ ಸೂರ್ಯನ ಆರಾಧನೆ ಮಾಡುವುದರಿಂದ ಸೂರ್ಯನು ಅವನಿಗೆ ಸ್ಯಮಂತಕ ಎಂಬ ಭವ್ಯವಾದ ರತ್ನವನ್ನು ಉಡುಗೊರೆಯನ್ನು ನೀಡಿದ್ದನು...

ಕೃಷ್ಣನು ಸ್ಯಮಂತಕ ಮಣಿಯನ್ನು ಬಯಸಿದನು
ಒಮ್ಮೆ ಕೃಷ್ಣನು ಅತ್ಯಂತ ಪ್ರಕಾಶಮಾನವಾದ ಹಾಗೂ ಮೋಡಿಮಾಡುವಂತಹ ರತ್ನವನ್ನು ನೋಡಿದನು. ಅದನ್ನು ಸತ್ರಜಿತ ರಾಜನು ಗ್ರಹಿಸಿದನು. ನಂತರ ಆ ರತ್ನವನ್ನು ನೀಡಲು ನಿರಾಕರಿಸಿದನು. ಕೆಲವು ಸಮಯದ ನಂತರ ಅಂದರೆ ಚೌತಿಯ ದಿನದಂದು ಕೃಷ್ಣನು ಚಂದ್ರನನ್ನು ನೋಡಿದನು. ಚಂದ್ರನನ್ನು ನೋಡಿದರೆ ಅಪವಾದ ಬರುವುದು ಎನ್ನುವುದು ಅರಿವಾಯಿತು. ಚಂದ್ರನನ್ನು ನೋಡಿರುವುದಕ್ಕೆ ಅಪವಾದ ಬರುವುದು ಎನ್ನುವುದು ಮನಗಂಡನು...

ಪ್ರಸೇನಾ ಭೇಟೆಯಾಡಲು ಹೋಗಿದ್ದನು
ಇವುಗಳ ನಡುವೆ ಅದೇ ದಿನ ಸತ್ರಜಿತ್‍ನ ಸಹೋದರ ಪ್ರಸೇನಾ ಸ್ಯಮಂತಕ ರತ್ನವನ್ನು ಭೇಟೆಯಾಡಲು ಹೋದನು. ಆಗ ಸಿಂಹದ ದಾಳಿಗೆ ಒಳಗಾಗಿ ಪ್ರಾಣವನ್ನು ಬಿಟ್ಟನು. ಯಾರೋ ತಾಜಾ ಮಾಂಸ ಹಾಗೂ ರತ್ನದ ಮಣಿಗಾಗಿ ಕೊಂದರು ಎಂದು ತಪ್ಪಾಗಿ ಅರ್ಥಮಾಡಿಕೊಂಡರು. ಇವನು ಗುಹೆಯಲ್ಲಿ ಇರುವಾಗ ಸಿಂಹವು ಮಣಿಯನ್ನು ತೆಗೆದುಕೊಂಡು ದೂರ ಹೋಗಿತ್ತು.

ಕೃಷ್ಣನು ಸ್ಯಮಂತಕ ಮಣಿಯನ್ನು ಹುಡುಕಿ ಬಂದಿದ್ದನು
ಜಂಬುವಂತ ಎಂಬ ಕರಡಿಯು ಸೀತಾ ದೇವಿಯನ್ನು ರಕ್ಷಿಸುವ ಸಂದರ್ಭದಲ್ಲಿ ರಾಮನಿಗೆ ಸಹಾಯ ಮಾಡಿತ್ತು. ಸಿಂಹವನ್ನು ಕೊಂದ ಜಂಬುವಂತನು ತನ್ನ ಮಗಳಾದ ಜಂಬುವತಿಗೆ ಸ್ಯಮಂತಕ ಮಣಿಯನ್ನು ನೀಡಿದ್ದನು. ಆದರೆ ಸತ್ರಜಿತ ರಾಜನು ಕೃಷ್ಣನು ಮಣಿಯ ಆಸೆಗೆ ತನ್ನ ತಮ್ಮನನ್ನು ಕೊಂದನು ಎಂದು ಶಂಕಿಸಿದ್ದನು. ಈ ವದಂತಿಯನ್ನು ಕೇಳಿದ ಕೃಷ್ಣನು ಬೇಸರಕ್ಕೆ ಒಳಗಾದನು. ನಂತರ ಅವನ ತಮ್ಮನ ಶವವನ್ನು ಹುಡುಕಿಕೊಂಡು ಹೊದನು. ಗುಹೆಯ ಹೊರಗೆ ಪ್ರಾಣವಿಲ್ಲದೆ ಮಲಗಿರುವ ಶವವನ್ನು ನೋಡಿದನು.

ಕೃಷ್ಣ ಜಾಂಬುವಂತನ ವಿರುದ್ಧ ಹೋರಾಡಿದನು
ಸಿಂಹದ ಹೆಜ್ಜೆ ಗುರುತನ್ನು ಗಮನಿಸಿದ ಕೃಷ್ಣ ಪರಮಾತ್ಮನು ಗುಹೆಯ ಒಳಗೆ ಹೋದನು. ಅಲ್ಲಿ ಜಾಂಬುವತಿ ರತ್ನವನ್ನು ಅಲಂಕರಿಸಿ ಇಟ್ಟಿದ್ದಳು. ರತ್ನಕ್ಕಾಗಿ ತನ್ನ ಮಗಳ ಮೇಲೆ ದಾಳಿ ಮಾಡಲು ಬಂದಿರುವನು ಕೃಷ್ಣ ಎಂದು ಜಾಂಬುವಂತ ಭಯಪಟ್ಟನು. ನಂತರ ಕೃಷ್ಣನ ಮೇಲೆ ಯುದ್ಧ ಮಾಡಿದನು. ಆ ಯುದ್ಧವು ನಿರಂತರವಾಗಿ 28 ದಿನಗಳ ಕಾಲ ನಡೆಯಿತು ಎನ್ನಲಾಗುತ್ತದೆ. ನಿಜವಾದ ರಾಜನಲ್ಲ ಕೃಷ್ಣ ಎನ್ನುವುದು ಜಂಬುವಂತನಿಗೆ ತಿಳಿಯಿತು. ಆಗ ನಿಜವಾದ ರೂಪವನ್ನು ಬಹಿರಂಗ ಪಡಿಸಲು ಕೇಳಿಕೊಂಡನು...

ಕೃಷ್ಣನು ಜಾಂಬುವತಿಯನ್ನು ವಿವಾಹವಾದನು
ಕೃಷ್ಣನು ತನ್ನ ಹಿಂದಿನ ಜನ್ಮದಲ್ಲಿ ರಾಮನಾಗಿ ಅವತರಿಸಿದ್ದು, ತನ್ನ ಪತ್ನಿ ಸೀತೆಯ ರಕ್ಷಣೆಗಾಗಿ ಜಾಂಬುವಂತ ಸಹಾಯ ಮಾಡಿರುವುದನ್ನು ನೆನಪಿಸಿದನು. ಆಗ ಜಾಂಬುವಂತ ತನ್ನ ತಪ್ಪನ್ನು ಅರಿತುಕೊಂಡು ಕೃಷ್ಣನಲ್ಲಿ ಕ್ಷಮೆ ಹಾಗೂ ಕೃತಜ್ಞತೆಯನ್ನು ತಿಳಿಸಿದನು. ನಂತರ ತನ್ನ ಮಗಳು ಜಂಬುವತಿಯನ್ನು ಕೊಟ್ಟು ವಿವಾಹ ಮಾಡಿದನು. ನಂತರ ಅವಳು ಕೃಷ್ಣನ 8ನೇ ಪತ್ನಿಯಾಗಿ ಉಳಿದಳು.

ಕೃಷ್ಣನು ಸ್ಯಮಂತಕ ಮಣಿಯನ್ನು ಸತ್ರಜಿತ್ ಗೆ ಹಿಂತಿರುಗಿಸಿದನು
ಅಲ್ಲಿಂದ ಹಿಂತಿರುಗಿದ ಕೃಷ್ಣನು ನೇರವಾಗಿ ಸತ್ರಜಿತ್‍ನ ಅರಮನೆಗೆ ಬಂದನು. ಅವನ ಸಹೋದರನ ಶವ ಹಾಗೂ ಸ್ಯಮಂತಕ ಮಣಿಯನ್ನು ಹಿಂತಿರುಗಿಸಿದನು. ಸತ್ರಜಿತ್ ತನ್ನ ತಪ್ಪನ್ನು ಅರಿತು, ಕ್ಷಮೆ ಕೇಳಿದನು. ಆಗ ರಾಜ ಸತ್ರಜಿತ್ ತನ್ನ ಮಗಳು ಸತ್ಯಭಾಮಳನ್ನು ನೀಡಿ ವಿವಾಹ ಮಾಡಿದನು. ನಂತರ ಸ್ಯಮಂತಕ ಮಣಿಯನ್ನು ರಕ್ಷಿಸಲು ಕೃಷ್ಣನನ್ನು ಕೇಳಿಕೊಂಡನು.

ಕೃಷ್ಣನು ಗಣೇಶನನ್ನು ಆರಾಧಿಸಿದನು
ಗಣೇಶನು ಚಂದ್ರನಿಗೆ ನೀಡಿದ ಶಾಪದಿಂದಾಗಿ, ಕೃಷ್ಣ ಪರಮಾತ್ಮನು ಸಹ ಅಪವಾದ ಹಾಗೂ ಅಪರಾಧವನ್ನು ಹೊರಬೇಕಾಯಿತು ಎನ್ನಲಾಯಿತು. ಈ ಕಾರಣದಿಂದಲೇ ಕೃಷ್ಣ ಪರಮಾತ್ಮನು ಗಣೇಶನನ್ನು ಆರಾಧಿಸಲು ಪ್ರಾರಂಭಿಸಿದನು ಎನ್ನಲಾಗುತ್ತದೆ.



Click it and Unblock the Notifications











