Latest Updates
-
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್
ಝೆನ್ ಕಥೆ: ದುಡಿಯದೆ ತಿನ್ನುವುದು ಒಳ್ಳೆಯದಲ್ಲ

ಗುರುಗಳು ಈ ಇಳಿ ವಯಸ್ಸಿನಲ್ಲಿ ಆ ರೀತಿ ಕಷ್ಟಪಟ್ಟು ದುಡಿಯುವುದು ನೋಡಲು ಶಿಷ್ಯರಿಗೆ ತುಂಬಾ ಸಂಕಟವಾಗುತ್ತಿತ್ತು. ಈ ರೀತಿ ಕೆಲಸ ಮಾಡಬೇಡಿ, ಒಂದು ಕಡೆ ಕೂತು ವಿಶ್ರಾಂತಿ ತೆಗೆದುಕೊಳ್ಳಿ ಎಂದು ಎಷ್ಟು ಹೇಳಿದರೂ ಇವರ ಮಾತು ಕೇಳುತ್ತಿರಲಿಲ್ಲ.
ಹೇಗಾದರೂ ಮಾಡಿ ಗುರುಗಳು ಕೆಲಸ ಮಾಡುವುದನ್ನು ನಿಲ್ಲಿಸಬೇಕು ಎಂದು ಯೋಚಿಸಿದ ಶಿಷ್ಯರು ಒಂದು ಉಪಾಯ ಹೂಡಿದರು. ಅದರಂತೆ ಗುರುಗಳು ಕೆಲಸ ಮಾಡುವಾಗ ಬಳಸುತ್ತಿದ್ದ ಗುದ್ದಲಿ, ಕತ್ತಿ ಮುಂತಾದ ಉಪಕರಣಗಳನ್ನು ಬಚ್ಚಿಟ್ಟರು. ಗುರುಗಳು ಯಾವತ್ತಿನಂತೆ ತೋಟದಲ್ಲಿ ಕೆಲಸ ಮಾಡಲು ಬಂದಾಗ ಯಾವುದೇ ಉಪಕರಣಗಳು ಕಣ್ಣಿಗೆ ಬೀಳಲಿಲ್ಲ, ಇದು ತನ್ನ ಶಿಷ್ಯರ ಕೆಲಸವೆಂದು ಗೊತ್ತಾಯಿತು.
ತನ್ನ ಕೆಲಸದ ಸಾಮಾನುಗಳನ್ನು ಮರಳಿ ಕೊಡುವವರೆಗೆ ತಿನ್ನುವುದಿಲ್ಲ ಎಂದು ಉಪವಾಸ ಕೂತರು. ಈ ರೀತಿ ಎರಡು ದಿನ ಏನೂ ತಿನ್ನಲಿಲ್ಲ. ಕೊನೆಗೆ ಗುರುವಿನ ಹಠದ ಮುಂದೆ ಶಿಷ್ಯರು ಸೋತರು. ಗುರುವಿಗೆ ತಾವು ಬಚ್ಚಿಟ್ಟಿದ್ದ ಸಾಮಾನುಗಳನ್ನು ಹಿಂತಿರುಗಿಸಿದರು. ಆಗ ಗುರುಗಳು ಕೆಲಸವನ್ನು ಮಾಡಿ ನಂತರ ಊಟ ಮಾಡಿದರು. ಗುರುಗಳನ್ನೇ ಆಶ್ಚರ್ಯದಿಂದ ನೋಡುತ್ತಿದ್ದ ಶಿಷ್ಯರ ಹತ್ತಿರ "ಮೈ ಬಗ್ಗಿಸಿ ದುಡಿಯದೆ ತಿನ್ನುವುದು ಒಳ್ಳೆಯ ಲಕ್ಷಣವಲ್ಲ" ಅಂದರು.



Click it and Unblock the Notifications
