Latest Updates
-
ಯುಗಾದಿಗೆ ಸ್ಪೆಷಲ್.. ತೆಲಂಗಾಣ ಶೈಲಿಯ ಸಾಫ್ಟ್ ನೇತಿ ಒಬ್ಬಟ್ಟು ಮಾಡಿ! ಬಾಯಲ್ಲಿ ಇಟ್ಟರೆ ಕರಗುವ ರುಚಿ -
ಮಾಮೂಲಿ ಅಲ್ಲ ಆಂಧ್ರ ಶೈಲಿಯ ಬೇವು-ಬೆಲ್ಲ ಮಾಡಿ: ಯುಗಾದಿ ಸಂಭ್ರಮ ದುಪ್ಪಟ್ಟಾಗಿಸಿ! -
ಸಮ್ಮರ್ ಸ್ಪೆಷಲ್.. ಈ ಹೊಸ ರುಚಿಯ ಕಪ್ಪು ದ್ರಾಕ್ಷಿ ಲೆಮನೇಡ್ ಮಾಡಿ! ಬೇಸಿಗೆಯಲ್ಲಿ ಕೂಲ್ ಕೂಲ್ ಆಗಿ -
Ugadi 2026: ಯುಗಾದಿ ಹಬ್ಬದಂದು ಬೇವು-ಬೆಲ್ಲ ಸವಿಯುವುದರ ವೈಜ್ಞಾನಿಕ ಕಾರಣ ಏನು ಗೊತ್ತಾ? -
ದಶಕಗಳ ಬಳಿಕ ಅಪರೂಪದ ರಾಜಯೋಗ! ಈ ರಾಶಿಗಳಿಗೆ ಹರಿದು ಬರಲಿದೆ ಸಂಪತ್ತು.. ನಿಮ್ಮ ಕಷ್ಟಗಳೆಲ್ಲಾ ದೂರ! -
ಹೊಟ್ಟೆಗೆ ತಂಪು.. ನಾಲಿಗೆಗೆ ರುಚಿ..! ಇಡ್ಲಿ, ದೋಸೆ, ಅನ್ನಕ್ಕೆ ಸೂಪರ್.. ಸೌತೆಕಾಯಿ ಬಳಸಿ ಈ ರೀತಿ ಪಚ್ಚಡಿ ಮಾಡಿ -
March 18 Horoscope: ಪ್ರಯಾಣಗಳ ಮಾಡುವಾಗ ಎಚ್ಚರಿಕೆ ವಹಿಸಿ! -
ಲವ್ ಮ್ಯಾರೇಜ್ನ ಅಡೆತಡೆಗಳು ದೂರ! ಸಂಗಾತಿಗೆ ಹೊಸ ಉದ್ಯೋಗ -
ಯುಗಾದಿ ಹಬ್ಬಕ್ಕೆ ಮಾಡಿ ಗಸೆಗಸೆ ಪಾಯಸ: ಬಾಯಲ್ಲಿ ನೀರು ತರಿಸುವ ಸಿಹಿ -
Summer Garden: ಬೇಸಿಗೆಯಲ್ಲಿ ಬಾಡದ ಹೂವುಗಳಿವು! ಈ 5 ಹೂಗಳನ್ನು ನೆಡಿದ್ರೆ ಸಾಕು.. ನಿಮ್ಮ ಗಾರ್ಡನ್ ಕಲರ್ಫುಲ್
ಭಗವಾನ್ ಶ್ರೀಕೃಷ್ಣನೇ ತಪ್ಪು ಮಾಡಿ ಬಿಟ್ಟನೇ..?
ಜಗತ್ತಿನಲ್ಲಿ ದುಷ್ಟಶಕ್ತಿಗಳ ಅಟ್ಟಹಾಸ ಮೆರೆದಾಗ ಭಗವಂತ ಹೊಸ ಅವತಾರವೆತ್ತಿ ಜಗತ್ತನ್ನ ಕಾಪಾಡುತ್ತಾ ಬಂದಿರುವುದನ್ನು ಪುರಾಣಗಳು ದಾಖಲಿಸಿವೆ. ಅಂತೆಯೇ ಭಗವಂತ ಕೃಷ್ಣನೂ ಭೂಮಿಯ ಮೇಲೆ ದುಷ್ಟಶಕ್ತಿಗಳನ್ನು ಮೆಟ್ಟಿ ಧರ್ಮವನ್ನು ಸ್ಥಾಪಿಸಲು ಅವತರಿಸಿದ ಭಗವಂತನ ಒಂದು ರೂಪವಾಗಿದೆ. ಭೂಮಿಯ ಮೇಲೆ ಧರ್ಮ ಮತ್ತು ಸತ್ಯ ಉಳಿಯುವಂತಾಗಲು ಕೆಲವಾರು ಬಾರಿ ಅನ್ಯಮಾರ್ಗಗಳನ್ನೂ ಹಿಡಿದಿದ್ದಾನೆ.!
ಅಂತೆಯೇ ಮಹಾಭಾರತದಲ್ಲಿ ಕೃಷ್ಣನು ದುಷ್ಟರನ್ನು ಮಟ್ಟಹಾಕಲು ಹಲವು ಬಾರಿ ಚಾಣಾಕ್ಷತನವನ್ನು ಮೆರೆದಿರುವ ಪ್ರಸಂಗಗಳನ್ನು ಹಲವೆಡೆ ಪ್ರಸ್ತಾಪಿಸಲಾಗಿದೆ. ಕೃಷ್ಣನ ಪ್ರಕಾರ ಪಾಪವನ್ನು ನಿರ್ಮೂಲನೆ ಮಾಡಲು ಪಾಪಮಾರ್ಗವನ್ನು ಅನುಸರಿಸುವುದರಲ್ಲಿ ಏನೂ ತಪ್ಪಿಲ್ಲ. ಉದಾಹರಣೆಗೆ ದುರ್ಯೋಧನನನ್ನು ಆತನ ತಾಯಿ ಗಾಂಧಾರಿ ಏಕಾಂತದಲ್ಲಿ ಪೂರ್ಣ ವಿವಸ್ತ್ರನಾಗಿ ಬರಲು ಹೇಳುತ್ತಾಳೆ. ಆಗ ಕೃಷ್ಣ ಆಕೆ ನಿನ್ನ ತಾಯಿಯಾದರೂ ಒಂದು ಹೆಣ್ಣು. ಆಕೆಯ ಎದುರು ಬೆತ್ತಲೆ ಇರುವ ಬದಲು ಸೊಂಟದ ಸುತ್ತ ಬಾಳೆ ಎಲೆಯೊಂದನ್ನು ಸುತ್ತಿ ಹೋಗು ಎಂದು ಸಲಹೆ ನೀಡುತ್ತಾನೆ. ಅಪ್ರತಿಮ ವೀರ ಏಕಲವ್ಯನ ಸಾವಿಗೆ ಶ್ರೀಕೃಷ್ಣ ಕಾರಣನೇ?
ಇದನ್ನರಿಯದ ಗಾಂಧಾರಿ ಏಕಾಂತದಲ್ಲಿ ತನ್ನ ಕಣ್ಣಿನ ಬಟ್ಟೆಯನ್ನು ಬಿಚ್ಚುತ್ತಾಳೆ. ಅವರ ಕಣ್ಣುಗಳಿಂದ ಹೊರಟ ತೇಜಸ್ಸು ದುರ್ಯೋಧನನ ಶರೀರವನ್ನು ವಜ್ರದಷ್ಟು ಕಠಿಣವಾಗಿಸುತ್ತದೆ. ಆದರೆ ಬಾಳೆ ಎಲೆಯ ಕಾರಣ ಸೊಂಟದ ಕೆಳಗೆ ಹಾಗೇ ಉಳಿಯುತ್ತದೆ. ಬಳಿಕ ಮಹಾಭಾರತದ ಯುದ್ಧದಲ್ಲಿ ಕೃಷ್ಣನೇ ದುರ್ಯೋಧನನ ತೊಡೆ ಮುರಿಯುವಂತೆ ಕಡ್ಡಿಯೊಂದನ್ನು ಸೀಳಿ ಭೀಮನಿಗೆ ಸಂಜ್ಞೆ ನೀಡುತ್ತಾನೆ. ಶ್ರೀ ಕೃಷ್ಣಾವತಾರದ ಸಮಾಪ್ತಿ; ನೀವು ಕೇಳರಿಯದ ಕಥೆಗಳು
ಇದರಿಂದ ದುರ್ಯೋಧನನ ಕೊನೆಯಾಗುತ್ತದೆ. ಇಂತಹ ಚಾಣಾಕ್ಷ ನೀತಿಗಳನ್ನು ಅನುಸರಿಸುವ ಮೂಲಕ ಕೃಷ್ಣ ಯುದ್ಧಭೂಮಿಯಲ್ಲಿ ಧರ್ಮ ಅಜರಾಮರವಾಗುವಂತೆ ಮಾಡುತ್ತಾನೆ. ಇಂತಹ ಇನ್ನೂ ಕೆಲವು ಕುತೂಹಲ ಪ್ರಸಂಗಗಳನ್ನು ಕೆಳಗಿನ ಸ್ಲೈಡ್ ಶೋ ಮೂಲಕ ನೀಡಲಾಗಿದೆ.
ಭಗವಾನ್ ಶ್ರೀಕೃಷ್ಣನೇ ತಪ್ಪು ಮಾಡಿ ಬಿಟ್ಟನೇ.

1. ಭೀಷ್ಮ ಪಿತಾಮಹರ ಅಂತ್ಯ
ತಪಸ್ವಿ ಪರಶುರಾಮರು ವಿಶ್ವದ ಅದ್ವಿತೀಯ ಬಿಲ್ಲುಗಾರರಾಗಿದ್ದರು. ಅರ್ಜುನನೂ ಅಪ್ರತಿಮ ಬಿಲ್ಲುಗಾರನೆಂದು ಹೆಸರುವಾಸಿಯಾಗಿದ್ದರೂ ಪರಶುರಾಮರಿಗೆ ಸಾಟಿಯಾಗಿರಲಿಲ್ಲ. ಭೀಷ್ಮ ಪಿತಾಮಹರು ತಮ್ಮ ಪ್ರತಿಜ್ಞೆಗೆ ಬದ್ಧರಾಗಿದ್ದು ಹೆಣ್ಣಿನ ಮೇಲೆ ಅಸ್ತ್ರ ಉಪಯೋಗಿಸುತ್ತಿರಲಿಲ್ಲ. ಆದ್ದರಿಂದ ಅರ್ಜುನನನ್ನು ಶಿಖಂಡಿಯ ರೂಪ ಧರಿಸಿ ರಣರಂಗಕ್ಕೆ ಕರೆತಂದ ಕೃಷ್ಣ. ಭೀಷ್ಮ ಶಿಖಂಡಿಯ ರೂಪದಲ್ಲಿದ್ದ ಅರ್ಜುನನ ಮೇಲೆ ಅಸ್ತ್ರ ಉಪಯೋಗಿಸಲಿಲ್ಲ. ಇದರ ಉಪಯೋಗ ಪಡೆದ ಅರ್ಜುನ ಬಾಣಗಳ ಮಳೆಯನ್ನೇ ಸುರಿಸಿ ಭೀಷ್ಮರನ್ನು ವಧಿಸಿದ.
Image courtesy- Dailybhaskar

2. ದ್ರೋಣಾಚಾರ್ಯರ ಅಂತ್ಯ
ಎಲ್ಲಿಯವರೆಗೆ ದ್ರೋಣಾಚಾರ್ಯರ ಕೈಯಲ್ಲಿ ಬಿಲ್ಲು ಮತ್ತು ಬಾಣಗಳಿವೆಯೋ ಅಲ್ಲಿಯವರೆಗೆ ದ್ರೋಣಾಚಾರ್ಯರನ್ನು ಕೊಲ್ಲಲು ಸಾಧ್ಯವಿಲ್ಲ ಎಂದು ಎಲ್ಲರಿಗೂ ತಿಳಿದ ಸಂಗತಿಯಾಗಿತ್ತು. ಇದನ್ನೇ ತನ್ನ ಚಾಣಾಕ್ಷತೆಯಲ್ಲಿ ಬಳಸಿಕೊಂಡ ಕೃಷ್ಣ ಒಂದು ತಂತ್ರ ರೂಪಿಸಿದ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ದ್ರೋಣಾಚಾರ್ಯರ ಅಂತ್ಯ
ಕೌರವರ ಸೇನೆಯಲ್ಲಿದ್ದ ಅಶ್ವತ್ಥಾಮ ಎಂಬ ಹೆಸರಿನ ಆನೆಯೊಂದನ್ನು ಭೀಮ ಕೊಂದ ಬಳಿಕ ಯುಧಿಷ್ಠಿರ 'ಅಶ್ವತ್ಥಾಮನ ಕಥೆ ಮುಗಿಯಿತು" ಎಂದು ಉದ್ಗರಿಸುವಂತೆ ಹೇಳಿದ. ಅಂತೆಯೇ ಕೂಗಿದ ಯುಧಿಷ್ಠಿರನ ಮಾತನ್ನು ಕೇಳಿದ ದ್ರೋಣಾಚಾರ್ಯರು ತಮ್ಮ ಮಗ ಅಶ್ವತ್ಥಾಮನೇ ಕೊಲ್ಲಲ್ಪಟ್ಟ ಎಂದು ಭಾವಿಸಿ ದುಃಖಭರಿತರಾಗಿ ಬಿಲ್ಲುಬಾಣಗಳನ್ನು ಕೆಳಗಿಟ್ಟರು. ಇದನ್ನೇ ಕಾಯುತ್ತಿದ್ದ ಪಾಂಡವರು ದ್ರೋಣಾಚಾರ್ಯರ ಕಥೆಯನ್ನು ಮುಗಿಸುತ್ತಾರೆ.

3. ಜಯದ್ರಥನ ಅಂತ್ಯ
ಕುರುಕ್ಷೇತ್ರದ ಯುದ್ಧದ ದಿನದ ಕೊನೆಯೊಳಗೆ ಜಯದ್ರಥನನ್ನು ಕೊಲ್ಲುವೆ, ಇಲ್ಲದಿದ್ದರೆ ಅಗ್ನಿಪ್ರವೇಶ ಮಾಡುವೆ ಎಂದು ಅರ್ಜುನ ಪ್ರತಿಜ್ಞೆ ಮಾಡುತ್ತಾನೆ. ಇದನ್ನು ಅರಿತ ಕೌರವರು ಜಯದ್ರಥನ ಸುತ್ತಲೂ ಭಾರೀ ರಕ್ಷಣೆಯನ್ನು ಒದಗಿಸುತ್ತಾರೆ. ಆಗ ಕೃಷ್ಣ ಮಾಯೆಯ ದೇವಿಯಾದ ಯೋಗಮಾತೆಯನ್ನು ಪ್ರಾರ್ಥಿಸಿ ಸೂರ್ಯಾಸ್ತಕ್ಕೂ ಮುನ್ನವೇ ಸೂರ್ಯಾಸ್ತವಾಗುವಂತೆ ಮಾಯೆ ಮೂಡಿಸಲು ಕೇಳಿಕೊಳ್ಳುತ್ತಾನೆ. ಇದರಿಂದ ತಪ್ಪು ಮಾಹಿತಿ ಪಡೆದ ಜಯದ್ರಥ ಅಗ್ನಿಯಲ್ಲಿ ಪ್ರವೇಶಿಸುವ ಅರ್ಜುನನನ್ನು ನೋಡಲು ಹೊರಬರುತ್ತಾನೆ. ಯಾವಾಗ ಜಯದ್ರಥ ಹೊರಗೆ ಕಾಣಿಸಿಕೊಂಡನೋ ಸೂರ್ಯಾಸ್ತದ ಭ್ರಮೆ ಕಾಣೆಯಾಗುತ್ತದೆ ಮತ್ತು ಅರ್ಜುನ ಜಯದ್ರಥನನ್ನು ಕೊಲ್ಲುತ್ತಾನೆ.
Image courtesy- dailybhaskar

4. ಅರ್ಜುನನ್ನು ಕಾಪಾಡಲು ಘಟೋದ್ಗಜನ ಬಳಕೆ
ಅರ್ಜುನನ ಸಹೋದರನಾದರೂ ವೈರಿಪಾಳ್ಯದ ಪರವಾಗಿ ಸೆಣೆಸುತ್ತಿರುವ ಕರ್ಣನ ಬಳಿ ವಾಸವಶಕ್ತಿ ಎಂಬ ಅಸ್ತ್ರವಿರುವವರೆಗೂ ಆತನನ್ನು ಕೊಲ್ಲುವುದು ಭಾರೀ ಕಠಿಣ ಎಂದು ಕೃಷ್ಣನಿಗೆ ಗೊತ್ತಿತ್ತು. ಕರ್ಣನಿಂದ ಅರ್ಜುನನ್ನು ರಕ್ಷಿಸಲು ಕೃಷ್ಣ ಒಂದು ತಂತ್ರ ಹೂಡುತ್ತಾನೆ. ತಮ್ಮವನೇ ಆದ ಘಟೋದ್ಗಜನನ್ನು ದುರ್ಯೋಧನನ ಮೇಲೆ ಪ್ರಹಾರ ಮಾಡಲು ಸೂಚಿಸುತ್ತಾನೆ.
ಆಗ ಅನಿವಾರ್ಯವಾಗಿ ಕರ್ಣನು ಈ ಅಸ್ತ್ರವನ್ನು ಉಪಯೋಗಿಸಿ ಘಟೋದ್ಗಜನನ್ನು ಕೊಲ್ಲುತ್ತಾನೆ. ಇದರಿಂದ ಅರ್ಜುನನಿಗೆ ಈ ಅಸ್ತ್ರದ ಅಪಾಯ ಇಲ್ಲವಾಗುತ್ತದೆ. ಅರ್ಜುನನ್ನು ಉಳಿಸಲು ಘಟೋದ್ಗಜ ತನ್ನ ಪ್ರಾಣವನ್ನು ಅರ್ಪಿಸುವಂತೆ ಮಾಡಿದ ಕೃಷ್ಣನ ಚಾಣಾಕ್ಷ ನೀತಿ ಪಾಂಡವರ ಗೆಲುವಿಗೆ ಕಾರಣವಾಯಿತು.
Image courtesy- dailybhaskar

5. ಕರ್ಣನ ಅಂತ್ಯ
ಎಲ್ಲಿಯವರೆಗೆ ಕರ್ಣ ತನ್ನ ರಥದಲ್ಲಿದ್ದು ಎಲ್ಲಾ ಅಸ್ತ್ರಗಳು ಅವನ ಬಳಿ ಇರುತ್ತವೆಯೋ ಅಲ್ಲಿಯವರೆಗೆ ಆತನನ್ನು ಕೊಲ್ಲಲು ಯಾರಿಂದಲೂ ಸಾಧ್ಯವಿಲ್ಲ ಎಂದು ಕೃಷ್ಣ ಅರಿತಿದ್ದ. ಯುದ್ದ ಸಮಯದಲ್ಲಿ ಕರ್ಣನ ರಥ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡು ಹೊರಬರಲು ತಕರಾರು ಮಾಡುತ್ತಿತ್ತು. ಚಕ್ರವನ್ನು ಕೆಸರಿನಿಂದ ಬಿಡಿಸಲು ಕರ್ಣ ರಥದಿಂದ ಕೆಳಗಿಳಿದ ಸಂದರ್ಭವನ್ನು ಗಮನಿಸಿದ ಕೃಷ್ಣ ಕೂಡಲೇ ಅರ್ಜುನನ್ನು ಅತ್ತ ಕೊಂಡೊಯ್ದು ನಿರಾಯುಧನಾಗಿದ್ದ ಕರ್ಣನ ಮೇಲೆ ಅಸ್ತ್ರ ಉಪಯೋಗಿಸುವಂತೆ ಅರ್ಜುನನಿಗೆ ಸೂಚಿಸಿದ. ಇದನ್ನು ಪಾಲಿಸಿದ ಅರ್ಜುನ ಕೂಡಲೇ ಬಾಣ ಹೂಡಿ ಕರ್ಣನ ಮೇಲೆ ಪ್ರಯೋಗಿಸಿದ. ಇದು ಒಂದು ಪ್ರಬಲ ಅಸ್ತ್ರವಾಗಿದ್ದು ಕರ್ಣನ ಕುತ್ತಿಗೆಯಿಂದ ರುಂಡವನ್ನೇ ಬೇರ್ಪಡಿಸಿತ್ತು.
Image courtesy- daily bhaskar



Click it and Unblock the Notifications











