Latest Updates
-
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ
ಚಿನ್ನ ಖರೀದಿಗೆ ಶುಭದಿನವಾದ ಧನ್‌ತೆರೇಸ್ ಯಾವಾಗ? ಪೂಜೆಗೆ ಶುಭ ಮುಹೂರ್ತ ಹಾಗೂ ಪೂಜಾ ವಿಧಿ
ದೀಪಾವಳಿ ಸಂದರ್ಭದಲ್ಲಿ ಬರುವ ಧನತ್ರಯೋದಶಿಗೆ ತುಂಬಾನೇ ಮಹತ್ವವಿದೆ. ಚಿನ್ನದ ಆಭರಣ ಖರೀದಿಸಲು ತುಂಬಾನೇ ಸೂಕ್ತವಾದ ದಿನ ಇದಾಗಿದೆ. ಈ ದಿನ ಚಿನ್ನ ಖರೀದಿಸಿದರೆ ಅಕ್ಷಯ ಪಾತ್ರೆಯಂತೆ ನಮ್ಮಲ್ಲಿ ಸಂಪತ್ತು ವೃದ್ಧಿಸುವುದು ಎಂಬ ನಂಬಿಕೆ. ಹಾಗಾಗಿ ಈ ದಿನದಂದು ಒಂದು ಗ್ರಾಂನಷ್ಟದರೂ ಚಿನ್ನ ಖರೀದಿಸುತ್ತಾರೆ.
5 ದಿನಗಳ ಕಾಲ ನಡೆಯುವ ದೀಪಾವಳಿ ಆಚರಣೆಯಲ್ಲಿ ದೀಪಾವಳಿಯ ಮೊದಲ ದಿನವೇ ಧನ್‌ತೆರೇಸ್. ಈ ದಿನ ಚಿನ್ನವನ್ನು ಖರೀದಿಸುವುದರಿಂದ ಆ ವರ್ಷ ಸಂಪತ್ತಿನ ಲಕ್ಷ್ಮಿ ಮನೆಯಲ್ಲಿ ನೆಲೆಸುತ್ತಾಳೆ ಎಂಬ ನಂಬಿಕೆ.

ಧನ್‌ತೆರೇಸ್ ಆಚರಣೆ ಹಿಂದೆ ಒಂದು ಸುಂದರವಾದ ಪೌರಾಣಿಕ ಕತೆ ಕೂಡ ಇದೆ
ಒಂದು ರಾಜ್ಯದಲ್ಲಿ ಹಿಮಾ ಎಂಬ ರಾಜನಿದ್ದ, ಅವನಿಗೆ ಮಕ್ಕಳಾಗಿರುವುದಿಲ್ಲ, ಆತ ದೇವರನ್ನು ತುಂಬಾ ಪ್ರಾರ್ಥಿಸಿದ ಮೇಲೆ ಮಗ ಜನಿಸುತ್ತಾನೆ, ಆದರೆ ಆತನ ಆಯುಸ್ಸು 16 ವರ್ಷ ಮಾತ್ರ. ಮಗ 16 ವರ್ಷ ತುಂಬಿದಾಗ ರಾಜ ರಾಜಕುಮಾರನಿಗೆ ಮದುವೆ ಮಾಡುತ್ತಾನೆ. ಮದುವೆಯಾಗಿ ನಾಲ್ಕೇ ದಿನಕ್ಕೆ ಸಾಯುತ್ತಾನೆ ಎಂದು ಜ್ಯೋತಿಷಿ ತಿಳಿಸುತ್ತಾರೆ, ಆದರೆ ಆ ರಾಜಕುಮಾರ ಪತ್ನಿ ತನ್ನ ಗಂಡನನ್ನು ಉಳಿಸಿಕೊಳ್ಳುವ ದೃಢ ನಿರ್ಧಾರ ಮಾಡಿ ಹೊಸ್ತಿಲಿನಲ್ಲಿ ಚಿನ್ನದ ರಾಶಿಯನ್ನು ಹಾಕಿ ಅಲ್ಲಿ ಕಾವಲು ಕೂರುತ್ತಾಳೆ, ತನ್ನ ಗಂಡನಿಗೆ ನಿದ್ದೆ ಮಾಡದಂತೆ ಸೂಚಿಸಿ, ನಿದ್ದೆ ಮಾಡದಿರಲು ಕತೆ ಹೇಳುತ್ತಾನೆ. ರಾಜಕುಮಾರನ ಪ್ರಾಣ ತೆಗೆಯಲು ಹಾವಿನ ರೂಪದಲ್ಲಿ ಬಂದ ಯಮನಿಗೆ ಚಿನ್ನದ ಹೊಳಪು ಕಣ್ಣು ಕುಕ್ಕುತ್ತೆ, ಅಲ್ಲದೆ ರಾಜಕುಮಾರಿ ಹೇಳುತ್ತಿರುವ ಕತೆಗಳನ್ನು ಕೇಳುತ್ತಾ ತಾನು ಬಂದ ಕಾರ್ಯವನ್ನು ಮರೆತು ಹೋಗುತ್ತಾನೆ, ಬೆಳಕು ಹರಿಯುತ್ತದೆ ಯಮನಿಗೆ ನಿರ್ಧರಿಸಿದ ಸಮಯದಲ್ಲಿ ಪ್ರಾಣ ತೆಗೆಯಲು ಸಾಧ್ಯವಾಗದಿರುವ ಕಾರಣ ಹಿಂತಿರುಗಬೇಕಾಗುತ್ತಾದೆ. ಅಲ್ಲಿಂದ ಈ ಆಚರಣೆ ಜಾರಿಗೆ ಬಂತು ಎಂಬುವುದು ನಂಬಿಕೆ.
ಈ ಕಾರಣದಿಂದಲೇ ಧನ್‌ತೆರೇಸ್ ದಿನ ಮನೆಯ ಹೊಸ್ತಿಲಿನಲ್ಲಿ ದೀಪಹಚ್ಚಿ, ಚಿನ್ನವನ್ನು ಇಟ್ಟು ಪೂಜಿಸಲಾಗುವುದು.

2022ರಲ್ಲಿ ಧನ್‌ತೆರೇಸ್
2022ರಲ್ಲಿ ಧನ್‌ತೆರೇಸ್ ಅನ್ನು ಅಕ್ಟೋಬರ್ 23, ಭಾನುವಾರದಂದು ಆಚರಿಸಲಾಗುವುದು. ಧನ್‌ತೆರೇಸ್ ಆಚರಣೆಯೊಂದಿಗೆ ದೀಪಾವಳಿಯ ಆಚರಣೆ ಶುರುವಾಗುವುದು.
ಧನ್ವಂತರಿಯ ಪೂಜೆ
ಧನ್‌ತೆರೇಸ್ ದಿನದಂದು ಆಯುರ್ವೇದ ಗುರುವಾದ ಧನ್ವಂತರಿಯನ್ನು ಪೂಜಿಸಲಾಗುವುದು. ಸಮುದ್ರಮಂಥನ ಸಮಯದಲ್ಲಿ ಧನ್ವಂತರಿ ಒಂದು ಕೈಯಲ್ಲಿ ಅಮೃತ, ಮತ್ತೊಂದು ಕೈಯಲ್ಲಿ ಆಯುರ್ವೇದ ಮದ್ದಿನ ಪುಸ್ತಕ ಹಿಡಿದಿದ್ದರು ಎಂದು ಹೇಳಲಾಗುವುದು.

ಧನ್‌ತೆರೇಸ್ 2022:ಪೂಜಾ ಸಮಯ, ಶುಭ ಮುಹೂರ್ತ
ಧನ್‌ತೆರೇಸ್ ಪೂಜೆಗೆ ಶುಭ ಮುಹೂರ್ತ ಬೆಳಗ್ಗೆ 7:01ರಿಂದ 8:17ರವರೆಗೆ (1 ಗಂಟೆ)
ತ್ರಯೋದಶಿ ತಿಥಿ ಪ್ರಾರಂಭ: ಶನಿವಾರ ಸಂಜೆ 6:02ಕ್ಕೆ
ತ್ರಯೋದಶಿ ತಿಥಿ ಮುಕ್ತಾಯ:ಭಾನುಬಾರ ಸಂಜೆ 06:03ಕ್ಕೆ
ಪ್ರದೋಷ ಕಾಲ:5:45ಕ್ಕೆ
ಪ್ರದೋಷ ಕಾಲ ಮುಕ್ತಾಯ: ರಾತ್ರಿ 08:17ಕ್ಕೆ
ವೃಷಭ ಕಾಲ ಪ್ರಾರಂಭ: ಸಂಜೆ 7:01ಕ್ಕೆ
ವೃಷಭ ಕಾಲ ಮುಕ್ತಾಯ: ರಾತ್ರಿ 8:56ಕ್ಕೆ
ಧನ್‌ತೆರೇಸ್ ಪೂಜಾವಿಧಿ
ಧನ ತ್ರಯೋದಸಿಯಂದು ಮೊದಲಿಗೆ ಗಣೇಶನಿಗೆ ಪೂಜೆ ಮಾಡಲಾಗುವುದು. ನಂತರ ಧನ್ವಂತರಿಗೆ ಪೂಜೆ ಮಾಡಲಾಗುವುದು, ನಂತರ ಪ್ರದೋಷ ಕಾಲದಲ್ಲಿ ಲಕ್ಷ್ಮಿಯನ್ನು ಪೂಜಿಸಲಾಗುವುದು.



Click it and Unblock the Notifications
