Latest Updates
-
ಹವಾಮಾನ ಬದಲಾಗಿದೆ, ನಿಮ್ಮ ವರ್ಕೌಟ್ ಪ್ಲಾನ್ ಬದಲಾಯಿಸಿದ್ದೀರಾ? ಇಲ್ಲದಿದ್ದರೆ ಈ ಎಚ್ಚರಿಕೆ ನಿಮಗಾಗಿ! -
ಮಳೆಗಾಲದಲ್ಲಿ ಮದುವೆ ನಿಶ್ಚಯವಾಗಿದೆಯೇ? ನಿಮ್ಮ ಮದುವೆ ಸಂಭ್ರಮ ಹಾಳಾಗದಂತೆ ತಡೆಯಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಮಳೆಗಾಲ ಶುರುವಾಗುವ ಮುನ್ನವೇ ನಿಮ್ಮ ಮನೆಯನ್ನು ಹೀಗೆ ಸಜ್ಜುಗೊಳಿಸಿ: ಸೋರಿಕೆ ಮತ್ತು ತೇವಾಂಶದಿಂದ ಮುಕ್ತಿ ಪಡೆಯಿರಿ! -
ಬಿಸಿಲಿನ ಬೇಗೆಗೆ ಸುಸ್ತಾಗಿದ್ದೀರಾ? ದೇಹ ತಂಪಾಗಿಡಲು ಈ ಸಾಂಪ್ರದಾಯಿಕ ಪಾನೀಯಗಳೇ ಮದ್ದು! -
ಬೆಂಗಳೂರಿನಲ್ಲಿ ಇವತ್ತು ಭಾರಿ ಮಳೆ: ಟ್ರಾಫಿಕ್ ಕಿರಿಕಿರಿ ತಪ್ಪಿಸಲು ಈ ಕೆಲಸಗಳನ್ನು ಮಿಸ್ ಮಾಡ್ಬೇಡಿ! -
ಬಿಸಿಲಿನಲ್ಲಿ ವ್ಯಾಯಾಮ ಮಾಡ್ತಿದ್ದೀರಾ? ಈ ತಪ್ಪುಗಳನ್ನು ಮಾಡಿದರೆ ನಿಮ್ಮ ಆರೋಗ್ಯಕ್ಕೆ ಅಪಾಯ ಕಾದಿದೆ! -
ಸೋಶಿಯಲ್ ಮೀಡಿಯಾದಲ್ಲಿ ನಿಮ್ಮ ಸಂಬಂಧವನ್ನು ರಹಸ್ಯವಾಗಿಡಬೇಕಾ? ನೆಮ್ಮದಿಯ ಬದುಕಿಗೆ ಈ ಡಿಜಿಟಲ್ ಬೌಂಡರಿಗಳು ಮಸ್ಟ್! -
ದೆಹಲಿ-ಎನ್ಸಿಆರ್ನಲ್ಲಿ ಬಿರುಗಾಳಿ ಅಬ್ಬರ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಮುನ್ನೆಚ್ಚರಿಕೆ ಮರೆಯದಿರಿ! -
ಅಡುಗೆಮನೆಯಲ್ಲಿ ಕಡಲೆ ಹಿಟ್ಟು ಬಳಸುವ ಮುನ್ನ ಎಚ್ಚರ: FSSAI ಜಾರಿಗೆ ತಂದಿದೆ ಹೊಸ ಕಠಿಣ ನಿಯಮಗಳು! -
ಫ್ಲಿಪ್ಕಾರ್ಟ್ GRWM ಸೇಲ್: ಟ್ರೆಂಡಿ ಲುಕ್ ಪಡೆಯಲು ಇನ್ಫ್ಲುಯೆನ್ಸರ್ ಸಜೆಸ್ಟ್ ಮಾಡಿದ ಬೆಸ್ಟ್ ಡೀಲ್ಗಳು ಇಲ್ಲಿವೆ!
ಡಿಸೆಂಬರ್‌ನಲ್ಲಿ ಈ 12 ದಿನಗಳು ಹಿಂದೂಗಳಿಗೆ ತುಂಬಾ ಪವಿತ್ರವಾದುದು
ಡಿಸೆಂಬರ್ ವರ್ಷದ ಕಡೆಯ ತಿಂಗಳಾಗಿದ್ದು ಹೆಚ್ಚಿನ ಸಂದರ್ಭಗಳಲ್ಲಿ ಕ್ರಿಸ್ ಮಸ್ ಹಬ್ಬವನ್ನು ಮಾತ್ರವೇ ಉಲ್ಲೇಖಿಸಲಾಗುತ್ತದೆ. ಆದರೆ ಈ ತಿಂಗಳಲ್ಲಿ ಇನ್ನೂ ಕೆಲವಾರು ಹಬ್ಬಗಳು ಮತ್ತು ಧಾರ್ಮಿಕ ಮಹತ್ವವನ್ನು ಹೊಂದಿರುವ ದಿನಾಂಕಗಳಿವೆ. ಇವುಗಳಲ್ಲಿ ಹೆಚ್ಚಿನವುಗಳ ಬಗ್ಗೆ ನಮಗೆ ಗೊತ್ತೇ ಇಲ್ಲ! ಈ ಬಗ್ಗೆ ಮುಂಚಿತವಾಗಿ ತಿಳಿದುಕೊಂಡಿದ್ದರೆ ಈ ದಿನಗಳಲ್ಲಿ ನಿರ್ವಹಿಸಬಹುದಾದ ಕೆಲವು ಧಾರ್ಮಿಕ ಕಾರ್ಯಗಳು ಮನಸ್ಸಿಗೆ ನೆಮ್ಮದಿಯನ್ನೂ ಸಮಾಧಾನವನ್ನೂ ನೀಡುತ್ತವೆ. ಒಂದು ವೇಳೆ ಅರಿಯದೇ 2019ರ ಸಾಲಿನ ಈ ದಿನಾಂಕ ಮೀರಿ ಹೋಗಿ ಆ ಧಾರ್ಮಿಕ ಕಾರ್ಯ ನಡೆಸದೇ ಹೋದಲ್ಲಿ ಮುಂದಿನ ಅವಕಾಶಕ್ಕಾಗಿ ಒಂದಿಡೀ ವರ್ಷ 2020ರವರೆಗೆ ಕಾಯಬೇಕಾದ ಸಂದರ್ಭ ಎದುರಾಗಬಹುದು. ಹಾಗಾಗಿ, ಈ ದಿನಾಂಕಗಳು ಮತ್ತು ಆ ದಿನಗಳಲ್ಲಿ ನಡೆಸಬಹುದಾದ ಪ್ರಮುಖ ಕಾರ್ಯಗಳನ್ನು ಇಂದಿನ ಲೇಖನದಲ್ಲಿ ವಿವರಿಸಲಾಗಿದೆ.

1ನೇ ಡಿಸೆಂಬರ್ : ರಾಮವಿವಾಹ
ನೀವು ನಿರ್ವಹಿಸಬಹುದಾದ ಅತ್ಯಂತ ಪ್ರಮುಖ ಮತ್ತು ಪವಿತ್ರವಾದ ಧಾರ್ಮಿಕ ಕಾರ್ಯವಾಗಿದೆ. ವಿಶೇಷವಾಗಿ ಸೂಕ್ತ ಸಂಗಾತಿಯನ್ನು ಪಡೆಯುವ ಪ್ರಯತ್ನದಲ್ಲಿರುವವರಿಗೆ ಈ ದಿನದಂದು ರಾಮವಿವಾಹ ಕಾರ್ಯವನ್ನು ನಡೆಸುವ ಮೂಲಕ ಉತ್ತಮ ಸಂಗಾತಿ ದೊರಕುವ ಸಾಧ್ಯತೆಗಳು ಹೆಚ್ಚುತ್ತವೆ. ಅವಿವಾಹಿತರಿಗೆ ಕಂಕಣಬಲ ಕೂಡಿ ಬರಲು ಮತ್ತು ವಿದ್ಯಾರ್ಥಿಗಳ ಜ್ಞಾನಾರ್ಜನೆಗೆ ನೆರವು ಮತ್ತು ಅಧ್ಯಯನದಲ್ಲಿ ಹೆಚ್ಚಿನ ಸಾಫಲ್ಯ ದೊರಕಲೂ ಈ ಕಾರ್ಯ ಹೆಚ್ಚಿನ ಫಲ ನೀಡುತ್ತದೆ.

2ನೇ ಡಿಸೆಂಬರ್: ಸುಬ್ರಹ್ಮಣ್ಯ ಷಷ್ಠಿ
ಭಯ, ಉದ್ವೇಗ, ಆತಂಕ ಮೊದಲಾದ ಮಾನಸಿಕ ತೊಂದರೆಗಳಿಂದ ಬಳಲುತ್ತಿರುವ ವ್ಯಕ್ತಿಗಳು ಈ ದಿನದಂದು ಸುಬ್ರಹ್ಮಣ್ಯ ಷಷ್ಠಿಯನ್ನು ನಡೆಸುವ ಮೂಲಕ ತಮ್ಮ ಭಯದ ಮೇಲೆ ನಿಯಂತ್ರಣ ಸಾಧಿಸಲು ಸಾಧ್ಯವಾಗುತ್ತದೆ. ಈ ಧಾರ್ಮಿಕ ಕಾರ್ಯದ ಮೂಲಕ ಮನೆದೇವರನ್ನು ಪೂಜಿಸಿದರೆ ಮಾನಸಿಕ ಶಾಂತಿ, ಶಕ್ತಿ ಮತ್ತು ಒಟ್ಟಾರೆ ಪ್ರಗತಿ ಪಡೆಯಲು ಸಾಧ್ಯವಾಗುತ್ತದೆ.

4ನೇ ಡಿಸೆಂಬರ್: ಮಾಸಿಕ ದುರ್ಗಾಷ್ಟಮಿ
ನಿಮ್ಮ ಮನೋಭಿಲಾಶೆಯ ಕೆಲಸವನ್ನು ಪ್ರಾರಂಭಿಸಲು ಈ ಪೂಜೆ ಉತ್ತಮವಾಗಿದ್ದು ಇದನ್ನು ನಿರ್ವಹಿಸಲು ಈ ತಿಂಗಳ ಈ ದಿನ ಅತ್ಯುತ್ತಮವಾಗಿದೆ. ಅಷ್ಟೇ ಅಲ್ಲ, ಬಳಲುತ್ತಿರುವ ಕಾಯಿಲೆಯಿಂದ ಶೀಘ್ರ ಉಪಶಮನ ಪಡೆಯಲು, ವಿದ್ಯಾಭ್ಯಾಸದಲ್ಲಿ ಹೆಚ್ಚಿನ ಯಶಸ್ಸು ಪಡೆಯಲು ಸಹಾ ಈ ಪೂಜೆ ನೆರವಾಗುತ್ತದೆ. ಈ ದಿನದ ಮುಂಜಾನೆ ಪೂಜೆ ನಿರ್ವಹಿಸಿ ತೆರಳುವ ವ್ಯಕ್ತಿಗಳಿಗೆ ಯಶಸ್ಸು ಮತ್ತು ಮಾನಸಿಕ ಶಾಂತಿ ದೊರಕುತ್ತದೆ.

8ನೇ ಡಿಸೆಂಬರ್: ಮೋಕ್ಷದ ಏಕಾದಶಿ
ಒಂದು ವೇಳೆ ನಿಮ್ಮಲ್ಲಿ ದುಃಖ ಮತ್ತು ತೊಡಕುಗಳು ಆವರಿಸಿದ್ದರೆ ಈ ದಿನದಂದು ನಡೆಸುವ ಮೋಕ್ಷದ ಏಕಾದಶಿ ಪೂಜೆ ನಿಮ್ಮ ತೊಂದರೆಗಳನ್ನು ನಿವಾರಿಸಲು ನೆರವಾಗುತ್ತದೆ. ಭಕ್ತರಿಗೆ ಹೆಚ್ಚಿನ ಜ್ಞಾನ ಮತ್ತು ಆಧ್ಯಾತ್ಮಿಕ ಪ್ರಗತಿಯೂ ಲಭ್ಯವಾಗುತ್ತದೆ.

9ನೇ ಡಿಸೆಂಬರ್: ಸೋಮ ಪ್ರದೋಶ
ಭಗವಂತ ಶಿವನನ್ನು ಆರಾಧಿಸಿ ಆತನ ಕೃಪೆ, ಆರೋಗ್ಯಕರ ಧನಾತ್ಮಕ ಶಕ್ತಿ ಮತ್ತು ಜೀವನದಲ್ಲಿ ಸಂತೋಷವನ್ನು ಪಡೆಯಲು ಈ ದಿನ ಅತ್ಯಂತ ಸೂಕ್ತವಾಗಿದೆ. ತಮ್ಮ ಕಾರ್ಯಗಳು ಮುಂದುವರೆಯಲು ತೊಡಕನ್ನು ಅನುಭವಿಸುತ್ತಿರುವ ವ್ಯಕ್ತಿಗಳಿಗೆ ಈ ಪೂಜೆ ಉತ್ತಮವಾಗಿದೆ. ಆದ್ದರಿಂದ ತೊಡಕುಗಳಿರುವ ಯಾವುದೇ ವ್ಯಕ್ತಿ ಈ ದಿನವನ್ನು ತಪ್ಪಿಸಿಕೊಳ್ಳದೇ ಪೂಜೆ ನಿರ್ವಹಿಸಿದರೆ ಕಷ್ಟಗಳು ಶೀಘ್ರವೇ ನಿವಾರಣೆಯಾಗುತ್ತವೆ.

12ನೇ ಡಿಸೆಂಬರ್: ಮಾರ್ಗಶಿರ ಪೂರ್ಣಿಮಾ
ಮಕ್ಕಳಿಲ್ಲದ ದಂಪತಿಗಳು ಈ ದಿನದಂದು ನಡೆಸುವ ಮಾರ್ಗಶಿರ ಪೂರ್ಣಿಮಾ ಪೂಜೆಯಿಂದ ದೇವರ ಅನುಗ್ರಹ ಪಡೆಯಲು ಸಾಧ್ಯವಾಗುತ್ತದೆ ಹಾಗೂ ಸಂತಾನಭಾಗ್ಯ ಪಡೆಯುವ ಸಾಧ್ಯತೆಗಳು ಹೆಚ್ಚುತ್ತವೆ. ಇದಕ್ಕಾಗಿ ವಿಶೇಷವಾಗಿ ಸಂತಾನರಹಿತ ದಂಪತಿಗಳು ಈ ದಿನವನ್ನು ಖಂಡಿತಾ ತಪ್ಪಿಸಿಕೊಳ್ಳಬಾರದು. ಅಷ್ಟೇ ಅಲ್ಲ, ಮಕ್ಕಳಿರುವ ದಂಪತಿಗಳು ತಮ್ಮ ಮಕ್ಕಳ ಆರೋಗ್ಯಕ್ಕಾಗಿ ಈ ದಿನ ಪ್ರಾರ್ಥಿಸಿದರೆ ಮಕ್ಕಳು ಆರೋಗ್ಯವಂತರಾಗಿ ಹಾಗೂ ಉತ್ತಮ ವ್ಯಕ್ತಿಗಳಾಗಿ ರೂಪುಗೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಆಧ್ಯಾತ್ಮಿಕ ಪ್ರಗತಿಯೂ ಲಭ್ಯವಾಗುತ್ತದೆ.

15ನೇ ಡಿಸೆಂಬರ್: ಸಂಕಷ್ಟಿ ಚತುರ್ದಶಿ
ಒಂದು ವೇಳೆ ಕೆಲಸವೊಂದು ಮುಂದುವರೆಯದೇ ಕೊನೆಗೊಳ್ಳಲು ಹೆಚ್ಚಿನ ಸಮಯ ಕಬಳಿಸುತ್ತಿದ್ದಲ್ಲಿ, ಈ ಪೂಜೆಯನ್ನು ನಿರ್ವಹಿಸುವ ಮೂಲಕ ಕಾರ್ಯ ಪೂರ್ಣಗೊಳ್ಳಲು ನೆರವು ದೊರಕುತ್ತದೆ. ಈ ಮೂಲಕ ಮಾನಸಿಕ ಭಯಗಳನ್ನು ಗೆಲ್ಲಲು ಸಾಧ್ಯವಾಗುತ್ತದೆ. ತಮ್ಮ ಕಾರ್ಯಸಾಧನೆಗಳಲ್ಲಿ ಅಡ್ಡಿ ಎದುರಿಸುತ್ತಿರುವ ವ್ಯಕ್ತಿಗಳಿಗೂ ಈ ಪೂಜೆ ಸೂಕ್ತವಾಗಿದೆ. ದಾಂಪತ್ಯದಲ್ಲಿ ಕಲಹ ಅಥವಾ ವಿರಸ ಹೊಂದಿರುವ ದಂಪತಿಗಳು ಈ ಪೂಜೆಯನ್ನು ನೆರವೇರಿಸಿದರೆ ಕಲಹ ನಿವಾರಣೆಯಾಗಿ ಪ್ರೀತಿ ವಿಶ್ವಾಸ ಹಾಗೂ ಮನೆಯಲ್ಲಿ ಶಾಂತಿ ನೆಲೆಸುತ್ತದೆ.

19ನೇ ಡಿಸೆಂಬರ್: ಮಾಸಿಕ ಕಲಾಷ್ಠಮಿ
ಅಸಾಧ್ಯ ಎಂದೆನಿಸಿದ್ದ ಕಾರ್ಯವೂ ಈ ದಿನದಂದು ಪಾರ್ಥಿಸಿ ಪ್ರಾರಂಭಿಸುವ ಮೂಲಕ ಸುಲಭವಾಗಿ ನೆರವೇರುತ್ತದೆ. ಗಾಯ ಅಥವಾ ಕಾಯಿಲೆಯಿಂದ ಬಳಲುತ್ತಿರುವ ವ್ಯಕ್ತಿಗಳಿಗೂ ಈ ಪೂಜೆ ಶ್ರೇಯಸ್ಕರವಾಗಿದೆ. ಒಂದು ವೇಳೆ ಕೆಲಸವೊಂದು ನಡುವಿನಲ್ಲಿ ನಿಂತುಹೋಗಿದ್ದರೆ ಈ ಪೂಜೆ ನಿರ್ವಹಿಸಿ ಮತ್ತೊಮ್ಮೆ ಕೈಗೆತ್ತಿಕೊಳ್ಳುವ ಮೂಲಕ ಈ ಕೆಲಸವೂ ಸಾಂಗವಾಗಿ ನೆರವೇರುತ್ತದೆ ಹಾಗೂ ಆತ್ಮೀಯರಿಂದ ಹೆಚ್ಚಿನ ಸಹಕಾರ ದೊರಕುತ್ತದೆ. ಅಲ್ಲದೇ ನಿಮ್ಮ ಕೆಲಸಗಳಿಗೆ ಎದುರಾಗುವ ಕಂಟಕಗಳು ನಿವಾರಣೆಗೊಡು ದಿನದಲ್ಲಿ ನಡೆಸುವ ನಿಮ್ಮ ಪ್ರಯತ್ನಗಳು ಹೆಚ್ಚಿನ ಫಲವನ್ನು ನೀಡುತ್ತವೆ.

23ನೇ ಡಿಸೆಂಬರ್: ಸೋಮ ಪ್ರದೋಶ
ಈ ಪೂಜೆ ಆಧ್ಯಾತ್ಮಿಕ ಮತ್ತು ಮಾನಸಿಕ ಪ್ರಗತಿಗೆ ಅಗತ್ಯವಾಗಿದೆ. ನಷ್ಟ ಅನುಭವಿಸಿರುವ ಮತ್ತು ಅನಗತ್ಯ ತೊಡಕುಗಳಿಗೆ ಒಡ್ಡಿಕೊಂಡಿರುವ ವ್ಯಕ್ತಿಗಳಿಗೆ ಈ ಪೂಜೆ ಹೆಚ್ಚಿನ ನೆರವು ಒದಗಿಸುತ್ತದೆ ಹಾಗೂ ಆತ್ಮೀಯರಿಂದ ಧನಾತ್ಮಕ ನೆರವು ಒದಗುವ ಮೂಲಕ ಹೆಚ್ಚಿನದನ್ನು ಸಾಧಿಸಲು ಸಾಧ್ಯವಾಗುತ್ತದೆ. ಅಲ್ಲದೇ ಭಕ್ತರಿಗೆ ನೆಮ್ಮದಿ ಮತ್ತು ಆರೋಗ್ಯಗಳೂ ಲಭಿಸುತ್ತವೆ.

24 ನೇ ಡಿಸೆಂಬರ್: ಮಾಸಿಕ ಶಿವರಾತ್ರಿ
ಭಗವಾನ್ ಶಿವನನ್ನು ಆರಾಧಿಸುವ ಭಕ್ತರು ಈ ದಿನದಂದು ನೆರವೇರಿಸುವ ಶಿವಪೂಜೆಯ ಮೂಲಕ ಆರೋಗ್ಯ ಮತ್ತು ಸಂಪತ್ತನ್ನು ಗಳಿಸುತ್ತಾರೆ. ದಾಂಪತ್ಯದಲ್ಲಿ ಕಲಹ ಹೊಂದಿರುವ ವ್ಯಕ್ತಿಗಳು ಈ ಪೂಜೆಯ ಮೂಲಕ ತಮ್ಮ ತೊಂದರೆಯನ್ನು ನಿವಾರಿಸಲು ಪ್ರಯತ್ನಿಸಿದರೆ ಹೆಚ್ಚಿನ ಫಲ ದೊರಕುತ್ತದೆ.

30ನೇ ಡಿಸೆಂಬರ್: ವಿನಾಯಕಿ ಚತುರ್ಥಿ
ಜೀವನದಲ್ಲಿ ಎದುರಾಗಿರುವ ಯಾವುದೇ ವಿಘ್ನಗಳನ್ನು ತೊಡೆದು ನಿಮ್ಮ ಪ್ರಯತ್ನಗಳು ಹೆಚ್ಚಿನ ಫಲ ನೀಡುವಂತಾಗಲು ಈ ದಿನ ವಿನಾಯಕನನ್ನು ಆರಾಧಿಸಲು ಅತಿ ಸೂಕ್ತವಾದ ದಿನವಾಗಿದೆ. ಒಂದು ವೇಳೆ ಅಸಹಜ ಕಾರಣದಿಂದ ನಿಮ್ಮ ಕೆಲಸವೊಂದು ಮುಂದುವರೆಯದೇ ನಿಂತಲ್ಲೇ ಇದ್ದರೆ ಈ ಪೂಜೆಯ ಮೂಲಕ ಈ ತಡೆ ನಿವಾರಣೆಗೊಂಡು ಕೆಲಸ ಪೂರ್ಣಗೊಳ್ಳಲು ನೆರವಾಗುತ್ತದೆ. ಈ ದಿನದಂದು ವಿದ್ಯಾರ್ಥಿಗಳು ಹೆಚ್ಚಿನ ಅಭ್ಯಾಸ ನಡೆಸಿದ್ದೇ ಆದಲ್ಲಿ ಹೆಚ್ಚಿನ ಜ್ಞಾನ ಮತ್ತು ವಿದ್ಯೆಯನ್ನು ಪಡೆಯಲು ಸಾಧ್ಯವಾಗುತ್ತದೆ.

31ನೇ ಡಿಸೆಂಬರ್: ಸ್ಕಂದ ಷಷ್ಟಿ
ಇದು ವರ್ಷದ ಕೊನೆಯ ದಿನವಾಗಿದ್ದು ವಿಶೇಷವಾಗಿ ಭಯ ಮತ್ತು ಚಿಂತೆಗೆ ಒಳಗಾಗಿರುವ ವ್ಯಕ್ತಿಗಳಿಗೆ ಹೆಚ್ಚಿನ ಮಹತ್ವದ್ದಾಗಿದೆ. ಸತತ ಭಯದಿಂದ ನರಳುತ್ತಿರುವ ವ್ಯಕ್ತಿಗಳಿಗೆ ಈ ದಿನ ಈ ಭಯವನ್ನು ಹೋಗಲಾಡಿಸಲು ಮತ್ತು ಕಾರ್ಯ ಯಶಸ್ವಿಗೊಳ್ಳಲು ಸಾಧ್ಯವಾಗುತ್ತದೆ.



Click it and Unblock the Notifications