Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಮಕ್ಕಳ ಓದಿನ ಸಾಲ ತೀರಿಸಲಾಗದೆ ತಂದೆ ಆತ್ಮಹತ್ಯೆ: ತಂದೆಗಾಗಿ UPSCನಲ್ಲಿ 308ನೇ ರ‍್ಯಾಂಕ್ ಪಾಸಾದಳು ಮಗಳು!
ಯುಪಿಎಸ್‌ಸಿ ಸಿವಿಲ್ ಪರೀಕ್ಷೆಯಲ್ಲಿ ರ‍್ಯಾಂಕ್ ಬರಬೇಕೆಂದು ಎಷ್ಟೋ ಜನ ಹಗಲು-ರಾತ್ರಿ ಓದಿ ಕಷ್ಟ ಪಡುತ್ತಾರೆ, ಅದಕ್ಕಾಗಿ ಕೋಚಿಂಗ್ ತೆಗೆದುಕೊಳ್ಳುತ್ತಾರೆ, ಫ್ರೆಂಡ್ಸ್, ಟ್ರಿಪ್, ಸಿನಿಮಾ ಇವೆಲ್ಲಾ ಬಿಟ್ಟು ಸದಾ ಓದು-ಓದು ಅಂತ ತುಂಬಾನೇ ಫೋಕಸ್ ಆಗಿದ್ದರೂ ಗುರಿ ಮುಟ್ಟುವುದು ಅಷ್ಟು ಸುಲಭದ ಮಾತಲ್ಲ. ಆದರೆ ಯಾವಾಗ ಆ ಪರೀಕ್ಷೆಯಲ್ಲಿ ರ‍್ಯಾಂಕ್ ಬರುತ್ತೋ ಆ ನಮ್ಮ ಸಾಧನೆಗೆ ನಾವು, ನಮ್ಮ ಮನೆಯವರು ಅಷ್ಟೇ ಅಲ್ಲ, ನಮ್ಮ ಊರು, ನಮ್ಮ ಜಿಲ್ಲೆ, ನಮ್ಮ ರಾಜ್ಯ ನಮ್ಮ ಬಗ್ಗೆ ಹೆಮ್ಮೆ ಪಡುತ್ತೆ.
2021ರ ಸಿವಿಲ್ ಸರ್ವೀಸ್ ಪರೀಕ್ಷೆಯಲ್ಲಿ ಕರ್ನಾಟಕದ ಅರುಣಾ 308ನೇ ರ‍್ಯಾಂಕ್‌ನಲ್ಲಿ ಪಾಸಾಗಿದ್ದಾರೆ, ಇವರು ನಮ್ಮ ಕರ್ನಾಟಕದವರು, ಇವರ ಸಾಧನೆಯನ್ನು ಹೊಗಳುತ್ತಿದ್ದಾರೆ. ಆದರೆ ಅರುಣಾ ಅವರಿಗೆ ಈ ತಮ್ಮ ಸಾಧನೆಯ ಖುಷಿಯಲ್ಲಿ ಒಂದು ನೋವು ಅವರನ್ನು ಕಾಡುತ್ತಿದೆ, ಆ ನೋವಿನ ಕಾರಣದಿಂದಲೇ ಅವರು ಇಂದು ಈ ಸಾಧನೆ ಮಾಡಿದ್ದಾರೆ. ನಾನು ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂಬ ಛಲ ಮೂಡಲು ಕಾರಣವೇ ಅವರ ಮನಸ್ಸಿಗಾದ ಅಗಾಧ ನೋವು.
ಯುಪಿಎಸ್‌ಸಿಯಲ್ಲಿ ಪಾಸಾದ ಒಬ್ಬೊಬ್ಬರಲ್ಲೂ ಒಂದೊಂದು ಕತೆ ಇರುತ್ತದೆ, ಆದರೆ ಅವೆಲ್ಲದರಕ್ಕಿಂತ ಭಿನ್ನವಾಗಿದೆ ಅರುಣಾ ಜೀವನ ಕತೆ. ಅರುಣಾ ಅವರು ಪ್ರಾರಂಭದಲ್ಲಿ ಯುಪಿಎಸ್‌ಸಿ ಪರೀಕ್ಷೆ ಬರೆಯಬೇಕು ಎಂದು ಅಂದುಕೊಂಡೇ ಇರಲಿಲ್ಲ, ಎಂಜಿನಿಯರ್ ಮಾಡಬೇಕು, ಒಂದೊಳ್ಳೆ ಕೆಲಸ ಪಡೆಯಬೇಕು ಎಂದಷ್ಟೇ ಇತ್ತು.

ಮಕ್ಕಳ ಓದಿನ ಸಾಲ ತೀರಿಸಲಾಗದೆ ತಂದೆ ಆತ್ಮಹತ್ಯೆ
ಆದರೆ 2009ರಲ್ಲಿ ಅವರ ತಂದೆ ಮಕ್ಕಳನ್ನು ಓದಿಸಲು ಮಾಡಿದ ಸಾಲ ತೀರಿಸಲು ಸಾಧ್ಯವಾಗದೇ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ, ಆಗ ಅರುಣಾ ಎಂಜಿನಿಯರ್ ಓದುತ್ತಾ ಇದ್ದರು. ಅರುಣಾ ಅವರು ಸೇರಿ ಅವರ ಪೋಷಕರಿಗೆ 5 ಜನ ಮಕ್ಕಳು. ಮಕ್ಕಳು ಓದಿ ಒಳ್ಳೆಯ ಕೆಲಸಕ್ಕೆ ಸೇರಬೇಕೆಂಬುವುದು ಅವರ ಕನಸ್ಸಾಗಿತ್ತು, ಆ ಕಾರಣಕ್ಕೆ ಸಾಲ ಮಾಡಿ ಮಕ್ಕಳನ್ನು ಓದಿಸುತ್ತಾ ಇದ್ದರು, ಆದರೆ ಸಾಲದ ಹೊರೆ ಅಧಿಕವಾಗಿ ಅದನ್ನು ಮರು ಪಾವತಿಸಲು ಸಾಧ್ಯವಾಗದೆ ಅವರು ತಂದೆ ಆತ್ಮಹತ್ಯೆಗೆ ಶರಣಾಗುತ್ತಾರೆ.
ತಂದೆಯ ಸಾವಿನ ಬಳಿಕ ಅರುಣಾ ಅವರಿಗೆ ಈ ಸಮಾಜಕ್ಕಾಗಿ ನಾನೇದರೂ ಮಾಡಬೇಕೆಂದು ಅನಿಸಲಾರಂಭಿಸುತ್ತದೆ, ತಂದೆಯ ಮುಖದಲ್ಲಿ ಮಾಸಿದ ನಗುವನ್ನು ಬಡ ರೈತರಿಗಾಗಿ ಸೇವೆ ಮಾಡುವ ಮೂಲಕ ಕಾಣಬೇಕು ಎಂದು ನಿರ್ಧರಿಸುತ್ತಾರೆ, ಆ ನಿರ್ಧಾರವೇ ಅವರನ್ನು ಯುಪಿಎಸ್‌ಸಿ ಪರೀಕ್ಷೆ ತೆಗೆದುಕೊಳ್ಳುವಂತೆ ಪ್ರೇರೇಪಿಸುತ್ತದೆ.

ಒಂದಲ್ಲಾ , ಎರಡಲ್ಲ ಆರು ಬಾರಿ ಪರೀಕ್ಷೆ ಬರೆದಿದ್ದಾರೆ
ಸೋಲೇ ಗೆಲುವಿಗೆ ಸೋಪಾನ ಎಂಬ ಗಾದೆ ಮಾತಿದೆ, ಇವರು 2014ರಿಂದ ಪರೀಕ್ಷೆ ಬರೆಯುತ್ತಿದ್ದಾರೆ, ನಿರಂತರ ಸೋಲಿನ ಬಳಿಕ ಆರನೇ ಬಾರಿ ರ‍್ಯಾಂಕ್‌ನೊಂದಿಗೆ ಪಾಸಾಗಿ ನಗು ಬೀರಿದ್ದಾರೆ.

ಅರುಣಾ UPSC ಕೋಚಿಂಗ್ ಸೆಂಟರ್
ಇವರು ಬೆಂಗಳೂರಿನಲ್ಲಿ ಸ್ವಂತ ಯುಪಿಎಸ್‌ಸಿ ಕೋಚಿಂಗ್ ಸೆಂಟರ್ ಕೂಡ ಪ್ರಾರಂಭಿಸಿದ್ದು ಹಳ್ಳಿಯ ಮಕ್ಕಳ ಕನಸ್ಸು ಈಡೇರಿಸುವ ಸಲುವಾಗಿ ಇದನ್ನು ಪ್ರಾರಂಭಿಸಿದ್ದಾರೆ.
ಇದರ ಬಗ್ಗೆ ಹೇಳುತ್ತಾ 'ನಾನು ಯುಪಿಎಸ್‌ಸಿ ಪರೀಕ್ಷೆಯನ್ನು 308ನೇ ರ‍್ಯಾಂಕ್‌ನೊಂದಿಗೆ ಪಾಸಾಗುತ್ತೇನೆ ಎಂಬ ಯಾವ ನಿರೀಕ್ಷೆಯೂ ಇರಲಿಲ್ಲ, ಐದು ಬಾರಿ ಪರೀಕ್ಷೆ ಬರೆದಿದ್ದರೂ ಕ್ಲಿಯರ್ ಆಗಿರಲಿಲ್ಲ, ಆದ್ದರಿಂದ ನನ್ನದೇ ಸ್ವಂತ ಅರುಣಾ ಅಕಾಡೆಮಿ ಪ್ರಾರಂಭಿಸಿದೆ, ಈ ಮೂಲಕ ಯುಪಿಎಸ್‌ಸಿ ಪರೀಕ್ಷೆ ಬರೆಯುವ ಕನಸ್ಸು ಹೊತ್ತು ಹಳ್ಳಿಯಿಂದ ಬರುತ್ತಿರುವವರೆಗೆ ನೆರವಾಗಲು ಯೋಚಿಸಿದೆ, ಕೊನೆಗೂ 6ನೇ ಬಾರಿ ಯುಪಿಎಸ್‌ಸಿ ಪರೀಕ್ಷೆ ಕ್ಲಿಯರ್ ಮಾಡಲು ನನ್ನಿಂದ ಸಾಧ್ಯವಾಯ್ತು' ಎಂದು ಹೇಳಿದ್ದಾರೆ.
ಹಿಂದೂಳಿದ ವರ್ಗಕ್ಕೆ ಸೇರಿದ್ದರೂ ಆ ಮೀಸಲಾತಿಯನ್ನು ಯುಪಿಎಸ್‌ಸಿಯಲ್ಲಿ ಬಳಸಿಕೊಳ್ಳಲಿಲ್ಲ
ಅರುಣಾ ಅವರು ಹಿಂದೂಳಿದ ವರ್ಗಕ್ಕೆ ಸೇರಿದವರು, ಅವರ ಜೀವನದಲ್ಲಿ ಅನೇಕ ಮೀಸಲಾತಿಯನ್ನು ಬಳಸಿಕೊಂಡಿದ್ದಾರೆ. ಆದರೆ ಯುಪಿಎಸ್‌ಸಿ ಬರೆಯುವಾಗ ಅವರು ಅದನ್ನು ಬಳಸದಿರಲು ತೀರ್ಮಾನಿಸಿದರು, ಜನರಲ್ ಕೆಟಗರಿಯಲ್ಲೇ ಪರೀಕ್ಷೆ ಬರೆದರು, ತಂದೆಯ ಸಾವಿನ ಬಳಿಕ ರೈತರಿಗೆ ಸೇವೆ ಮಾಡುವ ದೃಢ ಸಂಕಲ್ಪ ಮಾಡಿದರು, ಇದೀಗ ಅವರ ಕನಸ್ಸು ನೆರವೇರಿದೆ. ಅವರ ತಂದೆಯ ಆತ್ಮಕ್ಕೂ ಶಾಂತಿ ಸಿಕ್ಕಿರುತ್ತದೆ....
ಈ ಜೂನ್ 19ಕ್ಕೆ ಅಪ್ಪಂದಿರ ದಿನ, ಅರುಣಾ ತಮ್ಮ ತಂದೆಯ ಕನಸ್ಸು ನೇರವೇರುವಂತೆ ಮಾಡಿ ಮತ್ತೊಂದಿಷ್ಟು ಜನರಿಗೆ ಸ್ಪೂರ್ತಿಯಾಗಿದ್ದಾರೆ.



Click it and Unblock the Notifications