ಮನುಷ್ಯನ ಮುಖ ಹೋಲುವ ಕರು! ಇದು ವಿಷ್ಣುವಿನ ಅವತಾರವಂತೆ!!

By: manu
Subscribe to Boldsky

ನಮ್ಮ ಪೂರ್ವಜರು ಅನೇಕ ರೀತಿಯ ನೀತಿಗಳನ್ನು ಅನುಸರಿಸಿಕೊಂಡು ಬಂದಿದ್ದಾರೆ. ಕೆಲವು ಅರ್ಥಬದ್ಧವಾಗಿದ್ದರೆ. ಇನ್ನೂ ಕೆಲವು ತರ್ಕಬದ್ಧವಾದುದಲ್ಲ. ಅದೇನೇ ಇರಲಿ, ಪ್ರಪಂಚ ಇಷ್ಟು ವರ್ಷ ಇದೇ ಕ್ರಮದಲ್ಲಿ ನಡೆದುಕೊಂಡು ಬಂದಿದೆ. ಇದು ಇಲ್ಲಿಗೆ ನಿಲ್ಲುವುದು ಅಲ್ಲ. ಹೀಗೆ ಮುಂದುವರಿಯುತ್ತಲೇ ಇರುತ್ತದೆ. ಹಾಗಂತ ನಮ್ಮ ಸುತ್ತಲೂ ದೇವರಿದ್ದಾನೆ ಎನ್ನುವ ವಿಚಾರವನ್ನು ಮರೆ ಮಾಚುವಂತಿಲ್ಲ. ಕೆಲವರು ಹೌದು ಎನ್ನಬಹುದು, ಇನ್ನು ಕೆಲವರು ಇಲ್ಲ ಎನ್ನಬಹುದು. 

ಅಚ್ಚರಿ ಲೋಕಕ್ಕೆ ತಳ್ಳುವ 'ಪುನರ್ಜನ್ಮದ' ನೈಜ ಘಟನೆಗಳು

ನಮ್ಮ ಭಾವನೆಗೆ ಯಾವುದು ದೈವ ಶಕ್ತಿ ಎನಿಸುತ್ತದೆಯೋ ಅದನ್ನು ಪೂಜಿಸುವುದು ನಮ್ಮ ಸಂಪ್ರದಾಯ/ಪದ್ಧತಿ. ಇಂತಹ ದೈವ ಶಕ್ತಿಯ ಪ್ರತಿರೂಪವಾದ ಒಂದು ವಿಶೇಷ ಸಂಗತಿ ಇಲ್ಲಿದೆ. ಹೌದು, ಇಲ್ಲೊಂದು ಹಸು ಮನುಷ್ಯನ ಮುಖ ಹೊಂದಿರುವ ಕರುವಿಗೆ ಜನ್ಮ ನೀಡಿದೆ. ಆದರೆ ಜನ್ಮ ಪಡೆದ ಸ್ವಲ್ಪ ಸಮಯದಲ್ಲೇ ಕರು ಅಸುನೀಗಿದೆ. ಇದನ್ನು ಜನರು ವಿಷ್ಣುವಿನ ಪ್ರತಿರೂಪ ಎಂದು ಪೂಜಿಸುತ್ತಿದ್ದಾರೆ. ಈ ಒಂದು ಅಪರೂಪದ ಘಟನೆ ನಡೆದಿದ್ದು ಎಲ್ಲಿ? ಎನ್ನುವ ಕುತೂಹಲದ ವಿಚಾರದ ವಿವರಣೆ ಇಲ್ಲಿದೆ...

ಭಾರತದಲ್ಲೇ ನಡೆದಿದ್ದು

ಭಾರತದಲ್ಲೇ ನಡೆದಿದ್ದು

ಭಾರತದ ಉತ್ತರ ಭಾಗದಲ್ಲಿ ಬರುವ "ಉತ್ತರ ಪ್ರದೇಶದ ಮುಜಫ್ಫರ್ ನಗರದಲ್ಲಿ'' ಜನಿಸಿದ ಕರು ಇದು.

ಕರುವಿನ ದೇಹದ ಆಕಾರ

ಕರುವಿನ ದೇಹದ ಆಕಾರ

ಈ ಕರುವಿನ ಮುಖದ ಕಣ್ಣು, ಮೂಗು ಮತ್ತು ಕಿವಿಗಳು ಮನುಷ್ಯನ ಮುಖಲಕ್ಷಣ ಹಾಗೂ ದೇಹದ ಕೆಳಭಾಗವು ಹಸುವಿನ ಲಕ್ಷಣಗಳನ್ನು ಹೊಂದಿದೆ.

ಜನರ ನಂಬಿಕೆ

ಜನರ ನಂಬಿಕೆ

ವಿಭಿನ್ನ ಬಗೆಯ ದೇಹದಾಕೃತಿ ಹೊಂದಿರುವ ಈ ಕರುವನ್ನು ಸಾಕ್ಷಾತ್ ದೇವರೆಂದು ಜನರು ನಂಬಿದ್ದಾರೆ. ಈ ಕರುವಿನ ದೇಹಕ್ಕೆ ಹೂವಿನ ಮಾಲೆಯನ್ನು ಹಾಕಿ, ಕೈಮುಗಿರುವುದರ ಮೂಲಕ ತಮ್ಮ ನಂಬಿಕೆಯನ್ನು ವ್ಯಕ್ತ ಪಡಿಸಿದ್ದಾರೆ.

ದೇವಸ್ಥಾನದ ನಿರ್ಮಾಣ

ದೇವಸ್ಥಾನದ ನಿರ್ಮಾಣ

ಸ್ಥಳೀಯರು ಇದನ್ನು ವಿಷ್ಣುವಿನ 24ನೇ ಅವತಾರವೆಂದು, ಒಂದು ದೇವಸ್ಥಾನದ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈ ಕರು ಅಸುನೀಗಿದ ನಂತರ ಗಾಜಿನ ಪೆಟ್ಟಿಗೆಯೊಂದರಲ್ಲಿ ಇಟ್ಟು, ದರ್ಶನಕ್ಕೆ ಅನುವುಮಾಡಿಕೊಟ್ಟಿದ್ದಾರೆ.

ವೈದ್ಯರ ಪ್ರಕಾರ

ವೈದ್ಯರ ಪ್ರಕಾರ

ಇದೊಂದು ಅಂಗರಚನಾ ಅಸಂಗತತೆಯ ವಿಷಯ. ಒಂದು ಜೀನ್ ಸರಿಯಾಗಿ ಅಭಿವೃದ್ಧಿಯಾಗದಿದ್ದರೆ ಅಥವಾ ದೋಷದಿಂದ ಕೂಡಿದ್ದರೆ, ಅನೇಕ ರಚನಾತ್ಮಕ ವಿರೂಪ ಉಂಟಾಗುವುದು. ಈ ಹಿನ್ನೆಲೆಯಲ್ಲಿಯೇ ಈ ಬಗೆಯ ವೈಪರೀತ್ಯ ಕಾಣಿಸಿಕೊಳ್ಳುವುದು ಎಂದು ವೈದ್ಯರು ಅಭಿಪ್ರಾಯಿಸಿದ್ದಾರೆ.

ಭಾರತದಲ್ಲಿ ಮಾತ್ರ ಸಂಭವಿಸುವುದು

ಭಾರತದಲ್ಲಿ ಮಾತ್ರ ಸಂಭವಿಸುವುದು

ಭಾರತ ವಿಜ್ಞಾನ ಕ್ಷೇತ್ರದಲ್ಲಿ ಮುಂದುವರಿಯುತ್ತಿದೆಯಾದರೂ ಅನೇಕ ಮೂಡನಂಬಿಕೆಯ ವಿಚಾರಗಳು ಇಲ್ಲಿಯೇ ಇವೆ. ಇದು ಸಹ ನಿಮ್ಮ ನಂಬಿಕೆಗೆ ಬಿಟ್ಟಿದ್ದು...

English summary

Cow Born With A Human-like Head Is Worshipped By Indian Villagers!

This is one such incident which makes us realise that anything on this earth can be worshipped. We literally mean ANYTHING!! Here, in this article, we are sharing the story of how a deformed calf that had died shortly after its birth is being worshipped, as people believe that it looks like Lord Vishnu!
Subscribe Newsletter