Latest Updates
-
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ -
ಉತ್ತರಾಖಂಡದಲ್ಲಿ ಭಾರಿ ಮಳೆ: IMD ರೆಡ್ ಅಲರ್ಟ್ ಘೋಷಣೆ; ನಿಮ್ಮ ಮನೆ ಮತ್ತು ಪ್ರಾಣ ರಕ್ಷಣೆಗೆ ಈ ಮುನ್ನೆಚ್ಚರಿಕೆಗಳು ಕಡ್ಡಾಯ! -
ಎಚ್ಚರಿಕೆ! ಪ್ಯಾಕೆಟ್ ಆಹಾರದ ಮೇಲೆ 'ರೆಡ್ ಹೆಕ್ಸಾಗನ್': ನಿಮ್ಮ ಆರೋಗ್ಯಕ್ಕೆ ಅಪಾಯವಿದೆಯೇ? -
ದೆಹಲಿಯಲ್ಲಿ 'ಭಜನ್ ಕ್ಲಬ್ಬಿಂಗ್' ಹವಾ: ಮೋದಿಯವರೇ ಫಿದಾ, ಯುವಕರ ಹೊಸ ಕ್ರೇಜ್ಗೆ ಕಾರಣವೇನು?
ಛತ್ ಪೂಜೆ: ಕಾರ್ತಿಕ ಮಾಸದ ಈ ನಾಲ್ಕು ದಿನಗಳಲ್ಲಿ ಇವುಗಳನ್ನು ಮಾಡಲೇಬೇಡಿ
ದೀಪಾವಳಿ ಹಬ್ಬದ ಸಡಗರದ ಬಳಿಕ ಉತ್ತರ ಭಾರತದ ಕಡೆ ಅದರಲ್ಲೂ ಬಿಹಾರ, ಜಾರ್ಝಂಡ್ ಹಾಗೂ ಉತ್ತರ ಪ್ರದೇಶದ ಕಡೆ ಛತ್ ಪೂಜೆ ಮಾಡಲಾಗುವುದು. ನಾಲ್ಕು ದಿನಗಳ ಆಚರಿಸುವ ಈ ಪೂಜೆಯಲ್ಲಿ ಸೂರ್ಯನನ್ನು ಪೂಜಿಸಲಾಗುವುದು. ಅದನ್ನು ಸೂರ್ಯ ಷಷ್ಠಿ ಎಂದು ಕರೆಯಲಾಗುವುದು.

ಈ ದಿನಗಳಲ್ಲಿ ಮಹಿಳೆಯರು ಉಪವಾಸವಿದ್ದು ಯಮುನಾ ಅಥವಾ ಇತ ಪುಣ್ಯ ನದಿಯಲ್ಲಿ ಮೊಣಕಾಲಿನವರೆಗೆ ನೀರಿನಲ್ಲಿ ನಿಂತು ಸೂರ್ಯನಿಗೆ ಆರ್ಘ್ಯ ಸಲ್ಲಿಸಿನ ನಮಸ್ಕರಿಸುತ್ತಾರೆ.
ಛತ್ ಪೂಜೆ ಕಾರ್ತಿಕ ಮಾಸದ ಚತುರ್ಥಿಯಂದು ಪ್ರಾರಂಭವಾಗಿ ಕಾರ್ತಿಕ ಶಕ್ಲ ಸಪ್ತಮಿಗೆ ಮುಕ್ತಾಯವಾಗುತ್ತದೆ. ಅಂದರೆ ಛತ್ ಪೂಜೆ ಅಕ್ಟೋಬರ್ 28ಕ್ಕೆ ಪ್ರಾರಂಭವಾಗಿ ಅಕ್ಟೋಬರ್ 31ಕ್ಕೆ ಮುಗಿಯಲಿದೆ.

ಛತ್ ಪೂಜೆಯ ಇತಿಹಾಸ ಮತ್ತು ಮಹತ್ವ
ಛತ್ ಪೂಜೆಯನ್ನು ವೇದಗಳ ಕಾಲದಿಂದಲೂ ಆಚರಿಸಲಾಗುತ್ತಿದೆ. ಋಷಿ ಮುನಿಗಳು ಈ ಛತ್ ಪೂಜೆಯನ್ನು ಆಚರಿಸುತ್ತಿದ್ದರು ಎಂದು ಹೇಳಲಾಗುವುದು. ಈ ದಿನಗಳಲ್ಲಿ ಉಪವಾಸವಿದ್ದು ಸೂರ್ಯನಿಗೆ ಪೂಜೆ ಮಾಡಿ, ಮುಂಜಾನೆ ಬಿಸಿಲಿಗೆ ದೇಹವನ್ನು ಒಡ್ಡಿಕೊಂಡರೆ ಆರೋಗ್ಯಕ್ಕೂ ಒಳ್ಳೆಯದು.
ಛತ್ ಪೂಜೆಯನ್ನು ಪಾಲಿಸುವವರು ಕೆಲವೊಂದು ನಿಯಮಗಳನ್ನು ಅನುಸರಿಸಬೇಕು, ಅವುಗಳೇನು ಎಂದು ನೋಡೋಣ ಬನ್ನಿ:

ಛತ್ ಪೂಜೆಯಲ್ಲಿ ಏನು ಮಾಡಬೇಕು?
* ಈ ನಾಲ್ಕು ದಿನಗಳಲ್ಲಿ ಸೂರ್ಯೋದಕ್ಕೆ ಮುನ್ನ ಎದ್ದು ಸ್ನಾ ನ ಮಾಡಬೇಕು.
* ನಂತರ ಸೂರ್ಯನಿಗೆ ಆರ್ಘ್ಯ ಸಲ್ಲಿಸಿ ದೊಡ್ಡವರಿಂ ಆಶೀರ್ವಾದ ಪಡೆಯಲಾಗುವುದು.
* ನಂತರ ಭೋಗ್ (ಪ್ರಸಾದ) ಮಾಡಿ ಮನೆಮಂದಿಗೆಲ್ಲಾ ಹಂಚಲಾಗುವುದು.
* ಸೂರ್ಯನಿಗೆ ಪೂಜೆ ಮಾಡುವಾಗ ಹಾಲು ಮತ್ತು ನೀರು ಅರ್ಪಿಸಲಾಗುವುದು.
* ಉಪವಾಸ ಇರುವವರು ಶರಬತ್ ಹಾಗೂ ಭೋಗ್ ಸೇವಿಸಬಹುದು.

ಛತ್ ಪೂಜೆಯ ದಿನಗಳಲ್ಲಿ ಏನು ಮಾಡಬಾರದು?
* ದೇವರಿಗೆ ಅರ್ಪಿಸುವ ಮುನ್ನ ಪ್ರಸಾದವನ್ನು ಸೇವಿಸಬಾರದು.
* ಮಡಿಯಿಲ್ಲದೆ ಪೂಜೆಯ ಯಾವುದೇ ವಸ್ತುಗಳನ್ನು ಮುಟ್ಟಬಾರದು.
* ಈ ದಿನಗಳಲ್ಲಿ ಮಾಂಸಾಹಾರ ಸೇವಿಸಬಾರದು. ಮದ್ಯಪಾನ ಮಾಡಬಾರದು.
* ಪ್ರಸಾದ ಮಾಡುವಾಗ ಉಪ್ಪು ಬಳಸಬಾರದು
* ಹರಿದ ಅಥವಾ ಹಳೆಯ ಬಿದಿರಿನ ಬುಟ್ಟಿಗಳನ್ನು ಬಳಸಬಾರದು
* ಕೆಟ್ಟ ಪದಗಳನ್ನು ಬಳಸಬಾರದು
* ಈರುಳ್ಳಿ, ಬೆಳ್ಳುಳ್ಳಿ ಬಳಸಬಾರದು.



Click it and Unblock the Notifications
