Latest Updates
-
ಪುರಿ ರಥಯಾತ್ರೆ 2026: ಭಕ್ತರೇ ಎಚ್ಚರ! ಸುಗಮ ದರ್ಶನಕ್ಕೆ ಇಲ್ಲಿವೆ ಪ್ರಮುಖ ಟಿಪ್ಸ್ -
ಭಾರತ-ಇಂಗ್ಲೆಂಡ್ ಪಂದ್ಯ ವೀಕ್ಷಿಸುವಾಗ ಬೆನ್ನು ನೋವು ಕಾಡುತ್ತಿದೆಯೇ? ಈ 8 ನಿಮಿಷದ ವ್ಯಾಯಾಮ ಟ್ರೈ ಮಾಡಿ! -
ಮದುವೆ ಸಂಭ್ರಮಕ್ಕೆ ಸಿದ್ಧರಾಗಿದ್ದೀರಾ? ಮಳೆಗಾಲದ ಮದುವೆಗೆ ಈ 5 ಟಿಪ್ಸ್ ಮರೆಯದಿರಿ! -
ಬೆಲೆ ಏರಿಕೆಯ ಬಿಸಿ: ಜೂನ್ CPI ವರದಿ ಮತ್ತು ನಿಮ್ಮ ಕಿಚನ್ ಬಜೆಟ್ ಉಳಿಸುವ ಸ್ಮಾರ್ಟ್ ಟಿಪ್ಸ್ -
ಸ್ವಿಗ್ಗಿ ಇನ್ಸ್ಟಾಮಾರ್ಟ್ ಗ್ರಾಹಕರಿಗೆ ಎಚ್ಚರಿಕೆ: ಹಾಲು, ಮೊಟ್ಟೆ ಖರೀದಿಸುವಾಗ ಈ ತಪ್ಪು ಮಾಡಬೇಡಿ! -
4-0 ಸೋಲಿನ ಆಘಾತದಲ್ಲಿ ಭಾರತೀಯ ಫ್ಯಾನ್ಸ್: ಏಕದಿನ ಸರಣಿಗೆ ಕಮ್ಬ್ಯಾಕ್ ಸಾಧ್ಯವೇ? ಇಲ್ಲಿದೆ ಪಂದ್ಯಗಳ ವೇಳಾಪಟ್ಟಿ ಮತ್ತು ಹೆಲ್ತ್ ಟಿಪ್ಸ್! -
ಮಾಸಿಕ ಶಿವರಾತ್ರಿ ಉಪವಾಸ: ಸುಸ್ತಾಗದಂತೆ ಇರಲು 6 ನಿಮಿಷದ ಸರಳ ವ್ಯಾಯಾಮ ಮತ್ತು ಟಿಪ್ಸ್ -
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ!
ಪ್ರತಿ ಮಂಗಳವಾರ ಈ ಕ್ರಮಗಳನ್ನು ಮಾಡಿದರೆ, ಜೀವನದ ಎಲ್ಲಾ ಸಮಸ್ಯೆ ನಿವಾರಣೆಯಾಗುತ್ತೆ!
ಹಿಂದೂ ಧರ್ಮದಲ್ಲಿ, ಹನುಮನನ್ನು ವಿಪತ್ತುಗಳ ನಾಶಕನೆಂದು ಪರಿಗಣಿಸಲಾಗಿದೆ. ಜೊತೆಗೆ ಮಂಗಳವಾರದಂದು ಹನುಮಂತನ್ನು ಪೂಜಿಸುವುದು ವಿಶೇಷ ಮಹತ್ವವನ್ನು ಹೊಂದಿದೆ. ಶ್ರೀರಾಮನ ಸಂಕಷ್ಟಗಳನ್ನು ಹೋಗಲಾಡಿಸುವಲ್ಲಿ ಹನುಮ ವಿಶೇಷ ಕೊಡುಗೆ ನೀಡಿದಂತೆಯೇ, ಮಂಗಳವಾರದಂದು ಕೆಲವು ಕ್ರಮಗಳಿಂದ ಮಹಾಬಲಿ ಹನುಮಂತನನ್ನು ಪ್ರಸನ್ನಗೊಳಿಸುವ ಮೂಲಕ ಭಕ್ತರು ತಮ್ಮ ದುಃಖಗಳನ್ನು ಹೋಗಲಾಡಿಸಿಕೊಳ್ಳಬಹುದು. ಹಾಗಾದರೆ ನಿಮ್ಮ ತೊಂದರೆಗಳನ್ನು ನಿವಾರಿಸಿಕೊಳ್ಳಲು ಮಂಗಳವಾರದಂದು ಮಾಡಬೇಕಾದ ಕ್ರಮಗಳ ಬಗ್ಗೆ ನೋಡೋಣ.
ಮಂಗಳವಾರದಂದು ಈ ಕ್ರಮಗಳನ್ನು ತೆಗೆದುಕೊಳ್ಳುವುದರಿಂದ, ನೀವು ಎಲ್ಲಾ ತೊಂದರೆಗಳನ್ನು ತೊಡೆದುಹಾಕಬಹುದು:

ಆರ್ಥಿಕ ಸಮಸ್ಯೆ ನಿವಾರಣೆಗೆ:
ಹಣಕ್ಕೆ ಸಂಬಂಧಿಸಿದ ತೊಂದರೆಗಳನ್ನು ತೊಡೆದುಹಾಕಲು, ಪ್ರತಿ ಮಂಗಳವಾರ ರಾತ್ರಿ ಮಲಗುವ ಮೊದಲು, ಸಾಸಿವೆ ಎಣ್ಣೆಯನ್ನು ಮಣ್ಣಿನ ದೀಪದಲ್ಲಿ ಹಾಕಿ ಹನುಮನ ಮುಂದೆ ಬೆಳಗಬೇಕು. ತದನಂತರ ಆಸನವನ್ನು ಹರಡಿ ಮತ್ತು ಹನುಮಾನ್ ಚಾಲೀಸಾವನ್ನು ಪಠಿಸಿ. ಇದಲ್ಲದೇ ಆರ್ಥಿಕ ಮುಗ್ಗಟ್ಟಿನಿಂದ ಮುಕ್ತಿ ಹೊಂದಲು ಪ್ರತಿ ಮಂಗಳವಾರ ಬೆಳಗ್ಗೆ ಮಹಾಬಲಿಗೆ ಧೂಪ, ಹೂವು ಇತ್ಯಾದಿಗಳನ್ನು ಅರ್ಪಿಸಬೇಕು.

ಮನೆಯ ತೊಂದರೆ ನಿವಾರಣೆಗೆ:
ಮಂಗಳವಾರದಂದು, 11 ಅಶ್ವಸ್ಥ ಅಥವಾ ಅರಳಿ ಮರದ ಎಲೆಗಳನ್ನು ನೀರಿನಿಂದ ಚೆನ್ನಾಗಿ ತೊಳೆದು, ಅದರ ಮೇಲೆ ಕುಂಕುಮದಿಂದ ಶ್ರೀರಾಮ ಎಂದು ಬರೆದು ಹನುಮಂತನಿಗೆ ಅರ್ಪಿಸಿ. ಹನುಮನ ದೇವಸ್ಥಾನಕ್ಕೆ ಹೋಗಲು ಸಾಧ್ಯವಾಗದಿದ್ದರೆ, ಮನೆಯಲ್ಲಿ ಹನುಮಂತನ ವಿಗ್ರಹದ ಮುಂದೆಈ ಎಲೆಗಳನ್ನು ಅರ್ಪಿಸುವುದರಿಂದ ತೊಂದರೆಗಳು ದೂರವಾಗುತ್ತವೆ.

ದುಃಖ ನಿವಾರಣೆಗೆ:
ದುಃಖದಿಂದ ಬಳಲುತ್ತಿರುವ ವ್ಯಕ್ತಿಯ ಇಷ್ಟಾರ್ಥಗಳ ನೆರವೇರಿಕೆಗಾಗಿ, ಪ್ರತಿ ಮಂಗಳವಾರ, ತೆಂಗಿನಕಾಯಿ ನೀರನ್ನು ತೆಗೆದುಕೊಂಡು, ಅದನ್ನು ಅವನ ತಲೆಯ ಮೇಲೆ 21 ಬಾರಿ ತಿರುಗಿಸಿ, ಅರ್ಪಿಸಿ. ಇದಲ್ಲದೇ, ತಾಮ್ರದ ಪಾತ್ರೆಯಲ್ಲಿ ನೀರನ್ನು ತುಂಬಿಸಿ, ಅದಕ್ಕೆ ಕೆಂಪು ಚಂದನವನ್ನು ಸೇರಿಸಿ, ರಾತ್ರಿ ಮಲಗುವಾಗ ಆ ಲೋಟವನ್ನು ತಲೆಯ ಬಳಿ ಇಟ್ಟುಕೊಂಡು ಮಲಗಿಕೊಳ್ಳಿ. ಮರುದಿನ ಬೆಳಿಗ್ಗೆ ಎದ್ದ ತಕ್ಷಣ, ಆ ಶ್ರೀಗಂಧದ ನೀರನ್ನು ತುಳಸಿಗೆ ಅರ್ಪಿಸಿ.

ಇಷ್ಟಾರ್ಥ ಈಡೇರಿಕೆಗೆ:
ಪ್ರತಿ ಮಂಗಳವಾರ ಹನುಮನಿಗೆ ಮಲ್ಲಿಗೆ ಎಣ್ಣೆ ಮತ್ತು ಕೆಂಪು ಕುಂಕುಮವನ್ನು ಅರ್ಪಿಸಬೇಕು. ಹೀಗೆ ಮಾಡುವುದರಿಂದ ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳೂ ಈಡೇರುತ್ತವೆ. ಇದರ ಜೊತೆಗೆ ಪ್ರತಿ ಮಂಗಳವಾರ, ಹನುಮನ ದೇವಸ್ಥಾನಕ್ಕೆ ಭೇಟಿ ನೀಡಿ, ಪ್ರಾರ್ಥಿಸುವುದರಿಂದ, ನಿಮ್ಮೆಲ್ಲಾ ಕಷ್ಟಗಳು ಕಳೆದು, ಇಷ್ಟಾರ್ಥಗಳೆಲ್ಲವೂ ಈಡೇರುವುದು.



Click it and Unblock the Notifications