Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಜ್ಯೋತಿಷ್ಯಶಾಸ್ತ್ರ: ನಿಮಗೆ ಸರ್ಕಾರಿ ಕೆಲ್ಸ ಬೇಕಂದ್ರೆ ತಪ್ಪದೇ ಹೀಗೆ ಮಾಡಿ…
ಜೀವನದಲ್ಲಿ ಭದ್ರತೆ ಬೇಕಿದ್ದರೆ ಆಗ ಶಾಶ್ವತ ಉದ್ಯೋಗ ಎನ್ನುವುದು ಅತೀ ಅಗತ್ಯವಾಗಿರುವುದು. ಪ್ರತಿಯೊಬ್ಬರು ಕೂಡ ತನಗೆ ಒಳ್ಳೆಯ ಸರ್ಕಾರಿ ಉದ್ಯೋಗ ಬೇಕೆಂದು ಬಯಸುವರು. ಎಲ್ಲರಿಗೂ ಸರ್ಕಾರಿ ಉದ್ಯೋಗದ ಭಾಗ್ಯ ಸಿಗದು. ಅದಕ್ಕಾಗಿ ತುಂಬಾ ಖರ್ಚು ಮಾಡಬೇಕಾಗುತ್ತದೆ. ಸರ್ಕಾರಿ ಕೆಲಸ ಸಿಕ್ಕಿದರೆ ಅದು ಜೀವನದಲ್ಲಿ ಹೆಚ್ಚಿನ ಭದ್ರತೆ ನೀಡುವುದು ಸಹಜ. ಯಾಕೆಂದರೆ ತಿಂಗಳ ಸಂಬಳದೊಂದಿದೆ ನಿವೃತ್ತಿ ಬಳಿಕವೂ ಜೀವನವು ಸರಾಗವಾಗಿ ಸಾಗಲು ಇದರಿಂದ ನೆರವಾಗುವುದು. ಇದರಿಂದಾಗಿ ಹೆಚ್ಚಿನ ಯುವಕರು ಕೂಡ ಇಂದಿನ ದಿನಗಳಲ್ಲಿ ಸರ್ಕಾರಿ ಕೆಲಸಕ್ಕಾಗಿ ಹಾತೊರೆಯುತ್ತಿರುವರು.

ಸರ್ಕಾರಿ ಕೆಲಸವೆಂದರೆ ಅಷ್ಟು ಸುಲಭವಾಗಿ ಕೈಗೆಟುಕಲ್ಲ. ಇದಕ್ಕಾಗಿ ಹಲವಾರು ಪರೀಕ್ಷೆಗಳನ್ನು ಕಟ್ಟಬೇಕು. ಸಂದರ್ಶನ ನೀಡಬೇಕು. ಸರ್ಕಾರಿ ಕೆಲಸಕ್ಕಾಗಿ ಹೆಚ್ಚಿನ ಬದ್ಧತೆ, ತಾಳ್ಮೆ ಕೂಡ ಅಗತ್ಯ. ಹೀಗಿದ್ದರೆ ಮಾತ್ರ ಅಂತಿಮ ಹಂತದ ಪಟ್ಟಿಗೆ ನಿಮ್ಮ ಹೆಸರು ಬರಬಹುದು. ಕೇವಲ ಕಠಿಣ ಪರಿಶ್ರಮ ಇದ್ದರೆ ಸಾಲದು, ಅದರೊಂದಿಗೆ ಅದೃಷ್ಟವು ಇದ್ದರೆ ಸರ್ಕಾರಿ ಕೆಲಸವು ಕೈ ಹಿಡಿಯವುದು ಎಂದು ಹೆಚ್ಚಿನವರು ಭಾವಿಸುತ್ತಾರೆ. ಕೆಲವೊಂದು ಸಂದರ್ಭಗಳಲ್ಲಿ ಇದು ನಿಜವೆನ್ನಬಹುದು. ಸರ್ಕಾರಿ ಕೆಲಸವನ್ನು ಪಡೆಯಲು ಮಾಡಬಹುದಾದಂತಹ ಜ್ಯೋತಿಷ್ಯದ ಪರಿಹಾರಗಳು ಇಲ್ಲಿದೆ. ನೀವು ಮುಂದಕ್ಕೆ ಓದುತ್ತಾ ಸಾಗಿ....

ಈಶ್ವರ ದೇವರನ್ನು ಪೂಜಿಸಿ
ಪ್ರತೀ ಸೋಮವಾರದಂದು ನೀವು ಶಿವಲಿಂಗಕ್ಕೆ ನೀರಿನಿಂದ ಅಭಿಷೇಕ ಮಾಡಿ. ಇಷ್ಟು ಮಾತ್ರವಲ್ಲದೆ ಅಕ್ಕಿ ಮತ್ತು ಹಸಿ ಹಾಲನ್ನು ಸಮರ್ಪಿಸಿ. ಇದರಿಂದ ಸರ್ಕಾರಿ ಕೆಲಸಕ್ಕೆ ನಿಮಗೆ ಏನೇ ಅಡೆತಡೆಯಿದ್ದರೂ ಅದು ನಿವಾರಣೆಯಾಗುವುದು. ಈಶ್ವರ ದೇವರ ಹೃದಯವು ಬೇಗನೆ ಕರಗುವುದು ಎಂದು ಹೇಳಲಾಗುತ್ತದೆ. ಇದರಿಂದ ನಿಮಗೆ ಸರ್ಕಾರಿ ಕೆಲಸ ಬೇಕಿದ್ದರೆ ಶಿವ ದೇವರಲ್ಲಿ ಬೇಡಿಕೊಳ್ಳಬಹುದು.

ಹನುಮಂತ ದೇವರಿಗೆ ಗುಲಾಬಿ ಮತ್ತು ಕುಂಕುಮ ಸಮರ್ಪಿಸಿ
ಮಂಗಳವಾರದಂದು ನೀವು ಆಂಜನೇಯ ದೇವರ ಮಂದಿರಕ್ಕೆ ಭೇಟಿ ನೀಡಿ. ದೇವರ ಮೂರ್ತಿಗೆ ಗುಲಾಬಿ ಮತ್ತು ಕುಂಕುಮ ಸಮರ್ಪಣೆ ಮಾಡಿ. ಆಂಜನೇಯ ದೇವರು ಆಕಾಶದಲ್ಲಿ ಹಾರುತ್ತಿರುವ ಫೋಟೊದ ಮುಂದೆ ನಿಂತು ನೀವು ಪ್ರಾರ್ಥನೆ ಮಾಡಿ. ಪ್ರತಿನಿತ್ಯ ಹನುಮಾನ್ ಚಾಲೀಸ ಪಠಿಸಿ. ಒಂದು ಹನುಮಾನ್ ಯಂತ್ರವನ್ನು ನೀವು ಇಟ್ಟುಕೊಳ್ಳಬಹುದು.

ಗಣೇಶ ದೇವರನ್ನು ಪೂಜಿಸಿ
ಗಣಪತಿ ದೇವರ ಸೊಂಡಿಲು ಬಲಕ್ಕೆ ತಿರುಗಿರುವಂತಹ ಮೂರ್ತಿಯನ್ನು ಇಟ್ಟು ನೀವು ಪೂಜೆ ಮಾಡಿ. ಇದನ್ನು ನೀವು ಚತುರ್ಥಿ ಯಂದು ಮಾಡಬೇಕಾಗಿದೆ. ಪ್ರತಿನಿತ್ಯ ನೀವು ಈ ಮೂರ್ತಿ ಎದುರು ಪ್ರಾರ್ಥನೆ ಮಾಡಿಕೊಳ್ಳಿ.

ಗೋವಿಗೆ ಆಹಾರ ನೀಡಿ
ಹಿಂದೂ ಧರ್ಮದಲ್ಲಿ ಗೋವಿಗೆ ಆಹಾರ ನೀಡುವುದು ಅತೀ ದೊಡ್ಡ ಪುಣ್ಯದ ಕೆಲಸವೆಂದು ಪರಿಗಣಿಸಲಾಗುತ್ತದೆ. ಸಂದರ್ಶನಕ್ಕೆ ಹೋಗುವ ಮೊದಲು ಗೋವಿಗೆ ಚಪಾತಿ ಮತ್ತು ಬೆಲ್ಲವನ್ನು ನೀಡಿ. ಗೋಧಿ ಹಿಟ್ಟಿನಿಂದ ಮಾಡಿರುವಂತಹ ಆಹಾರ ನೀಡಿದರೆ ಅದು ತುಂಬಾ ಲಾಭಕಾರಿಯಾಗಿರಲಿದೆ. ಇದರಿಂದಾಗಿ ನೀವು ಸಂದರ್ಶನದಲ್ಲಿ ಯಶಸ್ಸು ಪಡೆಯುವ ಸಾಧ್ಯತೆಯು ಹೆಚ್ಚಾಗಿ ಇರುವುದು.

ಶನಿ ದೇವರನ್ನು ಪ್ರಾರ್ಥಿಸಿ
ಶನಿ ದೇವರನ್ನು ಪ್ರತೀ ಶನಿವಾರದಂದು ಪೂಜೆ ಮಾಡಿ. ಶನಿ ದೇವರಿಗೆ ಪ್ರಾರ್ಥನೆ ಸಲ್ಲಿಸುವ ವೇಳೆ ನೀವು ಶನಿ ಮಂತ್ರವಾಗಿರುವ `ಓಂ ಶಾಂ ಶನೈಶ್ಚರಾಯ ನಮಃ'ವನ್ನು 108 ಸಲ ಪಠಿಸಿ. ಇದರಿಂದ ನಿಮ್ಮ ಜನ್ಮ ಕುಂಡಲಿಯಲ್ಲಿ ಇರುವಂತಹ ಕೆಲವೊಂದು ನಕಾರಾತ್ಮಕ ಶಕ್ತಿಗಳು ದೂರವಾಗಿ ಅದೃಷ್ಟವು ಬರುವುದು.

ಸಂದರ್ಶನಕ್ಕೆ ಮೊದಲು
ಸಂದರ್ಶನಕ್ಕೆ ಹೋಗುವ ಮೊದಲು ನೀವು ಏನಾದರೂ ಸಿಹಿಯಾಗಿರುವುದನ್ನು ಸೇವಿಸಬೇಕು. ಮೊಸರು ಮತ್ತು ಸಕ್ಕರೆ ಸೇವಿಸಿ ಹೋಗುವುದು ತುಂಬಾ ಶುಭವೆಂದು ಪರಿಗಣಿಸಲಾಗಿದೆ.

ಓಂ ಮಂತ್ರ
`ಓಂ ನಮೋ ಭಗವತಿ ಪದ್ಮಾವತಿ ರಿಧಿ ಸಿದ್ಧಿ ದಾಯಿನಿ' ಎನ್ನುವ ಮಂತ್ರವನ್ನು ನೀವು 108 ಸಲ ಪಠಿಸಿದ ಬಳಿಕ ಸಂದರ್ಶನಕ್ಕೆ ಹೋಗಿ. ಇದರಿಂದ ನಿಮಗೆ ಸರ್ಕಾರಿ ಕೆಲಸವು ಸಿಗಲು ನೆರವಾಗುವುದು.

ಅಶ್ವತ್ಥ ಮರವನ್ನು ಪೂಜಿಸಿ
ಭಾನುವಾರ ಹೊರತಾಗಿ ನೀವು ಪ್ರತಿನಿತ್ಯ ಅಶ್ವತ್ಥ ಮರವನ್ನು ಪೂಜಿಸಬೇಕು. ಈ ಮರದಲ್ಲಿ ಎಲ್ಲಾ ದೇವದೇವತೆಗಳು ಹಾಗೂ ನಿಮ್ಮ ಪೂರ್ವಜರು ನೆಲೆಸಿರುತ್ತಾರೆ ಎಂದು ನಂಬಲಾಗಿದೆ. ಶನಿವಾರದಂದು ಕೆಲವು ಮಂದಿ ಅಶ್ವತ್ಥ ಮರದ ಸಮೀಪ ದೀಪವನ್ನು ಕೂಡ ಹಚ್ಚಿಡುವರು.



Click it and Unblock the Notifications