Latest Updates
-
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್ -
ಶಿವಾಜಿನಗರ ಸೇಂಟ್ ಮೇರಿಸ್ ಬಾಸಿಲಿಕಾ ಜಾತ್ರೆ: ಇಂದಿನ ಸಂಚಾರ ಮಾರ್ಗ ಬದಲಾವಣೆ ಮತ್ತು ಪಾರ್ಕಿಂಗ್ ಬಗ್ಗೆ ನೀವು ತಿಳಿಯಲೇಬೇಕಾದ ವಿಷಯಗಳು! -
ವಿಶ್ವ ಫಿಸಿಯೋಥೆರಪಿ ದಿನ: ಹೃದಯದ ಆರೋಗ್ಯ ಮತ್ತು ನೋವು ಮುಕ್ತ ಜೀವನಕ್ಕೆ 12 ನಿಮಿಷದ ಮ್ಯಾಜಿಕ್ ವರ್ಕೌಟ್! -
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ!
ಬೆಳಗ್ಗೆ ಎದ್ದ ಮೇಲೆ ಇಷ್ಟು ಮಾಡಿ ಬದುಕಿನಲ್ಲಿ ಆಗುತ್ತೆ ಮಿರಾಕಲ್
ಈ ದಿನ ಸೂಪರ್ ಆಗಿರಬೇಕು ಎಂದು ನಾವೆಲ್ಲಾ ಬಯಸುತ್ತೇವೆ ಅಲ್ವಾ? ಬೆಳಗ್ಗೆ ಎದ್ದಾಗ ನಮ್ಮ ಮೂಡ್ ಹೇಗಿರುತ್ತದೋ ದಿನ ಪೂರ್ತಿ ಅದೇ ಇರುತ್ತದೆ. ಕೆಲವೊಂದು ಅಹಿತ ಘಟನೆ ನಡೆದಾಗ ಇಂದು ಬೆಳಗ್ಗೆ ಯಾರ ಮುಖ ನೋಡಿ ಎದ್ದೆಯಪ್ಪಾ? ಅಂದಕ್ಕೊಳ್ಳುತ್ತೇವೆ ಅಲ್ವಾ? ಆದರೆ ನೀವು ಬದುಕಿನಲ್ಲಿ ಪಾಸಿಟಿವ್ ಚೇಂಜ್ ಬಯಸುತ್ತಿದ್ದೀರಾ?
ಮಿರಾಕಲ್ ಆಗಲಿ ಎಂದು ಬಯಸುತ್ತಿದ್ದೀರ ಎಂದಾದರೆ ನೀವು ಬೆಳಗ್ಗೆ ಎದ್ದಾಗ ಕೆಲವೊಂದು ಸರಳ ಬದಲಾವಣೆ ಮಾಡಿ, ನೀವು ಯೋಚಿಸುವ ರೀತಿ ಬದಲಾಗುತ್ತೆ, ಬದುಕೇ ಬದಲಾಗುವುದು. ಸಕ್ಸಸ್‌ಫುಲ್ ಜನರ ಸೀಕ್ರೆಟ್ ಕೂಡ ಇದೇ ನೋಡಿ. ಹಾಗಾದರೆ ಬೆಳಗ್ಗೆ ಎದ್ದ ಮೇಲೆ ನೀವು ಮಾಡಬೇಕಾಗಿರುವ ಪ್ರಮುಖ ಕಾರ್ಯಗಳೇನು ಎಂದು ನೋಡುವುದಾದರೆ:

ಪ್ರಾಣಯಾಮ:
ಬೆಳಗ್ಗೆ ಎದ್ದ ಮೇಲೆ ನೀವು ಪ್ರಾಣಯಾಮ ಮಾಡಿ. ಉಸಿರಾಟದ ವ್ಯಾಯಾಮ ನಿಮ್ಮ ಆರೋಗ್ಯ ವೃದ್ಧಿಸುವುದು ಮಾತ್ರವಲ್ಲ, ನಿಮ್ಮಲ್ಲಿ ಪಾಸಿಟಿವ್ ಎನರ್ಜಿ ತುಂಬುತ್ತದೆ. ನೀವು ಈ ರೀತಿ ಅಭ್ಯಾಸ ಮಾಡಿ ನೋಡಿ ಒಂದೇ ವಾರದಲ್ಲಿ ನಿಮ್ಮಲ್ಲಿಯೇ ಕೆಲವೊಂದು ಬದಲಾವಣೆಗಳು ಗಮನಕ್ಕೆ ಬರುವುದು. ನಿಮಗೆ ಪಟ್ ಅಂತ ಕೋಪ ಬರುತ್ತಿದ್ದರೆ ಅದು ಕಡಿಮೆಯಾಗುವುದು. ಆದ್ದರಿಂದ ನೀವು ಎದ್ದ ಮೇಲೆ ಬೆಡ್‌ನಲ್ಲಿ ಕೂತು ಅಥವಾ ಹೊರಗಡೆ ಬಂದು ನಿಶ್ಯಬ್ದ ಇರುವ ಕಡೆ ಕೂತು ಉಸಿರಾಟದ ವ್ಯಾಯಾಮ ಮಾಡಿ.
ವ್ಯಾಯಾಮ ಮಾಡಿ
ದಿನದಲ್ಲಿ ಅರ್ಧ ಗಂಟೆ ವ್ಯಾಯಾಮ ಮಾಡಿ, ಇದು ನಿಮ್ಮ ದೇಹದಲ್ಲಿ ಹಾಗೂ ಮನಸ್ಸಿನಲ್ಲಿ ಧನಾತ್ಮಕ ಬದಲಾವಣೆ ತರುತ್ತದೆ. ಆದ್ದರಿಂದ ನೀವು ವರ್ಕೌಟ್ ಮಾಡಿ. ಇದರಿಂದ ದೇಹದಲ್ಲಿ ಫಿಟ್ನೆಸ್ ಕಾಪಾಡುವುದರ ಜೊತೆಗೆ ಅನೇಕ ಬಗೆಯ ಕಾಯಿಲೆ ಕೂಡ ತಡೆಗಟ್ಟಬಹುದು.
ಯೋಗ
ಯೋಗ ಬಲ್ಲವನಿಗೆ ರೋಗವಿಲ್ಲ ಎಂಬ ಮಾತು ಅಕ್ಷರಶಃ ನಿಜ. ನೀವು ಯೋಗ ಅಭ್ಯಾಸ ಮಾಡಲು ಪ್ರಾರಂಭಿಸಿ, ಇದರಿಂದ ನಿಮ್ಮ ದೇಹದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಾಗುವುದು ಅಲ್ಲದೆ ಮಾನಸಿಕ ಹಾಗೂ ದೈಹಿಕ ಸ್ವಾಸ್ಥ್ಯ ಹೆಚ್ಚಾಗುವುದು. ಯೋಗ ನಿಮ್ಮಲ್ಲಿರುವ ಮಾನಸಿಕ ಒತ್ತಡ, ದೈಹಿಕ ಸಮಸ್ಯೆ ದೂರವಿಡಲು ತುಂಬಾನೇ ಸಹಕಾರಿ.
ಸ್ನಾನ ಮಾಡಿ
ವ್ಯಾಯಾಮದ ಬಳಿಕ ತಣ್ಣೀರು ಅಥವಾ ಉಗುರು ಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ. ಇದರಿಂದ ದೇಹಕ್ಕೆ ಚೈತನ್ಯ ಸಿಗುವುದು. ಮನಸ್ಸು, ದೇಹ ಫ್ರೆಷ್ ಫೀಲ್ ನೀಡುತ್ತದೆ.
ಧ್ಯಾನ ಮಾಡಿ
ನಂತರ ಧ್ಯಾನ ಮಾಡಿ. ನೀವು ಆಸ್ತಿಕರಾಗಿದ್ದರೆ ನಿಮ್ಮ ಇಷ್ಟ ದೇವರನ್ನು ಪೂಜಿಸಿ ಧ್ಯಾನ ಮಾಡಿ, ನಾಸ್ತಿಕರಾಗಿದ್ದರೆ ಒಂದು ಕಡೆ ಕೂತು ಧ್ಯಾನ ಮಾಡಿ. ಈ ಸಮಯದಲ್ಲಿ ನೀವು ಒಳ್ಳೆಯ ಚಿಂತನೆ ಮಾತ್ರ ಮಾಡಬೇಕು. ಯಾವುದೇ ಋಣಾತ್ಮಕ ಚಿಂತನೆ ಮಾಡಬಾರದು. ಮನಸ್ಸಿನಲ್ಲಿ ನಾವು ಒಳ್ಳೆಯದು ಆಲೋಚಿಸಿದರೆ ಒಳ್ಳೆಯದೇ ಆಗುತ್ತದೆ. ನಮ್ಮ ಮನಸ್ಸಿನ ಆಲೋಚನೆಗೆ ಅಂಥದ್ದೊಂದು ಶಕ್ತಿ ಇದೆ. ಆದ್ದರಿಂದ ಸದಾ ಧನಾತ್ಮಕವಾಗಿ ಆಲೋಚಿಸಿ. ನಿಮ್ಮ ಬದುಕಿನಲ್ಲಿ ನಿಮ್ಮ ಏಳಿಗೆಗೆ ನೆರವಾದವರನ್ನು ನೆನೆಪಿಸಿ ಅವರಿಗೆ ಮನಸ್ಸಿನಲ್ಲಿಯೇ ಕೃತಜ್ಞತೆ ಸಲ್ಲಿಸಿ.
ಮನಸ್ಸಿನಲ್ಲಿ ಧನಾತ್ಮಕ ಆಲೋಚನೆಗಳಿರಲಿ
ನೀವು ಬೆಳಗ್ಗೆ ಎದ್ದ ಮೇಲೆ ನಿಮ್ಮ ಆಲೋಚನೆ ಹೇಗಿರುತ್ತದೋ ಅದೇ ರೀತಿ ಇಡೀ ದಿನವಿರುತ್ತದೆ. ಬೆಳಗ್ಗೆ ಎದ್ದ ತಕ್ಷಣ ಸಿಡುಕಿಕೊಂಡು ಇದ್ದರೆ ಆ ದಿನ ನೀವು ಕೋಪದಿಂದಲೇ ಕಳೆಯುತ್ತೀರಿ. ಆದ್ದರಿಂದ ಬೆಳಗ್ಗೆ ಧನಾತ್ಮಕವಾಗಿ ಆಲೋಚನೆ ಮಾಡಿ. ಮಾಡಬೇಕಾಗಿರುವ ಕೆಲಸದ ಬಗ್ಗೆ ಪ್ಲ್ಯಾನ್ ಮಾಡಿ. ನೀವು ಬೆಳಗ್ಗೆ ಬೇಗ ಏಳುವ ಅಭ್ಯಾಸ ಮಾಡಿ. ಇದರಿಂದ ಯಾವುದೇ ಗಲಿಬಿಲಿಯಿಲ್ಲದೆ ನಿಮಗೆ ವ್ಯಾಯಾಮ ಮಾಡಲು, ಧ್ಯಾನ ಮಾಡಲು ಸಮಯ ಸಿಗುತ್ತದೆ.
ಬೆಳಗ್ಗೆ ಒಳ್ಳೆಯ ಮ್ಯೂಸಿಕ್ ಕೇಳಿ
ನೀವು ಬೆಳಗ್ಗೆ ಎದ್ದ ಮೇಲೆ ಒಂದೊಳ್ಳೆಯ ಮ್ಯೂಸಿಕ್ ಕೇಳಿ,ಭಕ್ತಿ ಗೀತೆ ಆಗಿರಬಹುದು ಅಥವಾ ನಿಮ್ಮಲ್ಲಿ ಜೋಶ್ ತುಂಬುವ ಯಾವುದೇ ಹಾಡನ್ನು ಕೇಳಿ. ಹಾಗಂತ ಬೆಳಗ್ಗೆ ವಿರಹ ಗೀತೆ, ಮನಸ್ಸಿನ ನೋವು ಹೆಚ್ಚಿಸುವ ಸಂಗೀತ ಕೇಳಬೇಡಿ, ಬದಲಿಗೆ ಮನಸ್ಸಿಗೆ ಮುದ ನೀಡುವ , ಖುಚಿ ಕೊಡುವ ಸಂಗೀತ ಕೇಳಿ ಇಡೀ ದಿನ ನಿಮ್ಮ ಮೂಡ್ ತುಂಬಾನೇ ಚೆನ್ನಾಗಿರುತ್ತದೆ. ಈ ಅಭ್ಯಾಸದಿಂದ ಖಿನ್ನತೆ ಎಂಬುವುದು ನಿಮ್ಮ ಸಮೀಪಕ್ಕೆ ಸುಳಿಯಲ್ಲ ನೋಡಿ.
ಒಳ್ಳೆಯ ವಿಚಾರಗಳನ್ನು ಓದಿ
ಒಂದು ವೇಳೆ ನೀವು ಬಸ್ಸಿನಲ್ಲಿ ಅಥವಾ ಮೆಟ್ರೋದಲ್ಲಿ ಪ್ರಯಾಣ ಮಾಡಿ ಆಫೀಸ್‌ಗೆ ಹೋಗುವುದಾದರೆ ಒಳ್ಳೆಯ ಬುಕ್ ಓದಿ. ಮೊಬೈಲ್‌ನಲ್ಲಿ ಓದುವ ಬದಲಿಗೆ ಆದಷ್ಟು ಬುಕ್ ಕೊಂಡು ಓದಿ. ಸಮಯವಿದ್ದರೆ ಮನೆಯಲ್ಲಿಯೇ ಏನಾದರೂ ಒಳ್ಳೆಯ ವಿಚಾರ ಅಥವಾ ಸ್ಪೂರ್ತಿ ನೀಡುವ ಪುಸ್ತಕ ಓದಿಕೊಂಡು ಹೋಗಿ.
ಇವಷ್ಟು ಮಾಡಿ ನೋಡಿ ಒಂದೇ ವಾರದಲ್ಲಿ ನಿಮ್ಮಲ್ಲಿಯೇ ತುಂಬಾನೇ ಬದಲಾವಣೆ ಗೋಚರಿಸುವುದು. ಆಫೀಸ್‌ನಲ್ಲಿ ಕೆಲಸದ ಒತ್ತಡ ನಿಮ್ಮ ನಿಮ್ಮನ್ನು ಸುಸ್ತಾಗಿಸುವುದಿಲ್ಲ, ಬೇಗನೆ ಕೋಪಗೊಳ್ಳುವುದಿಲ್ಲ, ನೀವು ಬದುಕನ್ನು ನೋಡುವ ರೀತಿಯೇ ಬದಲಾಗುವುದು..... ನಾಳೆಯೇ ಇವುಗಳನ್ನು ಟ್ರೈ ಮಾಡುತ್ತೀರಾ ತಾನೆ?



Click it and Unblock the Notifications

