Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ಸೋಮವಾರ ಈ 5 ಶಿವ ಮಂತ್ರ ಪಠಿಸಿದರೆ ಕಷ್ಟಗಳು ದೂರಾಗುವುದು
ಸೋಮವಾರ ಶಿವನ ದಿನ. ಈ ದಿನ ಶಿವ ಪೂಜೆ ತುಂಬಾನೇ ಶ್ರೇಷ್ಠ ಎಂದು ಹೇಳಲಾಗುವುದು. ಅಲ್ಲದೆ ಶಿವನು ತನ್ನ ಭಕ್ತರಿಗೆ ಬೇಗನೆ ಒಲಿಯುತ್ತಾನೆ ಕೂಡ. ಯಾರು ಶಿವನನ್ನು ಭಕ್ತಿಯಿಂದ ಆರಾಧಿಸುತ್ತಾರೋ ಅವರಿಗೆ ಶಿವನ ರಕ್ಷಾಕವಚ ಇದ್ದೇ ಇರುತ್ತದೆ.
ನೀವು ಸೋಮವಾರ ಶಿವನ ವಿಶೇಷ ಕೃಪೆಗೆ ಪಾತ್ರರಾದರೆ ಹಲವು ಬಗೆಯ ಸಮಸ್ಯೆಗಳಿದ್ದರೆ ಅದರಿಂದ ಮುಕ್ತಿ ಪಡೆಯಬಹುದು. ಆರೋಗ್ಯ ಸಮಸ್ಯೆ, ಹಣದ ಸಮಸ್ಯೆ, ಸಂಸಾರದಲ್ಲಿ ಸಮಸ್ಯೆ ಹೀಗೆ ಸಕಲ ಸಮಸ್ಯೆಗೆ ಪರಿಹಾರ ಶಿವ ಮಂತ್ರದಲ್ಲಿದೆ. ಸೋಮವಾರ ಈ ಮಂತ್ರಗಳನ್ನು ಪಠಿಸುವುದರಿಂದ ತುಂಬಾನೇ ಒಳ್ಳೆಯ ಫಲವನ್ನು ಪಡೆಯಬಹುದು.

1.ಪಂಚಾಕ್ಷರಿ ಮಂತ್ರ
ಓಂ ನಮಃ ಶಿವಾಯಃ
ಶಿವ ನಾಮ ಜಪಿಸುವುದರಿಂದ ನಿಮ್ಮಲ್ಲಿ ಆತ್ಮವಿಶ್ವಾಸ ಹೆಚ್ಚಾಗುವುದು. ಈ ಮಂತ್ರ ಹೇಳಿದಾಗ ನಿಮ್ಮಲ್ಲಿ ಧನಾತ್ಮಕ ಶಕ್ತಿ ಹರಿದಂತಾಗುವುದು. ಓಂ ನಮಃ ಶಿವಾಯವನ್ನು ನೀವು ಎಲ್ಲಿ ಬೇಕಾದರೂ ಯಾವಾಗ ಬೇಕಾದರೂ ಹೇಳಬಹುದು.
2. ಮಹಾ ಮೃತ್ಯುಂಜಯ ಮಂತ್ರ
ಓಂ ತ್ರಯಂಬಕಂ ಯಜಾಮಹೇ ಸುಗಂಧಿಂ ಪುಷ್ಠಿವರ್ಧನಂ| ಊರ್ವಾರುಕಂವಾ ಬಂಧನಾ ಮೃತ್ಯೋರ್-ಮುಕ್ಷೀಯ ಮಾಮೃತಾತ್||
ಈ ಮಂತ್ರ ಪಠಿಸಲು ಕೆಲವು ನಿಯಮಗಳಿವೆ. ಈ ಮಂತ್ರವನ್ನು ಯಾವಾಗ ಮತ್ತು ಹೇಗೆ ಹೇಳಬೇಕು ಎಂಬುದನ್ನು ತಿಳಿದಿರಬೇಕು, ಅಲ್ಲದೆ ಸ್ಪಷ್ಟವಾಗಿ ಪಠಿಸಬೇಕು. ಸಂಸ್ಕ್ರತ ಶಬ್ದವಾಗಿರುವ ಮಹಾ ಮೃತ್ಯುಂಜಯ ಎಂದರೆ ಸಾವನ್ನು ಗೆಲ್ಲುವವನು ಎಂದರ್ಥ. ಈ ಮಂತ್ರ ಪಠಣೆ ಮಾಡುವುದರಿಂದ ಆ ವ್ಯಕ್ತಿ ಸಾವಿನ ಭಯವನ್ನು ಗೆಲ್ಲುತ್ತಾನೆ. ಅಲ್ಲದೆ ಏನಾದರೂ ಆರೋಗ್ಯ ಸಮಸ್ಯೆಯಿದ್ದರೆ ಚೇತರಿಸಿಕೊಳ್ಳಲು ಈ ಮಂತ್ರ ಪಠಿಸಲಾಗುವುದು.
3. ರುದ್ರ ಮಂತ್ರ
ಓಂ ನಮೋ ಭಗವತೇ ರುದ್ರಾಯ
ರುದ್ರ ತಾಂಡವನನ್ನು ಈ ಮಂತ್ರ ಹೇಳಿ ಪಠಿಸಿ. ಈ ಮಂತ್ರ ಪಠಿಸುವುದರಿಂದ ನಿಮ್ಮ ಇಷ್ಟಾರ್ಥಗಳು ನೆರವೇರುವುದು.
4, ಶಿವ ಗಾಯತ್ರಿ ಮಂತ್ರ
ಓಂ ಮಹಾದೇವಾಯ ವಿದ್ಮಹೇ ರುದ್ರಮೂರ್ತಯೇ ಧೀಮಹಿ ತನ್ನಃ ಶಿವಃ ಪ್ರಚೋದಯಾತ್ ।
ಗಾಯತ್ರಿ ಮಂತ್ರ ತುಂಬಾ ಪವರ್‌ಫುಲ್ ಮಂತ್ರವಾಗಿದೆ. ಈ ಶಕ್ತಿ ಶಾಲಿ ಮಂತ್ರ ಪಠಿಸುವ ಮೂಲಕ ಶಿವನ ಕೃಪೆಗೆ ಪಾತ್ರರಾಗಬಹುದು. ಈ ಮಂತ್ರ ಪಠಿಸುವುದರಿಂದ ಮನಸ್ಸಿಗೆ ಶಾಂತಿ ದೊರೆಯುವುದು. ಮನೆಯಲ್ಲಿರುವ ಕೌಟುಂಬಿಕ ಸಮಸ್ಯೆ ದೂರಾಗುವುದು.
5. ಶಿವ ಧ್ಯಾನ ಮಂತ್ರ
ಕರ್ಚರನ್‌ಕೃತಂ ವಾ ಕೈಜಮ್ ಕರ್ಮಜಂ ವಾ ಶ್ರಾವಣ್ಣನಂಜಂ ವಾ ಮಾನ್ಸಮ್ ವಾ ಪರಧಮ್ ವಿಹಿತಂ ವಿಹಿತಂ ವಾ ಸರ್ವ್ ಮೆಟಾಟ್ ಕ್ಷಮಾಸ್ವ ಜೇ ಜೇ ಕರುನಾಬ್ಧೆ ಶ್ರೀ ಮಹಾದೇವ್ ಶಂಭೋ
ನೀವು ಜೀವನದಲ್ಲಿ ಹಲವು ಸೋಲುಗಳನ್ನು ಅನುಭವಿಸುತ್ತಿದ್ದರೆ ಈ ಮಂತ್ರ ಹೇಳಿ ಶಿವನ ಧ್ಯಾನ ಮಾಡುವುದರಿಂದ ಆ ಸೋಲುಗಳನ್ನು ಜಯಿಸುವ ಶಕ್ತಿ ಶಿವ ನೀಡುತ್ತಾನೆ. ನಿಮ್ಮ ಜೀವನದಲ್ಲಿ ಯಶಸ್ಸು ದೊರೆಯುತ್ತದೆ.
ಈ ಮಂತ್ರಗಳನ್ನು ಯಾವುದೇ ದಿನ ಪಠಿಸಬಹುದು, ಆದರೆ ಸೋಮವಾರ ಶಿವನ ದಿನವಾಗಿರುವುದರಿಂದ ಸೋಮವಾರ ಪಠಿಸಿದರೆ ಇನ್ನಷ್ಟು ಒಳ್ಳೆಯದು.



Click it and Unblock the Notifications
