Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಕಾಮಿಕ ಏಕಾದಶಿ 2023: ಆಷಾಢದ ಕೊನೆಯ ಏಕಾದಶಿ ವ್ರತದ ಮಹತ್ವವೇನು ಗೊತ್ತೇ?
ಜುಲೈ 12ಕ್ಕೆ ಕಾಮಿಕ ಏಕಾದಶಿ ಆಚರಿಸಲಾಗುವುದು. ಕಾಮಿಕ ಏಕಾದಶಿಯು ಆಷಾಢ ಮಾಸದ ಕೊನೆಯ ಏಕಾದಶಿಯಾಗಿದೆ, ಈ ಏಕಾದಶಿ ಬಳಿಕ ಶ್ರಾವಣ ಮಾಸ ಶುರುವಾಗುತ್ತದೆ. ಈ ವರ್ಷ ಕಾಮಿಕ ಏಕಾದಶಿಯನ್ನು ಜುಲೈ 12ರಂದು ಆಚರಿಸಲಾಗುತ್ತಿದೆ. ಜುಲೈ 17ಕ್ಕೆ ಆಷಾಢ ಮುಕ್ತಾಯವಾಗಲಿದೆ.
ಕಾಮಿಕ ಏಕಾದಶಿಯ ಮಹತ್ವವೇನು? ಕಾಮಿಕ ಏಕಾದಶಿಯ ಪೂಜಾ ವಿಧಿಗಳೇನು, ಪೂಜೆಗೆ ಶುಭ ಮುಹೂರ್ತ ಯಾವಾಗ ಎಂದು ನೋಡೋಣ ಬನ್ನಿ:

ಕಾಮಿಕ ಏಕಾದಶಿಯ ಮಹತ್ವ
ಯಾವುದಾದರೂ ಕೆಲಸಗಳು ಅರ್ಧಕ್ಕೆ ನಿಂತಿದ್ದರೆ, ನಿಮ್ಮ ಆ ಕೆಲಸ ಪೂರ್ಣಗೊಳ್ಳಲು ತುಂಬಾ ಅಡೆತಡೆ ಉಂಟಾಗಿದ್ದರೆ ಈ ಏಕಾದಶಿಯನ್ನು ಮಾಡಿದರೆ ಅಪೂರ್ಣವಾಗಿರುವ ಕೆಲಸಗಳು ಪೂರ್ಣಗೊಳ್ಳುವುದು. ಈ ಏಕಾದಶಿ ವ್ರತವನ್ನು ಉಪವಾಸವಿದ್ದು ಆಚರಿಸುವುದರಿಂದ ಸಂಕಷ್ಟಗಳು ದೂರಾಗಲಿದೆ.
ಈ ಏಕಾದಶಿಯನ್ನು ಮಾಡುವುದರಿಂದ ಅಶ್ವಮೇಧ ಯಾಗದ ಫಲ ದೊರೆಯಲಿದೆ. ಈ ದಿನ ತುಳಸಿಗೆ ಪೂಜೆ ಸಲ್ಲಿಸಬೇಕು.
ಪೂರ್ವಜನ್ಮದ ಪಾಪದಿಂದ ಮುಕ್ತಿ ದೊರೆಯುತ್ತದೆ
ಕಾಮಿಕ ಏಕಾದಶಿಯನ್ನು ಆಚರಿಸುವುದರಿಂದ ಪೂರ್ವಜನ್ಮದ ಪಾಪದಿಂದ ಮುಕ್ತಿ ಪಡೆಯಬಹುದು. ಅಷ್ಟು ಮಾತ್ರವಲ್ಲ ನಮಗೆ ತಿಳಿಯದೆ ಆದ ಪಾಪ ಕರ್ಮಗಳಿಂದ ವಿಮೋಚನೆ ಸಿಗಲಿದೆ. ತಮ್ಮ ತಪ್ಪಿಗೆ ಪ್ರಾಯಶ್ಚಿತ್ತ ಮಾಡಲು ಈ ಏಕಾದಶಿ ವ್ರತ ಮಾಡುವುದು ಒಳ್ಳೆಯದು.
ಪಿತೃದೋಷ ಕೂಡ ನಿವಾರಣೆಯಾಗುವುದು
ಕಾಮಿಕ ಏಕಾದಶಿಯಂದು ಪಿತೃದೋಷ ನಿವಾರಣೆಯಾಗಲಿದೆ, ಪಿತೃಗಳ ಆಶೀರ್ವಾದ ಸಿಗಲಿದೆ, ಶ್ರೀವಿಷ್ಣುವಿನ ಆಶೀರ್ವಾದ ಮಾತ್ರವಲ್ಲ ದೇವಾನು, ದೇವತೆಗಳ ಆಶೀರ್ವಾದ ಸಿಗಲಿದೆ.
ಬ್ರಹ್ಮ ದೋಷದಿಂದ ಮುಕ್ತರಾಗುತ್ತಾರೆ
ಕಾಮಿ ಏಕಾದಶಿಯನ್ನು ಆಚರಿಸುವುದರಿಂದ ಬ್ರಹ್ಮ ದೋಷದಿಂದ ಕೂಡ ಮುಕ್ತರಾಗುತ್ತಾರೆ. ಈ ಏಕಾದಶಿಯನ್ನು ಆಚರಣೆ ಮಾಡುವುದರಿಂದ ಅಕಾಲಿಕ ಮರಣ ಭಯ ದೂರಾಗಲಿದೆ.
ಕಾಮಿಕ ಏಕಾದಶಿ ಪೂಜಾ ಸಮಯ ಹಾಗೂ ಪಾರಣ ಸಮಯ
ಕಾಮಿಕ ಏಕಾದಶಿ ಜುಲೈ 12 ಸಂಜೆ 5:59ಕ್ಕೆ ಪ್ರಾರಂಭ
ಏಕಾದಶಿ ತಿಥಿ ಮುಕ್ತಾಯ ಜುಲೈ 13 ಸಂಜೆ 06:24ರವರೆಗೆ
ಏಕಾದಶಿ ಉಪವಾಸವನ್ನು ಜುಲೈ 13ರಂದು ಆಚರಿಸಲಾಗುವುದು.
ಪೂಜೆಗೆ ಶುಭ ಮುಹೂರ್ತ ಜುಲೈ 13 ಬೆಳಗ್ಗೆ 5:32ರಿಂದ 07:16ರವರೆಗೆ
ಮತ್ತೊಂದು ಶುಭ ಮುಹೂರ್ತ ಬೆಳಗ್ಗೆ 10:43ರಿಂದ ಮಧ್ಯಾಹ್ನ 03:45ರವರೆಗೆ
ಪಾರಣ ಸಮಯ: ಜುಲೈ 14 ಬೆಳಗ್ಗೆ 05:32ರಿಂದ 08:18ರವರೆಗೆ



Click it and Unblock the Notifications
