Latest Updates
-
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ?
ದೇವರಿಗೆ ಅರ್ಪಿಸಿದ ತೆಂಗಿನಕಾಯಿ ಹಾಳಾದರೆ ಏನರ್ಥ?
ಧಾರ್ಮಿಕ ಕಾರ್ಯಗಳಲ್ಲಿ ದೇವರಿಗೆ ತೆಂಗಿನಕಾಯಿ ಅರ್ಪಿಸಲಾಗುವುದು. ತೆಂಗಿನಕಾಯಿಯನ್ನು ಮಾತೆ ಲಕ್ಷ್ಮಿಯ ಸ್ವರೂಪ ಎಂದು ಹೇಳಲಾಗುವುದು. ದೇವರಿಗೆ ತೆಂಗಿನಕಾಯಿ ಅರ್ಪಿಸುವಾಗ ಜುಟ್ಟು ಇರುವ ತೆಂಗಿನಕಾಯಿಯನ್ನೇ ಅರ್ಪಿಸಬೇಕು. ತೆಂಗಿನಕಾಯಿಯನ್ನು ಆಯ್ಕೆ ಮಾಡುವಾಗ ಅದರೊಳಗೆ ಹೇಗಿದೆ ಎಂದು ತಿಳಿಯಲು ಸಾಧ್ಯವಿಲ್ಲ.
ಪೂಜೆಗೆ ಒಡೆದ ತೆಂಗಿನಕಾಯಿ ಹಾಳಾಗಿದ್ದರೆ ಅದು ಅಶುಭದ ಸೂಚನೆ ಎಂದೇ ಬಹುತೇಕರು ಭಾವಿಸುತ್ತಾರೆ. ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದು ಅಶುಭದ ಸೂಚನೆಯೇ? ಈ ಕುರಿತು ಶಾಸ್ತ್ರ ಏನು ಹೇಳುತ್ತದೆ ಎಂದು ನೋಡೋಣ ಬನ್ನಿ:

ಪೂಜೆಗೆ ತೆಂಗಿನಕಾಯಿ ಹಾಳಾಗಿದ್ದರೆ
ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದುಅಶುಭದ ಸೂಚನೆ, ದೇವರು ಈ ರೀತಿ ನಮಗೆ ಏನೋ ಸೂಚನೆ ನೀಡುತ್ತಿದ್ದಾನೆ ಎಂದು ಭಾವಿಸುತ್ತಾರೆ, ಆದರೆ ನಿಜವಾಗಲೂ ಆ ರೀತಿಯಲ್ಲ. ಪೂಜೆಗೆ ತೆಂಗಿನಕಾಯಿ ಒಡೆದಾಗ ಅದು ಹಾಳಾಗಿದ್ದರೆ ಅದು ಉತ್ತಮ ಸೂಚನೆಯಾಗಿದೆ! ದೇವರು ನಿಮ್ಮ ಪ್ರಸಾದವನ್ನು ಸ್ವೀಕರಿಸಿದ್ದಾನೆ ಎಂದು ಸೂಚಿಸುವ ಲಕ್ಷಣವಾಗಿದೆ.
ತೆಂಗಿನಕಾಯಿ ಹಾಳಾಗಿದ್ದರೆ ದೇವರು ನಮ್ಮ ಪ್ರಸಾದ ಸ್ವೀಕರಿಸಿದ್ದಾನೆ, ನಮ್ಮೆಲ್ಲಾ ಇಷ್ಟಾರ್ಥಗಳು ನೆರವೇರಲಿದೆ ಎಂಬ ಸೂಚನೆಯಾಗಿದೆ. ಆದ್ದರಿಂದ ಪೂಜೆಗೆ ಬಳಸಿದ ತೆಂಗಿನಕಾಯಿ ಹಾಳಾದರೆ ಟೆನ್ಷನ್ ಮಾಡಿಕೊಳ್ಳಬೇಡಿ, ಬದಲಿಗೆ ಖುಷಿ ಪಡಿ, ದೇವರ ಕೃಪೆ ನಮ್ಮ ಮೇಲಿದೆ, ನಮ್ಮ ಇಷ್ಟಾರ್ಥಗಳು ನೆರವೇರಲಿದೆ ಎಂದು ಸೂಚಿಸುವ ಲಕ್ಷಣವಾಗಿದೆ.
ತೆಂಗಿನಕಾಯಿ ಒಡೆದಾಗ ಸಮವಾಗಿ ವಿಬ್ಭಾಗವಾಗದೇ ಹೋದರೆ
ದೇವರಿಗೆ ತೆಂಗಿನಕಾಯಿ ಒಡೆದಾಗ ಅದು ಎರಡು ಭಾಗವಾಗಿ ಸಮವಾಗಿ ಭಾಗವಾಗದಿದ್ದರೆ ಆಗಲೂ ಕೂಡ ಕಲೆವರು ಟೆನ್ಷನ್ ಮಾಡಿಕೊಳ್ಳುತ್ತಾರೆ, ದೇವರಿಗೆ ಒಡೆದ ತೆಂಗಿನಕಾಯಿ ಹೇಗೇ ಭಾಗವಾದರೂ ತಲೆಕೆಡಿಸಿಕೊಳ್ಳಬೇಕಾಗಿಲ್ಲ, ತೆಂಗಿನಕಾಯಿ ಹೀಗೆಯೇ ಭಾಗವಾಗಬೇಕು ಎಂಬ ಯಾವ ನಿಯಮವೂ ಇಲ್ಲ.
ಮತ್ತೊಂದು ತೆಂಗಿನಕಾಯಿ ಅರ್ಪಿಸಬಹುದೇ?
ಒಂದು ತೆಂಗಿನಕಾಯಿ ಹಾಳಾದರೆ ಕೆಲವರು ಮತ್ತೊಂದು ಅರ್ಪಿಸುತ್ತಾರೆ. ಹೀಗೆ ಮಾಡಬಹುದು, ಆದರೆ ತೆಂಗಿನಕಾಯಿ ಹಾಳಾದರೆ ಅದು ಅಶುಭ ಎಂದು ಯೋಚಿಸುವ ಅಗ್ಯತವಿಲ್ಲ, ಅದು ಶುಭದ ಸೂಚನೆಯೇ ಆಗಿದೆ. ಕೆಲವೊಮ್ಮೆ ಪೂಜೆಗೆ ಬಳಸಿದ ತೆಂಗಿನಕಾಯಿಂದ ಪ್ರಸಾದ ತಯಾರಿಸುತ್ತೇವೆ, ಈ ಸಂದರ್ಭದಲ್ಲಿ ಹಾಳಾದ ತೆಂಗಿನಕಾಯಿಯನ್ನು ಬಳಸಲು ಸಾಧ್ಯವಿಲ್ಲ, ಆ ಸಂದರ್ಭದಲ್ಲಿ ಮತ್ತೊಂದುನ ಒಡೆದು ಬಳಸಬಹುದು.
ತೆಂಗಿನಕಾಯಿ ಒಳಗಡೆ ಹೂವಿದ್ದರೆ
ತೆಂಗಿನಕಾಯಿಯೊಳಗಡೆ ಹೂವು ಇದ್ದರೆ ಅದು ಕೂಡ ಒಳ್ಳೆಯದೇ. ಅಲ್ಲದೆ ಇದನ್ನು ತಿನ್ನಿ, ಏಕೆಂದರೆ ಇದರಲ್ಲಿ ಅನೇಕ ಪೋಷಕಾಂಶಗಳಿವೆ, ಆದ್ದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.



Click it and Unblock the Notifications
