Latest Updates
-
ವೈವಾಹಿಕ ಅತ್ಯಾಚಾರ: ಸುಪ್ರೀಂ ಕೋರ್ಟ್ನಿಂದ ಕೇಂದ್ರಕ್ಕೆ ಪ್ರಶ್ನೆ, ಮಹಿಳೆಯರ ಸುರಕ್ಷತೆಗೆ ಹೊಸ ತಿರುವು? -
ದೆಹಲಿ ಪಿಜಿ ದುರಂತ: ಕಟ್ಟಡ ಕುಸಿಯುವ ಮುನ್ನವೇ ಎಚ್ಚರಿಸುವ 10 ಅಪಾಯಕಾರಿ ಲಕ್ಷಣಗಳಿವು! -
ಅಂಗನವಾಡಿ ಊಟದ ಬಗ್ಗೆ ಪೋಷಕರಿಗೆ ಎಚ್ಚರ! ಪೋಷಣ್ ಮಾಹ್ 2026ರ ಹೊಸ ನಿಯಮಗಳು ಮತ್ತು ದೂರು ನೀಡುವುದು ಹೇಗೆ? -
ಇಂದಿನ ಪೆಟ್ರೋಲ್ ದರ: ಬೆಂಗಳೂರಿನಲ್ಲಿ ಬೆಲೆ ಎಷ್ಟು? ಹಣ ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ -
ರಾಷ್ಟ್ರೀಯ ಪೋಷಕಾಂಶ ಸಪ್ತಾಹ: ಕೇವಲ 15 ನಿಮಿಷದಲ್ಲಿ ನಿಮ್ಮ ಬೆಳಗಿನ ದಿನಚರಿಯನ್ನು ರೀಸೆಟ್ ಮಾಡಿ, ದಿನವಿಡೀ ಎನರ್ಜಿ ಪಡೆಯಿರಿ! -
ಭಾರೀ ಮಳೆ ಎಚ್ಚರಿಕೆ: ನಿಮ್ಮ ಮನೆಯ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ 30 ನಿಮಿಷದ ಟಿಪ್ಸ್ ಪಾಲಿಸಿ -
ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ ಎಚ್ಚರಿಕೆ: ಸುಪ್ರೀಂ ಕೋರ್ಟ್ನಲ್ಲಿ ಹೊಸ ತಿರುವು, ನಿಮಗೇನು ಲಾಭ? -
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ!
ಚಂದ್ರಯಾನ 3 ಕುರಿತು ಕಣ್ಣಿಗೆ ಕಟ್ಟಿದಂತೆ ವರ್ಣಿಸಿದ ಈ ಬರಹ ಬಲು ಅದ್ಭುತವಾಗಿದೆ ನೋಡಿ
ಆಗಸ್ಟ್ 23, ಭಾರತದ ಸಾಧನೆಯನ್ನು ಸುವರ್ಣ ಅಕ್ಷರಗಳಿಂದ ಬರೆದಿಡುವ ದಿನವಾಗಲಿ ಎಂದು ಪ್ರತಿಯೊಬ್ಬ ಭಾರತೀಯ ಮನಸಾರೆ ಬಯಸುತ್ತಿದ್ದಾನೆ, ಏಕೆಂದರೆ ಇಡೀ ವಿಶ್ವವೇ ಭಾರತದ ಆ ಸಾಧನೆಯನ್ನು ಕುತೂಹಲದ ಕಣ್ಣಿನಿಂದ ನೋಡುತ್ತಿದೆ ಎಂದ ಮೇಲೆ ನಮ್ಮ ಇಸ್ರೋ ವಿಜ್ಞಾನಿಗಳು ಮಾಡಿರುವ ಸಾಧನೆ ಎಷ್ಟು ದೊಡ್ಡದು ಎಂದು ಊಹಿಸಬಹುದಾಗಿದೆ.

ಜುಲೈ 14ಕ್ಕೆ ಚಂದ್ರಯಾನ ತ್ರಿವಿಕ್ರಮ ಭಾರತದಿಂದ ಚಂದ್ರನ ಕಕ್ಷೆಯತ್ತ ತನ್ನ ಪ್ರಯಾಣವನ್ನು ಆರಂಭಿಸಿತ್ತು. ಶ್ರೀಹರಿಕೂಟದಿಂದ ಉಡಾವಣೆಯಾದ ರಾಕೆಟ್ ಚಂದ್ರನ ಕಕ್ಷೆಯನ್ನು ಆಗಸ್ಟ್ 23ಕ್ಕೆ ತಲುಪಲಿದೆ ಎಂದು ಅಂದಾಜಿಸಲಾಗಿತ್ತಿ. ಚಂದ್ರಯಾನ 2 ಇನ್ನೇನು ಕೊನೆಯ ಹಂತದಲ್ಲಿ ವಿಫಲವಾಗಿತ್ತು, ಆದರೆ ಈ ಭಾರಿ ಯಾವುದೇ ಅಡಚಣೆ ಉಂಟಾಗಬಾರದು ಎಂದು ಅಷ್ಟು ಪರಿಶೀಲಿಸಿ, ದೇವರ ಆಶೀರ್ವವಾದವನ್ನು ಕೂಡ ಪಡೆದು, ಶುಭ ಮುಹೂರ್ತದಲ್ಲಿ ಅಂದರೆ ವಿಜಯ ಮುಹೂರ್ತದಲ್ಲಿ ಚಂದ್ರಯಾ 3ವಿಕ್ರಮನನ್ನು ಉಡಾವಣೆ ಮಾಡಲಾಗಿತ್ತು. ನಾಳೆ ನಮ್ಮ ಭಾರತದ ವಿಜ್ಞಾನಿಗಳ ಕಠಿಣ ಶ್ರಮಕ್ಕೆ ಫಲ ಸಿಗುವ ದಿನ, ಆಗಸ್ಟ್ 23ರಂದು ಪ್ರಗ್ಯಾನ್ ಎಂಬ ರೋಬೋ ಹೊರಬಂದು ಚಂದ್ರಲೋಕದ ಬಗ್ಗೆ ಭೂಮಿಗೆ ಮಾಹಿತಿ ರವಾನಿಸಲಿದೆ. ಇದರ ಕುರಿತ ಮಾಹಿತಿ ತಿಳಿಯಲು ವಿಜ್ಞಾನಿಗಳಷ್ಟೇ ಅಲ್ಲ ಪ್ರತಿಯೊಬ್ಬ ಭಾರತೀಯರು ಕುತೂಹಲದಿಂದ ಕಾಯುತ್ತಿದ್ದಾರೆ, ಭಾರತ ಮಾಡಿರುವ ಈ ಸಾಧನೆ ನೋಡಿ ಬೇರೆ ದೇಶಗಳು ಹೊಟ್ಟೆಕಿಚ್ಚು ಪಡುತ್ತಿದೆ, ಭಾರತವನ್ನು ಮೀರಿಸಲು ರಷ್ಯಾ ಕಳುಹಿಸಿದ ರಾಕೆಟ್ ಚಂದ್ರನ ಕಕ್ಷೆ ತಲುಪಲು ವಿಫಲವಾಗಿದೆ.
ಚಂದ್ರಯಾನ 3 ಕುರಿತು ತುಂಬಾ ವೈಜ್ಞಾನಿಕವಾಗಿ ವಿವರಣೆ ನೀಡುತ್ತಿದ್ದಾರೆ, ಆದರೆ ವಾಟ್ಸಾಪ್ ಗ್ರೂಪ್‌ನಲ್ಲಿ ಯಾರೋ ಒಬ್ಬರು ಫಾರ್ವರ್ಡ್ ಮಾಡಿದ ಸಾಲುಗಳು ತುಂಬಾನೇ ಗಮನ ಸೆಳೆಯಿತು, ಇದನ್ನು ಯಾರು ಬರೆದಿದ್ದಾರೆ ಎಂಬುವುದು ಗೊತ್ತಿರಲಿಲ್ಲ, ಆದರೆ ಜನ ಸಾಮಾನ್ಯನಿಗೆ, ಹೆಚ್ಚು ಓದಿಲ್ಲದವರಿಗೂ ಅರ್ಥವಾಗುವಂತೆ ತುಂಬಾ ಸರಳವಾಗಿ ವಿವರವಾಗಿ ವರ್ಣಿಸಿರುವ ರೀತಿ ಇಷ್ಟವಾಯಿತು, ಅದನ್ನು ಯಥಾವತ್ತಾಗಿ ಇಲ್ಲಿ ನೀಡುತ್ತಿದ್ದೇನೆ (ಈ ಕೆಳಗಿನ ಸಾಲುಗಳನ್ನು ಬರೆದವರು ಸುಧೀರ್ ಸಾಗರ್ ಎಂಬುವುದು ತಿಳಿದು ಬಂದಿದೆ)
ನಾವು ಜಾತ್ರೇಲಿ ಜಸ್ಟ್ ಹತ್ತು ರುಪಾಯಿ ಕೊಟ್ಟು ತಗೊಂಡ ಬಲೂನೊಂದನ್ನು ಮನೆಗ್ ತಗೊಂಡು ಹೋಗುವಾಗ್ಲೇ, ಎಲ್ಲಿ ನಡುದಾರೀಲೇ ಒಡೆದು ಹೋಗಿಬಿಡುತ್ತೋ ಅಂತೆಲ್ಲಾ ದಾರಿಯುದ್ದಕ್ಕೂ ಫುಲ್ ಟೆನ್ಷನ್ ಆಗ್ತಿರುತ್ತೆ...
ಅಂತಾದ್ರಲ್ಲಿ...
ನೂರಾರು ವಿಜ್ಞಾನಿಗಳು ತಂತ್ರಜ್ಞರ ತಂಡವೊಂದು,
ನಾಲ್ಕು ವರ್ಷಗಳ ಕಾಲ ನೀರು ನಿದ್ರೆಯಿಲ್ಲದೆ...
ಒಂದಲ್ಲ ಎರಡಲ್ಲ ಒಟ್ಟು 615+ ಕೋಟಿ ರುಪಾಯಿಗಳನ್ನು ಖರ್ಚು ಮಾಡಿ
ತಯಾರಿಸಿದ ನೌಕೆಯೊಂದನ್ನು,
ಬರೋಬ್ಬರಿ 3.84 ಲಕ್ಷ ಕಿಮೀ ದೂರದ ಮಹಾಯಾತ್ರೆಯೊಂದಕ್ಕೆ ಕಳಿಸಿ,
ಕಳೆದ ನಲವತ್ತು ದಿನದಿಂದ ಕಣ್ರೆಪ್ಪೆಯೂ ಮುಚ್ಚದೆ,
ಯಾವುದೇ ಸಮಸ್ಯೆ ಆಗದಂತೆ ನೌಕೆಯು ತನ್ನ ಗಮ್ಯ ತಲುಪುವ ಕ್ಷಣಕ್ಕಾಗಿ ಕಾಯುತ್ತಾ ಕುಳಿತಿದ್ದಾರಲ್ಲ.
ಅದಿನ್ಯಾವ ರೇಂಜಿನ ಒತ್ತಡ, ಕಾತರ, ಟೆನ್ಷನ್ನು, ಭಯ, ಆತಂಕಗಳೆಲ್ಲಾ ಅವರೊಳಗೆ ಇರಬಹುದು ಜಸ್ಟ್ ಇಮ್ಯಾಜಿನ್...
ಅದೂ ಅಲ್ಲದೆ...
ಎಲ್ಲವೂ ಅಂದುಕೊಂಡಂತೆಯೇ,
ಚಂದ್ರನ ಮೇಲೆ ಸೇಫಾಗಿ ಹೋಗಿ ಲ್ಯಾಂಡ್ ಆದ್ಮೇಲೂ ಕೂಡಾ,
ಚಂದ್ರನ ನೆಲದಲ್ಲಿ ಸುತ್ತಾಡೋಕೆ ಸಿಗೋದಾದ್ರೂ ಎಷ್ಟು ಸಮಯ ಗೊತ್ತಾ?
ಕೇವಲ ಚಂದ್ರನಲ್ಲಿನ ಒಂದು ಹಗಲು ಅಷ್ಟೇ.. ಒಂದು ಸಲ ಚಂದ್ರನಲ್ಲಿ ಸೂರ್ಯಾಸ್ತವಾಯ್ತೋ,
ನಮ್ಮ ಪ್ರಗ್ಯಾನ್ ಹಾಗೂ ರೋವರ್ ನೌಕೆಗಳ ಆಟಗಳು ಮುಗಿದುಬಿಡುತ್ತವೆ.
ಯಾಕೆಂದರೆ ಚಂದ್ರನಲ್ಲಿ ರಾತ್ರಿಯಾಗುತ್ತಿದ್ದಂತೆಯೇ ಉಷ್ಣಾಂಶ ಮೈನಸ್ -250 ರಿಂದ -300ರ ವರೆಗೂ ಹೋಗೋದ್ರಿಂದಾಗಿ ಈ ವಾತಾವರಣದಲ್ಲಿ ಎಲೆಕ್ಟ್ರಾನಿಕ್ ಉಪಕರಣಗಳು ಸರ್ವೈವ್ ಆಗೋದೆಲ್ಲಾ ಸೀನೇ ಇಲ್ಲ.
ಖುಷಿಯ ವಿಚಾರ ಏನಂದ್ರೆ...
ಚಂದ್ರನ ಒಂದು ಹಗಲು ಭೂಮಿಯಲ್ಲಿನ 14 ದಿನಗಳು.
ಹಾಗಾಗಿ ನಮಗೆ ಹದಿನಾಲ್ಕು ದಿನಗಳ ಕಾಲಾವಕಾಶವಿದೆ ಚಂದ್ರನಲ್ಲಿ ಹುಡುಕಾಟ ನಡೆಸೋಕೆ.😁
ಇಷ್ಟೊಂದೆಲ್ಲಾ ಖರ್ಚು ಮಾಡಿ,
ಒಂದ್ಸಲ ವಿಫಲವಾದ್ರೂ ಛಲ ಬಿಡದೆ ಪ್ರಯತ್ನ ಮಾಡಿ,
ನಲವತ್ತು ದಿನದಿಂದ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಎಲ್ಲವೂ ಒಳ್ಳೆಯದಾಗ್ಲಿ ಅಂತ ಆಕಾಶ ನೋಡ್ತಾ ಕೂತಿದ್ದಾರೆ ಇಸ್ರೋ ವಿಜ್ಞಾನಿಗಳು.
ನಾಳೆ ಸಂಜೆ 5.20pm ನಿಂದ ನಮ್ಮ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯೋಕ್ ಶುರುಮಾಡಲಿದೆ.
ಇಳಿಯುತ್ತಿದ್ದಂತೆಯೇ,
ಜಗತ್ತಿನ ಭೂಪಟದಲ್ಲಿ ನಮ್ಮ ಭಾರತ ಐತಿಹಾಸಿಕ ದಾಖಲೆಯೊಂದನ್ನು ಬರೆದು ಚಂದ್ರನ ದಕ್ಷಿಣ ಧ್ರುವದಲ್ಲಿ ಕಾಲಿಟ್ಟ ಜಗತ್ತಿನ ಮೊದಲ ದೇಶವಾಗಿ ಎದೆಯುಬ್ಬಿಸಿ ನಿಲ್ಲಲಿದೆ...
ಪ್ರತಿಯೊಂದು ಮನೆಯಲ್ಲೂ...
ಇಂದು ಸಂಜೆ ಹಾಗೂ ನಾಳೆ ಬೆಳಿಗ್ಗಿನ ದೇವರ ದೀಪಗಳನ್ನು ಇಸ್ರೋ ಹೆಸರಲ್ಲೇ ಹಚ್ಚಿ, ನಾಳಿನ ಪರೀಕ್ಷೆಯಲ್ಲಿ ಇಸ್ರೋ ಗೆದ್ದು ಬೀಗಲಿ ಅಂತ ಇಷ್ಟದೈವಗಳಲ್ಲಿ ಬೇಡಿಕೊಳ್ಳೋಣ.
ಒಳ್ಳೇ ಮನಸ್ಸಿಂದ ಏನೇ ಬೇಡಿಕೊಂಡ್ರೂ ಅಶ್ವಿನಿ ದೇವತೆಗಳು ಅಸ್ತು ಅಂತಾರಂತೆ.
ಎಲ್ಲರೂ ಒಕ್ಕೊರಲಿನಿಂದ ಇಸ್ರೋ ಜೊತೆ ನಿಲ್ಲೋಣ.
ನೆನಪಿರಲಿ...
ಇಂದು ನಾಳೆಗಳ ನಮ್ಮೆಲ್ಲರ ಪೂಜೆ, ಪ್ರಾರ್ಥನೆಗಳೂ ಇಸ್ರೋಗಷ್ಟೇ ಮೀಸಲಾಗಿರಲಿ.
ನಾಳೆ ಸಂಜೆಯ ನಮ್ಮೆಲ್ಲರ ಸಮಯವೂ ಈ ದೃಶ್ಯವೈಭವವನ್ನು ಕಣ್ಣುತುಂಬೋಕೇ ರಿಸರ್ವ್ ಆಗಿರಲಿ.



Click it and Unblock the Notifications
