Latest Updates
-
ಹೊಸ ಜೀವನ ಆರಂಭಿಸುವ ಮುನ್ನ ಎಚ್ಚರ: ವಿಚ್ಛೇದನ ಮತ್ತು ಕಾನೂನು ಹಕ್ಕುಗಳ ಬಗ್ಗೆ ಹೈಕೋರ್ಟ್ ಹೇಳಿದ್ದೇನು? -
ಬಿರುಗಾಳಿ ಮತ್ತು ಬಿಸಿಲ ಬೇಗೆ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬಿಸಿಲ ಬೇಗೆಯಿಂದ ಸುಸ್ತಾಗಿದ್ದೀರಾ? ನಿಮ್ಮ ಜೀವ ಉಳಿಸುವ ಸರಳ ಮನೆಮದ್ದುಗಳಿವು! -
ಬಿಸಿಲಿನ ಬೇಗೆಗೆ ತತ್ತರಿಸಿದ್ದೀರಾ? ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿರುವ ಈ ಕೂಲಿಂಗ್ ಹ್ಯಾಕ್ಸ್ ಮಿಸ್ ಮಾಡ್ಬೇಡಿ! -
ಬದಲಾಗುತ್ತಿರುವ ಹವಾಮಾನ: ನಿಮ್ಮ ಫಿಟ್ನೆಸ್ ದಿನಚರಿಯನ್ನು ಬದಲಾಯಿಸದಿದ್ದರೆ ಕಾದಿದೆ ಅಪಾಯ! -
ವಾಟ್ಸಾಪ್ನಲ್ಲಿ ಪ್ರೀತಿಯ ಬಲೆ: ನಿಮ್ಮ ಖಾತೆ ಖಾಲಿಯಾಗುವ ಮುನ್ನ ಈ ಎಚ್ಚರಿಕೆ ವಹಿಸಿ! -
ದೆಹಲಿ-ಎನ್ಸಿಆರ್ನಲ್ಲಿ ಧೂಳಿನ ಬಿರುಗಾಳಿ ಅಬ್ಬರ: ನಿಮ್ಮ ಮನೆ ಮತ್ತು ಗಿಡಗಳನ್ನು ರಕ್ಷಿಸಿಕೊಳ್ಳುವುದು ಹೇಗೆ? -
ಬೇಸಿಗೆಯ ಧಗೆಗೆ ಸುಸ್ತಾಗಿದ್ದೀರಾ? ಈ ಸಾಂಪ್ರದಾಯಿಕ ಆಹಾರಗಳಿದ್ದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಅಂತರಾಷ್ಟ್ರೀಯ ನೃತ್ಯ ದಿನ: ಸೋಶಿಯಲ್ ಮೀಡಿಯಾದಲ್ಲಿ ಡ್ಯಾನ್ಸ್ ಅಬ್ಬರ, ನೀವು ಮಿಸ್ ಮಾಡ್ಬೇಡಿ! -
ಬಿಸಿಲ ಧಗೆಯಲ್ಲಿ ವರ್ಕೌಟ್ ಮಾಡ್ತಿದ್ದೀರಾ? ನಿಮ್ಮ ಆರೋಗ್ಯಕ್ಕೆ ಕಾದಿದೆ ದೊಡ್ಡ ಅಪಾಯ, ಈ ತಪ್ಪುಗಳನ್ನು ಮಾಡಬೇಡಿ!
ಮಗಳಿಗೆ ಹೆಸರಿಡಲು ಆಕರ್ಷಕ ಹೆಸರುಗಳನ್ನು ಹುಡುಕಿತ್ತಿದ್ದೀರಾ? ಇಲ್ಲಿದೆ ಲಕ್ಷ್ಮಿ ದೇವಿ ಹೆಸರುಗಳು
ಹೆಣ್ಣು ಮಗುವೆಂದರೆ ಬೇಡ ಎನ್ನುವ ಕಾಲ ಈಗ ಇಲ್ಲ. ಹೆಣ್ಣಾದರೂ ಗಂಡಾದರೂ ಸಮಾನವಾಗು ಕಾಣುವ ಈ ಸಮಾಜದಲ್ಲಿ ಅದೆಷ್ಟೋ ಜನರು ಹೆಣ್ಣು ಮಗುವೇ ಬೇಕು ಎನ್ನುವವರೂ ಇದ್ದಾರೆ. ಹೆಣ್ಣು ಮಗುವೆಂದರೆ ಅದೃಷ್ಟ ಎಂದು ನಂಬುವವರೂ ಅದೆಷ್ಟೋ ಜನ. ಇಬ್ಬರು ಮಕ್ಕಳು ಬೇಕು ಅದರಲ್ಲಿ ಮೊದಲಿನ ಮಗು ಹೆಣ್ಣೇ ಆಗಬೇಕು ಎಂದು ಬಯಸುವವರೂ ಇದ್ದಾರೆ.
ಹೆಣ್ಣು ಮಕ್ಕಳಿಗೆ ತರುವ ಆಟಿಕೆಗಳಿಂದ ಹಿಡಿದು ಅವರಿಗೆ ತರಬಹುದಾದ ಬಟ್ಟೆಗಳಲ್ಲೂ ಬಹಳ ವಿಧ. ವಿಧವಿಧವಾದ ಬಣ್ಣಗಳ ಬಟ್ಟೆಗಳು ವಿವಿಧ ವಿನ್ಯಾಸದ ಬಟ್ಟೆಗಳು ನಿಮ್ಮ ನೆಚ್ಚಿನ ಮಗಳನ್ನು ಇನ್ನೂ ಮುದ್ದಾಗಿಸುತ್ತದೆ. ತಮ್ಮಂದಿರು ಅಥವಾ ತಂಗಿಯರು ಇದ್ದರೆ ಅಕ್ಕ ಕೊಡೂವ ಮಮತೆ ಅಥವಾ ತೋರಿಸುವ ಪ್ರೀತಿ ಅಣ್ಣ ನೀಡುವುದಿಲ್ಲ ಎನ್ನುವುದು ಬಹಳ ಜನರ ವಾದ.

ಹೆಣ್ಣು ಮಕ್ಕಳಿಗೆ ಇಡುವ ಹೆಸರುಗಳೂ ಮುದ್ದಾಗಿರುತ್ತವೆ. ಮುಂದೆ ತನ್ನ ಮಗಳು ಹೇಗಿರಬೇಕು ಎನ್ನುವ ಆಸೆಯೊಂದಿಗೆ ಅಂತಹ ಲಕ್ಷಣಗಳನ್ನು ಸೂಚಿಸುವ ಹೆಸರು ಹಲವು ಜನರು ಇಡುತ್ತಾರೆ ಇನ್ನೂ ಕೆಲವರು ತನ್ನ ಮಗಳು ದೇವಿಯ ಪ್ರತಿರೂಪ ಎಂದು ದೇವರ ಹೆಸರನ್ನು ಇಡಲು ಬಯಸುತ್ತಾರೆ. ಲಕ್ಷ್ಮಿ ದೇವಿಯ ಅಂತಹ ಹಲವು ಹೆಸರುಗಳು ಇಲ್ಲಿವೆ.
ಆದಿಲಕ್ಷ್ಮಿ - ಲಕ್ಷ್ಮಿ ದೇವಿಯು ಕಮಲದ ಪಾದಗಳಿಗೆ ಸೇವೆ ಸಲ್ಲಿಸುತ್ತಿರುವಂತೆ ಕಾಣುವ ಅವತಾರ.
ಆರ್ನಾ - ಸಮುದ್ರದ ಅಲೆ
ಅನನ್ಯಾ - ವಿಭಿನ್ನ ವಿಶಿಷ್ಠ ಎನ್ನುವ ಅರ್ಥದ ಜೊತೆಗೆ ಶುದ್ಧತೆ, ಔದಾರ್ಯ, ಅನುಗ್ರಹ ಮತ್ತು ಸೌಂದರ್ಯ ಎನ್ನುವ ಅರ್ಥವೂ ಬರುತ್ತದೆ.
ಅದಿತಿ - ಸೂರ್ಯನಂತೆ ಕಾಂತಿ ಉಳ್ಳವಳು
ಅಂಬುಜಾ - ಕಮಲದ ಮೇಲೆ ಜನಿಸಿದವಳು
ಅನಿಶಾ - ಪ್ರಖರವಾದ ಬೆಳಕು
ಭಾಗ್ಯಶ್ರೀ - ಒಳ್ಳೆಯ ಅದೃಷ್ಟವನ್ನು ತರುವವಳು
ಭವಾನಿ - ಕ್ರಿಯಾತ್ಮಕ ಶಕ್ತಿಯ ಮೂಲ, ಜೀವನವನ್ನು ಕೊಡುವವಳು
ಚಂದಾ - ಚಂದ್ರ
ಚಂಚಲಾ - ಲಕ್ಷ್ಮಿ ಯಾವತ್ತೂ ಒಂದೇ ಕಡೆ ಇರುವುದಿಲ್ಲ ಚಂಚಲೆ ಎಂಬ ಮಾತಿದೆ. ಇದನ್ನು ಸೂಚಿಸುವ ಹೆಸರೇ ಚಂಚಲಾ
ದೀಪಾ - ಉರಿಯುತ್ತಿರುವ ದೀಪ
ದೀತ್ಯಾ - ಪ್ರಾರ್ಥನೆಯ ಉತ್ತರ, ಲಕ್ಷ್ಮಿಯ ಇನ್ನೊಂದು ಹೆಸರು
ದೇವಿಕಾ - ಪುಟ್ಟ ದೇವತೆ
ಧನಲಕ್ಷ್ಮಿ - ಸಂಪತ್ತಿನ ದೇವತೆ
ದುತಿ - ಯೋಚನೆ
ಧೃತಿ - ನೈತಿಕತೆ, ಧೈರ್ಯ ಸ್ಥಿರತೆ
ಗೌರಿ - ಗೌರವರ್ಣದ ಸುಂದರ ಮಹಿಳೆ
ಹರಿಪ್ರಿಯಾ - ಹರಿಗೆ ಪ್ರೀಯಳಾಗಿರುವವಳು
ಹೀರಾ - ವಜ್ರ
ಹೇಮಾಮಾಲಿನಿ - ಚಿನ್ನದ ಮಾಲೆ ಇರುವ ದೇವತೆ
ಹಿರಣ್ಮಯಿ - ಚಿನ್ನಂದಂತಹ ಹುಡುಗಿ
ಜಯಾ - ದುರ್ಗೆಯ ಹೆಸರು, ದಕ್ಷನ ಮಗಳು ಮತ್ತು ಶಿವನ ಪತ್ನಿ ಪಾರ್ವತಿಯ ಹೆಸರು
ಕಾಮಾಕ್ಷಿ - ಸುಂದರವಾದ ಕಣ್ಣುಗಳುಳ್ಳ ದೇವತೆ
ಕಮಲಾ - ಕಮಲ
ಕಾಂತಿ - ಸೌಂದರ್ಯ ಮತ್ತು ಕೃಪೆ ಎಂಬರ್ಥ ಬರುವ ಸಂಸ್ಕೃತ ಹೆಸರು
ಕರುಣಾ - ಸಹಾನುಭೂತಿ ಮತ್ತು ಪ್ರೀತಿ ಉಳ್ಳ ಹೆಣ್ಣು
ಲೋಹಿತಾ - ಕಬ್ಬಿಣದ ರೂಪದಲ್ಲಿರುವ ದೇವಿ
ಮಂಗಲಾ - ಮಂಗಳಕರವಾದ ಅದೃಷ್ಟವನ್ನು ತರುವಾಕೆ
ಮಹಾದೇವಿ - ಮಹಾ ಎಂದರೆ ಶ್ರೇಷ್ಠ ಮತ್ತು ದೇವಿ ಎಂದರೆ ದೇವತೆ ಎಂಬ ಎರಡು ಪದಗಳ ಹೆಸರು
ಮಹಾಲಕ್ಷ್ಮಿ - ಶ್ರೇಷ್ಠ ದೇವಿ ಎಂಬ ಅರ್ಥದ ಜೊತೆಗೆ ಮಹಲ್ ಎಂಬ ರಾಕ್ಷಸನನ್ನು ಕೊಂದ ಕಾರಣಕ್ಕೆ ಈ ಹೆಸರು ಬಂದಿದೆ.
ಮಾನುಷಿ - ದಯಾಮಯಿ ಹೆಣ್ಣು
ಮಂಜುಶ್ರೀ - ಸಿಹಿ ಕಾಂತಿ, ಮಗಳ ಬಾಳನ್ನು ಸಿಹಿಯಾಗಿಸುತ್ತದೆ ಎಂಬ ಅರ್ಥದ ಹೆಸರು
ನಂದಿಕಾ - ಸಂತೋಷವಾಗಿರುವ ಹೆಣ್ಣು
ನಾರಾಯಣಿ - ವಿಷ್ಣುವಿನ ಇನ್ನೊಂದು ರೂಪವಾದ ನಾರಾಯಣನ ಹೆಂಡತಿ
ಪದ್ಮಾ - ಕಮಲದ ಹೂವು
ಪದ್ಮಜಾ - ಕಮಲದ ಹೂವಿನ ಮೇಲೆ ಜನಿಸಿದಾಕೆ
ಪದ್ಮಾಕ್ಷಿ - ಕಮಲದ ಹೂವಿನಂತೆ ಕಣ್ಣಿರುವ ಹೆಣ್ಣು.
ಪದ್ಮಾವತಿ - ಕಮಲದ ಹೂವಿನ ಮೇಲೆ ಕೂತಿರುವ ದೇವತೆ
ಪದ್ಮಿನಿ - ಕಮಲದ ಹೂಗಳ ಗುಚ್ಛ
ರಾಜಶ್ರೀ - ಒಳ್ಳೆಯ ಅದೃಷ್ಟದ ದೇವತೆ
ರಮಾ - ಒಳ್ಳೆಯ ಸಂಪತ್ತು, ಅದೃಷ್ಟ ಮತ್ತು ಶ್ರೀಮಂತಿಕೆ ಇರುವಾಕೆ
ರುಕ್ಮಿಣಿ - ಚಿನ್ನದಿಂದ ಅಲಂಕರಿಸಲಾದ
ಸಾನ್ವಿ - ಕಮಲದ ಹೂವಿನ ಮೇಲೆ ಜನಿಸಿದಾಕೆ
ಸಾನ್ವಿತಾ - ಶಾಂತಿ ಪ್ರೀಯ ಲಕ್ಷ್ಮಿ ದೇವಿ
ಶ್ರೀಜಾ - ಸಂಪತ್ತು ಮತ್ತು ಶ್ರೀಮಂತಿಕೆ
ಶ್ರೇಯಾ - ಸಮೃಧ್ಧಿ ಮತ್ತು ಮಂಗಳಕರ ದೇವಿ
ಶ್ರೀನಿಕಾ - ಕಮಲದ ಹೂವು
ಶುಚಿ - ಶುಧ್ದ, ಪವಿತ್ರ
ಸಿಂಧುಜಾ - ಸಮುದ್ರದ ಮಗಳು
ಸೀತಾ - ರಾಮಾಯಣದಲ್ಲಿನ ವಿಷ್ಣುವಿನ ಅವತಾರ ರಾಮನ ಪತ್ನಿ ಲಕ್ಷ್ಮಿಯ ಅವತಾರ
ಸುದೀಕ್ಷಾ - ಸುಂದರವಾದ ಲಕ್ಷ್ಮಿ
ಸುಧಾ - ಮಕರಂಧ, ಶುದ್ಧ, ಕಲ್ಯಾಣಕರ, ಗಂಗೆಯ ಇನ್ನೊಂದು ಹೆಸರು
ತಾರುಣಿ - ಚಿಕ್ಕ ಹುಡುಗಿ, ತರುಣಿ
ತೇಜಶ್ರೀ- ತೇಜಸ್ಸು ಮತ್ತು ಹೊಳಪು
ತುಳಸಿ - ಗಿಡದ ರೂಪದ ಲಕ್ಷ್ಮಿ ದೇವಿಯ ಅವತಾರ
ವಚಿ - ಅಮೃತದಂತಹ ಮಾತುಳ್ಳವಳು
ವರಲಕ್ಷ್ಮಿ - ಬೇಡಿದ ವರಗಳನ್ನು ನೀಡುವವಳು
ವಿಭಾ - ಬೆಳಕಿನ ಕಿರಣ, ರಾತ್ರಿ, ಚಂದ್ರ, ತೇಜಸ್ಸು, ಸೌಂದರ್ಯ
ವಾಗ್ಮಿ - ಉತ್ತಮ ಮಾತನ್ನು ಹೊಂದಿರುವ ನಿರರ್ಗಳ ಮಾತನಾಡುವ
ವಸುಧಾ - ಭೂತಾಯಿ ಲಕ್ಷ್ಮಿಯ ಇನ್ನೊಂದು ಹೆಸರು
ವಿಷ್ಣುಪ್ರಿಯಾ - ವಿಷ್ಣುವಿನಿಂದ ಪ್ರೀತಿಸಲ್ಪಡುವಾಕೆ



Click it and Unblock the Notifications