Latest Updates
-
ಮಂಗಳ ಗೌರಿ ವ್ರತದ ದಿನ ದಂಪತಿಗಳ ನಡುವೆ ಕಿರಿಕಿರಿ ಬೇಡ: ಪ್ರೀತಿ ಹೆಚ್ಚಿಸಲು ಇಲ್ಲಿದೆ ಬೆಸ್ಟ್ ಟಿಪ್ಸ್ -
ನ್ಯಾಷನಲ್ ಕಪಲ್ಸ್ ಡೇ: ಪ್ರೀತಿಯ ಸಂಭ್ರಮದ ಜೊತೆಗೆ ಡಿಜಿಟಲ್ ಪ್ರೈವೆಸಿ ಮತ್ತು ರೊಮ್ಯಾಂಟಿಕ್ ಡೇಟ್ ಐಡಿಯಾಗಳು -
ವರಮಹಾಲಕ್ಷ್ಮಿ ಹಬ್ಬದ ಸೌಂದರ್ಯಕ್ಕೆ ಸಾಂಪ್ರದಾಯಿಕ ಆಭರಣಗಳ ಮೆರುಗು: ಈ ಬಾರಿಯ ಫ್ಯಾಷನ್ ಟ್ರೆಂಡ್ಸ್ -
ಅಪಾರ್ಟ್ಮೆಂಟ್ನಲ್ಲಿ ಓಣಂ ಸಂಭ್ರಮ: ಮಳೆಗೆ ಹಾಳಾಗದ, ಬಜೆಟ್ ಸ್ನೇಹಿ ಪೂಕಳಂಗೆ ಇಲ್ಲಿದೆ ಸೂಪರ್ ಟಿಪ್ಸ್! -
ವಿಶ್ವ ಛಾಯಾಗ್ರಹಣ ದಿನ: ಮನೆಯಲ್ಲೇ ಫೋಟೋ ಸ್ಟುಡಿಯೋ ಮಾಡಿ, ನಿಮ್ಮ ಗಿಡಗಳ ಫೋಟೋ ವೈರಲ್ ಆಗುವಂತೆ ಕ್ಲಿಕ್ ಮಾಡಿ! -
98% ಅಂಕ ಪಡೆದರೂ ಅಂಗಡಿ ಬಂದ್: FDAಗೆ ಹೈಕೋರ್ಟ್ ತರಾಟೆ, ಕಲಬೆರಕೆ ಸಿಹಿ ಪತ್ತೆಹಚ್ಚುವುದು ಹೇಗೆ? -
BWF ವಿಶ್ವ ಚಾಂಪಿಯನ್ಷಿಪ್ 2026: ಲಕ್ಷ್ಯ ಸೇನ್ ಅಬ್ಬರಕ್ಕೆ ದೆಹಲಿ ಸಜ್ಜು, ಲೈವ್ ಮಿಸ್ ಮಾಡ್ಬೇಡಿ! -
ವಿಶ್ವ ಹಿರಿಯ ನಾಗರಿಕರ ದಿನ: ಪೋಷಕರ ಆರೋಗ್ಯ ಮತ್ತು ಸಮತೋಲನ ಹೆಚ್ಚಿಸುವ ಸರಳ ಬೆಳಗಿನ ವ್ಯಾಯಾಮಗಳು -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಪ್ಪಿಸಲು ಇಲ್ಲಿದೆ 12 ನಿಮಿಷದ ಸೂತ್ರ! -
ಸಿಂಹ ಸಂಕ್ರಾಂತಿ ಹಬ್ಬದ ಸಂಭ್ರಮ: ದಂಪತಿಗಳ ನಡುವಿನ ಜಗಳ ತಡೆಯಲು ಈ 'ಕಪಲ್ ಸ್ಕ್ರಿಪ್ಟ್ಸ್' ಬಳಸಿ!
ಸಿಕ್ಕಾಪಟ್ಟೆ ಸಾಲ ಆಗಿದ್ಯಾ? ಹಾಗಾದ್ರೆ ಈ ಪರಿಹಾರಗಳನ್ನು ಮಾಡಿ!
ಹಣ ಅನ್ನೋದು ಮನುಷ್ಯನಿಗೆ ತುಂಬಾನೇ ಮುಖ್ಯವಾಗುತ್ತದೆ. ನಮ್ಮ ಆರ್ಥಿಕ ಪರಿಸ್ಥಿತಿ ಉತ್ತಮವಾಗಿದ್ರೆ ಮಾತ್ರ ಜೀವನದಲ್ಲಿ ಕೊಂಚ ನೆಮ್ಮದಿ ಸಿಗೋದಕ್ಕೆ ಸಾಧ್ಯ. ಹಾಗಂತ ದುಡ್ಡೇ ಜೀವನ ಅಂತ ಹೇಳೋದಿಕ್ಕಾಗೋದಿಲ್ಲ. ಒಂದು ವೇಳೆ ನಮ್ಮ ಆರ್ಥಿಕ ಪರಿಸ್ಥಿತಿ ಚೆನ್ನಾಗಿಲ್ಲದೇ ಹೋದ್ರೆ ನಾವು ನಾನಾ ರೀತಿಯ ಸಮಸ್ಯೆಗಳಿಂದ ಬಳಲಬೇಕಾಗುತ್ತದೆ. ಇದ್ರಿಂದ ಕೈ ತುಂಬಾ ಸಾಲವೂ ಆಗುತ್ತದೆ.

ಸಾಲವಿದ್ದಾಗ ಜೀವನದಲ್ಲಿ ನೆಮ್ಮದಿ ಅನ್ನೋದೇ ಇರೋದಿಲ್ಲ. ಕೆಲವೊಂದು ಸಲ ನಾವು ಬಯಸದಿದ್ದರೂ ಕೂಡ ನಮಗೆ ತಿಳಿಯದ ಹಾಗೆ ಕೈ ತುಂಬಾ ಸಾಲ ಮಾಡಿಕೊಳ್ಳುತ್ತೇವೆ. ಇದಕ್ಕೆ ಕಾರಣ ಕೆಲವೊಂದು ದೋಷಗಳು ಇದ್ದಾಗ ನಾವು ಈ ರೀತಿ ಸಮಸ್ಯೆಗಳನ್ನು ಎದುರಿಸುವ ಸಾಧ್ಯತೆ ಇರುತ್ತದೆ. ಅಷ್ಟಕ್ಕೂ ನಮ್ಮ ಜೀವನವನ್ನು ಸಾಲ ಮುಕ್ತವಾಗಿಸೋದು ಹೇಗೆ? ಸಂಪತ್ತನ್ನು ಹೆಚ್ಚಿಸಲು ಜ್ಯೋತಿಷ್ಯದಲ್ಲಿರುವ ಪರಿಹಾರಗಳ ಬಗ್ಗೆ ತಿಳಿಯೋಣ.
ಅಶ್ವಥ ವೃಕ್ಷದಿಂದ ಪರಿಹಾರ ಕಂಡುಕೊಳ್ಳಿ!
ಋಣಭಾರದಿಂದ ಮುಕ್ತಿ ಹೊಂದಲು ಶನಿವಾರದಂದು ಸ್ನಾನ ಮಾಡಿ. ಭಕ್ತಿಯಿಂದ ಅಶ್ವಥ ಮರವನ್ನು ಪೂಜಿಸಿ. ನಂತರ ಹಿಟ್ಟಿನಿಂದ ಮಾಡಿದ ದೀಪವನ್ನು ನಾಲ್ಕು ಕಡೆ ಹಚ್ಚಿರಿ. ದೀಪವನ್ನು ಬೆಳಗಿದ ನಂತರ 11 ಪರಿಕ್ರಮವನ್ನು ಮಾಡಿ. ಮತ್ತು ಪರಿಕ್ರಮ ಮಾಡುವಾಗ ನಿಮ್ಮ ಸಮಸ್ಯೆಯನ್ನು ತಿಳಿಸಿ. ಇದರ ನಂತರ ನಿಮ್ಮ ಗಾತ್ರದ ಕಪ್ಪು ದಾರವನ್ನು ತೆಗೆದುಕೊಂಡು ಅದನ್ನು ತೆಂಗಿನಕಾಯಿಯ ಸುತ್ತಲೂ ಸಂಪೂರ್ಣವಾಗಿ ಸುತ್ತಿ ಮತ್ತು ಹರಿಯುವ ನೀರಿನಲ್ಲಿ ತೇಲಿ ಬಿಡಿ. ಹೀಗೆ ಮಾಡುವುದರಿಂದ ಸಾಲವು ಕ್ರಮೇಣ ನಿವಾರಣೆಯಾಗುತ್ತದೆ. ಮತ್ತು ಆರ್ಥಿಕ ಸಮೃದ್ಧಿಯ ಶುಭ ಅವಕಾಶಗಳು ಸೃಷ್ಟಿಯಾಗುತ್ತವೆ.
ವಿಷ್ಣು ಮತ್ತು ಲಕ್ಷ್ಮೀಯನ್ನು ಪೂಜಿಸಿ!
ಸೋಮವಾರ ದಿನ ಒಂದು ಕರವಸ್ತ್ರ, ಬೆಳ್ಳಿಯ ಎಲೆ, ಐದು ಗುಲಾಬಿ ಹೂವುಗಳು, ಸ್ವಲ್ಪ ಅಕ್ಕಿ ಮತ್ತು ಬೆಲ್ಲವನ್ನು ತೆಗೆದುಕೊಂಡು ಭಗವಾನ್ ವಿಷ್ಣು ಮತ್ತು ಲಕ್ಷ್ಮಿ ದೇವಿಯ ದೇವಸ್ಥಾನಕ್ಕೆ ಹೋಗಿ. ಇದರ ನಂತರ ಕರವಸ್ತ್ರವನ್ನು ಭಗವಾನ್ ವಿಷ್ಣು ಮತ್ತು ಲಕ್ಷ್ಮೀ ವಿಗ್ರಹದ ಮುಂದೆ ಇರಿಸಿ ಮತ್ತು ಗಾಯತ್ರಿ ಮಂತ್ರವನ್ನು 21 ಬಾರಿ ಪಠಿಸಿ. ಹಾಗೆಯೇ ಉಳಿದ ವಸ್ತುಗಳನ್ನು ಕರವಸ್ತ್ರದ ಮೇಲೆ ಇರಿಸಿ. ಎಲ್ಲಾ ವಸ್ತುಗಳು ಕರವಸ್ತ್ರದ ಮೇಲೆ ಇಟ್ಟ ಮೇಲೆ ಆ ಎಲ್ಲಾ ವಸ್ತುಗಳನ್ನು ಸಂಗ್ರಹಿಸಿ ಮತ್ತು ಸಾಲ ಪರಿಹಾರಕ್ಕಾಗಿ ದೇವರನ್ನು ಪ್ರಾರ್ಥಿಸಿ. ಸತತ ಏಳು ಸೋಮವಾರಗಳ ಕಾಲ ನೀವು ಈ ಪರಿಹಾರವನ್ನು ಮಾಡುತ್ತಲೇ ಇರಬೇಕು.
ಕೆಂಪು ಬೇಳೆ (Red Rentil)
ಪ್ರತಿದಿನ 50 ಗ್ರಾಂ ಕೆಂಪು ಬೇಳೆಯನ್ನು ದಾನ ಮಾಡಿ ಮತ್ತು ಗಣೇಶನನ್ನು ಪೂಜಿಸಿದ ನಂತರ ಗರಿಕೆ ಮತ್ತು ಮೋದಕವನ್ನು ಅರ್ಪಿಸಿ. ಅಲ್ಲದೆ ಶನಿವಾರದಂದು ಕಪ್ಪು ನಾಯಿಗೆ ಬ್ರೆಡ್ ತಿನ್ನಿಸಿ. ಲಾಲ್ ಕಿತಾಬ್‌ನ ಈ ಪರಿಹಾರವು ನಿಮಗೆ ತುಂಬಾ ಮಂಗಳಕರವಾಗಿದೆ. ಈ ರೀತಿ ಮಾಡೋದ್ರಿಂದ ಪ್ರಗತಿಯ ಹಾದಿಗಳು ಸೃಷ್ಟಿಯಾಗುತ್ತವೆ. ಮತ್ತು ಸಾಲವೂ ಕಡಿಮೆಯಾಗುತ್ತದೆ.
ಹಸುವಿಗೆ ಆಹಾರ ನೀಡಿ!
ಹಸುವಿಗೆ ಆಹಾರವನ್ನು ನೀಡಿದ್ರೆ ನಮ್ಮೆಲ್ಲಾ ರೀತಿಯ ದೋಷಗಳು ಪರಿಹಾರವಾಗುತ್ತೆ ಎನ್ನುವ ನಂಬಿಕೆಯಿದೆ. 5.5 ಕಿಲೋ ಹಿಟ್ಟಿನಲ್ಲಿ 1.25 ಕಿಲೋ ಬೆಲ್ಲವನ್ನು ಬೆರೆಸಿ ಅವುಗಳ ರೊಟ್ಟಿಗಳನ್ನು ತಯಾರಿಸಿ ನಂತರ ಆ ರೊಟ್ಟಿಗಳನ್ನು ಗುರುವಾರ ಸಂಜೆ ಹಸುವಿಗೆ ತಿನ್ನಿಸಿ. ಸತತ ಮೂರು ಗುರುವಾರಗಳ ಕಾಲ ಈ ಪರಿಹಾರವನ್ನು ಮಾಡುತ್ತಾ ಬನ್ನಿ. ಹೀಗೆ ಮಾಡುವುದರಿಂದ ಸಾಲದ ಸಮಸ್ಯೆಯಿಂದ ಮುಕ್ತಿ ಸಿಗುತ್ತದೆ. ಮತ್ತು ಬಡತನ ನಾಶವಾಗುತ್ತದೆ.
ಸಾಲದಿಂದ ಮುಕ್ತಿ ಪಡೆಯುವುದಕ್ಕಾಗಿ ಈ ರೀತಿಯ ಪರಿಹಾರಗಳನ್ನು ಕೈಗೊಳ್ಳಬಹುದು. ಖಂಡಿತ ಕೆಲವೇ ದಿನಗಳಲ್ಲಿ ನಿಮ್ಮೆಲ್ಲಾ ಸಮಸ್ಯೆಗಳು ನಿವಾರಣೆಯಾಗುತ್ತದೆ.



Click it and Unblock the Notifications