Latest Updates
-
ಅಕ್ಷಯ ತೃತೀಯ ಮದುವೆ: ಬಾಲ್ಯ ವಿವಾಹ ತಡೆಯಲು ನೀವೇನು ಮಾಡಬೇಕು? -
ಬಾಲ್ಕನಿ ಗಿಡಗಳು ಒಣಗುತ್ತಿವೆಯೇ? ಈ ಟಿಪ್ಸ್ ಪಾಲಿಸಿ! -
ಬಿಸಿಲಿನ ಬೇಗೆಯಿಂದ ಪಾರಾಗಲು ಈ ಆಹಾರಗಳೇ ನಿಮ್ಮ ರಕ್ಷಕ -
ಅಕ್ಷಯ ತೃತೀಯ 2026: ಈ ಹೊಸ ಟ್ರೆಂಡ್ಸ್ ಮಿಸ್ ಮಾಡ್ಬೇಡಿ! -
ಲಿವರ್ ಆರೋಗ್ಯಕ್ಕೆ ಈ ಸರಳ ಅಭ್ಯಾಸಗಳು ನಿಮ್ಮನ್ನು ಕಾಪಾಡುತ್ತವೆ -
ಅಕ್ಷಯ ತೃತೀಯ: ಚಿನ್ನದ ಖರೀದಿ ಮತ್ತು ನಿಶ್ಚಿತಾರ್ಥಕ್ಕೆ ಹೀಗೆ ಪ್ಲಾನ್ ಮಾಡಿ -
ದೆಹಲಿ ಧೂಳು ತಡೆಯಲು ನಿಮ್ಮ ಮನೆಯನ್ನು ಹೀಗೆ ರಕ್ಷಿಸಿಕೊಳ್ಳಿ -
FSSAI ದಾಳಿ: ವಿಷಕಾರಿ ಹಣ್ಣುಗಳನ್ನು ಗುರುತಿಸುವುದು ಹೇಗೆ ಗೊತ್ತಾ? -
ಅಕ್ಷಯ ತೃತೀಯ ಸಂಭ್ರಮ: ಈ ಟ್ರೆಂಡಿ ಆಭರಣಗಳೇ ಈಗ ಹವಾ -
ಹೀಟ್ವೇವ್ ಎಚ್ಚರಿಕೆ: ಬಿಸಿಲಿನ ತಾಪದಿಂದ ಪಾರಾಗಲು ಈ ಟಿಪ್ಸ್ ಫಾಲೋ ಮಾಡಿ
ಆಷಾಢದಲ್ಲಿ ಮುಟ್ಟಾಗುವ ಕಾಮಾಕ್ಯ ದೇವಿ! ದೇಶದ 51 ಶಕ್ತಿ ಪೀಠಗಳಲ್ಲಿ ಅತ್ಯಂತ ಶಕ್ತಿಯುತವಾದ ಕ್ಷೇತ್ರವಿದು
ಭಾರತ ಪುಣ್ಯ ಭೂಮಿ ದೇವ-ದೇವತೆಗಳ ನಾಡು, ಇಲ್ಲಿಯ ಒಂದೊಂದು ಪುಣ್ಯಕ್ಷೇತ್ರವೂ ಅದರದ್ದೇ ಆದ ಮಹತ್ವವೊಂದಿದೆ. ಭಾರತದಲ್ಲಿ 51 ಶಕ್ತಿ ಪೀಠಗಳಿವೆ, ಅದರಲ್ಲೊಂದು ಕಾಮಾಖ್ಯ ದೇವಿಯ ದೇವಾಲಯ. ಅಸ್ಸಾಂ ಗುವಾಹಟಿಯ ಬೆಟ್ಟದ ಮೇಲಿರುವ ಈ ದೇವಾಲಯ ದೇಶದಲ್ಲಿರುವ ಇತರ ದೇವಾಲಯಗಳಿಗಿಂತ ತುಂಬಾನೇ ವಿಭಿನ್ನ. ಇಲ್ಲಿಯ ದೇವಿ ವರ್ಷಕ್ಕೊಮ್ಮೆ ಅಂದರೆ ಆಷಾಢ ಮಾಸದಲ್ಲಿ ಮುಟ್ಟಾಗಿತ್ತಾಳೆ! ಈ ಸಮಯದಲ್ಲಿ ಅಂಬುಬಾಚಿ ಹಬ್ಬವನ್ನು ಆಚರಿಸಲಾಗುವುದು. ದೇವಿ ಮುಟ್ಟಾದಾಗ ಆ ಭಾಗದಲ್ಲಿ ಹರಿಯುವ ನದಿಯ ನೀರು ಕೂಡ ಕೆಂಪಾಗಿರುತ್ತದೆ, ಅಲ್ಲೊಂದು ಝರಿ, ಅದ ಕೂಡ ಕೆಂಪು ಬಣ್ಣಕ್ಕೆ ತಿರುಗುವುದು.
ಆಷಾಢದಲ್ಲಿ ಆಚರಿಸುವ ಅಂಬುಬಾಚಿ ಹಬ್ಬ
ಈ ಸಮಯದಲ್ಲಿ ಕಾಮಾಖ್ಯ ದೇವಿ ಮುಟ್ಟಾಗುತ್ತಾಳೆ. ಈ ಸಮಯದಲ್ಲಿ 3 ದಿನ ದೇವಾಲಯದ ಬಾಗಿಲುಗಳು ಸ್ವಯಂ ಮುಚ್ಚಿಕೊಳ್ಳುತ್ತದೆ. ಭಕ್ತರು ಆಕೆಯ ದರ್ಶನಕ್ಕಾಗಿ ಹೊರಗಡೆ ಮಂತ್ರವನ್ನು ಹೇಳುತ್ತಾ ಕಾಯುತ್ತಿರುತ್ತಾರೆ. ದೇವಿ ಮುಟ್ಟಾಗುವ ಸಮಯದಲ್ಲಿ ಇಲ್ಲಿ ಪುರುಷರಿಗೆ ಪ್ರವೇಶವಿರುವುದಿಲ್ಲ. ದೇವಾಲಯದ ಬಾಗಿಲು ಮುಚ್ಚುವ ಮೊದಲು ದೇವಾಲಯದ ಒಳಗಡೆ ಬಿಳಿ ಬಟ್ಟೆಯನ್ನು ದೇವಿ ವಿಗ್ರಹಕ್ಕೆ ಹಾಗೂ ಕೆಳಗಡೆ ಹಾಕಲಾಗಿರುತ್ತದೆ. ಆದರೆ ಬಾಗಿಲು ತೆರೆದಾಗ ಆ ಬಟ್ಟೆಗಳು ಕೆಂಪು ಬಣ್ಣಕ್ಕೆ ತಿರುಗಿರುತ್ತದೆ. ಈ ಸಮಯದಲ್ಲಿ ಬ್ರಹ್ಮಪುತ್ರ ನದಿಯ ನೀರು ಮೂರು ದಿನಗಳವರೆಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಈ ಪವಾಡವೇ ದೇವಿ ಶಕ್ತಿಯ ಮಹಿಮೆಯನ್ನು ತಿಳಿಸುವುದರಿಂದ ಇಲ್ಲಿಗೆ ಸಾವಿರಾರು ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ಇಲ್ಲಿಗೆ ಬಂದ ಭಕ್ತಾದಿಗಳಿಗೆ ದೇವಿಯ ಮುಟ್ಟಿನ ಬಟ್ಟೆ ಅದನ್ನು ಅಂಬುಬಾಚಿ ಎಂದು ಕರೆಯಲಾಗುವುದು, ಅದನ್ನೇ ಪ್ರಸಾದವನ್ನಾಗಿ ನೀಡಲಾಗುವುದು.

4ನೇ ದಿನದ ನಂತರ ದೇವಿಯ ದರ್ಶನ ಸಿಗಲಿದೆ
ದೇವಿಗೆ ಮೂರು ದಿನ ರಕ್ತಸ್ರಾವವಾಗುವುದು, ನಾಲ್ಕನೇ ದಿನ ದೇವಿಯ ವಿಗ್ರಹಕ್ಕೆ ಸ್ನಾನ ಮಾಡಿಸಿ ನಂತರ ಭಕ್ತಾದಿಗಳ ದರ್ಶನಕ್ಕೆ ಅವಕಾಶ ಮಾಡಿಕೊಡಲಾಗುವುದು.
ಇಲ್ಲಿ ಯೋನಿಯನ್ನು ಪೂಜಿಸಲಾಗುವುದು
ಈ ದೇವಾಲಯದಲ್ಲಿ ದೇವರ ಮೂರ್ತಿಯಿಲ್ಲ, ಬದಲಿಗೆ ಯೋನಿ ಆಕಾರದಲ್ಲಿ ಕಲ್ಲಿದೆ, ಅದನ್ನು ಪೂಜಿಸಲಾಗುವುದು. ಇಲ್ಲಿ ಮಾತಾ ಸತಿಯ ಯೋನಿ ಭಾಗವು ಬಿದ್ದಿದೆ, ಆದ್ದರಿಂದ ಇಲ್ಲಿ ದೇವಿಯ ಯೋನಿ ಭಾಗವನ್ನು ಮಾತ್ರ ಪೂಜಿಸಲಾಗುತ್ತದೆ. ಭಕ್ತರು ಬಂದು ಈ ಯೋನಿ ಕಲ್ಲನ್ನು ಸ್ಪರ್ಶಿಸಿ ದೇವಿಯ ಅನುಗ್ರಹ ಪಡೆಯುತ್ತಾರೆ. ಈ ಶಕ್ತಿಪೀಠದಲ್ಲಿ ಮಾತೃದೇವಿಯನ್ನು 64 ಯೋಗಿನಿಯರು ಮತ್ತು ಹತ್ತು ಮಹಾವಿದ್ಯೆಗಳೊಂದಿಗೆ ಪ್ರತಿಷ್ಠಾಪಿಸಲಾಗಿದೆ. ಭುವನೇಶ್ವರಿ, ಬಾಗ್ಲಾ, ಚಿನ್ನ ಮಾಸ್ತಿಕ, ಕಾಳಿ, ತಾರಾ, ಮಾತಂಗಿ, ಕಮಲಾ, ಸರಸ್ವತಿ, ಧೂಮಾವತಿ ಮತ್ತು ಭೈರವಿ ಒಂದೇ ಸ್ಥಳದಲ್ಲಿ ಕುಳಿತಿದ್ದಾರೆ. ಎಲ್ಲಾ ಶಕ್ತಿಪೀಠಗಳು ತಮ್ಮದೇ ಆದ ಪ್ರಾಮುಖ್ಯತೆಯನ್ನು ಹೊಂದಿದ್ದರೂ, ಕಾಮಾಖ್ಯ ಶಕ್ತಿಪೀಠವನ್ನು ಇತರ ಎಲ್ಲಾ ಶಕ್ತಿ ಪೀಠಕ್ಕಿಂತ ಅತ್ಯಂತ ಶಕ್ತಿಯುತವಾದದ್ದು ಎಂದು ಪರಿಗಣಿಸಲಾಗಿದೆ.
ಯಾವಾಗಲೂ ಉರಿಯುತ್ತಿರುತ್ತದೆ ಇಲ್ಲಿಯ ಅಖಂಡ ದೀಪ
ಈ ದೇವಾಲಯದಲ್ಲಿ ಗುಹೆಯಲ್ಲಿ ಅಖಂಡ ದೀಪ ಯಾವಾಗಲೂ ಉರಿಯುತ್ತಿರುತ್ತದೆ. ಗುಹೆಯ 10 ಮೆಟ್ಟಿಲುಗಳ ಕೆಳಗಡೆ ಯೋನಿಯ ರೂಪದ ಕಲ್ಲಿದೆ. ಇಲ್ಲಿಗೆ ಬರುವ ಭಕ್ತರು ಮೊದಲು ಕಾಮೇಶ್ವರಿ ದೇವಿ ಮತ್ತು ಕಾಮೇಶ್ವರ ಶಿವನ ದೇವಾಲಯಕ್ಕೆ ಹೋಗಿ ನಂತರ ಇಲ್ಲಿಗೆ ಬರುತ್ತಾರೆ. ಅಂಬುಬಾಚಿ ಮೇಳಕ್ಕೆ ಬರುವ ಭಕ್ತರಿಗೆ ಅಂಬುಬಾಚಿ ವಸ್ತ್ರ ನೀಡಲಾಗುವುದು.
ಅಂಬುಬಾಚಿ ಬಟ್ಟೆಯ ಮಹತ್ವ
ಪ್ರಸಾದ ರೂಪವಾಗಿ ಅಂಬುಬಾಚಿ ಬಟ್ಟೆಯನ್ನು ಪಡೆಯುವುದರಿಂದ ಭಕ್ತರ ಎಲ್ಲಾ ಇಷ್ಟಾರ್ಥಗಳು ನೆರವೇರುತ್ತವೆ ಎಂದು ಹೇಳಲಾಗುತ್ತದೆ. ಅಂಬುಬಾಚಿ ಉತ್ಸವದ ಹೊರತಾಗಿ, ಕಾಮಾಖ್ಯದಲ್ಲಿ ಇನ್ನೂ ಎರಡು ಉತ್ಸವಗಳನ್ನು ಆಚರಿಸಲಾಗುತ್ತದೆ, ಅವುಗಳಲ್ಲಿ ಒಂದು 'ದೇವಧ್ವನಿ', ಇದನ್ನು 'ದೇವಧ್ವನಿ' ಎಂದು ಕರೆಯಲಾಗುತ್ತದೆ, ಇದರಲ್ಲಿ ವಾದ್ಯಗಳೊಂದಿಗೆ ನೃತ್ಯವನ್ನು ಮಾಡಲಾಗುತ್ತದೆ. ಪುಷ್ಯ ಮಾಸದ ಕೃಷ್ಣ ಪಕ್ಷದ ಪುಷ್ಯ ನಕ್ಷತ್ರದಲ್ಲಿ ಪುಷ್ಯಾಭಿಷೇಕ ಉತ್ಸವವನ್ನು ಆಚರಿಸಲಾಗುತ್ತದೆ, ಇದರಲ್ಲಿ ಕಾಮೇಶ್ವರನ ಚಲಿಸುವ ವಿಗ್ರಹವನ್ನು ಕಾಮೇಶ್ವರ ದೇವಾಲಯದಲ್ಲಿ ಪ್ರತಿಷ್ಠಾಪಿಸಲಾಗುತ್ತದೆ. ಎರಡನೆಯ ದಿನ, ಎರಡೂ ವಿಗ್ರಹಗಳ ಹರ-ಗೌರಿ ವಿವಾಹ ಸಮಾರಂಭವನ್ನು ಭಗವತಿಯ ಪಂಚರತ್ನ ದೇವಾಲಯದಲ್ಲಿ ಆಚರಿಸಲಾಗುವುದು. ಮಹಾಕುಂಭ ಎಂಬ ಈ ಜಾತ್ರೆಯಲ್ಲಿ ತಾಂತ್ರಿಕ ಶಕ್ತಿಗಳಿಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗುತ್ತದೆ. ಈ ಸಮಯದಲ್ಲಿ ಇಲ್ಲಿಗೆ ನೂರಾರು ತಂತ್ರಿಗಳು ಬಂದು ತಾವು ಕಲಿತ ತಂತ್ರಶಕ್ತಿಯನ್ನು ಪ್ರದರ್ಶಿಸುತ್ತಾರೆ.



Click it and Unblock the Notifications











