Latest Updates
-
ಅಡುಗೆ ಎಣ್ಣೆ ಬೆಲೆ ಏರಿಕೆ: ಬಜೆಟ್ ಮತ್ತು ಆರೋಗ್ಯ ಕಾಪಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಯುಪಿಐನಲ್ಲಿ ಎಐ ಕ್ರಾಂತಿ: ಇನ್ಮುಂದೆ ನಿಮ್ಮ ಬಿಲ್ ಪಾವತಿಗಳನ್ನು ಡಿಜಿಟಲ್ ಏಜೆಂಟ್ ನೋಡಿಕೊಳ್ಳಲಿದೆ! -
ಉತ್ತರಾಖಂಡದಲ್ಲಿ ಆರೆಂಜ್ ಅಲರ್ಟ್: ಹೋಟೆಲ್ ರೂಮ್ನಲ್ಲೇ ಫಿಟ್ ಆಗಿರಲು ಈ ಸರಳ ವ್ಯಾಯಾಮಗಳನ್ನು ಮಾಡಿ! -
UGC-NET ಪರೀಕ್ಷೆಯ ಗೊಂದಲ: ವಿದ್ಯಾರ್ಥಿಗಳ ಆತಂಕ ದೂರ ಮಾಡಲು ಪೋಷಕರಿಗೆ ಇಲ್ಲಿದೆ 48 ಗಂಟೆಗಳ ಸ್ಟಡಿ-ರಿಸೆಟ್ ಪ್ಲಾನ್! -
ದೆಹಲಿ ಮಳೆ: ಗುಡುಗು-ಮಿಂಚಿನಿಂದ ನಿಮ್ಮ ಎಲೆಕ್ಟ್ರಾನಿಕ್ ವಸ್ತುಗಳನ್ನು ರಕ್ಷಿಸಲು ಈ 15 ನಿಮಿಷದ ಟಿಪ್ಸ್ ಪಾಲಿಸಿ! -
ಎನರ್ಜಿ ಡ್ರಿಂಕ್ಸ್ ಕುಡಿಯುವ ಮುನ್ನ ಎಚ್ಚರ! FSSAI ಹೊಸ ನಿಯಮ ಮತ್ತು ಆರೋಗ್ಯಕರ ಪರ್ಯಾಯಗಳು -
ಗುರುಗ್ರಾಮದಲ್ಲಿ ವರುಣನ ಆರ್ಭಟ: ಕಚೇರಿಗೆ ಹೋಗ್ಬೇಡಿ, ಮನೆಯಿಂದಲೇ ಕೆಲಸ ಮಾಡಿ - ಪೊಲೀಸರ ಮಹತ್ವದ ಸೂಚನೆ -
ಮಳೆಗಾಲದ ಜಡತ್ವಕ್ಕೆ ಗುಡ್ ಬೈ: ಮುಂಬೈ-ಪುಣೆ ಜನರಿಗಾಗಿ 10 ನಿಮಿಷದ ಸರಳ ವ್ಯಾಯಾಮಗಳು -
ಮುಂಬೈ ಮಳೆ ಆರ್ಭಟ: ಸಂಗಾತಿಯ ಸುರಕ್ಷತೆಗಾಗಿ ನೀವು ಮಾಡಬೇಕಾದ ಪ್ರಮುಖ ಕೆಲಸಗಳಿವು! -
ಭಾರಿ ಮಳೆ ಎಚ್ಚರಿಕೆ: ನಿಮ್ಮ ಮನೆಯ ಮಳೆನೀರು ಕೊಯ್ಲು ವ್ಯವಸ್ಥೆ ಹಾಳಾಗದಂತೆ ತಡೆಯುವುದು ಹೇಗೆ?
ಹಿಂದೂಗಳಿಗೆ ಈ 7 ಕಾರಣಕ್ಕೆ ಆಷಾಢ ಮಾಸ ತುಂಬಾನೇ ಮಹತ್ವದ್ದಾಗಿದೆ
ಆಷಾಢ ಶುರುವಾಗಿದೆ, ಪ್ರತಿವರ್ಷದಂತೆ ಈ ವರ್ಷದ ಆಷಾಢವಿಲ್ಲ ಎಂದು ರೈತರು ಮಾತನಾಡಿಕೊಳ್ಳುತ್ತಿದ್ದಾರೆ, ಹಿರಿಯರು ಇದೇನು ಆಷಾಢದಲ್ಲಿ ಇಷ್ಟೊಂದು ಉರಿ ಬಿಸಿಲು ಬಿದ್ರೆ ಗತಿಯೇನು? ಎಂದು ಕೇಳುತ್ತಿದ್ದಾರೆ. ಕರ್ನಾಟಕಕ್ಕೆ ಇನ್ನೂ ಮುಂಗಾರಿನ ಆಗಮನವಾಗಿಲ್ಲ, ದೇಶದ ಕೆಲವು ಕಡೆ ಚಂಡಾಮಾರುತದಿಂದಾಗಿ ಪ್ರಳಯ ಸೃಷ್ಟಿಯಾಗಿದೆ.
ಆಷಾಢ ತಿಂಗಳು ಹಲವಾರು ವಿಷಯಗಳಿಂದ ಪ್ರಮುಖವಾದ ತಿಂಗಳಾಗಿದೆ, ನಾವು ತಿನ್ನುವ ಬೆಳೆ ಬೆಳೆಯುವವರಿಗೆ ಈ ತಿಂಗಳು ತುಂಬಾನೇ ಮುಖ್ಯ ಅಲ್ಲದೆ ಈ ತಿಂಗಳಿನಲ್ಲಿ ಧಾರ್ಮಿಕವಾಗಿಯೂ ಹಲವಾರು ಮಹತ್ವವಿದೆ. ನಾವಿಲ್ಲಿ ಆಷಾಢ ಮಾಸದ 7 ಧಾರ್ಮಿಕ ಮಹತ್ವದ ಬಗ್ಗೆ ಹೇಳಿದ್ದೇವೆ ನೋಡಿ:

1. ಚಾತುರ್ಮಾಸ್ಯ: ಆಷಾಢದಲ್ಲಿ ದೇವಶಯನಿ ಏಕಾದಶಿ ಬರುತ್ತದೆ. ಇಲ್ಲಿಂದ ಚಾತುರ್ಮಾಸ್ಯ ಪ್ರಾರಂಭ. ನಾಲ್ಕು ತಿಂಗಳು ಶ್ರೀವಿಷ್ಣು ಯೋಗ ನಿದ್ರೆಯಲ್ಲಿರುತ್ತದೆ. ಈ ಸಮಯದಲ್ಲಿ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.
2. ಪೂಜೆ, ದಾನದ ಮಹತ್ವ: ಆಷಾಢದಲ್ಲಿ ಯಾವುದೇ ಶುಭ ಕಾರ್ಯ ಮಾಡದಿದ್ದರೂ ಪೂಜೆಗೆ ತುಂಬಾನೇ ಮಹತ್ವವಿದೆ. ಈ ತಿಂಗಳಿನಲ್ಲಿ ಮಾಡುವ ಪೂಜೆ ಮತ್ತು ದಾನದಿಂದ ಹೆಚ್ಚಿನ ಫಲ ಪಡೆಯುತ್ತೀರಿ. ಆಷಾಢ ಮಾಸದಲ್ಲಿ ವಿಷ್ಣುವನ್ನು ಪೂಜಿಸುವುದರಿಂದ ಪುಣ್ಯ ಸಿಗುತ್ತದೆ. ದೇವಶಯನಿ ದಿನ ನೆಲ್ಲಿಕಾಯಿ ದಾನ ಮಾಡಿದರೆ ಒಳ್ಳೆಯದು ಎಂಬ ನಂಬಿಕೆ ಇದೆ.
3. ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ: ಆಷಾಢ ಪ್ರಾರಂಭವಾದ ಮೇಲೆ ನಾಲ್ಕು ತಿಂಗಳವರೆಗೆ ಯಾವುದೇ ಶುಭ ಕಾರ್ಯ ನಡೆಯುವುದಿಲ್ಲ. ಮದುವೆ, ನಾಮಕರಣ, ಉಪನಯನ, ಗೃಹ ಪ್ರವೇಶ ಸೇರಿದಂತೆ ಯಾವುದೇ ಶುಭ ಕಾರ್ಯ ಮಾಡುವುದಿಲ್ಲ.
4. ಧಾರ್ಮಿಕ ಕಾರ್ಯಗಳಿಗೆ ಮಹತ್ವ: ಸಂತರು, ಸಂನ್ಯಾಸಿಗಳು ಒಂದು ಕಡೆ ನೆಲೆ ನಿಲ್ಲುವುದಿಲ್ಲ, ಒಂದು ಕಡೆಯಿಂದ ಮತ್ತೊಂದು ಕಡೆಗೆ ಸಂಚರಿಸುತ್ತಲೇ ಇರುತ್ತಾರೆ. ಆದರೆ ಆಷಾಢ ತಿಂಗಳಿನಲ್ಲಿ ಪ್ರಯಾಣ ಮಾಡುವುದಿಲ್ಲ. ಯಾವುದಾದರೂ ದೇವಾಸ್ಥಾನ ಅಥವಾ ಮಠಗಳಲ್ಲಿ ನಿಂತು ಧ್ಯಾನ, ಸಾಧನೆ ಮಾಡುತ್ತಾರೆ. ಕೆಲವರು ಈ ಸಮಯದಲ್ಲಿ ತಪಸ್ಸು ಕೂಡ ಮಾಡುತ್ತಾರೆ. ಇನ್ನು ಪೂಜೆ-ಕಾರ್ಯಗಳಿಗೆ ಈ ತಿಂಗಳು ಶುಭವಾಗಿದೆ.
5. ಇಷ್ಟಾರ್ಥಗಳು ನೆರವೇರುವುದು: ಈ ತಿಂಗಳನ್ನು ಇಷ್ಟಾರ್ಥಗಳ ಈಡೇರಿಕೆಯ ತಿಂಗಳು ಎಂದೂ ಕರೆಯುತ್ತಾರೆ. ಈ ಮಾಸದಲ್ಲಿ ಏನು ಬಯಸಿದರೂ ಅದು ನೆರವೇರುತ್ತದೆ. ಆಷಾಢ ಮಾಸದ ಹುಣ್ಣಿಮೆಯಂದು ಗುರು ಪೂರ್ಣಿಮೆಯ ದಿನ ಪೂಜೆಗಳು, ಯಾಗಗಳನ್ನು ಮಾಡಿದರೆ ಒಳ್ಳೆಯದು.
6. ಗುಪ್ತ ನವರಾತ್ರಿಯ ತಿಂಗಳು: ವರ್ಷದಲ್ಲಿ ನಾಲ್ಕು ನವರಾತ್ರಿಗಳು ಬರುತ್ತವೆ:- ಮಾಘ, ಚೈತ್ರ, ಆಷಾಢ ಮತ್ತು ಅಶ್ವಿನ್. ಚೈತ್ರ ಮಾಸದ ನವರಾತ್ರಿಯನ್ನು ವಸಂತ ನವರಾತ್ರಿ ಎಂದು ಕರೆಯಲಾಗುತ್ತದೆ, ಅಶ್ವಿನ್ ಮಾಸದ ನವರಾತ್ರಿಯನ್ನು ಶಾರದೀಯ ನವರಾತ್ರಿ ಎಂದು ಕರೆಯಲಾಗುವುದು. ಆಷಾಢ ಮತ್ತು ಮಾಘ ಮಾಸದ ಉಳಿದ ಎರಡು ನವರಾತ್ರಿಗಳನ್ನು ಗುಪ್ತ ನವರಾತ್ರಿ ಎಂದು ಕರೆಯಲಾಗುತ್ತದೆ. ಆಷಾಢ ಮಾಸದಲ್ಲಿ ತಂತ್ರ ಮತ್ತು ಶಕ್ತಿ ಪೂಜೆಗೆ ಹೆಚ್ಚಿನ ಗಮನಹರಿಸಲಾಗುವುದು.
7. ಮಂಗಳ ಮತ್ತು ಸೂರ್ಯನ ಆರಾಧನೆ: ಈ ಮಾಸದಲ್ಲಿ ವಿಷ್ಣು ಹಾಗೂ ಜಲದೇವರ ಆರಾಧನೆ ಮಾಡುವುದರಿಂದ ಸಂಪತ್ತು ಹೆಚ್ಚಿಲಿದೆ. ಈ ತಿಂಗಳಿನಲ್ಲಿ ಆಷಾಢ ಶುಕ್ರವಾರ ಲಕ್ಷ್ಮಿಗೆ ವಿಶೇಷ ಪೂಜೆ ಸಲ್ಲಿಸಲಾಗುವುದು.



Click it and Unblock the Notifications