Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಹುಷಾರ್.. ಮನೆಯ ಮುಖ್ಯ ದ್ವಾರದ ಬಳಿ ಈ ವಸ್ತುಗಳನ್ನು ಇಡಲೇಬೇಡಿ! ಲಕ್ಷ್ಮಿ ಬರಲ್ಲ, ದಾರಿದ್ರ್ಯ ಖಚಿತ
ಎಚ್ಚರ.. ಎಚ್ಚರ..! ಮನೆಯ ಮುಖ್ಯ ದ್ವಾರದ ಬಳಿ ಈ ವಸ್ತುಗಳನ್ನು ಇಡಲೇ ಬೇಡಿ. ಇಲ್ಲದಿದ್ದರೆ ದಾರಿದ್ರ್ಯ ಗ್ಯಾರಂಟಿ. ನಿಮ್ಮ ಮನೆಗೆ ಲಕ್ಷ್ಮಿ ಬರದೇ ಇರಲು ಇದೇ ಕಾರಣ. ಹೌದು, ಮನೆಯ ಮುಖ್ಯ ದ್ವಾರಕ್ಕೆ (Main Entrance) ಅತಿ ಹೆಚ್ಚಿನ ಮಹತ್ವವಿದೆ. ವಾಸ್ತು ಶಾಸ್ತ್ರದಲ್ಲಿ ಇದು ಕೇವಲ ಪ್ರವೇಶ ಮಾರ್ಗವಾಗಿರದೆ, ಅದೃಷ್ಟ, ಸಮೃದ್ಧಿ ಮತ್ತು ಸಕಾರಾತ್ಮಕ ಶಕ್ತಿಗಳ ಆಗಮನಕ್ಕೆ ಪ್ರಮುಖ ಕೇಂದ್ರಬಿಂದುವಾಗಿದೆ. ಈ ದ್ವಾರವನ್ನು 'ಸಿಂಹ ದ್ವಾರ' ಎಂದೂ ಕರೆಯಲಾಗುತ್ತದೆ.
ವಾಸ್ತು ಪ್ರಕಾರ, ದೈವಿಕ ಶಕ್ತಿಗಳನ್ನು ಸ್ವಾಗತಿಸಲು ಮುಖ್ಯ ದ್ವಾರವು (Main Door Vastu) ಅಡೆತಡೆಗಳಿಲ್ಲದೆ ಶುದ್ಧವಾಗಿರಬೇಕು. ಇಲ್ಲಿ ಕೆಲವು ವಸ್ತುಗಳನ್ನು ಇಡಬಾರದು, ಇಲ್ಲವಾದರೆ ಅದು ಲಕ್ಷ್ಮಿ ದೇವಿಗೆ ಅವಮಾನವೆಸಗಿದಂತೆ ಮತ್ತು ನಕಾರಾತ್ಮಕ ಶಕ್ತಿಯನ್ನು ಆಕರ್ಷಿಸುತ್ತದೆ.

ನಮ್ಮ ವೈಯಕ್ತಿಕ ಸುಖ-ಶಾಂತಿ ಹಾಗೂ ಆರ್ಥಿಕ ಪ್ರಗತಿಯು ಮನೆಯ ವಾತಾವರಣದ ಮೇಲೆ ಅವಲಂಬಿತವಾಗಿರುತ್ತದೆ. ಮುಖ್ಯ ದ್ವಾರದ (Entrance) ಬಳಿ ಅಶುಭ ವಸ್ತುಗಳಿದ್ದರೆ, ಅದು ಕುಟುಂಬ ಸದಸ್ಯರ ಜೀವನದ ಮೇಲೆ ಗಂಭೀರ ಪರಿಣಾಮ ಬೀರಬಹುದು. ಯಾವೆಲ್ಲಾ ವಸ್ತುಗಳನ್ನು ಮುಖ್ಯ ದ್ವಾರದಲ್ಲಿ (Vastu Tips for Main Door) ಇಡಬಾರದು ಎಂಬ ಬಗ್ಗೆ ಈ ಲೇಖನದಲ್ಲಿ ತಿಳಿಸಲಾಗಿದೆ.
ಪೊರಕೆ ಹಾಗೂ ಕಸದ ಬುಟ್ಟಿ
ಹಿಂದೂ ಸಂಸ್ಕೃತಿಯಲ್ಲಿ ಪೊರಕೆಯನ್ನು ಲಕ್ಷ್ಮಿ ದೇವಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಆದರೂ, ಇದನ್ನು ಮುಖ್ಯ ದ್ವಾರದ ಬಳಿ ಇಡುವುದು ಅಶುಭ. ಕಸ ಗುಡಿಸುವ ಈ ವಸ್ತುವನ್ನು ಪ್ರವೇಶ ದ್ವಾರದಲ್ಲಿಟ್ಟರೆ, ಮನೆಗೆ ಬರಬಹುದಾದ ಸಕಾರಾತ್ಮಕ ಶಕ್ತಿ ಹಿಂತಿರುಗುತ್ತದೆ ಮತ್ತು ನಕಾರಾತ್ಮಕ ಶಕ್ತಿಯನ್ನು ಸೆಳೆಯುತ್ತದೆ.
ಪೊರಕೆ ಮತ್ತು ಕಸದ ಬುಟ್ಟಿಯನ್ನು ಮುಖ್ಯ ದ್ವಾರದ ಬಳಿ ಇಡುವುದರಿಂದ ಆರ್ಥಿಕ ಸಮಸ್ಯೆಗಳು ಎದುರಾಗುತ್ತವೆ. ಲಕ್ಷ್ಮಿ ದೇವಿಯು ಅಂತಹ ಮನೆಗೆ ಪ್ರವೇಶಿಸಲು ಇಷ್ಟಪಡುವುದಿಲ್ಲ. ಇದರಿಂದ ಮನೆಯಲ್ಲಿ ಹಣದ ಕೊರತೆ ಉಂಟಾಗಬಹುದು.
ಚಪ್ಪಲಿ ಸ್ಟ್ಯಾಂಡ್
ಅನೇಕ ಮನೆಗಳಲ್ಲಿ ಅನುಕೂಲಕ್ಕಾಗಿ ಮುಖ್ಯ ದ್ವಾರದ ಬಳಿಯೇ ಚಪ್ಪಲಿ ಸ್ಟ್ಯಾಂಡ್ ಇರುವುದು ಸಾಮಾನ್ಯ. ಆದರೆ, ವಾಸ್ತು ಪ್ರಕಾರ ಇದು ದೊಡ್ಡ ದೋಷ. ದ್ವಾರ ಯಾವಾಗಲೂ ಶುದ್ಧವಾಗಿರಬೇಕು. ಕೊಳಕು ಚಪ್ಪಲಿಗಳು ಧನಾತ್ಮಕ ಶಕ್ತಿಯ ಹರಿವನ್ನು ತಡೆಯುತ್ತವೆ. ಇದು ಮನೆಯ ಪ್ರಗತಿಯನ್ನು ಕುಂಠಿತಗೊಳಿಸುತ್ತದೆ.
ಪ್ರವೇಶ ದ್ವಾರದ ಎದುರು ಚಪ್ಪಲಿಗಳು ಇರುವುದರಿಂದ ಕುಟುಂಬದ ಯಜಮಾನನಿಗೆ ಆರ್ಥಿಕ ಸಮಸ್ಯೆಗಳು ಎದುರಾಗಬಹುದು. ಇದು ಸಾಲದ ಹೊರೆ ಹೆಚ್ಚಿಸಲು ಕಾರಣವಾಗಬಹುದು. ಹೀಗಾಗಿ, ಚಪ್ಪಲಿಗಳನ್ನು ಯಾವಾಗಲೂ ದ್ವಾರದಿಂದ ಸ್ವಲ್ಪ ದೂರ ಅಥವಾ ಮುಚ್ಚಿದ ಸ್ಟ್ಯಾಂಡ್‌ನಲ್ಲಿ ಇಡುವುದು ಸೂಕ್ತ.
ಮುಳ್ಳಿನ ಗಿಡಗಳು
ಮನೆಯ ಅಲಂಕಾರಕ್ಕೆ ಗಿಡಗಳು ಉತ್ತಮ. ಆದರೆ, ಮುಖ್ಯ ದ್ವಾರದ ಬಳಿ ಪಾಪಾಸುಕಳ್ಳಿ (ಕ್ಯಾಕ್ಟಸ್) ಅಥವಾ ಇತರೆ ಯಾವುದೇ ಮುಳ್ಳಿನ ಗಿಡಗಳನ್ನು ಇಡುವುದನ್ನು ವಾಸ್ತು ನಿಷೇಧಿಸುತ್ತದೆ. ಇವು ಸಂಬಂಧಗಳಲ್ಲಿ ಬಿರುಕು ಮತ್ತು ಮನೆಯಲ್ಲಿ ನಿರಂತರ ಕಲಹ, ಭಿನ್ನಾಭಿಪ್ರಾಯಗಳನ್ನು ಸೃಷ್ಟಿಸಬಹುದು.
ವಾಸ್ತು ಪ್ರಕಾರ, ದ್ವಾರದ ಮುಂದೆ ಮುಳ್ಳಿನ ಗಿಡಗಳು ಇರುವುದರಿಂದ ಮನೆಯ ಸದಸ್ಯರ ಮಾನಸಿಕ ಮತ್ತು ದೈಹಿಕ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಇದರ ಬದಲಿಗೆ ತುಳಸಿ ಅಥವಾ ಸುಂದರ ಹೂವಿನ ಗಿಡಗಳನ್ನು ಇಡುವುದು ಹೆಚ್ಚು ಪ್ರಯೋಜನಕಾರಿ.
ಮುರಿದ ಪೀಠೋಪಕರಣಗಳು
ಮುಖ್ಯ ದ್ವಾರದ ಬಳಿ ಹಳೆಯ ಅಥವಾ ಮುರಿದ ಕುರ್ಚಿ, ಮೇಜು ಮತ್ತಿತರ ಯಾವುದೇ ಪೀಠೋಪಕರಣಗಳನ್ನು ಇಡುವುದು ವಾಸ್ತು ದೋಷಕ್ಕೆ ಕಾರಣ. ಮುರಿದ ಮತ್ತು ಬಳಸಲು ಅಯೋಗ್ಯವಾದ ವಸ್ತುಗಳು 'ದರಿದ್ರ'ದ ಪ್ರತೀಕ. ಇವು ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿ ಬಡತನಕ್ಕೆ ದಾರಿ ಮಾಡಿಕೊಡುತ್ತವೆ.
ಮನೆಯ ಪ್ರವೇಶ ದ್ವಾರದ ಬಳಿ ಹಾಳಾದ ವಸ್ತುಗಳಿದ್ದರೆ, ಅಲ್ಲಿ ನಕಾರಾತ್ಮಕ ವಾತಾವರಣ ಸೃಷ್ಟಿಯಾಗುತ್ತದೆ. ಇದರಿಂದ ನೀವು ಕೈಗೊಳ್ಳುವ ಯಾವುದೇ ಕೆಲಸದಲ್ಲಿ ಅಡೆತಡೆಗಳು ಎದುರಾಗಬಹುದು. ಅಂತಹ ವಸ್ತುಗಳನ್ನು ಕೂಡಲೇ ತೆಗೆದುಹಾಕುವುದು ಉತ್ತಮ.
ಚೂಪಾದ ವಸ್ತುಗಳು
ಮನೆಯ ಮುಖ್ಯ ದ್ವಾರದ ಬಳಿ ಅಥವಾ ಬಾಗಿಲಿನ ಹಿಂಭಾಗದಲ್ಲಿ ಚಾಕು, ಕತ್ತರಿ ಅಥವಾ ಯಾವುದೇ ಚೂಪಾದ ಕಬ್ಬಿಣದ ವಸ್ತುಗಳನ್ನು ಇಡಬಾರದು. ಇವು ನಕಾರಾತ್ಮಕ ಶಕ್ತಿಯನ್ನು ಅತ್ಯಂತ ವೇಗವಾಗಿ ಆಕರ್ಷಿಸುತ್ತವೆ. ಇದರಿಂದ ಮನೆಯಲ್ಲಿ ಉದ್ವೇಗ ಮತ್ತು ಭಯದ ವಾತಾವರಣ ಸೃಷ್ಟಿಯಾಗಬಹುದು.
ವಾಸ್ತು ಪ್ರಕಾರ, ಚೂಪಾದ ವಸ್ತುಗಳ ಉಪಸ್ಥಿತಿಯು ಆಕಸ್ಮಿಕ ಅವಘಡಗಳು ಮತ್ತು ಅನಪೇಕ್ಷಿತ ಘಟನೆಗಳಿಗೆ ಕಾರಣವಾಗಬಹುದು. ಅಲ್ಲದೆ, ಇದು ಮನೆಯ ಸದಸ್ಯರ ನಡುವೆ ಆಕ್ರಮಣಕಾರಿ ಸ್ವಭಾವವನ್ನು ಬೆಳೆಸಲೂಬಹುದು. ಹೀಗಾಗಿ ಇವುಗಳನ್ನು ದೂರವಿಡುವುದು ಅಗತ್ಯ.

ಮನೆಯ ಮುಖ್ಯ ದ್ವಾರ ಹೇಗಿರಬೇಕು?
- ಮುಖ್ಯ ದ್ವಾರದಲ್ಲಿ ಯಾವಾಗಲೂ ಸಾಕಷ್ಟು ಬೆಳಕು ಇರಬೇಕು.
- ಬಾಗಿಲಿನ ಮೇಲೆ ಸ್ವಸ್ತಿಕ ಅಥವಾ ಓಂ ಚಿಹ್ನೆಯನ್ನು ಹಾಕುವುದರಿಂದ ಧನಾತ್ಮಕ ಶಕ್ತಿ ಹೆಚ್ಚುತ್ತದೆ.
- ಮಾವಿನ ಎಲೆಯ ತೋರಣವು ದೈವಿಕ ಆಶೀರ್ವಾದವನ್ನು ತರುತ್ತದೆ.
ಒಟ್ಟಾರೆ, ಮನೆಯ ಮುಖ್ಯ ದ್ವಾರವು ನಮ್ಮ ಜೀವನದ ಪ್ರಗತಿ ಮತ್ತು ಸಮೃದ್ಧಿಯ ಪ್ರತಿಬಿಂಬವಾಗಿದೆ. ವಾಸ್ತು ನಿಯಮಗಳನ್ನು ಪಾಲಿಸಿ, ಪ್ರವೇಶ ದ್ವಾರವನ್ನು ಅಶುಭ ವಸ್ತುಗಳಿಂದ ಮುಕ್ತಗೊಳಿಸಿದರೆ, ಮನೆಯಲ್ಲಿ ಸುಖ, ಶಾಂತಿ ಮತ್ತು ಸಂಪತ್ತು ನೆಲೆಸುತ್ತದೆ.



Click it and Unblock the Notifications