Latest Updates
-
ಶ್ರಾವಣ ಸೋಮವಾರದ ಉಪವಾಸ: ಆಫೀಸ್ ಕೆಲಸದ ನಡುವೆಯೂ ಆರೋಗ್ಯ ಕಾಪಾಡಿಕೊಳ್ಳಲು ಇಲ್ಲಿವೆ ಸರಳ ಟಿಪ್ಸ್! -
ಟಾಟಾ ಮುಂಬೈ ಮ್ಯಾರಥಾನ್ 2027: ನೋಂದಣಿಗೆ ಸಿದ್ಧರಾಗಿ, ಓಟಗಾರರಿಗೆ ಇಲ್ಲಿದೆ ಮಹತ್ವದ ಸಲಹೆಗಳು! -
ಆರ್ಬಿಐ ಸಭೆಗೂ ಮುನ್ನ ದಂಪತಿಗಳಿಗೆ ಎಚ್ಚರಿಕೆ: ಇಂದೇ ಈ 30 ನಿಮಿಷದ ಫೈನಾನ್ಶಿಯಲ್ ಟೆಸ್ಟ್ ಮಾಡಿ! -
ಹಾಲುಣಿಸುವ ತಾಯಂದಿರೇ ಗಮನಿಸಿ: ಬೆನ್ನು ಮತ್ತು ಕುತ್ತಿಗೆ ನೋವು ಮರೆಯಾಗಲು ಈ 8 ನಿಮಿಷದ ವ್ಯಾಯಾಮ ಸಾಕು! -
ಐಟಿಆರ್ ಗಡುವು ಮಿಸ್ ಆಯ್ತಾ? ದಂಡ ತಪ್ಪಿಸಲು ಈಗಲೇ ಈ ಕೆಲಸ ಮಾಡಿ, ಆರ್ಥಿಕ ನಷ್ಟದಿಂದ ಪಾರಾಗಿ! -
ಕರ್ನಾಟಕದಲ್ಲಿ ಭಾರಿ ಮಳೆ: ನಿಮ್ಮ ಮನೆ ಮತ್ತು ಕುಟುಂಬವನ್ನು ಸುರಕ್ಷಿತವಾಗಿಡಲು ಇಂದೇ ಈ ಕೆಲಸ ಮಾಡಿ! -
ಪೀನಟ್ ಬಟರ್ನಲ್ಲಿ ವಿಷಕಾರಿ ಶಿಲೀಂಧ್ರ? ನಿಮ್ಮ ಆರೋಗ್ಯ ಕಾಪಾಡಲು ಈ ವಿಷಯಗಳನ್ನು ಮರೆಯದಿರಿ -
ಫ್ರೆಂಡ್ಶಿಪ್ ಡೇ: ಕೊನೆಯ ನಿಮಿಷದಲ್ಲಿ ಸ್ನೇಹಿತರಿಗೆ ನೀಡಲು 499 ರೂ. ಒಳಗಿನ ಬೆಸ್ಟ್ ಗಿಫ್ಟ್ ಐಡಿಯಾಗಳು! -
CWG 2026: ಗಂಟೆಗಟ್ಟಲೆ ಟಿವಿ ಮುಂದೆ ಕುಳಿತು ಪಂದ್ಯ ನೋಡುವಿರಾ? ಈ 8 ನಿಮಿಷದ ವರ್ಕೌಟ್ ಮಿಸ್ ಮಾಡ್ಬೇಡಿ! -
ಶ್ರಾವಣ ಮಾಸದ ಉಪವಾಸ: ದಂಪತಿಗಳೇ, ಹಬ್ಬದ ಆಚರಣೆಯಲ್ಲಿ ಗೊಂದಲ ಬೇಡ, ಈ ಟಿಪ್ಸ್ ಫಾಲೋ ಮಾಡಿ!
ಈಶಾನ್ಯ ದಿಕ್ಕಿನಲ್ಲಿ ಈ 4 ಗಿಡಗಳ ನೆಡಿ; ಹಣ, ಸಂತೋಷದಲ್ಲಿ ಉತ್ತುಂಗ ನೋಡಿ!
ವ್ಯಕ್ತಿಯೊಬ್ಬರ ಜೀವನದಲ್ಲಿ ಬಹಳಷ್ಟು ಅಂಶಗಳು ಅವರ ಅಭಿವೃದ್ಧಿ, ಪ್ರಗತಿ, ಸುಖ, ದುಖಃಗಳಿಗೆ ಕಾರಣವಾಗುತ್ತವೆ. ಅದ್ರಲ್ಲಿ ಒಂದು ವಾಸ್ತು. ಮನೆಯ ವಾಸ್ತು ನಿಮ್ಮ ಜೀವನವನ್ನು ಸಹ ನಿರ್ಧರಿಸುವ ಅಂಶಗಳಿಂದ ಕೂಡಿರಲಿದೆ. ಮನೆ ಕಟ್ಟುವಾಗ ಇದೇ ಕಾರಣಕ್ಕೆ ವಾಸ್ತು ನೋಡುತ್ತಾರೆ. ಹಾಗೆ ವಾಸ್ತು ದೋಷದಿಂದಾಗಿ ಇಡೀ ಕುಟುಂಬವೇ ಸಮಸ್ಯೆಗಳ ಎದುರಿಸುವುದು ಸಹ ನೋಡಬಹುದು.
ಇನ್ನು ವಾಸ್ತು ದೋಷದ ನಿವಾರಣೆಗಾಗಿ ಹಲವರು ಸಾವಿರಾರು ರೂಪಾಯಿ ಖರ್ಚು ಮಾಡುವುದು ನೋಡಬಹುದು. ಹಾಗೆ ಇದರಿಂದ ಹಲವು ಪರಿಹಾರ ಪಡೆಯಲು ಹತ್ತಾರು ಕಡೆಯಲ್ಲಿ ವಿಚಾರಿಸುತ್ತಾರೆ. ಹಾಗೆ ಮನೆಯೊಳಗಿನ ನಕಾರಾತ್ಮಕ ಶಕ್ತಿಯನ್ನು ತಟಸ್ಥಗೊಳಿಸುವ ಯತ್ನ ಮಾಡುವುದು ಸಹ ನೋಡಬಹುದು.

ಇನ್ನು ವಾಸ್ತು ಹೆಸರು ಕೇಳಿದಾಕ್ಷಣ ಹಲವರಿಗೆ ಅಲಂಕಾರಿಕ ಸಸ್ಯಗಳೆಂದು ಕರೆಯುವ ವಾಸ್ತು ಗಿಡಗಳು ನೆನಪಿಗೆ ಬರಬಹುದು. ಹಲವರ ಮನೆಯಲ್ಲಿ ಈ ವಾಸ್ತುಗಳ ಇಡುವುದು ಸಾಮಾನ್ಯ. ಇವು ಮನೆಯಲ್ಲಿನ ನಕಾರಾತ್ಮಕ ಶಕ್ತಿಯನ್ನು ದೂರ ಮಾಡಲಿವೆ ಹಾಗೆ ಮನೆಯ ವಾಸ್ತು ದೋಷ ನಿವಾರಣೆಗೆ ಸಹಕಾರಿಯಾಗಲಿದೆ ಎಂದು ನಂಬಲಾಗಿದೆ.
ಆದ್ರೆ ನಾವು ಯಾವ ಸಸ್ಯವನ್ನು ಯಾವ ಮೂಲೆಯಲ್ಲಿ ಇಡಬೇಕು ಎಂಬುದನ್ನು ತಿಳಿದಿರುವುದಿಲ್ಲ. ಹೀಗಾಗಿ ತಪ್ಪು ಗ್ರಹಿಕೆಯ ಕಾರಣದಿಂದ ಈ ಗಿಡಗಳಿಂದ ಪಡೆಯುವ ಪ್ರಭಾವ ಕಡಿಮೆಯಾಗಲಿದೆ. ಈ ವಾಸ್ತು ಗಿಡಗಳಲ್ಲಿ ಒಂದೊಂದು ದೋಷ ನಿವಾರಣೆಗೆ ಒಂದೊಂದು ಗಿಡಗಳ ಬಳಸಲಾಗುತ್ತದೆ. ಆರೋಗ್ಯ, ಹಣಕಾಸು, ಸಂಬಂಧ, ಜೀವನ ಕುರಿತಾದ ವಿಚಾರಗಳಿಗೆ ಸಂಬಂಧಿಸಿರಲಿದೆ. ಹಾಗಾದ್ರೆ ನಾವಿಂದು ಯಾವ ಗಿಡವನ್ನು ಯಾವ ಮೂಲೆಯಲ್ಲಿ ಇಟ್ಟರೆ ಅದರ ಪ್ರಯೋಜನ ಪಡೆಯಬಹುದು ಎಂಬುದನ್ನು ಸಂಪೂರ್ಣವಾಗಿ ತಿಳಿದುಕೊಳ್ಳೋಣ.
ತುಳಸಿ ಗಿಡ
ತುಳಸಿ ಗಿಡವು ಹೇಗೆ ಆಧ್ಯಾತ್ಮಿಕ ಅಂಶಗಳ ಹೊಂದಿದೆಯೋ ಹಾಗೆ ವಾಸ್ತು ಗಿಡವೂ ಹೌದು. ಆರೋಗ್ಯಕರ ಅಂಶ ಹೊಂದಿರುವ ಈ ಗಿಡವನ್ನು ಎಲ್ಲರ ಮನೆಯಲ್ಲೂ ನೋಡಬಹುದು. ತುಳಸಿಗೆ ಪೂಜೆ ಮಾಡುವುದು ಹಾಗೆ ಅದನ್ನು ವಿಶೇಷ ಸ್ಥಾನದಲ್ಲಿ ಇಟ್ಟು ಆರೈಕೆ ಮಾಡುವುದು ನೋಡುತ್ತೇವೆ. ತುಳಸಿ ಗಿಡವು ಮನೆಯ ಧನಾತ್ಮಕ ಶಕ್ತಿ ಹೆಚ್ಚಿಸಲು ಸಹಕಾರಿ. ಇದು ಲಕ್ಷ್ಮಿ ದೇವಿಯ ಆಶೀರ್ವಾದ ಪಡೆಯಲು ಬಹುಮುಖ್ಯ ಎಂದು ಕರೆಯಲಾಗಿದೆ. ಈ ತುಳಸಿ ಗಿಡವನ್ನು ಮನೆಯ ಈಶಾನ್ಯ ಮತ್ತು ಉತ್ತರ ದಿಕ್ಕಿನತ್ತ ಇಟ್ಟು ನೆಡುವುದು ಬಹಳ ಪ್ರಯೋಜನಕಾರಿ ಎಂದು ಹೇಳಲಾಗಿದೆ.
ಮುಳ್ಳಿನ ಗಿಡ ಅಥವಾ ಮುಟ್ಟಿದರೆ ಮುನಿ ಸಸ್ಯ
ಮನೆಯಲ್ಲಿ ಈ ಮುಟ್ಟಿದರೆ ಮುನಿ, ನಾಚಿಕೆ ಗಿಡ, ಮುಟ್ಟಲ ಮುರುಕ ಎಂದು ಕರೆಯುವ ಗಿಡವನ್ನು ನೆಡುವುದು ಸಹ ವಾಸ್ತು ದೃಷ್ಟಿಯಲ್ಲಿ ಉತ್ತಮವಂತೆ, ಅದ್ರಲ್ಲೂ ಇದನ್ನು ಇಡಲು ಈಶಾನ್ಯ ಅಥವಾ ಪೂರ್ವ ದಿಕ್ಕು ಅತ್ಯಂತ ಮಂಗಳಕರವೆಂದು ಪರಿಗಣಿಸಲಾಗಿದೆ. ಈ ಸಸ್ಯವು ಕರ್ಮದಾನಕನಾದ ಶನಿ ದೇವರೊಂದಿಗೆ ಸಂಬಂಧ ಹೊಂದಿದೆ ಎಂದು ನಂಬಲಾಗಿದೆ.
ಒಂದೆಲಗ
ಹಲವು ಆರೋಗ್ಯಕರ ಅಂಶಗಳ ತನ್ನಲ್ಲಿಟ್ಟುಕೊಂಡಿರುವ ಒಂದೆಲಗ ಗಿಡವು ವಾಸ್ತು ಶಾಸ್ತ್ರದಲ್ಲೂ ಪ್ರಮುಖ ಸ್ಥಾನ ಪಡೆದಿದೆ. ಕ್ರಾಸ್ಸುಲಾ ಗಿಡವನ್ನು ಈಶಾನ್ಯ ದಿಕ್ಕಿನಲ್ಲಿ ನೆಡುವುದು ಉತ್ತಮವೆಂದು ಪರಿಗಣಿಸಲಾಗುತ್ತದೆ. ಇಲ್ಲವೆ ಈ ಒಂದೆಲಗ ಗಿಡವನ್ನು ಉತ್ತರ ಅಥವಾ ಪೂರ್ವ ದಿಕ್ಕಿನಲ್ಲಿ ಇಡಬಹುದು.
ಶಂಖಪುಷ್ಪ ಸಸ್ಯ
ವಾಸ್ತು ಪ್ರಕಾರ ಶಂಖಪುಷ್ಪ ಸಸ್ಯವನ್ನು ಈಶಾನ್ಯ ದಿಕ್ಕಿನಲ್ಲಿ ನೆಡಬೇಕು. ಹಾಗೆ ಮಾಡುವುದರಿಂದ ಮನೆಯಲ್ಲಿ ಶಾಂತಿ ಮತ್ತು ಸಂತೋಷ ಉಳಿಯುತ್ತದೆ. ಇದು ಲಕ್ಷ್ಮಿ ದೇವತೆ, ವಿಷ್ಣು ಮತ್ತು ಶನಿಯ ಆಶೀರ್ವಾದ ತರುವಂತಹ ಹೂವು ಬಿಡುವ ಸಸ್ಯೆ. ಹೀಗಾಗಿ ಮನೆಯ ನಕಾರಾತ್ಮಕ ಶಕ್ತಿಯನ್ನು ಇದು ಹೊರಗಿಡಲಿದೆ ಎಂದು ನಂಬಲಾಗಿದೆ.



Click it and Unblock the Notifications

