Latest Updates
-
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್! -
ನವರಾತ್ರಿ ಸಂಭ್ರಮ: ಅತ್ತೆ-ಮಾವಂದಿರ ಮನೆಗೆ ಹೋಗುವಾಗ ನವದಂಪತಿಗಳು ಮರೆಯದೆ ಪಾಲಿಸಬೇಕಾದ ಶಿಷ್ಟಾಚಾರಗಳಿವು! -
ದೆಹಲಿ ಮಳೆ ಅಲರ್ಟ್: ಮನೆಯಲ್ಲಿ ನೀರು ಸೋರಿಕೆ ತಡೆಯಲು 20 ನಿಮಿಷದ ಈ ಕೆಲಸ ಮಾಡಿ! -
ಮುಂಬೈನಲ್ಲಿ ಬಿಸಿಲಿನ ಅಬ್ಬರ: ಯೆಲ್ಲೋ ಅಲರ್ಟ್ ಘೋಷಣೆ, ಆರೋಗ್ಯ ಕಾಪಾಡಿಕೊಳ್ಳಲು ಈ ಕ್ರಮಗಳನ್ನು ತಪ್ಪದೇ ಪಾಲಿಸಿ -
ವಡೋದರಾದಲ್ಲಿ ವಾಯುಪಡೆ ಮುಖ್ಯಸ್ಥರ ಗರ್ಬಾ ನೃತ್ಯ: ವೈರಲ್ ವಿಡಿಯೋದಲ್ಲಿ ಸಿಂಗ್ ಅವರ ಸರಳತೆ ನೋಡಿ! -
ಚೆನ್ನೈ ಮಳೆ ಅಲರ್ಟ್: ಹೊರಗೆ ಹೋಗುವ ಬದಲು ಮನೆಯಲ್ಲೇ ಫಿಟ್ ಆಗಿರಲು ಈ 12 ನಿಮಿಷದ ವರ್ಕೌಟ್ ಟ್ರೈ ಮಾಡಿ
Origin of Mangalore Buns: ಮಂಗಳೂರು ಬನ್ಸ್ ತಯಾರಿಕೆ ಹಿಂದಿರೋ ರೋಚಕ ಕಥೆ ಏನು ಗೊತ್ತಾ?
ಮಂಗಳೂರು ಬನ್ಸ್ ಹೆಚ್ಚಿನವರು ಈ ಹೆಸರು ಕೇಳಿರ್ತೀರಿ. ಇದನ್ನು ಒಂದ್ಸಾರಿ ತಿಂದ್ರೆ ಮತ್ತೆ ಮತ್ತೆ ತಿನ್ಬೇಕು ಅನ್ಸುತ್ತೆ. ಕರಾವಳಿ ಭಾಗದಲ್ಲಿ ಬೆಳಗ್ಗಿನ ಉಪಹಾರಕ್ಕೆ ಮಂಗಳೂರು ಬನ್ಸ್ ಇದ್ದೇ ಇರುತ್ತೆ.
ಕರ್ನಾಟಕದ ಬೇರೆ ರಾಜ್ಯಗಳಿಗೆ ಹೋಲಿಸಿದ್ರೆ ಮಂಗಳೂರಿನಲ್ಲಿ ಎಲ್ಲೂ ಸಿಗದೇ ಇರುವಂತಹ ವಿಶೇಷ ಬೆಳಗ್ಗಿನ ಉಪಹಾರ ಲಭ್ಯವಾಗುತ್ತೆ. ಉದಾಹರಣೆಗೆ ಮಂಗಳೂರು ಬನ್ಸ್, ಗೋಲಿಬಜೆ, ಉಪ್ಪಿಟ್ಟು- ಶೀರ, ಸಜ್ಜಿಗೆ-ಬಜಿಲ್, ಖಾರ ವಡೆ, ಬಿಸ್ಕೆಟ್ ವಡೆ ಇತ್ಯಾದಿ.

ಮಂಗಳೂರು ಬನ್ಸ್ ಮಂಗಳೂರು ಮಾತ್ರವಲ್ಲದೇ ಉಡುಪಿ, ಕುಂದಾಪುರ, ಹಾಗೂ ಬೆಂಗಳೂರಿನ ಕೆಲವು ಹೋಟೆಗಳಲ್ಲೂ ಲಭ್ಯವಾಗುತ್ತದೆ. ಇಡ್ಲಿ-ದೋಸೆಯ ಹಾಗೆ ಮಂಗಳೂರು ಬನ್ಸ್ ಕೂಡ ತುಂಬಾನೇ ಫೇಮಸ್. ಮಂಗಳೂರು ಬನ್ಸ್ ಅನ್ನು ಮೈದಾ ಹಾಗೂ ಬಾಳೆಹಣ್ಣಿನಿಂದ ತಯಾರು ಮಾಡಲಾಗುತ್ತದೆ. ನೊಡೋದಕ್ಕೆ ಪೂರಿಯ ಹಾಗಿದ್ರೂ ಕೂಡ. ಇದರ ರುಚಿಗೆ ಸರಿಸಾಟಿಯಾದ ಉಪಹಾರ ಮತ್ತೊಂದಿಲ್ಲ. ಅಷ್ಟಕ್ಕು ಈ ಬನ್ಸ್ ಗೆ ಮಂಗಳೂರು ಬನ್ಸ್ ಅಂತ ಹೆಸರು ಬಂದಿದ್ಹೇಗೆ? ಇದನ್ನು ಮೊದಲಿಗೆ ತಯಾರು ಮಾಡಿದ್ಯಾರು ಅನ್ನೋದನ್ನು ತಿಳಿಯೋಣ.
ಮಂಗಳೂರು ಬನ್ಸ್ ತಯಾರಿಕೆ ಹಿಂದಿದೆ ನಿಗೂಢ ಕಥೆ!
ಇಷ್ಟೊಂದು ಫೇಮಸ್ ಆಗಿರೋ ಮಂಗಳೂರು ಬನ್ಸ್ ತಯಾರಾಗಿದ್ಹೇಗೆ ಅನ್ನೋದನ್ನು ತಿಳಿದುಕೊಳ್ಳೋ ಕ್ಯೂರಿಯಾಸಿಟಿ ಖಂಡಿತ ನಿಮಲ್ಲಿ ಇದ್ದೇ ಇರುತ್ತೆ. ಈ ಮಂಗಳೂರು ಬನ್ಸ್ ಹುಟ್ಟಿಕೊಂಡಿದ್ದೇ ಒಂದು ವಿಶೇಷ ಅಂತಾನೇ ಹೇಳಬಹುದು. ನಮಗೆಲ್ಲಾ ಗೊತ್ತಿರೋ ಹಾಗೆ ಬಾಳೆ ಹಣ್ಣು ಎಲ್ಲವೂ ಒಟ್ಟಾಗಿ ಹಣ್ಣಾಗುತ್ತದೆ. ಹೀಗೆ ಹಣ್ಣಾದ ಬಾಳೆ ಹಣ್ಣುಗಳು ಅದೇ ದಿನ ಸೇಲ್ ಆಗಿ ಹೋದ್ರೆ ಪರವಾಗಿಲ್ಲ. ಇಲ್ಲದಿದ್ದರೆ ಮಾರನೇ ದಿನಕ್ಕ ಅದು ಹಾಳಾಗಿ ಹೋಗುತ್ತದೆ.
ಹೀಗಾಗಿ ಈ ಬಾಳೆಹಣ್ಣುಗಳನ್ನು ಸುಮ್ಮನೇ ವೇಸ್ಟ್ ಮಾಡೋ ಬದಲು ಅದ್ರಿಂದ ಏನಾದ್ರು ತಿಂಡಿ ತಯಾರು ಮಾಡ್ಬೇಕು ಅಂತ ಅಲ್ಲಿನ ಸ್ಥಳಿಯರು ನಿರ್ಧರಿಸುತ್ತಾರೆ. ಹೀಗಾಗಿ ಹಣ್ಣಾದ ಬಾಳೆ ಹಣ್ಣುಗಳನ್ನು ಕಿವುಚಿ ಅದಕ್ಕೆ ಮೈದಾ, ಸಕ್ಕರೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಉಂಡೆಯನ್ನಾಗಿ ಮಾಡಿಕೊಂಡು ಪುರಿಯ ಆಕಾರಕ್ಕೆ ತಟ್ಟಿ ಅದನ್ನು ಎಣ್ಣೆಯಲ್ಲಿ ಬಿಡುತ್ತಾರೆ. ಈ ರೀತಿ ತಯಾರಾಗಿದ್ದೇ ಮಂಗಳೂರು ಬನ್ಸ್.
ಆ ನಂತರ ಅದನ್ನು ಗ್ರಾಹಕರಿಗೆ ನೀಡಲಾಗುತ್ತದೆ. ಇದರ ರುಚಿಯನ್ನು ಗ್ರಾಹಕರು ತುಂಬಾನೇ ಇಷ್ಟ ಪಡ್ತಾರಂತೆ. ಆ ನಂತರ ಇದನ್ನು ನಿತ್ಯ ಬೆಳಗ್ಗಿನ ಉಪಹಾರವಾಗಿ ಮಾರಟ ಮಾಡೋದಕ್ಕೆ ನಿರ್ಧರಿಸುತ್ತಾರೆ. ಇನ್ನೂ ಇದಕ್ಕೆ ಹೆಸರು ಏನು ಇಡೋದು ಅಂತ ಯೋಚಿಸ್ತಿರ್ಬೇಕಾದ್ರೆ ಈ ಆಹಾರ ಬನ್ ಆಹಾರದಲ್ಲಿ ಉಬ್ಬಿಕೊಂಡು ಇರೋದ್ರಿಂದ ಇದಕ್ಕೆ ಮಂಗಳೂರು ಬನ್ಸ್ ಅಂತ ಹೆಸರಿಡಲಾಯ್ತು.
ಉಡುಪಿ ಮಠದ ಅಡುಗೆ ಭಟ್ಟರಿಂದ ತಯಾರಾಗಿತ್ತಾ ಬನ್ಸ್!
ಇನ್ನೂ ಕೆಲವು ಕಥೆಗಳ ಪ್ರಕಾರ ಮಂಗಳೂರು ಬನ್ಸ್ ಅನ್ನು ಉಡುಪಿ ಮಠದ ಅಡುಗೆ ಭಟ್ಟರೊಬ್ಬರು ತಯಾರು ಮಾಡಿದ್ರು ಅಂತ ಹೇಳಲಾಗುತ್ತದೆ. ನಿತ್ಯ ಮಠಕ್ಕೆ ಭೇಟಿ ನೀಡುತ್ತಿದ್ದ ನೂರಾರು ಭಕ್ತಾದಿಗಳು ದೇವರಿಗೆ ಬಾಳೆಹಣ್ಣನ್ನು ಅರ್ಪಿಸುತ್ತಿದ್ದರು. ಇದು ಹಣ್ಣಾಗಿ ವ್ಯರ್ಥವಾಗಿ ಹೋಗ್ತಿತ್ತು. ಹೀಗಾಗಿ ಇದರಿಂದ ಏನಾದ್ರು ಖಾದ್ಯ ತಯಾರು ಮಾಡಬೇಕೆಂದು ಅಡುಗೆ ಭಟ್ಟರು ನಿರ್ಧಾರ ಮಾಡುತ್ತಾರಂತೆ. ಈ ಸಮಯದಲ್ಲಿ ಹುಟ್ಟಿಕೊಂಡಿದ್ದೇ ಮಂಗಳೂರು ಬನ್ಸ್ ಅಂತ ಹೇಳಲಾಗುತ್ತದೆ.
ಕಾಯಿ ಚಟ್ನಿ ಜೊತೆಗೆ ಸೂಪರ್ ಕಾಂಬಿನೇಷನ್!
ಮಂಗಳೂರು ಬನ್ಸ್ ಅನ್ನು ಹೋಟೆಲ್ ಗಳಲ್ಲಿ ಕಾಯಿ ಚಟ್ನಿ ಹಾಗೂ ಸಾಂಬಾರ್ ಜೊತೆಗೆ ಸರ್ವ್ ಮಾಡ್ತಾರೆ. ಇದರ ಜೊತೆಗೆ ಒಂದು ಲೋಟ ಬಿಸಿ ಬಿಸಿ ಟೀ ಇದ್ರೆ ಅದರ ಮಜಾನೇ ಬೇರೆ. ಕರಾವಳಿ ಭಾಗದಲ್ಲಿ ಜನ ಮನೆಯಲ್ಲಿಯೇ ಮಂಗಳೂರು ಬನ್ಸ್ ತಯಾರಿಸಿ ತಿನ್ನುತ್ತಾರೆ. ಹೆಚ್ಚಿನವರು ಚಟ್ನಿ ಸಾಂಬಾರ್ ಇಲ್ಲದೇನೆ ಹಾಗೆಯೇ ತಿನ್ನುತ್ತಾರೆ. ಇನ್ನೂ ಕೆಲವರು ಟೀ ಜೊತೆಗೆ ಬನ್ಸ್ ಮುಳುಗಿಸಿ ತಿನ್ನುತ್ತಾರೆ.
ಹೀಗೆ ಮಂಗಳೂರು ಬನ್ಸ್ ಹುಟ್ಟಿಕೊಂಡಿದ್ದರ ಹಿಂದೆ ಸುಮಾರು ಕಥೆಗಳಿದೆ. ಅದೇನೇ ಇರಲಿ ಮಂಗಳೂರು ಬನ್ಸ್ ಗೆ ಸರಿಸಾಟಿಯಾದ ಆಹಾರ ಮತ್ತೊಂದಿಲ್ಲ. ಕೊಂಚ ಸಿಹಿ ಹಾಗೂ ತುಂಬಾನೇ ಸಾಫ್ಟ್ ಆಗಿರೋ ಈ ಮಂಗಳೂರು ಬನ್ಸ್ ನ ರುಚಿಗೆ ಸೋತು ಹೋಗದವರಿಲ್ಲ. ನೀವಿನ್ನೂ ಮಂಗಳೂರು ಬನ್ಸ್ ಟೇಸ್ಟ್ ಮಾಡಿಲ್ಲ ಅಂದ್ರೆ ಖಂಡಿತ ಒಂದ್ಸಾರಿ ಟ್ರೈ ಮಾಡ್ಲೇಬೇಕು.



Click it and Unblock the Notifications


