Latest Updates
-
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು! -
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ!
ಏಕದಂತ ಜಯಂತಿ 2019: ಗಣೇಶನ ಮೂರ್ತಿಯನ್ನು ಮನೆಯ ಈ ಭಾಗಗಳಲ್ಲಿ ಇಡಬೇಡಿ
ಗಣೇಶ ಚತುರ್ಥಿ ಎಂದರೆ ಅದು ಅಬಾಲವೃದ್ಧರ ತನಕ ಪ್ರತಿಯೊಬ್ಬರಿಗೂ ಖುಷಿಯನ್ನು ತರುವಂತಹ ಹಬ್ಬವಾಗಿದೆ. ಗಣೇಶ ಚತುದರ್ಶಿ ಮುನ್ನ ದಿನ ಗೌರಿ ಗಣೇಶ ಹಬ್ಬವನ್ನು ಆಚರಿಸಲಾಗುತ್ತದೆ. ಅದರಲ್ಲೂ ಗಣೇಶನನ್ನು ಭಾರತದ ಹೆಚ್ಚಿನ ಕಡೆಗಳಲ್ಲಿ ಶ್ರದ್ಧೆ ಹಾಗೂ ಭಕ್ತಿಯಿಂದ ಪೂಜಿಸಲಾಗುತ್ತದೆ.

ಗಣೇಶ ಚತುದರ್ಶಿ ದಿನದಂದು ಗಣಪತಿಯ ಮೂರ್ತಿಯನ್ನು ತಂದು ಮನೆಯಲ್ಲಿಟ್ಟು ಪೂಜೆ ಮಾಡಲಾಗುತ್ತದೆ. ಕೆಲವರು ಒಂದು ದಿನ, ಇನ್ನು ಕೆಲವರು 3, 5 7 ಮತ್ತು 10 ದಿನಗಳ ಕಾಲ ಗಣೇಶನ ಮೂರ್ತಿಯನ್ನು ಪೂಜಿಸತ್ತಾರೆ.
ಈ ವರ್ಷ ಅಂದರೆ 2019ರಲ್ಲಿ ಸ್ವರ್ಣ ಗೌರಿ ಪೂಜೆಯನ್ನು ಸೆಪ್ಟೆಂಬರ್ 1 ಭಾನುವಾರ ಹಾಗೂ ಗೌರಿ ಪುತ್ರ ಗಣೇಶ ಚತುರ್ಥಿಯನ್ನು ಸೆಪ್ಟೆಂಬರ್ 2ರಂದು ಸೋಮವಾರದಂದು ಅಚರಿಸಲಾಗುತ್ತಿದೆ.
ಗಣೇಶನ ಮೂರ್ತಿಯನ್ನು ಮನೆಯಲ್ಲಿಟ್ಟು ಪೂಜೆ ಮಾಡಲು ಇಡೀ ಮನೆಯನ್ನೇ ಶೃಂಗರಿಸಲಾಗುತ್ತದೆ. ಆದರೆ ಗಣಪತಿಯ ಮೂರ್ತಿಯನ್ನು ಮನೆಯ ಯಾವ ಭಾಗದಲ್ಲಿ ಇಟ್ಟರೆ ಶುಭ ಎಂದು ತಿಳಿದುಕೊಳ್ಳಲು ಈ ಲೇಖನ ಓದಿಕೊಳ್ಳಿ ಮತ್ತು ಇದರ ಬಳಿಕ ಮನೆಯ ಅಲಂಕಾರ ಮಾಡಲು ತಯಾರಿ ನಡೆಸಿ.
ಕೆಲವು ಮಂದಿ ವಾಸದ ಕೊಠಡಿ ಅಥವಾ ಪೂಜಾ ಕೊಠಡಿಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುತ್ತಾರೆ. ವಾಸ್ತು ಪ್ರಕಾರವೇ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿಕೊಂಡು ಹೋದರೆ ತುಂಬಾ ಒಳ್ಳೆಯದು. ಇದು ಹೇಗೆ ಎಂದು ಮುಂದೆ ತಿಳಿಯಿರಿ.
ಸೊಂಡಿಲು ಎಡಕ್ಕಿರಲಿ
ಗಣಪತಿಯ ತಾಯಿ ಗೌರಿಯು ಆತನ ಬದಿಯಲ್ಲೇ ಕುಳಿತಿರುವ ಕಾರಣದಿಂದಾಗಿ ಸೊಂಡಿಲು ಯಾವಾಗಲೂ ಎಡದ ಬದಿಯಲ್ಲಿರುತ್ತದೆ. ಕೆಲವರು ಗಣೇಶ ಚತುದರ್ಶಿಗೆ ಗೌರಿ ಗಣೇಶನನ್ನು ಪೂಜಿಸುತ್ತಾರೆ. ಸೊಂಡಿಲು ಎಡಕ್ಕಿರಬೇಕೆಂಬುವುದು ಗಣೇಶನ ಪೂಜಿಸುವ ಮೊದಲ ಸೂತ್ರವಾಗಿದೆ.
ಬೆನ್ನ ಹಿಂದೆ ಕೋಣೆಗಳಿರಬಾರದು
ಗಣೇಶನ ಮೂರ್ತಿಯನ್ನು ಇಡುವಾಗ ಎಚ್ಚರಿಕೆ ವಹಿಸಬೇಕಾದ ಮತ್ತೊಂದು ವಿಚಾರವೆಂದರೆ ಗಣೇಶನ ಬೆನ್ನ ಹಿಂದೆ ಮನೆಯ ಯಾವುದೇ ಕೋಣೆ ಇರಬಾರದು. ಗಣೇಶ ಸಮೃದ್ಧಿಯ ದೇವರು. ಆತನ ಬೆನ್ನು ಬಡತನಕ್ಕೆ ಆಹ್ವಾನ ನೀಡಿದಂತೆ. ಇದರಿಂದ ಗಣೇಶನ ಬೆನ್ನು ಯಾವಾಗಲೂ ಮನೆಯ ಹೊರಗಿನ ಭಾಗಕ್ಕಿರಬೇಕು. ಲಡ್ಡು ಪ್ರಿಯ ಲಂಬೋದರನಿಗೆ ಬೂಂದಿ ಲಾಡು ರೆಸಿಪಿ
ದಕ್ಷಿಣಕ್ಕಲ್ಲ
ಮನೆಯ ದಕ್ಷಿಣ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಬೇಡಿ. ಮನೆಯ ಪೂರ್ವ ಅಥವಾ ಪಶ್ಚಿಮ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಿ. ಪೂಜಾ ಕೊಠಡಿ ಕೂಡ ಮನೆಯ ದಕ್ಷಿಣ ಭಾಗದಲ್ಲಿರಬಾರದು ಎಂದು ನೆನಪಿಡಿ.
ಶೌಚಾಲಯ
ಶೌಚಾಲಯಕ್ಕೆ ಅಂಟಿಕೊಂಡಿರುವ ಗೋಡೆಗೆ ತಾಗಿಸಿಕೊಂಡು ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಬೇಡಿ. ಶೌಚಾಲಯದ ಗೋಡೆ ಕೋಣೆಗೆ ತಾಗಿದ್ದರೆ ಆ ಜಾಗದಲ್ಲಿ ಗಣೇಶನ ಮೂರ್ತಿಯನ್ನು ಇಡಬೇಡಿ.
ವಾಯುವ್ಯ
ಮನೆಯ ವಾಯುವ್ಯ ಭಾಗದಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸಿದರೆ ತುಂಬಾ ಒಳ್ಳೆಯದು. ಮೇಲೆ ಹೇಳಿದ ಸೂತ್ರಗಳಿಂದ ವಾಯುವ್ಯ ಭಾಗಕ್ಕೆ ಅಡ್ಡಿಯಾಗುತ್ತಿದ್ದರೆ ಬೇರೆ ಭಾಗದಲ್ಲಿಡಬಹುದು.
ಮೆಟ್ಟಿಲುಗಳ ಅಡಿ
ಎರಡು ಮಹಡಿ ಮನೆಯಲ್ಲಿ ವಾಸಿಸುವವರು ಹೆಚ್ಚಾಗಿ ಗಣೇಶನ ಮೂರ್ತಿಯನ್ನು ಮೆಟ್ಟಿಲುಗಳ ಅಡಿಯಲ್ಲಿಡುತ್ತಾರೆ, ಆದರೆ ಇದು ಸಲ್ಲ. ಮೆಟ್ಟಿಲಿನಲ್ಲಿ ಜನರು ಓಡಾಡುವುದರಿಂದ ಅವರು ಗಣೇಶನ ತಲೆಯ ಮೇಲೆ ಓಡಾಡಿದಂತಾಗುತ್ತದೆ. ಇದರಿಂದ ಮನೆಗೆ ದುರಾದೃಷ್ಟ ಕಾಡಬಹುದು. ಮನೆಯಲ್ಲಿ ಗಣೇಶನ ಮೂರ್ತಿಯನ್ನು ಇಟ್ಟು ಪೂಜಿಸುವಾಗ ಈ ಸುಲಭ ಸೂತ್ರಗಳನ್ನು ಪಾಲಿಸಿಕೊಂಡು ಹೋದರೆ ಸುಖ, ಸಮೃದ್ಧಿ, ನೆಮ್ಮದಿ ನಿಮ್ಮದಾಗುತ್ತದೆ.



Click it and Unblock the Notifications




