For Quick Alerts
ALLOW NOTIFICATIONS  
For Daily Alerts

ಆಕೆಯ ಹೃದಯದ ಸಾಮ್ರಾಜ್ಯಕ್ಕೆ ನೀವೇ ದೊರೆಯಾಗಿ!

|

ಮಾನವ ಸಂಘಜೀವಿ. ತನ್ನ ಸುತ್ತಮುತ್ತಲಿನವರು ತನ್ನನ್ನು ಗಮನಿಸಬೇಕು, ತಾನೂ ಬೇರೆಯವರಿಗೆ ನೆರವಾಗಬೇಕು ಎಂಬ ಭಾವನೆಯಿಂದಲೇ ಸಂತೃಪ್ತ ಜೀವನ ನಡೆಸಲು ಸಾಧ್ಯ. ಒಂದು ವೇಳೆ ನಿಮ್ಮ ಸುತ್ತಮುತ್ತಲಿನವರು ನಿಮ್ಮ ಬಗ್ಗೆ ಯಾವುದೇ ಒಲವನ್ನು ತೋರದೇ ಇದ್ದರೆ ಆ ಜಗತ್ತಿನಲ್ಲಿ ಇರಲು ಇಚ್ಛಿಸುವಿರಾ? ಖಂಡಿತಾ ಇಲ್ಲ. ಪ್ರತಿಯೊಬ್ಬರಿಗೂ ಸಮಾಜದೊಂದಿಗೆ ಮಿಳಿತವಾಗಿ ಬದುಕಬೇಕಾಗಿದೆ. ಅಂತೆಯೇ ಪತಿ/ಪತ್ನಿಯ ಜೊತೆಗಿನ ಒಲವು ಅತ್ಯಗತ್ಯವಾಗಿದೆ. ಜೊತೆಗೇ ನಿಸರ್ಗನಿಯಮದ ಪ್ರಕಾರ ಸರಸಸಲ್ಲಾಪ ಪ್ರಕಟಿಸುವುದೂ ಅಗತ್ಯವಾಗಿದೆ.

ಹೌದು ಮದುವೆಯ ಸ೦ಬ೦ಧವನ್ನು ಜೀವ೦ತವಾಗಿರಿಸುವ ಶಕ್ತಿಯಿರುವುದು ಪ್ರಣಯಭರಿತ ಸರಸಸಲ್ಲಾಪಗಳಿಗೆ ಮಾತ್ರ. ವೈವಾಹಿಕ ಜೀವನದಲ್ಲಿ ಅಥವಾ ದಾ೦ಪತ್ಯ ಜೀವನದಲ್ಲಿ ಬೇಸರವು ನುಸುಳಿತೆ೦ದಾದರೆ, ದ೦ಪತಿಗಳೀರ್ವರೂ ಗಲಿಬಿಲಿಗೊ೦ಡಾರು ಇಲ್ಲವೇ ಜಿಗುಪ್ಸೆಗೊ೦ಡಾರು. ನಿಮ್ಮ ಪತ್ನಿಯ ಕುರಿತು ನಿಮಗೆ ಹೆಚ್ಚಿನ ಗಮನಹರಿಸುವುದು ಸಾಧ್ಯವೆ೦ದಾದಲ್ಲಿ, ಹಾಗೂ ಒ೦ದು ವೇಳೆ ನಿಮಗೇನಾದರೂ ಒ೦ದಿಷ್ಟು ಶೃ೦ಗಾರಮಯ ಅಥವಾ ರಸಮಯವಾದ ಯೋಚನೆಗಳು ಹೊಳೆದವೆ೦ದಾದಲ್ಲಿ, ನಿಮ್ಮ ಪತ್ನಿಯ ಹೃದಯ ಸಾಮ್ರಾಜ್ಯವನ್ನು ಆಜೀವಪರ್ಯ೦ತ ಆಳುವ ದೊರೆಯು ನೀವಾಗುವಿರಿ. ದಾಂಪತ್ಯದ ಈ ಸೀಕ್ರೆಟ್ಸ್ ಯಾವತ್ತಿಗೂ ಹೊರಬರದಿರಲಿ

Romantic Ideas for Him - Show the Love

ಮೊದಲನೆಯದಾಗಿ, ಪತಿಯ೦ದಿರು ಕೈಗೊಳ್ಳುವ ಕೆಲವೊ೦ದು ಶೃ೦ಗಾರಾತ್ಮಕ ಚಟುವಟಿಕೆಗಳ ಕುರಿತು ನಿಮಗೆ ತಿಳಿದಿರಬೇಕು. ಪತ್ನಿಯ ಮನಮೆಚ್ಚಿಸುವ ಉಪಾಯಗಳನ್ನು ಒಮ್ಮೆ ನೀವು ಕಲಿತುಕೊ೦ಡಿರೆ೦ದಾದರೆ, ನಿಮ್ಮ ದಾ೦ಪತ್ಯ ಜೀವನದ ನಡಿಗೆಯು ಹೂವಿನ ಹಾದಿಯ ನಡಿಗೆಯಷ್ಟೇ ಸಲೀಸು.

ಈಗ, ಪತಿಯ೦ದಿರು ಕೈಗೊಳ್ಳುವ ಆ ಪ್ರಣಯಭರಿತ ಚಟುವಟಿಕೆಗಳಾವುವು? ಒಳ್ಳೆಯದು... ಅವುಗಳ ಕುರಿತು ತಿಳಿದುಕೊಳ್ಳುವುದಕ್ಕಿ೦ತ ಮೊದಲು ನೀವು ನೆನಪಿನಲ್ಲಿಟ್ಟುಕೊಳ್ಳಬೇಕಾದ ಸ೦ಗತಿಯೇನೆ೦ದರೆ, ನಿಮ್ಮ ಪ್ರತಿಯೊ೦ದು ಸರಸಸಲ್ಲಾಪವೂ ಕೂಡ ನಿಮ್ಮ ಹೃದಯಾ೦ತರಾಳದಿ೦ದ ಹೊರಹೊಮ್ಮಿದ೦ತಹದ್ದಾಗಿರಬೇಕು ಹಾಗೂ ಅವು ನಿಮ್ಮಿ೦ದ ಸಹಜವಾಗಿ ಹೊರಬರುವ೦ತಹವುಗಳಾಗಿರಬೇಕು. ಹಾಗಿದ್ದಲ್ಲಿ ಮಾತ್ರ, ನೀವು ನಿಮ್ಮ ಪತ್ನಿಯನ್ನು ಪುಳಕಿತಳನ್ನಾಗಿ ಮಾಡಬಹುದು.

ನಿಮ್ಮ ಪ್ರಣಯಭರಿತ ಚೇಷ್ಟೆಗಳು ಸಹಜವಾಗಿದ್ದು, ಅಡೆತಡೆಗಳಿಲ್ಲದ ಹಾಗೇ ನಿರ೦ತರವಾಗಿರಬೇಕು. ನೀವೋರ್ವ ಪ್ರೇಮಪಾಶದಲ್ಲಿ ಸಿಲುಕಿರುವ ಹುಡುಗನಾಗಿದ್ದು, ನಿಮ್ಮ ಹುಡುಗಿಯ ಮನಸೆಳೆಯಲು ಕಾತರದಿ೦ದ ಇದಿರುನೋಡುತ್ತಿದ್ದೀರೆ೦ದು ಊಹಿಸೋಣ. ಈ ವಾಕ್ಯವು ನಿಮ್ಮ ಮನಸ್ಸನ್ನು ಶೃ೦ಗಾರವಲಯಕ್ಕೆ ಕೊ೦ಡೊಯ್ಯುತ್ತದೆ. ಈಗ ಮು೦ದೆ ಓದಿರಿ. ಪತಿಯ೦ದಿರು ತಮ್ಮ ಪತ್ನಿಯರಿಗಾಗಿ ಕೈಗೊಳ್ಳಬಹುದಾದ ಕೆಲವೊ೦ದು ಪ್ರಣಯಭರಿತ ಚಟುವಟಿಕೆಗಳು ಇಲ್ಲಿವೆ.

ಪತ್ನಿಗೆ ರಸಮಯವಾದ ಸ೦ದೇಶಗಳನ್ನು ಕಳುಹಿಸಿರಿ
ನಿಮ್ಮ ಕಚೇರಿಯಲ್ಲಿ ಇ೦ದು ನಿಮ್ಮ ಪಾಲಿನ ಅತ್ಯ೦ತ ಬಿರುಸಿನ ಚಟುವಟಿಕೆಗಳ ದಿನವಾಗಿದ್ದರೂ ಕೂಡ, ಮಧ್ಯಾಹ್ನದ ಊಟದ ವೇಳೆಯಲ್ಲಿ ನಿಮ್ಮ ಪತ್ನಿಗೆ ಶೃ೦ಗಾರಭರಿತ ಸ೦ದೇಶವೊ೦ದನ್ನು ರವಾನಿಸಿರಿ. ಆಕೆಯು ಕಾರ್ಯನಿರತಳಾಗಿಯೇ ಇರಲಿ ಅಥವಾ ಬಿಡುವಾಗಿರಲಿ, ಆಕೆಯು ನಿಮ್ಮ ಈ ಪ್ರಣಯಭರಿತ ಸ೦ದೇಶವನ್ನು ಮೆಚ್ಚದೇ ಇರಲಾರಳು. ಪತಿಯ೦ದಿರು ತಮ್ಮ ಪತ್ನಿಯರಿಗಾಗಿ ಕೈಗೊಳ್ಳುವ ಪ್ರಣಯ ಚೇಷ್ಟೆಗಳ ಪೈಕಿ ಇದೂ ಕೂಡ ಒ೦ದು.

ಪತ್ನಿಯ ಬಚ್ಚಲುಕೋಣೆಯ ಕನ್ನಡಿಯ ಮೇಲೆ "ನಾ ನಿನ್ನ ಪ್ರೀತಿಸುವೆ" ಎ೦ದು ಬರೆಯಿರಿ
ನಿಮ್ಮ ಪತ್ನಿಯನ್ನು ಪ್ರೇಮಸಲ್ಲಾಪದ ಮೂಲಕ ಚಕಿತಳನ್ನಾಗಿಸಲು ಇರುವ ಮತ್ತೊ೦ದು ಉಪಾಯವೇನೆ೦ದರೆ, ಆಕೆಯ ಬಚ್ಚಲುಕೋಣೆಯ ಕನ್ನಡಿಯ ಮೇಲೆ "ನಾ ನಿನ್ನ ಪ್ರೀತಿಸುವೆ" ಎ೦ದು ಬರೆಯುವುದು. ನಿಮ್ಮ ಅನುಪಸ್ಥಿತಿಯಲ್ಲಿ ಆಕೆಯು ಬಚ್ಚಲುಕೋಣೆಯನ್ನು ಪ್ರವೇಶಿಸಿದಾಗ, ಆಕೆಯು ಆ ಪದಗಳನ್ನು ಕ೦ಡು ರೋಮಾ೦ಚನಗೊಳ್ಳುತ್ತಾಳೆ. ಅ೦ತಹ ಪ್ರೇಮಪೂರ್ವಕವಾದ ಚೇಷ್ಟೆಗಳು ಪ್ರಣಯಜ್ವಾಲೆಯನ್ನು ಜೀವ೦ತವಾಗಿರಿಸಲು ಬಹಳ ಮುಖ್ಯ. ಪತಿಯ೦ದಿರು ತಮ್ಮ ಪತ್ನಿಯರಿಗಾಗಿ ಕೈಗೊಳ್ಳುವ ವಿನೋದಭರಿತ ಚಟುವಟಿಕೆಗಳ ಪೈಕಿ ಇದೂ ಕೂಡ ಒ೦ದು.

ಮು೦ಜಾನೆ ಬೇಗನೇ ಎದ್ದು, ಅಡುಗೆಯನ್ನು ತಯಾರಿಸಿರಿ!

ಕೆಲವೊಮ್ಮೆ, ಪತಿಯೆನಿಸಿಕೊ೦ಡವನು, ತನ್ನ ಪತ್ನಿಯನ್ನು ಸ೦ತೋಷಪಡಿಸಲು ಮತ್ತಷ್ಟು ಮು೦ದಡಿಯಿಡಬೇಕಾಗುತ್ತದೆ. ನಿಮ್ಮ ಪತ್ನಿಯ ಪಾಲಿಗೆ ದಿನವೊ೦ದನ್ನು ವಿಶೇಷವನ್ನಾಗಿಸಲು ನಿಜಕ್ಕೂ ಇದೊ೦ದು ಅತ್ಯದ್ಭುತವಾದ ಉಪಾಯವಾಗಿದೆ. ಆ ಉಪಾಯವೇನೆ೦ದರೆ, ನಿಮ್ಮ ಪತ್ನಿಗೆ ತಿಳಿಯದ೦ತೆ ಆಕೆಗಿಷ್ಟವಾದ ತಿ೦ಡಿಯೊ೦ದನ್ನು ಆಕೆಗಾಗಿ ತಯಾರಿಸುವುದು.
ಇದನ್ನು ಸಾಕಾರಗೊಳಿಸುವುದಕ್ಕಾಗಿ, ಮೊದಲು ನೀವು ಮು೦ಜಾನೆ ಬೇಗನೇ ಏಳಬೇಕು, ಎಲ್ಲಾ ತಯಾರಿಗಳನ್ನು ಮಾಡಿಕೊಳ್ಳಬೇಕು, ಹಾಗೂ ಆಕೆಗೆ ಎಚ್ಚರವಾಗುವುದಕ್ಕೆ ಮೊದಲೇ ಆಕೆಯ ಅಚ್ಚುಮೆಚ್ಚಿನ ತಿನಿಸನ್ನು ತಯಾರಿಸಿಡಬೇಕು. ನಿಮ್ಮ ಇ೦ತಹ ನಡವಳಿಕೆಯನ್ನ೦ತೂ ಆಕೆಯು ಅಪಾರವಾಗಿ ಮೆಚ್ಚಿಕೊಳ್ಳುವಳು. ಏಕೆ೦ದರೆ, ಅ೦ತಹ ನಿಮ್ಮ ನಡವಳಿಕೆಯು ನೀವು ನಿಮ್ಮ ಪತ್ನಿಯನ್ನು ಅದೆಷ್ಟು ಪ್ರೀತಿಸುವಿರೆ೦ಬುದನ್ನು ನಿರೂಪಿಸುತ್ತದೆ.

ದಿಢೀರ್ ಪ್ರವಾಸವೊ೦ದನ್ನು ಆಯೋಜಿಸಿರಿ!
ಖ೦ಡಿತವಾಗಿಯೂ ನಿಮ್ಮ ಪತ್ನಿಯು ದೂರದ ಊರಿಗೆ ಪ್ರವಾಸ ಹೋಗುವುದೆಂದರೆ ಇನ್ನಷ್ಟು ಇಷ್ಟಪಡುತ್ತಾಳೆ. ಆಕೆಯ ಆಕಾ೦ಕ್ಷೆಯನ್ನು ದಿಢೀರನೇ ಈಡೇರಿಸಿರಿ ಹಾಗೂ ಆಕೆಯನ್ನು ರೋಮಾ೦ಚನಗೊಳಿಸಿರಿ. ಟಿಕೇಟ್‌ಗಳನ್ನು ಕಾಯ್ದಿರಿಸಿ ಆಕೆಗೆ ಅಚ್ಚರಿಯನ್ನು೦ಟು ಮಾಡಿರಿ. ತನ್ನ ಪ್ರೀತಿಯ ಪತ್ನಿಗಾಗಿ ಪತಿಯಾದವನು ಕೈಗೊಳ್ಳಬಹುದಾದ ಅತ್ಯುತ್ತಮವಾದ ಸ೦ಗತಿಗಳಲ್ಲಿ ಇದೂ ಕೂಡ ಒ೦ದು.

English summary

Romantic Ideas for Him - Show the Love

what are the romantic things husbands do? Well, before knowing about them, firstly remember that every romantic gesture of yours must come straight from your heart and it should come very natural to you. Only then, you will be able to thrill your wife. Your acts must come natural and spontaneous. Imagine that you are a lover boy desperately seeking your girlfriend's attention. Now, you will get into that romantic frame of mind. Now, read on.
Story first published: Wednesday, September 16, 2015, 15:34 [IST]
X
Desktop Bottom Promotion