Latest Updates
-
ಮದುವೆಗೂ ಮುನ್ನ ದಂಪತಿಗಳು ಪಾಲಿಸಬೇಕಾದ 6 ಗೋಲ್ಡನ್ ರೂಲ್ಸ್: ಸುಖೀ ದಾಂಪತ್ಯಕ್ಕೆ ಇಲ್ಲಿದೆ ಕಂಪ್ಲೀಟ್ ಗೈಡ್ -
ಹೊರಗೆ ಮಾಲಿನ್ಯ, ಮನೆಯೊಳಗೆ ಉಸಿರುಗಟ್ಟುವ ವಾತಾವರಣವೇ? ಗಾಳಿ ಶುದ್ಧೀಕರಿಸಲು ಇಲ್ಲಿದೆ ಸರಳ ಟಿಪ್ಸ್! -
ಹಬ್ಬದ ಅಡುಗೆಗೆ ನಕಲಿ ತುಪ್ಪದ ಆತಂಕ: ಶುದ್ಧ ತುಪ್ಪ ಖರೀದಿಸಲು ಈ ಸರಳ ಟಿಪ್ಸ್ ಪಾಲಿಸಿ -
ನವರಾತ್ರಿ ಅಷ್ಟಮಿ: ಕನ್ಯಾ ಪೂಜೆ ಮುಹೂರ್ತ, ಸುರಕ್ಷಿತ ದರ್ಶನ ಮತ್ತು ಆರೋಗ್ಯಕರ ಪ್ರಸಾದದ ಸಂಪೂರ್ಣ ಮಾಹಿತಿ -
ವಿಶ್ವ ಆಸ್ಟಿಯೋ ಪೋರೋಸಿಸ್ ದಿನ: ಮೂಳೆಗಳನ್ನು ಗಟ್ಟಿಗೊಳಿಸಲು ಮನೆಯಲ್ಲೇ ಮಾಡಿ ಈ 12 ನಿಮಿಷಗಳ ಸರಳ ವ್ಯಾಯಾಮ! -
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ!
ಪ್ರತಿಯೊಬ್ಬರೂ ಅರಿತಿರಬೇಕಾದ ಅತಿಮುಖ್ಯ ಸ್ವಚ್ಛತಾ ಕ್ರಮಗಳು
ನಾವೆಲ್ಲರೂ ನಮ್ಮ ನಮ್ಮ ಆವರಣಗಳನ್ನು ಸ್ವಚ್ಛವಾಗಿ ಮತ್ತು ಅಚ್ಚುಕಟ್ಟಾಗಿ ಇಟ್ಟುಕೊಳ್ಳಲು ಬಯಸುತ್ತೇವೆ. ಸ್ವಚ್ಛಪರಿಸರದಲ್ಲಿದ್ದರೆ ನಮ್ಮ ಆರೋಗ್ಯ ಮತ್ತು ನಮ್ಮ ಮನಃಸ್ಥಿತಿಯನ್ನು ಆಯೋಜಿಸಿಕೊಂಡು ಮತ್ತು ಚುರುಕಾಗಿಟ್ಟುಕೊಳ್ಳಲು ಸಹಾಯಕಾರಿಯಾಗಿರುತ್ತದೆ.
ಸ್ವಚ್ಛಮಾಡಬೇಕಾದಾಗ ಸದಾ ಒಂದು ಸುಲಭವಾದ ಮಾರ್ಗವಿದ್ದೇ ಇರುತ್ತದೆ ಎಂದು ನೆನಪಿನಲ್ಲಿಟ್ಟುಕೊಳ್ಳಬೇಕಾದ ಮೂಲಭೂತ ವಿಷಯ; ನೀವು ಅದರ ತಂತ್ರವನ್ನು ಮಾತ್ರ ತಿಳಿದುಕೊಳ್ಳಬೇಕು. ನಾವು ಹೆಚ್ಚು ಸಮಯ ತೆಗೆದುಕೊಂಡು ಸ್ವಚ್ಛಮಾಡಿದ್ದರೂ ಜನರಿಗೆ ಮತ್ತೂ ಕೆಲವು ವಿವಿಧ ಶುದ್ಧೀಕರಣ ಭಿನ್ನತೆಗಳ ವ್ಯವಸ್ಥೆಗಳು ಬಳಕೆಯಲ್ಲಿವೆ. ಸ್ವಚ್ಛಗೊಳಿಸುವ ಭಿನ್ನತೆಗಳ ಬಗ್ಗೆ ಅತ್ಯುತ್ತಮ ರೀತಿಯಲ್ಲಿ ತಿಳಿದುಕೊಳ್ಳಬೇಕಾದರೆ ನಾವು ಅಂತರ್ಜಾಲದಲ್ಲಿ ಕೆಲವು ಸಂಶೋಧನೆ ಮಾಡಬೇಕು. ಚರ್ಚಾವೇದಿಕೆಗಳಿಂದ ಕೂಡ ಇದಕ್ಕೆ ಸಹಾಯವಾಗುತ್ತದೆ.

ಯಾವುದೇ ಸಾಂಪ್ರದಾಯಿಕ ವಿಧಾನಗಳಿಗಿಂತ ಹೆಚ್ಚು ಕಾಲ ಮತ್ತು ಶ್ರಮ ವ್ಯಯಿಸದೇ ನಿಮ್ಮ ಮನೆಯನ್ನು ಶುದ್ಧವಾಗಿರಿಸಿಕೊಳ್ಳಲು ಸಹಾಯಮಾಡುವ ಸಲಹೆಗಳು ಬೇಕಾದಷ್ಟಿವೆ. ಇಲ್ಲಿ ಕೆಳಗೆ ಕೊಟ್ಟಿರುವ ಕೆಲವು ಶುದ್ಧೀಕರಣ ಭಿನ್ನತೆಗಳನ್ನು ಪ್ರತಿಯೊಬ್ಬರೂ ತಿಳಿದಿರಬೇಕು. ವಾಸ್ತವವಾಗಿ ಈ ವಿಧಾನಗಳು ನಿಮ್ಮ ಮನೆಯನ್ನು ಸುಲಭವಾಗಿ ಸ್ವಚ್ಛಗೊಳಿಸಿ ನಿಮಗೆ ವಾಸಿಸಲು ಒಂದು ಉತ್ತಮ ಸ್ಥಳ ದೊರಕುವಲ್ಲಿ ಸಹಾಯಮಾಡುತ್ತವೆ. ಗೆದ್ದಲು ಹುಳಗಳನ್ನು ನಿವಾರಿಸಲು ನೈಸರ್ಗಿಕ ಸಲಹೆಗಳು
ಬಾಗಿಲು ಗಾಜುಗಳ ಮಧ್ಯೆ ಸ್ವಚ್ಛಮಾಡುವುದು
ಇದು ಎಲ್ಲರೂ ತಿಳಿದುಕೊಳ್ಳಬೇಕಾದ ಶುದ್ಧೀಕರಣ ಭಿನ್ನತೆಯಲ್ಲಿ ಒಂದಾಗಿದೆ. ಒಂದು ಹ್ಯಾಂಗರಿಗೆ ಬಟ್ಟೆ ಸುತ್ತಿ ರಬ್ಬರ್ ಬ್ಯಾಂಡಿನಿಂದ ಭದ್ರಮಾಡಿಕೊಂಡ ಸಾಧನದಿಂದ ಇದನ್ನು ಶುದ್ಧಮಾಡಲು ಬಳಸಬಹುದು. ಒವನ್ನಿನ ಕೆಳಗಿನ ಪ್ಲೇಟ್ ತೆಗೆದು ಅಲ್ಲಿ ಗಾಜುಗಳ ಮಧ್ಯೆ ಈ ಸಾಧನವನ್ನು ಬಳಸಿ ಸ್ವಚ್ಛಮಾಡಿ.
ಅಂಟಿಸಿರುವ ಸ್ಟಿಕರ್ ಲೇಬಲ್ಗಳನ್ನು ತೆಗೆಯುವುದು
ಸ್ಟಿಕರ್ ಲೇಬಲ್ಗಳನ್ನು ತೆಗೆಯುವುದು ಕಷ್ಟಕರ. ಸ್ಟಿಕರ್ ಹಾಕಿರುವ ಪಾತ್ರೆಯನ್ನು ಸೋಪಿನ ನೀರಿನಲ್ಲಿ ಒಂದು ರಾತ್ರಿಯಿಡೀ ಸ್ಟಿಕರ್ ತೆಗೆಯಲು ನೆನೆಸಿಡಿ. ಸ್ಟಿಕರ್ ಅಂಟಿಸಿರುವ ಭಾಗವನ್ನು ಒಂದು ಸಿಂಕಿನಲ್ಲಿ ಸ್ವಲ್ಪ ಆಕ್ಸಿಕ್ಲೀನ್ (Oxyclean) ಜೊತೆಗೆ ಬೆಚ್ಚಗಿರುವ ನೀರಿನಿಂದ ತೆಗೆಯುವುದು ವಿಧಾನಗಳಲ್ಲಿ ಒಂದು ಅತ್ಯುತ್ತಮವಾದದ್ದು. ಹೀಗೆ ಪಾತ್ರೆಯನ್ನು ಸುಮಾರು 30 ನಿಮಿಷಗಳು ನೆನಸಿಟ್ಟಾಗ ಸ್ಟಿಕರ್ ಲೇಬಲ್ ಮೇಲೆ ತೇಲಿಕೊಂಡು ಬರುವುದನ್ನು ನೋಡುವಿರಿ.
ಸ್ಟೌವ್ ಬರ್ನರ್ಸ್
ನಿಮ್ಮ ಸ್ಟೌವ್ವಿನ ಬರ್ನರ್ಗಳನ್ನು ಉಜ್ಜಿ ತೊಳೆಯುವುದನ್ನು ನೀವು ನಿಲ್ಲಿಸಬಹುದು. ಒಂದು ಜಿಪ್ಲಾಕ್ ಚೀಲದಲ್ಲಿ ಅಮೋನಿಯ ದ್ರವವನ್ನು ತುಂಬಿ ಅದರಲ್ಲಿ ಸ್ಟೌವ್ ಬರ್ನರ್ಗಳನ್ನು ನೆನಸಿ ಜಿಪ್ ಹಾಕಿ ಮುಚ್ಚಿ. ಹೀಗೆ ಬರ್ನರ್ಗಳನ್ನು ಅಮೋನಿಯಾದ ಹೊಗೆಯಲ್ಲಿ ಮುಚ್ಚಿಟ್ಟಿದ್ದರೆ ಸಾಕು. ಇಡೀ ಒಂದು ರಾತ್ರಿ ಹೀಗಿಟ್ಟು ಮಾರನೇ ದಿವಸ ಒಂದು ಸ್ಪಾಂಜಿನಿಂದ ಒರಸಿ ತೊಳೆಯಿರಿ. ಹೀಗೆ ಸ್ಟೌವ್ ಬರ್ನರ್ಗಳನ್ನು ತೊಳೆಯುವುದು ಒಂದು ಸ್ವಚ್ಛಗೊಳಿಸುವ ವಿಧಾನಗಳಲ್ಲೊಂದು. ಹೊದಿಕೆಗಳ ದೀರ್ಘ ಬಾಳಿಕೆಗೆ ಅನುಸರಿಸಬೇಕಾದ ಮುಂಜಾಗ್ರತೆ
ಕಾರ್ಪೆಟ್ ಸ್ವಚ್ಛಮಾಡುವುದು
ನಿಮ್ಮ ಮನೆಯನ್ನು ಸ್ವಚ್ಛಮಾಡುತ್ತಿದ್ದಾಗ ಕಾರ್ಪೆಟ್ ಸ್ವಚ್ಛಮಾಡುವುದು ನಿಮ್ಮ ಹೆಚ್ಚು ಸಮಯ ತೆಗೆದುಕೊಳ್ಳುತ್ತದೆ. ವಿನೇಗರ್ ಮತ್ತು ನೀರಿನ ಮಿಶ್ರಣ ಕಲೆಗಳಿಂದ ಕೊಳೆಯಾದ ಕಾರ್ಪೆಟ್ ಸ್ವಚ್ಛಮಾಡಲು ಒಂದು ಉಪಾಯ. ನೀವು ಮಾಡಬೇಕಾದ್ದು ಇಷ್ಟೇ: ಮಿಶ್ರಣವನ್ನು ಕಾರ್ಪೆಟ್ಟಿನ ಮೇಲೆ ಸಿಂಪಡಿಸಿ. ಐರನ್ ಬಾಕ್ಸ್ ಸ್ಟೀಂ ಬಳಸಿ ಐರನ್ ಮಾಡಿ. ಕಲೆ ಮತ್ತು ಕೊಳೆ ಇನ್ನೂ ಹೋಗದ್ದಿದ್ದರೆ ಈ ಪ್ರಕ್ರಿಯಯನ್ನು ಪುನರಾವರ್ತಿಸಿ. ಈ ಶುದ್ಧೀಕರಣ ವಿಧಾನವನ್ನು ಎಲ್ಲರೂ ತಿಳಿದುಕೊಳ್ಳಬೇಕಾದ ಭಿನ್ನತೆಗಳಲ್ಲಿ ಒಂದಾಗಿದೆ.
ಟಬ್ ಕಲೆಗಳು
ಮನೆಗಳಲ್ಲಿ ಇದೊಂದು ಬಹಳಷ್ಟು ಉಜ್ಜಿ ತೊಳೆಯುವ ಭಾಗವಾಗಿದೆ. ಎಲ್ಲರೂ ತಿಳಿದುಕೊಳ್ಳಬೇಕಾದ ಶುದ್ಧೀಕರಣ ಭಿನ್ನತೆಗಳಲ್ಲೊಂದಾದ ಬಹಳಷ್ಟು ಉಜ್ಜಿ ತೊಳೆಯುವುದನ್ನು ತಪ್ಪಿಸಿ. ಅಡಿಗೆ ಸೋಡ, ಟಾರ್ಟಾರ್ ಕೆನೆ (ಪೊಟ್ಯಾಸಿಯಮ್ ಹೈಡ್ರೋಜನ್) ಮತ್ತು ಸಣ್ಣ ಪ್ರಮಾಣದ ನಿಂಬೆ ರಸ ಇವುಗಳ ಸಮಪ್ರಮಾಣದ ಮಿಶ್ರಣವನ್ನು ಪೇಸ್ಟ್ ರೀತಿಯಲ್ಲಿ ಮಾಡಿ ಕಲೆಯಿರುವ ಪ್ರದೇಶಗಳಲ್ಲಿ ಹಚ್ಚಿ. ಹಾಗೆಯೇ 30 ನಿಮಿಷಗಳ ಕಾಲ ಬಿಟ್ಟು, ನೀರಿನಿಂದ ತೊಳೆದಾಗ ನಿರ್ಮಲವಾಗಿರುವ ಕಲೆರಹಿತ ಟಬ್ ಕಾಣುವಿರಿ.



Click it and Unblock the Notifications


