Latest Updates
-
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ! -
ಡೇಟಿಂಗ್ ಆ್ಯಪ್ ಹನಿಟ್ರ್ಯಾಪ್: ಪಬ್ಗಳಲ್ಲಿ ನಡೆಯುವ ಈ ದಂಧೆಯಿಂದ ಪಾರಾಗುವುದು ಹೇಗೆ? -
IMD ಮಳೆ ಅಲರ್ಟ್: ಬೆಂಗಳೂರು, ಚೆನ್ನೈ, ಕೇರಳದಲ್ಲಿ ಭಾರೀ ಮಳೆ; ಮನೆಯನ್ನು ಸುರಕ್ಷಿತವಾಗಿರಿಸಲು ಈ ಟಿಪ್ಸ್ ಪಾಲಿಸಿ! -
ಇಂದಿನಿಂದ ಎನರ್ಜಿ ಡ್ರಿಂಕ್ಸ್ ನಿಯಮ ಬದಲಾವಣೆ: ಕ್ಯಾನ್ ಖರೀದಿಸುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ಅಪಾರ್ಟ್ಮೆಂಟ್ ಗೇಟ್ನಲ್ಲಿ ಟ್ರಾಫಿಕ್ ಜಾಮ್? ಈ ಸರಳ ಟಿಪ್ಸ್ ಪಾಲಿಸಿದರೆ 5 ನಿಮಿಷದಲ್ಲಿ ಹೊರಬರಬಹುದು!
ಆಹಾರ ಕೆಡದಂತೆ ಶೇಖರಿಸಿಡುವ ವಿಧಾನ

ದವಸ ಧಾನ್ಯಗಳನ್ನು, ಒಣ ಹಣ್ಣುಗಳನ್ನು ತುಂಬಾ ಕಾಲ ಇಡಬಹುದಾದರೂ ಅದನ್ನು ಸರಿಯಾದ ರೀತಿಯಲ್ಲಿ ಶೇಖರಿಸಿಡದಿದ್ದರೆ ಆ ವಸ್ತುಗಳಲ್ಲಿ ಬೂಸ್ಟು ಕಂಡು ಬರುವುದು. ಇನ್ನು ತರಕಾರಿ ಮತ್ತು ಹಣ್ಣುಗಳನ್ನು ತುಂಬಾ ಕಾಲ ಇಡಲು ಸಾಧ್ಯವಾಗದಿದ್ದರೂ ಸ್ವಲ್ಪ ಗಮನಕೊಟ್ಟರೆ ಎರಡು ದಿನ ಹೆಚ್ಚು ಬಾಳಿಕೆ ಬರುವಂತೆ ಮಾಡಬಹುದು.
ಆದ್ದರಿಂದ ಆಹಾರದಲ್ಲಿರುವ ಪೋಷಕಾಂಶಗಳು ಹಾಳಾಗದಂತೆ ನೋಡಿಕೊಳ್ಳಲು ಈ ಕೆಳಗಿನ ಸಲಹೆಗಳನ್ನು ಬಳಸಬಹುದು:
ಶಾಖದಿಂದ ದೂರವಿಡಿ: ತುಪ್ಪ ಅಥವಾ ಸಂಬಾರ ಪದಾರ್ಥಗಳನ್ನು ಉರಿಯಿಂದ ದೂರವಿಡಬೇಕು. ತುಪ್ಪವನ್ನು ಒಂದು ರಾತ್ರಿ ಬೆಂಕಿಯ ಹತ್ತಿರ ಇಟ್ಟು ಬೆಳಗ್ಗೆ ತುಪ್ಪದ ರುಚಿ ನೋಡಿದರೆ ಅದು ರುಚಿಯನ್ನು ಕಳೆದುಕೊಂಡಿರುವಂತೆ ಭಾಸವಾಗುತ್ತದೆ. ಆದ್ದರಿಂದ ಅಂತಹ ವಸ್ತುಗಳನ್ನು ಉರಿಯಿಂದ ದೂರ ಇಡಬೇಕು.
ಸೊಪ್ಪು: ಕೊತ್ತಂಬರಿ ಸೊಪ್ಪು, ಮೆಂತೆ ಸೊಪ್ಪು, ಕರಿಬೇವಿನ ಎಲೆ ಮತ್ತು ಇತರ ಸೊಪ್ಪುಗಳನ್ನು ಪ್ರಿಜ್ ನಲ್ಲಿ ಇಡುವ ಮುನ್ನ ಅದನ್ನು ಪೇಪರ್ ನಿಂದ ಸುತ್ತಿ ಪ್ರಿಜ್ ನಲ್ಲಿ ಇಟ್ಟರೆ ಅದು ತನ್ನ ತಾಜಾತನವನ್ನು ಕಳೆದುಕೊಳ್ಳುವುದಿಲ್ಲ.
ಎಲ್ಲಾ ವಸ್ತುಗಳನ್ನು ಪ್ರಿಜ್ ನಲ್ಲಿ ಇಡುವುದು ಸೂಕ್ತವಲ್ಲ: ಕಾಳುಗಳನ್ನು ಡಬ್ಬದಲ್ಲಿ ಸಂಗ್ರಹಿಸುವುದು ಸೂಕ್ತ. ಹಾಗೆಯೇ ಬಾಳೆ ಹಣ್ಣು, ಬೇಕರಿ ತಿಂಡಿಗಳನ್ನು ಪ್ರಿಜ್ ನಲ್ಲಿಟ್ಟರೆ ಅದರ ಮೂಲ ರುಚಿ ಕಳೆದುಕೊಳ್ಳುವುದು.
ಗಾಳಿಯಾಡದಂತಹ ಡಬ್ಬಿ: ಮೆಂತೆ, ಉದ್ದಿನ ಬೇಳೆ, ತೊಗರಿ ಬೇಳೆ, ಉಪ್ಪಿನಕಾಯಿ ಮುಂತಾದ ವಸ್ತುಗಳನ್ನು ಗಾಳಿಯಾಡದಂತಹ ಡಬ್ಬದಲ್ಲಿ ಶೇಖರಿಸಿಡಬೇಕು.



Click it and Unblock the Notifications
