Latest Updates
-
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ!
ಅಡುಗೆ ಸೋಡಾದಿಂದ ಮನೆ ಶುಚಿ ಹೇಗೆ?

1. ಮೈಕ್ರೋವೇವ್: ಮೈಕ್ರೋವೇವ್ ಒಳಗಡೆ ಸ್ಟೀಲ್ ನಿಂದ ಮಾಡಿದ್ದು ಪಾತ್ರೆ ತೊಳೆಯುವ ಸೋಪಿನಿಂದ ತೊಳೆದರೆ ಅಷ್ಟೇನು ಶುಚಿಯಾಗುವುದಿಲ್ಲ, ಆದರೆ ನಿಂಬೆ ರಸ ಮತ್ತು ಅಡುಗೆ ಸೋಡಾ ಬಳಸಿ ಉಜ್ಜಿದರೆ ಜಿಗುಟು ವಾಸನೆಯನ್ನು ಹೋಗಲಾಡಿಸಬಹುದು.
2. ಕಿಚನ್ ಸ್ಲ್ಯಾಬ್ : ಕಿಚನ್ ಸ್ಲ್ಯಾಬ್ ಮೇಲೆ ಸಾರು ಅಥವಾ ಸಾಸ್ ಬಿದ್ದು ಒಣಗಿ ಹೋಗಿದ್ದರೆ ಅದನ್ನು ಬಟ್ಟೆ ನೆನೆಸಿ ಉಜ್ಜಿವುದರಿಂದ ಹೋಗುವುದಿಲ್ಲ. ಆದರೆ ಅಡುಗೆ ಸೋಡಾವನ್ನು ಸಾರು ಅಥವಾ ಇತರ ಪದಾರ್ಥ ಬಿದ್ದ ಜಾಗದಲ್ಲಿ ಹಾಕಿ ನಂತರ ಉಜ್ಜಿದರೆ ಶುದ್ಧವಾಗುತ್ತದೆ.
3. ಸೀದು ಹೋದ ಕಲೆ:ಕೆಲವೊಮ್ಮೆ ಆಹಾರವನ್ನು ಬೇಯಿಸುವಾಗ ಸೀದು ಹೋಗುತ್ತದೆ. ಆ ಸೀದು ಹೋದ ಕಲೆಯನ್ನು ಹೋಗಲಾಡಿಸುವುದು ತುಂಬಾ ಕಷ್ಟ. ಅಂತರ ಪಾತ್ರೆಗಳನ್ನು ಶುಚಿಗೊಳಿಸಲು ಬಕೆಟ್ ನಲ್ಲಿ ಬಿಸಿ ನೀರು ಮತ್ತು ಸೋಡಾ ಹಾಕಿ ಅದರಲ್ಲಿ ಪಾತ್ರೆಯನ್ನು ರಾತ್ರಿಯಲ್ಲಿ ಮುಳುಗಿಸಿಟ್ಟು ಬೆಳಗೆ ಪಾತ್ರೆ ತೊಳೆಯುವ ಸೋಪು ಬಳಸಿ ತೊಳೆದರೆ ಸೀದು ಹೋದ ಕಲೆ ಮಾಯವಾಗುತ್ತದೆ.
4. ರೆಫ್ರಿಜರೇಟರ್ : ರೆಫ್ರಿಜರೇಟರ್ ತೆರೆಯುವಾಗ ಅದರಿಂದ ವಾಸನೆ ಬರುತ್ತಿದ್ದರೆ ಒಂದು ಚಿಕ್ಕ ಬಟ್ಟಲಿನ ತುಂಬಾ ಅಡುಗೆ ಸೋಡಾ ಹಾಕಿ ಅದನ್ನು ರೆಫ್ರಿಜರೇಟರ್ ನಲ್ಲಿ ಇಟ್ಟರೆ ವಾಸನೆ ಬರುವುದಿಲ್ಲ, ಅಲ್ಲದೆ ರೆಫ್ರಜರೇಟರ್ ನಲ್ಲಿ ಕೊಳೆ ಇದ್ದರೆ ಅದನ್ನು ಹೋಗಲಾಡಿಸಲು ಸಹ ಅಡುಗೆ ಸೋಡಾವನ್ನು ಬಳಸಬಹುದು.
5.ಕಿಚನ್ ಸಿಂಕ್ ಮತ್ತು ಬಾತ್ ರೂಂ ವಾಶ್ ಬೇಸಿನ್: ಕಿಚನ್ ಸಿಂಕ್ ಶುಚಿಗೊಳಿಸಲು ಒಂದು ಚಮಚ ಅಡುಗೆ ಸೋಡಾವನ್ನು ಸಿಂಕ್ ಗೆ ಹಾಕಿ 10 ನಿಮಿಷದ ಬಳಿಕ ಉಜ್ಜಿ ಬಿಸಿ ನೀರು ಹಾಕಿದರೆ ಸಿಂಕ್ ಹೊಳಪಾಗುತ್ತದೆ. ಅದೇ ರೀತಿ ವಾಶ್ ಬೇಸಿನ್ ಗೂ ಹಾಕಿ ತೊಳೆದರೆ ಸ್ವಚ್ಚವಾಗಿ ಕಾಣುತ್ತದೆ.
6. ಕಾರ್ಪೆಟ್: ಕಾರ್ಪೆಟ್ ನಲ್ಲಿ ಕೊಳೆ ಇದ್ದರೆ ಅದನ್ನು ತೆಗೆಯುವುದು ಕಷ್ಟ. ಆದರೆ ಬೇಕಿಂಗ್ ಸೋಡಾವನ್ನು ಕಾರ್ಪೆಟ್ ಮೇಲೆ ಸಿಂಪಡಿಸಿ 10 ನಿಮಿಷದ ಬಳಿಕ ವ್ಯಾಕ್ಯೂಮ್ ಕ್ಲೀನರ್ ನಿಂದ ಶುಚಿಗೊಳಿಸಬಹುದು.
7. ಬೆಳ್ಳಿ: ಬೆಳ್ಳಿ ಪಾತ್ರೆಗಳು ಮತ್ತು ಆಭರಣಗಳನ್ನು ತೊಳೆಯಲು ಅಡಗೆ ಸೋಡವನ್ನು ಸ್ವಲ್ಪ ನೀರು ಬೆರೆಸಿ ಗಟ್ಟಿಯಾದ ಪೇಸ್ಟ್ ಮಾಡಿ ಉಜ್ಜಿ ಬಿಸಿ ನೀರಿನಲ್ಲಿ ತೊಳೆದರೆ ಬೆಳ್ಳಿ ಸಾಮಾನುಗಳು ಹೊಸದರಂತೆ ಹೊಳೆಯಲಾರಂಭಿಸುತ್ತದೆ.



Click it and Unblock the Notifications
