Latest Updates
-
ಬೆಳಗಿನ ವಾಕಿಂಗ್ ಹೋಗ್ತಿದ್ದೀರಾ? ಡೆಂಗ್ಯೂ ಸೊಳ್ಳೆಗಳಿಂದ ಪಾರಾಗಲು ಈ ಸರಳ ಟಿಪ್ಸ್ ಮಿಸ್ ಮಾಡ್ಬೇಡಿ! -
ಸೆಪ್ಟೆಂಬರ್ 28ರ ಪ್ರೇಮ ರಾಶಿಫಲ: ನಿಮ್ಮ ಸಂಬಂಧದಲ್ಲಿ ಹೊಸ ಉತ್ಸಾಹ ತುಂಬಲು ಇಂದಿನ ರಾಶಿವಾರು ಸಲಹೆಗಳು ಮತ್ತು ಶುಭ ಸಮಯ -
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ!
ಅಡುಗೆ ಮನೆಯಲ್ಲಿ ಈ ಟ್ರಿಕ್ಸ್ ತುಂಬಾ ಸಹಾಯಕ್ಕೆ ಬರುತ್ತದೆ
ಅಡುಗೆ ಮನೆಯನ್ನು ಒಪ್ಪ ಓರಣವಾಗಿ ಇಡುವುದು ಒಂದು ಕಲೆಯಾದರೆ ಅಲ್ಲಿ ನಾವು ಬಳಸುವ ವಸ್ತುಗಳು ಹಾಳಾಗದಂತೆ ಕಾಪಾಡುವುದು, ಮಾಡುವ ಅಡುಗೆಯನ್ನು ಮತ್ತಷ್ಟು ರುಚಿಕರವಾಗಿ ಮಾಡಲು ಕೆಲವೊಂದು ಉಪಾಯಗಳನ್ನು ಪಾಲಿಸಿದರೆ ಅಡುಗೆ ಮತ್ತಷ್ಟು ಸರಳವಾಗುವುದು ಅಲ್ಲದೆ ಆಹಾರ ಸಾಮಗ್ರಿಯಲ್ಲಿ ಹುಳಾಗದಂತೆ ಕಾಪಾಡಬಹುದು.

ಹಾಲು ಕಾಯಿಸಲು ಇಟ್ಟಿರುತ್ತೀರಿ, ಸ್ವಲ್ಪ ಅತ್ತಿತ್ತ ನೋಡುವಷ್ಟರಲ್ಲಿ ಹಾಲು ಉಕ್ಕಿ ಗ್ಯಾಸ್ ಮೇಲೆ ಬಿದ್ದಿರುತ್ದೆ, ಚಪಾತಿಗೆ ಲಟ್ಟಿಸುತ್ತೀರಿ, ಆದ್ರೆ ಚಪಾತಿ ನೋಡಿದರೆ ತುಂಬಾ ಗಟ್ಟಿಯಾಗಿ ಬಂದಿರುತ್ತದೆ, ಸಕ್ಕರೆ ಡಬ್ಬ ತೆಗೆದು ನೋಡಿದರೆ ಅದರಲ್ಲಿ ತುಂಬಾ ಇರುವೆ ತುಂಬಿರುತ್ತದೆ.
ಹೀಗೆ ಅಡುಗೆ ಮನೆಯಲ್ಲಿ ಈ ರೀತಿಯ ಸಮಸ್ಯೆಗಳು ಎದುರಾಗುವುದು ಸಹಜ. ಇಲ್ಲಿ ಕೆಲವೊಂದು ಟಿಪ್ಸ್ ನೀಡಿದ್ದೇವೆ. ಅವುಗಳನ್ನು ಪಾಲಿಸಿದರೆ ಅಡುಗೆ ಮನೆ ನಿರ್ವಹಣೆ ಮತ್ತಷ್ಟು ಸುಲಭವಾಗುವುದು.

ಹಾಲು ಉಕ್ಕಿ ಚೆಲ್ಲುವುದನ್ನು ತಡೆಯುವುದು ಹೇಗೆ?
ಹಾಲು ಕಾಯಿಸಲು ಇಟ್ಟಾಗ ಅಥವಾ ಟೀ ಮಾಡಲು ಇಟ್ಟಾಗ ಬೇಗನೆ ಉಕ್ಕಿ ಬರುತ್ತದೆ, ಇದನ್ನು ತಡೆಗಟ್ಟಲು ನೀವು ಎರಡು ವಿಧಾನ ಅನುಸರಿಸಬಹುದು.
1. ನೀವು ಸಿಮ್‌ನಲ್ಲಿಟ್ಟು ಹಾಲು ಕಾಯಿಸುವುದು, ಟೀ ಮಾಡುವುದು ಮಾಡಬೇಕು.
2. ಇಲ್ಲಾ ಬೇಗ ಮಾಡಬೇಕೆಂದರೆ ಹಾಲು ಕಾಯಿಸುವಾಗ ಅಥವಾ ಟೀ ಮಾಡುವಾಗ ಒಂದು ಸ್ಪೂನ್ ಹಾಕಿ ಆಗಾಗ ಆಡಿಸಿ, ಇದರಿಂದ ಉಕ್ಕಿ ಹೊರಗೆ ಚೆಲ್ಲುವುದಿಲ್ಲ. ಗ್ಯಾಸ್ ಕೂಡ ಗಲೀಜು ಆಗದೆ ಸ್ವಚ್ಛವಾಗಿಯೇ ಇರುತ್ತದೆ.

ಮೃದುವಾದ ಚಪಾತಿ ಮಾಡುವುದು ಹೇಗೆ?
ಚಪಾತಿಗೆ ಕಲಿಸುವಾಗ ಅದರ ಹದದಲ್ಲಿ ಹೆಚ್ಚು ಕಡಿಮೆಯಾದರೆ ಚಪಾತಿ ತುಂಬಾ ಗಟ್ಟಿಯಾಗಿ ಬರುತ್ತದೆ. ಚಪಾತಿ ಮೃದುವಾಗಬೇಕೆಂದರೆ ಈ ವಿಧಾನಗಳನ್ನು ಅನುಸರಿಸಬಹುದು.
1. ಗೋಧಿ ಹಿಟ್ಟು ಕಲೆಸುವಾಗ ತಣ್ಣೀರು ಬದಲಿಗೆ ಬಿಸಿ ನೀರು ಹಾಕಿ ಕಲೆಸಿ.2.ಹಿಟ್ಟಿಗೆ ಸ್ವಲ್ಪ ಹಾಲು ಅಥವಾ ಮೊಸರನ್ನ ಹಾಕಿ ಕಲಿಸಿದರೂ ಹಿಟ್ಟು ಮೃದುವಾಗಿರುವುದರಿಂದ ಚಪಾತಿ ಮೃದುವಾಗಿ, ರುಚಿಯಾಗಿ ಬರುತ್ತದೆ.

ಅಕ್ಕಿಗೆ ಹುಳ ಬೀಳದಿರಲು ಏನು ಮಾಡಬೇಕು?
ಅಕ್ಕಿ ಸ್ವಲ್ಪ ಅಧಿಕ ತಂದಿಟ್ಟರೆ ಅದರಲ್ಲಿ ಹುಳಾಗುತ್ತವೆ. ಆಗಾಗ ಬಿಸಿಲಿನಲ್ಲಿ ಹಾಕಿಟ್ಟರೆ ಹುಳ ಬರುವುದಿಲ್ಲ. ಆದರೆ ಕೆಲಸದ ಒತ್ತಡದ ನಡುವೆ ಅಷ್ಟು ಸಮಯವಿಲ್ಲದಿದ್ದರೆ ಹೀಗೆ ಮಾಡಿ.
1.ಅಕ್ಕಿ ಡಬ್ಬಕ್ಕೆ ಬೇವಿನ ಎಲೆಗಳನ್ನು ಹಾಕಿಡಿ.
2. ಬೆಳ್ಳುಳ್ಳು ಜಜ್ಜಿ ಹಾಕಿಟ್ಟರೂ ಅಕ್ಕಿಯಲ್ಲಿ ಹುಳ ಬರುವುದಿಲ್ಲ.
3. ಕಾಳು ಮೆಣಸು ಹಾಕಿಡಬಹುದು

ತೊಗರಿ ಬೇಳೆ ಹಾಳಾಗದಿರಲು ಏನು ಮಾಡಬೇಕು?
ತೊಗರಿ ಬೇಳೆ ಕೂಡ ಅಷ್ಟೇ ಹಾಗೇ ಇಟ್ಟರೆ ಚಿಕ್ಕ-ಚಿಕ್ಕ ಕೀಟಗಳು ಕಂಡು ಬರುವುದು. ಹೀಗೆ ಉಂಟಾದರೆ ತೊಗರಿಗೆ ತೂತ ಬಿದ್ದು ಸಾರು ಮಾಡಲು ಸಾಧ್ಯವಾಗುವುದಿಲ್ಲ. ಅದನ್ನು ತಡೆಗಟ್ಟಲು ತೊಗರಿ ಬೇಳೆ ಜೊತೆ ಒಂದೆರಡು ಒಣ ಮೆಣಸು ಹಾಕಿಡಿ, ಇದರಿಂದ ಬೇಳೆ ಹಾಳಾಗುವುದಿಲ್ಲ.

ಸಕ್ಕರೆಗೆ ಇರುವೆ ಬರುದು ತಡೆಗಟ್ಟಬೇಕೆ?
ಸಕ್ಕರೆ ಡಬ್ಬ ಇದ್ದಲ್ಲಿ ಇರುವೆ ಬರುವುದು ಸಹಜ, ಇನ್ನು ಸಕ್ಕರೆ ಡಬ್ಬದ ಮುಚ್ಚಳ ಸ್ವಲ್ಪ ಸಡಿಲವಾಗಿದ್ದರೂ ಇರುವೆ ತುಂಬಿ ಬಿಡುತ್ತದೆ. ಇದನ್ನು ತಡೆಗಟ್ಟಲು ಲವಮಗ ಬಳಸಿ.
ಸಕ್ಕರೆ ಡಬ್ಬರಕ್ಕೆ ಒಂದೆರಡು ಲವಂಗ ಹಾಕಿಟ್ಟರೆ ಸಕ್ಕರೆ ಡಬ್ಬಕ್ಕೆ ಇರುವೆ ಮುತ್ತುವುದಿಲ್ಲ.

ಹಸಿ ಮೆಣಸಿನಕಾಯಿ ಕೊಳೆತು ಹೋಗಬಾರದೇ?
ಹಸಿ ಮೆಣಸಿನಕಾಯಿ ತುಂಬಾ ದಿನ ಇಟ್ಟರೆ ಹಾಳಾಗುತ್ತದೆ. ಹೀಗಾದಿರಲು ಅದನ್ನು ತಂದಾಗ ಅದರ ತೊಟ್ಟು ತೆಗೆದು ಇಟ್ಟರೆ ತುಂಬಾ ದಿನ ಬಳಸಬಹುದು.

ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದು ಹೇಗೆ?
ಬೆಳ್ಳುಳ್ಳಿ ಸಿಪ್ಪೆ ಬಿಡಿಸುವುದು ಸ್ವಲ್ಪ ಕಷ್ಟದ ಕೆಲಸ ಹವದು, ತುಂಬಾ ಬಿಡಿಸಲು ಇದ್ದರೆ ಕೈ ನೋವು ಬರುತ್ತದೆ.
1. ಬೆಳ್ಳುಳ್ಳಿಯನ್ನು ಚೆನ್ನಾಗಿ ಬಿಸಿಲಿನಲ್ಲಿ ಒಣಗಿಸಿ ನಂತರ ಒಂದು ಡಬ್ಬದಲ್ಲಿ ಹಾಕಿ ಅಲುಗಾಡಿಸಿದರೆ ಸಿಪ್ಪೆ ಕಿತ್ತು ಬರುವುದು.
2. ಬೆಳುಳ್ಳಿಯನ್ನು ನೀರಿನೊಳಗೆ ಹಾಕಿಟ್ಟರೂ ಸುಲಭದಲ್ಲಿ ಸಿಪ್ಪೆ ಸುಲಿಯಬಹುದು.



Click it and Unblock the Notifications
