Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ತುಳಸಿ ಗಿಡದ ಆರೈಕೆಗೆ ಟಿಪ್ಸ್
ಭಾರತದಲ್ಲಿ ತುಳಸಿಯನ್ನು ಪೂಜನೀಯ ಗಿಡವೆಂದು ಪರಿಗಣಿಸಲಾಗಿದೆ. ಕನ್ನಡಿಗರ ಮನೆ ಮುಂದೆ ಅಂತೂ ತುಳಸಿ ಕಟ್ಟೆ ಇದ್ದೇ ಇರುತ್ತದೆ. ದಿನನಿತ್ಯ ತುಳಸಿಗೆ ಪೂಜೆ ಮಾಡಿದರೆ ಶುಭ ಉಂಟಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ.
ಇನ್ನು ತುಳಸಿಯಲ್ಲಿ ಅನೇಕ ಔಷಧೀಯ ಗುಣಗಳಿವೆ ಅನ್ನುವುದು ಪ್ರತಿಯೊಬ್ಬರಿಗೂ ಗೊತ್ತು. ಈ ಗಿಡವನ್ನು ಚಿಕ್ಕ ಹೂವಿನ ಕುಂಡದಲ್ಲಿ ಕೂಡ ಬೆಳೆಸಬಹುದು. ಆದರೆ ಅದರ ಆರೈಕೆಯನ್ನು ಈ ಕೆಳಗಿನಂತೆ ಮಾಡಿದರೆ ಮಾತ್ರ ಗಿಡ ಸೊಂಪಾಗಿ ಇರುತ್ತದೆ.

ಸ್ವಲ್ಪ ಬಿಸಿಲಿರುವ ಕಡೆ ಇಡಬೇಕು
ನೇರವಾಗಿ ಸೂರ್ಯನ ಕಿರಣಗಳು ಬೀಳುವ ಕಡೆ ತುಳಸಿ ಗಿಡವನ್ನು ಇಡಬೇಡಿ. ತುಳಸಿ ಗಿಡವಿರುವ ಸ್ಥಳ ತುಂಬಾ ತಂಪಾಗಿಯೂ ಇರಬಾರದು. ಸ್ವಲ್ಪ ಬಿಸಿಲಿರುವ ಕಡೆ ತುಳಸಿ ಗಿಡವನ್ನು ನೆಡುವುದು ಒಳ್ಳೆಯದು. ಮನೆಯ ಮುಂದೆ ತುಳಸಿ ಕಟ್ಟೆ ಮಾಡುವುದಾದರೆ ಮನೆಯ ನೆರಳು ಕಟ್ಟೆಯ ಮೇಲೆ ಬೀಳುವಂತಿದ್ದರೆ ಗಿಡ ಸೊಂಪಾಗಿ ಬೆಳೆಯುತ್ತದೆ.
ನೀರು
ತುಳಸಿ ಗಿಡಕ್ಕೆ ಪ್ರತಿದಿನವೂ ನೀರು ಹಾಕಬೇಕು. ಎರಡು ದಿನ ನೀರು ಹಾಕದಿದ್ದರೆ ಸಾಕು ಗಿಡ ಒಣಗುವುದು.
ಮಣ್ಣು
ತುಳಸಿ ಗಿಡಕ್ಕೆ ಸ್ವಲ್ಪ ತೇವಾಂಶವಿರುವ ಮಣ್ಣು ಒಳ್ಳೆಯದು.
ಗೊಬ್ಬರ
ಇದಕ್ಕೆ ಯಾವುದೇ ಗೊಬ್ಬರದ ಅವಶ್ಯಕತೆಯಿಲ್ಲ. ಬೇಕಿದ್ದರೆ ಸೆಗಣಿ ಗೊಬ್ಬರ ಹಾಕಬಹುದು.
ತುಳಸಿ ಹೂ
ತುಳಸಿ ಗಿಡ ಹೂ ಬಿಟ್ಟಾಗ ಸುಂದರವಾಗಿ ಕಾಣುತ್ತಿದೆ ಎಂದು ಬಿಡಬೇಡಿ. ಈ ಹೂವನ್ನು ಚಿವುಟದೆ ಗಿಡದಲ್ಲಿ ಹಾಗೆಯೇ ಬಿಟ್ಟರೆ ಗಿಡ ಒಣಗುವುದು.
ಕೀಟನಾಶಕಗಳು
ತುಳಸಿ ಗಿಡಕ್ಕೆ ಯಾವುದೇ ಕೀಟ ನಾಶಕಗಳನ್ನು ಬಳಸುವ ಅಗತ್ಯವಿಲ್ಲ. ಈ ಗಿಡಕ್ಕೆ ಸೋಂಕು ನಿವಾರಕ ಗುಣವಿದೆ.



Click it and Unblock the Notifications
