Latest Updates
-
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್! -
2026ರ ನವರಾತ್ರಿ ಗರ್ಬಾ: ಪಾಸ್ ವಂಚನೆಗೆ ಬಲಿಯಾಗದಿರಿ, ಸುರಕ್ಷಿತವಾಗಿ ಆನಂದಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ದೆಹಲಿಯಲ್ಲಿ ಕಠಿಣ GRAP ನಿಯಮ ಜಾರಿ: ಮನೆಯ ಗಾಳಿ ಶುದ್ಧವಾಗಿಡಲು ಮತ್ತು ಮಾಲಿನ್ಯ ತಡೆಯಲು ಇಲ್ಲಿವೆ ಸರಳ ಟಿಪ್ಸ್ -
ಹಬ್ಬದ ಸಿಹಿ ಕೊಳ್ಳುವ ಮುನ್ನ ಎಚ್ಚರ: FSSAI ಕಟ್ಟುನಿಟ್ಟಿನ ಕಾರ್ಯಾಚರಣೆ ಮತ್ತು ಹೊಸ ನಿಯಮಗಳೇನು? -
ಮೈಸೂರು ದಸರಾ 2026: ಟಿಕೆಟ್ ಬುಕ್ಕಿಂಗ್ ಆರಂಭ, ಕಂಬಳ ನೋಂದಣಿಗೆ ಇಂದೇ ಕೊನೆಯ ದಿನ! -
ಗಾಂಧಿ ಜಯಂತಿ ವಿಶೇಷ: ಫಿಟ್ನೆಸ್ ಮತ್ತು ಸಮಾಜ ಸೇವೆ ಬೆಸೆಯುವ 'ಪ್ಲಾಗಿಂಗ್'ಗೆ ಸಿದ್ಧರಾಗಿ!
ನಿಮ್ಮ ಮನೆಯ ಹಜಾರವನ್ನು ವಿನ್ಯಾಸಗೊಳಿಸಲು 6 ಸಲಹೆಗಳು
ಸಾಮಾನ್ಯವಾಗಿ ಮನೆಗಳಲ್ಲಿ ವಿಶ್ರಾಂತಿ ಗೃಹ ಅಥವಾ ಮನೆಯ ಪ್ರವೇಶ ಹಜಾರ (ಹಾಲ್) ವಿವಿಧ ವಿನ್ಯಾಸಗಳಲ್ಲಿ ಕಂಡುಬರುತ್ತಿದೆ. ನಿಮ್ಮ ಅತಿಥಿಗಳು ಮನೆಗೆ ಬಂದಾಗ ಮೊಟ್ಟಮೊದಲು ವಿಶ್ರಾಂತಿ ಪಡೆಯುವ ಸ್ಥಳ ಇದು. ಆದ್ದರಿಂದ ಇದರ ವಿನ್ಯಾಸಕ್ಕಾಗಿ ನೀವು ವಿಶೇಷ ಕಾಳಜಿಯನ್ನು ವಹಿಸುವುದು ಅತ್ಯಗತ್ಯ.
ನೀವು ಆಯ್ಕೆ ಮಾಡುವ ಬಣ್ಣ, ಪೀಠೋಪಕರಣಗಳು, ರಗ್ಗುಗಳು ಮತ್ತು ಇತರ ಅಲಂಕಾರಿಕ ವಸ್ತುಗಳು, ನಿಮ್ಮ ಮನೆಗೆ ಬರುವ ಅತಿಥಿಗಳು ನಿಮ್ಮ ಮನೆಗೆ ಕಾಲಿಟ್ಟ ಮರುಕ್ಷಣವೇ ಅವರಿಗೆ ಪರಿಪೂರ್ಣ ಸ್ವಾಗತದ ಅನುಭವ ನೀಡುವಂತಿರಬೇಕು. ಮನೆಯ ಹಜಾರದ ಅಲಂಕಾರಿಕ ಕಲ್ಪನೆಗಳು ಸಾಕಷ್ಟಿವೆ.
ನಿಮ್ಮ ಮನೆಯ ಹಜಾರದ ಮೂಲಭೂತ ಅಲಂಕಾರಿಕ ಕಲ್ಪನೆಗಳೆಂದರೆ, ಮನೆಯನ್ನು ಸರಳ ಸುಂದರವಾಗಿ ಇಟ್ಟುಕೊಂಡಿರಬೇಕು ಮತ್ತು ಮನೆಯು ಸಂಪೂರ್ಣ ಅಲಂಕಾರಗಳ ಸಂಯೋಜನೆ ಮಾಡುವಂತಿರಬೇಕು. ನಿಮ್ಮ ಮನೆಯ ಹಾಲ್ ಸುಂದರವಾಗಿ ಕಾಣಲು ಇಲ್ಲಿ ಕೆಲವೊಂದು ಸಲಹೆಗಳನ್ನು ನೀಡಲಾಗಿದೆ. ಮನೆಯ ಅಂದ ಚಂದವನ್ನು ಹೆಚ್ಚಿಸಲು ನಮ್ಮ ಸಲಹೆಗಳು!

ರೋಮಾಂಚಕ ಬಣ್ಣ
ನಿಮ್ಮ ಮನೆಯ ಪ್ರವೇಶ ದ್ವಾರಕ್ಕೆ ನೀವು ಸೇರಿಸುವ ಬಣ್ಣ ನಿಮ್ಮ ಮನೆಯ ಸೌಂದರ್ಯವನ್ನು ನಿರೂಪಿಸುತ್ತದೆ. ಮನೆ ಅಲಂಕಾರ ಹೆಚ್ಚಿಸುವುದಕ್ಕಾಗಿ ಹಾರ್ದಿಕ ಸ್ವಾಗತವನ್ನು ನೀಡುವಂತಹ ಕಡು ರೋಮಾಂಚಕ ಬಣ್ಣಗಳನ್ನು ಬಳಸುವುದು ಉತ್ತಮ. ನಿಮ್ಮ ಅತಿಥಿಗಳನ್ನು ಸ್ವಾಗತಿಸುವಂತಹ, ಇಡೀ ಮನೆಯ ನೋಟವನ್ನು ಉತ್ತಮಗೊಳಿಸುವ ಸೂಕ್ತ ಬಣ್ಣವನ್ನು ಆರಿಸಿ.
ಮನೆಯ ಅಲಂಕಾರಿಕ ರಗ್ಗುಗಳು
ಮನೆ ಅಲಂಕಾರಿಕ ಪರಿಕಲ್ಪನೆಗಳಲ್ಲಿ ಇದೂ ಒಂದು. ಮನೆಯ ಪ್ರವೇಶ ಹಜಾರ ಸಂಪೂರ್ಣ ಜಾಗವನ್ನು ರಗ್ಗುಗಳ ಮೂಲಕ ವಿಸ್ತಾರಗೊಳಿಸಿ. ಆದರೆ ನೀವು ಬಳಸುವ ರಗ್ಗುಗಳು ಮನೆಯ ಮುಂದಿನ ಬಾಗಿಲಿಗೆ ತಾಕಿಕೊಂಡಿರದಂತೆ ಎಚ್ಚರವಹಿಸಿ. ಇನ್ನೊಂದು ಪ್ರಮುಖ ಪ್ರವೇಶ ದ್ವಾರದ ಅಲಂಕಾರಿಕ ಕಲ್ಪನೆಯೆಂದರೆ, ಸ್ವಚ್ಛಗೊಳಿಸಲು ಮತ್ತು ನಿರ್ವಹಿಸಲು ಸುಲಭವಾದಂತಹ ರಗ್ಗುಗಳನ್ನೇ ಆಯ್ಕೆ ಮಾಡಿಕೊಳ್ಳಿ.
ಗೋಡೆಯ ಅಲಂಕಾರ
ನೀವು ಪ್ರವೇಶ ಹಜಾರ ಅಲಂಕಾರಿಕ ಕಲ್ಪನೆಗಳನ್ನು ಪರಿಗಣಿಸುವುದರ ಜೊತೆಗೆ ಮನೆಯ ಗೋಡೆಯ ಅಲಂಕಾರದ ಬಗ್ಗೆ ಆಲೋಚಿಸಬೇಕು. ಇಲ್ಲಿ ಗಮನಿಸಬೇಕಾದ ಅತ್ಯಂತ ಪ್ರಮುಖ ವಿಷಯವೆಂದರೆ ನಿಮ್ಮ ಅತಿಥಿಗಳು ಮನೆಗೆ ಬಂದಾಗ ಮೊದಲು ಗಮನಿಸುವ ವಿಷಯ ಗೋಡೆಯ ಅಲಂಕಾರ! ಕಣ್ಣಿನ ದೃಷ್ಟಿಯನ್ನು ಸುಲಭವಾಗಿ ಸೆಳೆಯುವಂತಹ ಗೋಡೆ ಅಲಂಕಾರಗಳನ್ನು ಆಯ್ಕೆಮಾಡಿಕೊಳ್ಳಿ. ಮಾರುಕಟ್ಟೆಯಲ್ಲಿ ಇಂದು ಲಭ್ಯವಿರುವ ಅಲಂಕಾರಿಕ (ಕನ್ನಡಿ) ಬಿಂಬಗಳನ್ನು ಬಳಸಿ. ಇದು ಖಂಡಿತವಾಗಿಯೂ ದಟ್ಟ ಗೋಡೆಯ ಮೇಲೆ ನಾಟಕೀಯ/ ಸುಂದರ ಪರಿಣಾಮ ಬೀರುವುದು ಖಚಿತ.
ನೆನಪಿನಂಗಳ
ನಿಮ್ಮ ಮನೆಯ ಒಳಾಂಗಣ ವಿನ್ಯಾಸದ ಬಗ್ಗೆ ಆಲೋಚನೆ ಮಾಡುವಾಗ ನಿಮ್ಮ ಪ್ರವೇಶ ಹಜಾರದ ವಿನ್ಯಾಸ ಹೆಚ್ಚು ಸ್ಮರಣೀಯ ಮತ್ತು ವೈಯಕ್ತಿಕ ನೆನಪುಗಳನ್ನು ಹೊಂದಿರುವಂತೆ ವಿನ್ಯಾಸಗೊಳಿಸಬೇಕು. ಇಲ್ಲಿ ಫೋಟೋಗಳು, ಟ್ಯಾಗ್ ಲೈನ್ಸ್ ಗಳು, ವರದಿ ಕಾರ್ಡ್ ಮತ್ತು ಪೋಸ್ಟ್ ಕಾರ್ಡ್‌ಗಳನ್ನು ಬಳಸಬಹುದು. ಇದು ಖಂಡಿತವಾಗಿಯೂ ನಿಮ್ಮ ಮನೆಯ ವಿನ್ಯಾಸದಲ್ಲಿ ನಿಮ್ಮ ವೈಯಕ್ತಿಕ ಸ್ಥಳವನ್ನು ಒದಗಿಸುವುದರಲ್ಲಿ ಯಾವುದೇ ಸಂಶಯವಿಲ್ಲ.
ಪೀಠೋಪಕರಣ
ಕುರ್ಚಿ ಮತ್ತು ಮೇಜು ಮೊದಲಾದ ಪೀಠೋಪಕರಣಗಳನ್ನು ಕೂಡ ನಿಮ್ಮ ಮನೆಯ ವಿಶ್ರಾಂತಿ ಕೋಣೆಯಲ್ಲಿ ಬಳಸಬಹುದು. ನಿಮ್ಮ ಮನೆಯ ಹಜಾರದ ಗಾತ್ರಕ್ಕೆ ಅನುಗುಣವಾಗಿ, ಒಂದು ಸಣ್ಣ ಮಂಚವನ್ನೂ ಕೂಡ ಇರಿಸಿಕೊಳ್ಳಬಹುದು. ಇದು ಮನೆಯ ಪ್ರವೇಶ ಹಜಾರ ನೋಟವನ್ನು ಸಾಕಷ್ಟು ಮೆರಗುಗೊಳಿಸಬಹುದು ಮತ್ತು ಈ ಸ್ಥಳಕ್ಕೆ ಬಂದ ಯಾರಿಗಾದರೂ ಉತ್ತಮ ಅಭಿಪ್ರಾಯ ಮೂಡಬಹುದು. ತಿಗಣೆ ನಿವಾರಣೆಗೆ ಕೆಲವೊಂದು ವಿಧಾನಗಳು
ಬೆಳಕಿನ ಅಲಂಕಾರ
ಪ್ರವೇಶ ಹಜಾರದ ಅಲಂಕಾರಿಕ ಕಲ್ಪನೆಗಳಲ್ಲಿ ಇನ್ನೊಂದು ಪ್ರಮುಖ ಅಂಶ ಬೆಳಕು. ಸುಮಾರು ನೆಲದಿಂದ ಆರು ಅಡಿ ಎಂಟು ಇಂಚುಗಳಷ್ಟು ಎತ್ತರದಲ್ಲಿರುವ ಗೊಂಚಲು ದೀಪಗಳನ್ನು ಬಳಸಿ. ಇದು ಮನೆಯ ಪ್ರವೇಶ ಹಜಾರಕ್ಕೆ ಅಗತ್ಯವಿರುವ ಬೆಳಕಿನ ಪರಿಣಾಮ ನೀಡಲು ಸಹಾಯ ಮಾಡುತ್ತದೆ. ಇದು ನೆಲದಿಂದ ಹೆಚ್ಚು ಎತ್ತರದಲ್ಲಿದ್ದರೆ ಅಷ್ಟು ಪರಿಣಾಮಕಾರಿಯಾಗಿರುವುದಿಲ್ಲ. ಹಾಗೆಯೇ, ನಿಮ್ಮ ಛಾವಣಿಯ ವಿನ್ಯಾಸವನ್ನೂ ಕೂಡ ಈ ಸಂದರ್ಭದಲ್ಲಿ ಪರಿಗಣಿಸಬೇಕಾಗುತ್ತದೆ.



Click it and Unblock the Notifications
