Latest Updates
-
ಕರಣ್-ತೇಜಸ್ವಿ ಗುಟ್ಟಾಗಿ ಮದುವೆಯಾದ್ರಾ? ವೈರಲ್ ವಿಡಿಯೋ ಹಿಂದಿನ ಅಸಲಿ ಸತ್ಯ ಇಲ್ಲಿದೆ! -
ಮುಂಬೈನಲ್ಲಿ ನೀರು ಕಡಿತ: ಬಿಎಂಸಿ ಎಚ್ಚರಿಕೆ ಬೆನ್ನಲ್ಲೇ ಮನೆಯಲ್ಲಿ ನೀರು ಉಳಿಸಲು ಈ ಟಿಪ್ಸ್ ಮಿಸ್ ಮಾಡ್ಬೇಡಿ! -
ಬಿಸಿಲಿನ ತಾಪಕ್ಕೆ ಸುಸ್ತಾಗಿದ್ದೀರಾ? ದೇಹವನ್ನು ತಂಪಾಗಿಡಲು ಈ ಆಹಾರಗಳೇ ಮದ್ದು! -
ಕಿರೀಟ ಯಾರ ಪಾಲಾಗಲಿದೆ? ದೆಹಲಿಯಲ್ಲಿ ಮಿಸ್ ಗ್ರ್ಯಾಂಡ್ ಇಂಡಿಯಾ 2026 ಫಿನಾಲೆ ಸಂಭ್ರಮದ ಕ್ಷಣಗಳು -
ಹವಾಮಾನದಲ್ಲಿ ಭಾರಿ ಬದಲಾವಣೆ: ಮೇ 12-13 ರಂದು ಹೊರಗೆ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ! -
ದೆಹಲಿ ಮದುವೆ ಸೀಸನ್: ಮಳೆ ಮತ್ತು ಬಿರುಗಾಳಿಯಿಂದ ನಿಮ್ಮ ಸಂಭ್ರಮವನ್ನು ಕಾಪಾಡಿಕೊಳ್ಳುವುದು ಹೇಗೆ? -
ಬಿಸಿಗಾಳಿ-ಮಳೆ ಎಚ್ಚರಿಕೆ: ನಿಮ್ಮ ಮನೆ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಫಾಲೋ ಮಾಡಿ! -
ಬಿಸಿಗಾಳಿಯ ಆರ್ಭಟಕ್ಕೆ ಸುಸ್ತಾಗಿದ್ದೀರಾ? ಈ ಆಹಾರ ಕ್ರಮ ಪಾಲಿಸಿದರೆ ಬಿಸಿಲು ನಿಮ್ಮನ್ನೇನೂ ಮಾಡಲ್ಲ! -
ಕಾನ್ 2026: ರೆಡ್ ಕಾರ್ಪೆಟ್ ಮೇಲೆ ಭಾರತೀಯರ ಅಬ್ಬರ, ಈ ಬಾರಿ ಫ್ಯಾಷನ್ ಲೋಕವೇ ದಂಗು! -
ಪ್ರಧಾನಿ ಮೋದಿ ಭೇಟಿಯ ನಂತರ ಟ್ರೆಂಡಿಂಗ್: ಕೇವಲ 15 ನಿಮಿಷದಲ್ಲಿ ನಿಮ್ಮ ದಿನವನ್ನು ಬದಲಾಯಿಸುವ ಮ್ಯಾಜಿಕ್ ಯೋಗ ಟಿಪ್ಸ್!
ಚಳಿಗಾಲದಲ್ಲಿ ಕರ್ಟನ್ ಬಣ್ಣಗಳನ್ನು ಆಯ್ಕೆಮಾಡುವುದು ಹೇಗೆ?
ಪ್ರತಿಯೊಬ್ಬರ ಮನೆಯಲ್ಲಿರುವ ಕರ್ಟನ್‍ಗಳು ಆ ಮನೆಯ ನೈಜ ಸೌಂದರ್ಯವನ್ನು ವಿವರಿಸುತ್ತವೆ. ನಿಜವಾಗಿ ಹೇಳಬೇಕೆಂದರೆ ಮನೆಯ ಸೌಂದರ್ಯವು ಅಭಿವ್ಯಕ್ತಗೊಳ್ಳುವುದೇ ಈ ಕರ್ಟನ್‍ಗಳಲ್ಲಿ. ಕಿಟಕಿ ಮತ್ತು ಬಾಗಿಲಿಗೆ ನೇತು ಹಾಕಲ್ಪಡುವ ಈ ಕಲಾತ್ಮಕ ಬಟ್ಟೆಗಳು ಮನೆಯ ಅಂದವನ್ನು ದ್ವಿಗುಣಗೊಳಿಸುತ್ತವೆ.
ಹಾಗೆಂದು ಇವು ಬರೀ ಅಂದಕ್ಕೆ ಮಾತ್ರ ಪ್ರಯೋಜನಕ್ಕೆ ಬರುವ ಬಟ್ಟೆಗಳು ಎಂದು ಭಾವಿಸಬೇಡಿ. ಚಳಿಗಾಲದ ನಡುಗಿಸುವ ಚಳಿಯ ದಿನಗಳಲ್ಲಿ ಮನೆಯನ್ನು ಬೆಚ್ಚಗಿಡುವ ಕೆಲಸವನ್ನು ಈ ಕರ್ಟನ್‍ಗಳು ಮಾಡುತ್ತವೆ.

ಅದಕ್ಕಾಗಿ ಚಳಿಗಾಲಕ್ಕೆ ಒಪ್ಪುವ ಫ್ಯಾಬ್ರಿಕ್ ಕರ್ಟನ್‍ಗಳನ್ನು ಕೊಳ್ಳುವುದು ಉತ್ತಮ. ಹಾಗೆಂದು ಯಾವುದೆಂದರೆ ಆ ಬಣ್ಣದ ಕರ್ಟನ್‍ಗಳನ್ನು ಕೊಳ್ಳುವ ಮೊದಲು ಸ್ವಲ್ಪ ಯೋಚಿಸಿ, ಬಣ್ಣಗಳು ಕೇವಲ ಅಂದಕ್ಕೆ ಅಷ್ಟೇ ಅಲ್ಲ, ಅವುಗಳು ಶಕ್ತಿಯನ್ನು ಹೀರಿಕೊಳ್ಳುವ ಗುಣಗಳನ್ನು ಹೊಂದಿರುತ್ತವೆ. ಇಲ್ಲಿ ನಾವು ನಿಮಗಾಗಿ ಚಳಿಗಾಲದಲ್ಲಿ ನಿಮ್ಮ ಮನೆಗೆ ಒಪ್ಪುವ ಕೆಲವು ಕರ್ಟನ್ ಬಣ್ಣಗಳನ್ನು ಸೂಚಿಸಿದ್ದೇವೆ, ಇಷ್ಟವಾದರೆ ತಡ ಮಾಡಬೇಡಿ!
ಮರೂನ್ ಬಣ್ಣದ ಮೆರಗನ್ನು ನೀಡಿ
ಮರೂನ್ (ಕುಂಕುಮ ಬಣ್ಣ) ಬಣ್ಣವು ನಿಮ್ಮ ಮನೆಯ ಪೀಠೋಪಕರಣಗಳಿಗೆ ನಿಸ್ಸಂಶಯವಾಗಿ ಹೊಂದಿಕೊಳ್ಳುವ ಬಣ್ಣವಾಗಿರುತ್ತದೆ. ನಿಮ್ಮ ಮನೆಯಲ್ಲಿನ ದೀಪಗಳು ಮತ್ತು ಕರ್ಟನ್‍ಗಳು ಸಹ ಹೊಂದಿಕೊಂಡು ನಿಮ್ಮ ಕೋಣೆಗಳ ಸೊಬಗನ್ನು ಹೆಚ್ಚಿಸುತ್ತವೆ. ಈ ಬಣ್ಣವು ಬೆಳಕನ್ನು ಹೀರಿಕೊಂಡು ಉಷ್ಣವನ್ನು ಹೆಚ್ಚಿಸುವ ಗುಣಗಳನ್ನು ಹೊಂದಿದೆ. ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದ ಬಣ್ಣವಾಗಿರುತ್ತದೆ.
ಕಿತ್ತಳೆ
ಇದು ಚಳಿಗಾಲಕ್ಕೆಂದು ಹೇಳಿ ಮಾಡಿಸಿದ ಬಣ್ಣವಾಗಿದೆ. ಇದರಿಂದ ನಿಮ್ಮ ಮನೆಗೆ ಒಂದು ಬಗೆಯ ನ್ಯೂ ಲುಕ್ ನೀಡಿದಂತಾಗುತ್ತದೆ. ಕಿತ್ತಳೆ ಬಣ್ಣವು ನಿಮ್ಮ ಮನೆಯ ಸೌಂದರ್ಯವನ್ನು ಹೆಚ್ಚಿಸುವುದರಲ್ಲಿ ಸಂಶಯವೇ ಇಲ್ಲ. ಕಿತ್ತಳೆ ಬಣ್ಣಗಳು ಉಷ್ಣವನ್ನು ಹಿಡಿದಿಡುವ ಗುಣಗಳನ್ನು ಹೊಂದಿವೆ. ಮನೆಯಲ್ಲಿ ಉಂಟಾಗುವ ಅಲರ್ಜಿಯನ್ನು ತಪ್ಪಿಸಲು ಸಲಹೆಗಳು
ಕೆಂಪು ಬಣ್ಣಕ್ಕೆ ಆಧ್ಯತೆ ನೀಡಿ
ಕೆಂಪು ಬಣ್ಣದ ಕರ್ಟನ್‍ಗಳು ಯಾವಾಗಲು ಉತ್ತಮವಾದ ಮೆರಗನ್ನು ನೀಡುತ್ತಿರುತ್ತವೆ. ಇದು ಚಳಿಗಾಲಕ್ಕೆ ಹೇಳಿ ಮಾಡಿಸಿದ ಬಣ್ಣವಾಗಿದ್ದು, ನಿಮಗೆ ಅಗತ್ಯವಾಗಿರುವ ಸೌಂದರ್ಯವನ್ನು ನೀಡುತ್ತವೆ. ಹಾಗಾಗಿ ಚಳಿಗಾಲದಲ್ಲಿ ನಿಮ್ಮ ಕೋಣೆಗಳನ್ನು ಬೆಚ್ಚಗಿಡುವಂತಹ ಕೆಂಪು ಬಣ್ಣದ ಪರದೆಗಳನ್ನು ಖರೀದಿಸಿ.
ಮಣ್ಣಿನ ಬಣ್ಣಗಳಿಗೆ ಒತ್ತು ನೀಡಿ
ಕೆಲವು ಬಣ್ಣಗಳು ಭೂಮಿಯ ಬಣ್ಣವನ್ನು ಹೋಲುತ್ತವೆ, ಈ ಬಣ್ಣಗಳು ನಮ್ಮ ಕೋಣೆಗಳ ಸೊಬಗನ್ನು ಹೆಚ್ಚು ಮಾಡುತ್ತವೆ. ಒಂದು ವೇಳೆ ನಿಮ್ಮ ಗೋಡೆಗಳ ಬಣ್ಣವೇನಾದರು ತೆಳ್ಳಗೆ ಇದ್ದಲ್ಲಿ ಈ ಬಣ್ಣಗಳು ನಿಸ್ಸಂಶಯವಾಗಿ ನಿಮ್ಮ ಕೋಣೆಗಳಿಗೆ ಒಪ್ಪುತ್ತದೆ. ಅದರಲ್ಲೂ ನೀವು ಪ್ಲೇನ್ ಆಗಿರುವ ಬಣ್ಣಗಳ ಬದಲು ಪ್ಯಾಟ್ರನ್ ಇರುವ ಬಣ್ಣಗಳನ್ನು ಬಳಸುವುದು ಉತ್ತಮ. ಮನೆಯನ್ನು ಸಿಂಗರಿಸುವಲ್ಲಿ ಕರ್ಟನ್‍ಗಳು ವಿಶೇಷವಾದ ಪಾತ್ರವನ್ನು ನಿರ್ವಹಿಸುತ್ತವೆ. ಅದರಲ್ಲು ಚಳಿಗಾಲದಲ್ಲಿ ಇವುಗಳ ಪಾತ್ರವು ಅತ್ಯಾವಶ್ಯಕ.
ಬೋಲ್ಡ್ ಬಣ್ಣದ ಕರ್ಟನ್‍ಗಳು
ನಿಮ್ಮ ಗೋಡೆಯ ಬಣ್ಣಗಳು ಮಂಕಾಗಿದ್ದರೆ, ಬೋಲ್ಡ್ ಲುಕ್ ನೀಡುವ ಕರ್ಟನ್‍ಗಳನ್ನು ಖರೀದಿಸುವುದು ಉತ್ತಮ. ಇವು ನಿಮ್ಮ ಗೋಡೆಗಳಿಗೆ ಅಗತ್ಯವಾಗಿರುವ ಕಾಂಟ್ರಸ್ಟ್ ಅನ್ನು ನೀಡಿ ಅದರ ಸೊಬಗನ್ನು ಹೆಚ್ಚಿಸುತ್ತವೆ. ಈ ಬಣ್ಣಗಳು ಸಹ ನಿಮ್ಮ ಕೋಣೆಯನ್ನು ಬೆಚ್ಚಗಿಡಲು ಸಹಕರಿಸುತ್ತವೆ.



Click it and Unblock the Notifications

