Latest Updates
-
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ! -
ಅಕ್ಟೋಬರ್ ಲಾಂಗ್ ವೀಕೆಂಡ್: ಕಪಲ್ಸ್ ಟ್ರಿಪ್ ಪ್ಲಾನ್ ಮಾಡುವಾಗ ಈ ತಪ್ಪುಗಳನ್ನು ಮಾಡಬೇಡಿ! -
ಅಕ್ಟೋಬರ್ 1 ರಿಂದ ಎಲೆಕ್ಟ್ರಾನಿಕ್ ವಸ್ತುಗಳಿಗೆ ISI ಮಾರ್ಕ್ ಕಡ್ಡಾಯ: ಆನ್ಲೈನ್ ಶಾಪಿಂಗ್ ಮಾಡುವ ಮುನ್ನ ಈ ವಿಷಯ ತಿಳಿಯಿರಿ! -
ಕಾಫಿ ಪ್ರಿಯರೇ ಎಚ್ಚರ! ತೂಕ ಇಳಿಕೆ ಮತ್ತು ಶುಗರ್ ಕಂಟ್ರೋಲ್ ಮಾಡಲು ಕಾಫಿ ಕುಡಿಯುವ ಸೀಕ್ರೆಟ್ ಇಲ್ಲಿದೆ -
ಇಂದಿನಿಂದ ಎಲ್ಪಿಜಿ ಸಬ್ಸಿಡಿಗೆ ಆಧಾರ್ ಬಯೋಮೆಟ್ರಿಕ್ ಕಡ್ಡಾಯ: ನಿಮ್ಮ ಗ್ಯಾಸ್ ಸಬ್ಸಿಡಿ ಪಡೆಯಲು ಹೀಗೆ ಮಾಡಿ! -
ಮಳೆಗಾಲದಲ್ಲಿ ಫಿಟ್ ಆಗಿರಬೇಕೆ? ಬೆಂಗಳೂರು, ಚೆನ್ನೈ, ಕೊಚ್ಚಿ ಜನರಿಗಾಗಿ ಇಲ್ಲಿದೆ 20 ನಿಮಿಷದ ಸಿಂಪಲ್ ವರ್ಕೌಟ್!
ಜೋಡಿ ಮೀನಿಗೆ ಫಿಶ್ ಬೌಲೇ ಏಕೆ?

ಮೀನುಗಳನ್ನು ಸಾಕುವಾಗ ಎಷ್ಟು ಮೀನುಗಳನ್ನು ಒಂದೇ ಅಕ್ವೇರಿಯಂನಲ್ಲಿ ಹಾಕಬಹುದು ಎಂಬುದೆಲ್ಲಾ ಇರುತ್ತದೆ. ಅದರಲ್ಲೂ ಜೋಡಿ ಮೀನುಗಳನ್ನು ಫಿಶ್ ಬೌಲ್ ನಲ್ಲಿಟ್ಟರೇನೆ ನೋಡಲು ಚೆಂದ ಮತ್ತು ನಿರ್ವಹಣೆಯೂ ಕೂಡ ಸುಲಭ. ಈ ರೀತಿ ಫಿಶ್ ಬೌಲ್ ನಲ್ಲಿ ಜೋಡಿ ಮಾಡಬಹುದಾದ ಸೂಕ್ತವಾದ ಮೀನುಗಳ ಬಗ್ಗೆ ಮಾಹಿತಿಯನ್ನು ಈ ಕೆಳಗೆ ನೀಡಲಾಗಿದೆ. ಮುಂದೆ ಓದಿ.
1. ಫಿಶ್ ಟ್ಯಾಂಕ್ ಅಥವಾ ಅಕ್ವೇರಿಯಂ ಬದಲು ಜೋಡಿ ಮೀನುಗಳನ್ನು ದುಂಡನೆಯಾಕಾರದ ಫಿಶ್ ಬೌಲ್ ನಲ್ಲಿಡಿ.
2. ದುಂಡನೆಯ ಬೌಲ್ ನಲ್ಲಿ ಹಾಕಿದಾಗ ಅವುಗಳು ಅದರಲ್ಲಿಯೆ ಸುತ್ತುತ್ತಾ ಪರಸ್ಪರ ಅಟ್ಟಿಸಿಕೊಂಡು ಆಡುವುದನ್ನು ನೋಡಲು ತುಂಬಾ ಸುಂದರವಾಗಿರುತ್ತದೆ.
3. ಜೋಡಿ ಫಿಶ್ ಆಯ್ಕೆ ಮಾಡುವವರು ಗೋಲ್ಡ್ ಫಿಶ್ ಗಳನ್ನು ಆಯ್ಕೆ ಮಾಡಬಹುದು. ಈ ಗೋಲ್ಡ್ ಫಿಶ್ ಒಂದನ್ನು ಬಿಟ್ಟು ಮತ್ತೊಂದು ಜೀವಿಸುವುದಿಲ್ಲ.
4. ಮತ್ತೊಂದು ಬಗೆಯ ಜೋಡಿ ಫಿಶ್ ಅಂದರೆ ಬೆಟ್ಟಾ ಫಿಶ್. ಬೆಟ್ಟಾ ಫಿಶ್ ಗೆ ಜೀವಿಸಲು ಸ್ವಲ್ಪ ನೀರು ಸಾಕು. ಈ ಮೀನುಗಳು ಆಕರ್ಷಕ ಬಣ್ಣವನ್ನು ಹೊಂದಿರುವುದರಿಂದ ಬೌಲ್ ನಲ್ಲಿ ಮತ್ತಷ್ಟು ಸುಂದವಾಗಿ ಕಾಣುವುದು.
5. ಒಂದೇ ರೀತಿಯ ಮೀನುಗಳನ್ನಷ್ಟೇ ಅಲ್ಲ ಬೇರೆ-ಬೇರೆ ರೀತಿಯ ಮೀನುಗಳನ್ನು ಕೂಡ ಜೊತೆ ಮಾಡಿ ಬಿಡಬಹುದು.
ಆದರೆ ಆ ಮೀನುಗಳು ಪರಸ್ಪರ ಸಮಬಲವನ್ನು ಹೊಂದಿರುವ ಮತ್ತು ಕೂಡಿಕೊಂಡು ಬಾಳುವಂತಹ ಮೀನು ಆಗಿರಬೇಕು ಅಷ್ಟೇ.
6. ಪಿರಾನ್ಹಾದಂತಹ ಕೆಲವೊಂದು ಒಂದೇ ಜಾತಿಯ ಮೀನುಗಳನ್ನು ಕೂಡ ಜೊತೆಯಲ್ಲಿ ಬಿಟ್ಟರೆ ಅವು ಕಚ್ಚಾಡಿಕೊಂಡು ಸತ್ತು ಹೋಗುತ್ತವೆ. ಆದ್ದರಿಂದ ಅಂತಹ ಮೀನುಗಳನ್ನು ಜೊತೆಯಲ್ಲಿ ಬಿಡಬಾರದು.
ಮೀನುಗಳಿಗೆ ಆಹಾರ ಹಾಕುವಾಗ ತುಂಬಾ ಆಹಾರವನ್ನು ಹಾಕಬೇಡಿ. ಆಗಾಗ ಹಾಕುವುದಕ್ಕಿಂತ ಮೀನು ಕೊಳ್ಳುವಾಗ ಅದರ ಆಹಾರದ ಬಗ್ಗೆ ಸರಿಯಾಗಿ ಕೇಳಿ ತಿಳಿದುಕೊಳ್ಳಿ.



Click it and Unblock the Notifications
