Latest Updates
-
ಎಆರ್ ರಹಮಾನ್ ಬೆಂಗಳೂರು ಕಾನ್ಸರ್ಟ್: ಮೆಟ್ರೋ ಟೈಮಿಂಗ್ಸ್ ಮತ್ತು ಸುರಕ್ಷಿತವಾಗಿ ಮನೆ ಸೇರಲು ಇಲ್ಲಿದೆ ಪಕ್ಕಾ ಪ್ಲಾನ್! -
ಮುಂಬೈನಲ್ಲಿ 10% ನೀರು ಕಡಿತ: ನೀರಿನ ಅಭಾವ ಎದುರಿಸಲು ಮತ್ತು ಉಳಿತಾಯ ಮಾಡಲು ಇಲ್ಲಿವೆ ಸ್ಮಾರ್ಟ್ ಟಿಪ್ಸ್! -
ಹಬ್ಬದ ಸಿಹಿ ಖರೀದಿಸುವ ಮುನ್ನ ಎಚ್ಚರ! FSSAI ದಾಳಿ: ಕಳಪೆ ಖೋವಾ, ಪನ್ನೀರ್ ಪತ್ತೆ ಹೇಗೆ? -
ಭಾರತ vs ಪಾಕಿಸ್ತಾನ ಏಷ್ಯನ್ ಗೇಮ್ಸ್ ಫೈನಲ್: ಹೈ-ವೋಲ್ಟೇಜ್ ಕದನಕ್ಕೆ ಸಜ್ಜಾಗಿ, ಲೈವ್ ವೀಕ್ಷಿಸಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಮುಂಬೈನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ವಹಿಸಿ, ಇಲ್ಲದಿದ್ದರೆ ಆರೋಗ್ಯಕ್ಕೆ ಕುತ್ತು! -
ಅಕ್ಟೋಬರ್ 2 ಡ್ರೈ ಡೇ: ಮದ್ಯ ಸಿಗಲ್ಲ, ಪಾರ್ಟಿ ಪ್ಲಾನ್ ಬದಲಿಸಿ! ಸುರಕ್ಷಿತವಾಗಿ ಸಂಭ್ರಮಿಸುವುದು ಹೇಗೆ? -
IMD ಅಲರ್ಟ್: ದಕ್ಷಿಣ ಭಾರತದಲ್ಲಿ ಭಾರಿ ಮಳೆ, ಬಿರುಗಾಳಿ - ನಿಮ್ಮ ಸುರಕ್ಷತೆಗಾಗಿ ಈ ಮುನ್ನೆಚ್ಚರಿಕೆಗಳನ್ನು ತಪ್ಪದೇ ಪಾಲಿಸಿ! -
ಕೇವಲ ₹100ರಲ್ಲಿ ದಿನಕ್ಕೆ 80 ಗ್ರಾಂ ಪ್ರೋಟೀನ್: ಸಸ್ಯಾಹಾರಿಗಳಿಗಾಗಿ ಇಲ್ಲಿದೆ ಪಕ್ಕಾ ದೇಸಿ ಡಯಟ್ ಪ್ಲಾನ್! -
ಫ್ಲಿಪ್ಕಾರ್ಟ್ ಬಿಗ್ ಬಿಲಿಯನ್ ಡೇಸ್: ನಥಿಂಗ್ ಮತ್ತು ಫೈರ್-ಬೋಲ್ಟ್ ಆಫರ್ಸ್ ರಿವೀಲ್, ಶಾಪಿಂಗ್ಗೆ ರೆಡಿಯಾಗಿ! -
ದೆಹಲಿ-ಎನ್ಸಿಆರ್ನಲ್ಲಿ ವಾಯು ಮಾಲಿನ್ಯದ ಆತಂಕ: ಇಂದಿನಿಂದ ಹೊರಾಂಗಣ ವ್ಯಾಯಾಮಕ್ಕೆ ಬ್ರೇಕ್ ಹಾಕಿ!
ವಿಶ್ವ ಮಾನಸಿಕ ಆರೋಗ್ಯ ದಿನ: ಬೆಳಗ್ಗೆ ಏಳುವುದರಿಂದ ನಿಮ್ಮ ಬದುಕಿನಲ್ಲಿ ಈ ಬದಲಾವಣೆಗಳಾಗಲಿದೆ
ಅಕ್ಟೋಬರ್ 10 ವಿಶ್ವ ಮಾನಸಿಕ ಆರೋಗ್ಯ ದಿನ. ಮಾನಸಿಕ ಆರೋಗ್ಯದ ಬಗ್ಗೆ ಜಾಗ್ರತೆ ಮೂಡಿಸಲ ಈ ದಿನವನ್ನು ಆಚರಿಸಲಾಗುವುದು. ಪ್ರತಿಯೊಬ್ಬರಿಗೂ ಮಾನಸಿಕ ಆರೋಗ್ಯ ಎಂಬುವುದು ತುಂಬಾ ಮುಖ್ಯ. ಖಿನ್ನತೆ, ಆತ್ಮಹತ್ಯೆ ಈ ಬಗೆಯ ಆಲೋಚನೆ, ಕೋಪ ಇವುಗಳೆನ್ನೆಲ್ಲಾ ತಡೆಗಟ್ಟಲು ಮಾನಸಿಕ ಆರೋಗ್ಯ ತುಂಬಾನೇ ಮುಖ್ಯ.
ನೀವು ಮಾನಸಿಕ ಒತ್ತಡ ಹೊರಹಾಕಬೇಕು, ಯಾವುದೇ ನಕರಾತ್ಮಕ ಆಲೋಚನೆಗಳು ನಿಮ್ಮನ್ನು ಬಾಧಿಸಬಾರದು, ಕೋಪ ನಿಯಂತ್ರಿಸಬೇಕು ಎಂದು ಬಯಸುವುದಾದರೆ ಈ ಸರಳ ಅಭ್ಯಾಸಗಳನ್ನು ಮಾಡಿ ನಿಮ್ಮ ಬದುಕಿನ ಶೈಲಿಯೇ ಬದಲಾಗುವುದು:

ಬೆಳಗ್ಗೆ ಬೇಗನೆ ಎದ್ದೇಳಿ: ಹೌದು ಸೂರ್ಯೋದಯದ ಆ ಚೆಲುವು ಕಣ್ತುಂಬಿಕೊಳ್ಳಿ, ಬೆಳಗ್ಗೆ ಬೇಗ ಎದ್ದಾಗ ಏನೋ ಒಂದು ರೀತಿಯ ಲವಲವಿಕೆ ಮೂಡುವುದು. ನೀವು ದಿನಿಡೀ ಚೈತನ್ಯದಿಂದ ಇರುತ್ತೀರಿ. ಹಾಗಾಗಿ ಪ್ರತಿದಿನ ಒಂದು 10 ಗಂಟೆಯ ಒಳಗಡೆ ಮಲಗಿ ಬೆಳಗ್ಗೆ 4-5 ಗಂಟೆಯ ಒಳಗಡೆ ಏಳಿ, ಇದನ್ನು ನೀವು ಒಂದು ವಾರ ಮಾಡುವಷ್ಟರಲ್ಲಿ ನಿಮ್ಮ ಬದುಕಿನಲ್ಲಿ ಕೆಲ ಬದಲಾವಣೆಯನ್ನು ಕಾಣಬಹುದು.
ಧ್ಯಾನ ಮಾಡಿ
ಧ್ಯಾನ ಮಾಡಿ, ಒಂದು 10 ನಿಮಿಷ ಧ್ಯಾನ ಮಾಡಿ, ಹೀಗೆ ಧ್ಯಾನ ಮಾಡುವಾಗ ಧನಾತ್ಮಕ ಆಲೋಚನೆಗಳನ್ನು ಮಾಡಿ, ನಿಮ್ಮ ಮನಸ್ಸನ್ನು ಒಂದು ಕಡೆ ಕೇಂದ್ರೀಕರಿಸಿ. ನಿಮ್ಮ ಇಷ್ಟ ದೇವರನ್ನು ಮನಸ್ಸಿನಲ್ಲಿ ನೆನೆಸಿಕೊಂಡು ಧ್ಯಾನ ಮಾಡಿ. ಧ್ಯಾನ ಮಾಡುವುದರಿಂದ ಏಕಾಗ್ರತೆ ಹೆಚ್ಚಾಗುವುದು.
ಪ್ರಾಣಯಾಮ, ಉಸಿರಾಟದ ವ್ಯಾಯಾಮ ಮಾಡಿ: ಇದನ್ನು ಅಭ್ಯಾಸ ಮಾಡುವುದರಿಂದ ನಿಮ್ಮ ದೇಹ ಹಾಗೂ ಮನಸ್ಸು ಶುದ್ಧವಾಗುತ್ತದೆ, ನಿಮ್ಮಲ್ಲಿನ ನಕರಾತ್ಮಕ ಆಲೋಚನೆಗಳು ದೂರಾಗುವುದು.
ಸಂಗೀತ ಕೇಳಿ: ಬೆಳಗ್ಗೆ ಮನಸ್ಸಿಗೆ ಮುದ ನೀಡುವ ಸಂಗೀತ ಕೇಳಿ, ಏನಾದರ ಕೆಲಸ ಮಾಡುವಾಗ ಸಂಗೀತ ಕೇಳಿ, ಈ ಅಭ್ಯಾಸ ನಿಮ್ಮ ಮನಸ್ಸಿಗೆ ಹೊಸ ಉತ್ಸಾಹ ತುಂಬುತ್ತದೆ.
ಪ್ರಕೃತಿ ಜೊತೆಗೆ ಸ್ವಲ್ಪ ಸಮಯ ಕಳೆಯಿರಿ: ಸಂಗೀತ ಕೇಳುತ್ತಾ ನಡೆಯುವ ವ್ಯಾಯಾಮ ಅಥವಾ ತೋಟವಿದ್ದರೆ ಅದರಲ್ಲಿ ಕೆಲಸ ಮಾಡುವುದು ಹೇಗೆ ನಿಸರ್ಗದ ಜೊತೆ ಸಮಯ ಕಳೆಯಿರಿ.
ಆ ದಿನದ ಕೆಲಸ ಕಾರ್ಯಕ್ಕೆ ಯೋಜನೆ ರೂಪಿಸಿ
ನೀವು ಆ ದಿನ ಯಾವ ಕೆಲಸ ಮಾಡುತ್ತೀರಿ ಅದರ ಬಗ್ಗೆ ಯೋಜನೆ ರೂಪಿಸುವುದರಿಂದ ಆ ಕೆಲಸವನ್ನು ಸರಿಯಾದ ಸಮಯಕ್ಕೆ ಮಾಡಿ ಮುಗಿಸಲು ಸಾಧ್ಯವಾಗುವುದು. ಬೆಳಗ್ಗೆ ಬೇಗ ಎದ್ದಾಗ ಬೇಗ ಆಫೀಸ್ ತಲುಪಬಹುದು, ಕೆಲಸ ಕಾರ್ಯವನ್ನು ಬೇಗನೆ ಪ್ರಾರಂಭಿಸಿಸುವುದು, ತಡವಾಗಿ ಏಳುವ ಅಭ್ಯಾಸದಿಂದ ಎಲ್ಲಾ ಕೆಲಸವನ್ನು ತರಾತರಿಯಲ್ಲಿ ಮಾಡಬೇಕಾಗುತ್ತದೆ, ಇದು ನಮ್ಮನ್ನು ಒತ್ತಡಕ್ಕೆ ದೂಡುತ್ತದೆ. ಅದೇ ಬೇಗ ಎದ್ದರ ನಮ್ಮ ಎಲ್ಲಾ ಕೆಲಸ ಕಾರ್ಯವನ್ನು ಹೆಚ್ಚು ಒತ್ತಡಕ್ಕೆ ಒಳಗಾಗದೆ ಮಾಡಿ ಮುಗಿಸಬಹುದು.
ಹೀಗೆ ಬೆಳಗ್ಗೆ ಬೇಗ ಎದ್ದರೆ ನಿಮ್ಮ ಮಾನಸಿಕ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮಾನಸಿಕ ಆರೋಗ್ಯದ ಪ್ರಾಮುಖ್ಯತೆ
ಆರೋಗ್ಯ ಸಮಸ್ಯೆ ತಡೆಗಟ್ಟುತ್ತದೆ: ಎಷ್ಟೋ ಆರೋಗ್ಯ ಸಮಸ್ಯೆಗೆ ಪ್ರಮುಖ ಕಾರಣವೆಂದರೆ ಮಾನಸಿಕ ಒತ್ತಡ, ಅದೇ ಮಾನಸಿಕವಾಗಿ ನಾವು ಆರೋಗ್ಯವಾಗಿದ್ದರೆ ಈ ಎಲ್ಲಾ ಸಮಸ್ಯೆ ತಡೆಗಟ್ಟಬಹುದು.
ಖಿನ್ನತೆ ಕಾಡಲ್ಲ: ಖಿನ್ನತೆ ತುಂಬಾನೇ ಅಪಾಯಕಾರಿ, ಇದು ಮನುಷ್ಯನನ್ನು ಅಪಾಯದ ಕಡೆಗೆ ದೂಡುತ್ತದೆ. ನಾವು ನಮ್ಮ ಮಾನಸಿಕ ಆರೋಗ್ಯದ ಕಡೆಗೆ ಗಮಹರಿಸಿದರೆ ಖಿನ್ನತೆ ತಡೆಗಟ್ಟಬಹುದು. ಈ ಆತ್ಮಹತ್ಯೆಯಂಥ ಆಲೋಚನೆ ತಡೆಗಟ್ಟಬಹುದು.
ಆತ್ಮವಿಶ್ವಾಸ ಹೆಚ್ಚಾಗುವುದು: ಮಾನಸಿಕ ಆರೋಗ್ಯದ ಕಡೆಗೆ ಗಮನಹರಿಸಿದರೆ ಆತ್ಮವಿಶ್ವಾಸ ಹೆಚ್ಚಾಗುವುದು. ಯಶಸ್ವಿನ ಬಲವಾದ ಗುಟ್ಟು ಆತ್ಮವಿಶ್ವಾಸ...
ಹೀಗೆ ಬೆಳಗ್ಗೆ ಏಳುವುದಕ್ಕೂ ಮಾನಸಿಕ ಆರೋಗ್ಯಕ್ಕೆ ನೇರ ಸಂಬಂಧವಿದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
