Latest Updates
-
ಕಡಲ ತೀರದಲ್ಲಿ ಮತ್ತೆ ಕಾಣಿಸಿಕೊಂಡ ಡೂಮ್ಸ್ಡೇ ಫಿಶ್: ಮತ್ತೇನು ದುರಂತ ಕಾದಿದೆ? -
ಮಾರ್ಚ್ 13ರಿಂದ ಶನಿ ಅಸ್ತಮ: 40 ದಿನಗಳ ಕಾಲ ಈ ರಾಶಿಯವರಿಗೆ ಶನಿ ಪ್ರಭಾವ ಇಳಿಕೆ! ಅದೃಷ್ಟದ ದಿನ! -
ದಪ್ಪ ಆಗಿದ್ದೀರಾ? ತೂಕ ಇಳಿಸಬೇಕಾ? ಈ ಗಂಜಿ 1 ಕಪ್ ಕುಡಿಯಿರಿ.. ಡಬಲ್ ಸ್ಪೀಡ್ನಲ್ಲಿ ಸಣ್ಣ ಆಗ್ತೀರಾ!! -
ಬೇಸಿಗೆಯಲ್ಲಿ ದೇಹ ತಂಪಾಗಿಟ್ಟು ದಣಿವು ನೀಗಿಸುವ ನವಣೆ ಮೊಸರನ್ನ: ಸುಲಭವಾಗಿ ಮಾಡುವ ವಿಧಾನವಿದು! -
ಫ್ರಿಜ್ನಲ್ಲಿ ಇಟ್ಟ ಆಹಾರ ಬೇಗ ಕೆಡುತ್ತಿದ್ಯಾ? ಈ 5 ಮ್ಯಾಜಿಕ್ ಟ್ರಿಕ್ಸ್ ಬಳಸಿ.. ಫ್ರೆಶ್ ಆಗಿಡಿ! -
ಸೋಲೋ ಡೇಟ್ ಟ್ರೆಂಡ್: ಒಂಟಿಯಾಗಿ ಸಮಯ ಕಳೆಯೋದು ಎಷ್ಟು ಉತ್ತಮ ಗೊತ್ತಾ? -
ಜಸ್ಟ್ ನೀರು ಸೇರಿಸಿ.. ಈ ಅದ್ಭುತ ರುಚಿಯ ಚಟ್ನಿ ರೆಡಿ! ಮಿಕ್ಸಿ ಬಳಸದೆ ಮಾಡೋದು ಹೇಗೆ? -
ಮಾರ್ಚ್ನಲ್ಲಿ ಬುಧ ಉದಯ: 4 ರಾಶಿಯವರಿಗೆ ಅಡ್ಡಿಗಳಿಂದ ವಿಮುಕ್ತಿ, ಅದೃಷ್ಟದ ಸಮಯ! -
ಶುಕ್ರ, ಶನಿ & ಸೂರ್ಯ ಸಂಗಮ: ಮೀನ ರಾಶಿಯಲ್ಲಿ ತ್ರಿಗ್ರಹ ಯೋಗ.. ಈ 5 ರಾಶಿಗಳಿಗೆ ಬಂಪರ್ ಲಾಟರಿ! ಯಾರಿಗೆ ಲಾಭ, ನಷ್ಟ? -
ಬೇಕರಿಯಲ್ಲಿ ಸಿಗುವ ಕೊಬ್ಬರಿ ತುರಿ ಬರ್ಫಿ ನಿಮಿಷದಲ್ಲಿ ಮಾಡಿ! ಇಲ್ಲಿದೆ ಸುಲಭದ ಸ್ವೀಟ್ ವಿಧಾನ
ಮಹಿಳೆಯರೇ ಆ ಭಾಗದ ಸ್ವಚ್ಛತೆಗೆ ಪ್ರತಿದಿನ ಲಿಕ್ವಿಡ್ ವಾಶ್ ಬಳಸುತ್ತಿದ್ದೀರಾ? ತಪ್ಪಿದ್ದಲ್ಲ ಈ ಅಪಾಯ
ನಮ್ಮ ದೇಹದ ಸ್ಪಚ್ಛತೆ ಬಗ್ಗೆ ನಮಗೆ ಎಚ್ಚರಿಕೆ ಇರಲೇಬೇಕು. ಸಾಕಷ್ಟು ತಜ್ಞರು, ವೈದ್ಯರು ಕೂಡ ಈ ಬಗ್ಗೆ ಆಗಾಗ ಮಾಹಿತಿ ನೀಡುತ್ತಲೇ ಇರುತ್ತಾರೆ. ದಿನಕ್ಕೆ ಎರಡು ಬಾರಿ ಹಲ್ಲುಜ್ಜುವುದು, ಸ್ನಾನ ಮಾಡುವುದು ಹಾಗೂ ದೇಹದ ಇತರ ಭಾಗಗಳ ನೈರ್ಮಲ್ಯದ ಬಗ್ಗೆ ಗಮನವಹಿಸಲೇಬೇಕು. ಆದರೆ ಮಹಿಳೆಯರು ತಮ್ಮ ಪ್ರಮುಖ ಭಾಗವಾಗಿರುವ ಯೋನಿ ಸ್ವಚ್ಛತೆ ಬಗ್ಗೆ ಹೊಂದಿರುವ ಪೂರ್ವಾಗ್ರಹದ ಬಗ್ಗೆ ಈ ಲೇಖನದಲ್ಲಿ ಮಾಹಿತಿ ನೀಡಲಾಗಿದೆ.

ಯೋನಿ ಸ್ವಚ್ಛತೆಗಾಗಿ, ಯೋನಿ ವಾಶ್ ಅಥವಾ ಇಂಟೀಮೇಟ್ ವಾಶ್ ಗಳನ್ನು ಬಳಸುವುದು ಸಾಮಾನ್ಯ. ಆದರೆ ಈ ರೀತಿ ಯೋನಿ ಸ್ವಚ್ಛತೆಗಾಗಿ ದಿನವೂ ಈ ವಾಶ್ ಲಿಕ್ವಿಡ್ ಆಥವಾ ಕ್ರೀಮ್ ಬಳಸುವುದು ಎಷ್ಟು ಸೂಕ್ತ? ಹಾಗಾಗಿ ಮಹಿಳೆಯರು ತಮ್ಮ ಯೋನಿ ಸ್ವಚ್ಛತೆಗಾಗಿ ಸ್ವಚ್ಛತಾ ವಸ್ತುಗಳನ್ನು ಬಳಸುವ ಬಗ್ಗೆ ತಜ್ಞರು ಹೇಳುವುದೇನು ನೋಡೋಣ.
ಯೋನಿ ವಾಶ್ ಎಂದರೇನು?
ಮಹಿಳೆಯರ ಬಾಹ್ಯ ಜನನಾಂಗದ ಸ್ವಚ್ಛತೆಗಾಗಿ ಕೆಲವು ಉತ್ಪನ್ನಗಳನ್ನು ತಯಾರು ಮಾಡಲಾಗುತ್ತದೆ ಅದನ್ನ ಯೋನಿ ವಾಶ್ ಅಥವಾ ಇಂಟಿಮೇಟ್ ವಾಶ್ ಎಂದು ಕರೆಯಲಾಗುತ್ತದೆ. ಯೋನಿಯನು ಸ್ವಚ್ಛವಾಗಿ ಇಟ್ಟುಕೊಳ್ಳಲು ಸೋಂಕು ತಡೆಗಟ್ಟಲು ದುರ್ವಾಸನೆ ಬರದಂತೆ ನೋಡಿಕೊಳ್ಳಲು ಆಮ್ಲೀಯ ಗುಣ ಹೊಂದಿರುವ ನೈಸರ್ಗಿಕ ಪಿ ಎಚ್ ಸಮತೋಲನ ಕಾಪಾಡಿಕೊಳ್ಳುವಂತಹ ಇಂಟಿಮೆಟ್ ವಾಶ್ ಅನ್ನು ತಯಾರಿಸಲಾಗುತ್ತದೆ. ಇದನ್ನ ಮಹಿಳೆಯರು ಎಂದು ಹೆಚ್ಚಾಗಿ ಬಳಸುತ್ತಾರೆ ಆದರೆ ತಜ್ಞರ ಪ್ರಕಾರ ಯೋನಿಯ ಸ್ವಚ್ಛತೆ ಮುಖ್ಯ ಆದರೆ ಪ್ರತಿದಿನ ಈ ರೀತಿ ಇಂಟಿಮೇಟ್ ವಾಶ್ ಬಳಸಿ ಯೋನಿ ಸ್ವಚ್ಛಗೊಳಿಸುವುದು ಒಳ್ಳೆಯದಲ್ಲ ಯಾಕೆಂದರೆ ಇಲ್ಲಿ ಇರುವ ಕೆಲವು ಉತ್ತಮ ಬ್ಯಾಕ್ಟೀರಿಯಾ ಗಳು ಕೂಡ ಸಾಯುತ್ತವೆ ಇದರಿಂದ ಅನಾರೋಗ್ಯಕರ ಸಮಸ್ಯೆಗಳು ಉಂಟಾಗುತ್ತವೆ.
ಯೋನಿ ಸ್ವಚ್ಛತಾ ಉತ್ಪನ್ನವನ್ನು ದಿನವೂ ಬಳಸಬೇಕೇ?
ನಾವು ಪ್ರತಿದಿನ ಸ್ನಾನ ಮಾಡುವಾಗ ಸೋಪು ಅಥವಾ ಜಲ್ ಬಳಸಿ ಸ್ನಾನ ಮಾಡುತ್ತೇವೆ ಅಂದಮೇಲೆ ಯೋನಿ ಸ್ವಚ್ಛತೆಯನ್ನು ದಿನವೂ ಏಕೆ ಬಳಸಬಾರದು ಎನ್ನುವ ಪ್ರಶ್ನೆ ಮೂಡಬಹುದು ಯೋನಿಯಲ್ಲಿ ಈ ರೀತಿ ವಾಶ್ ಗಳನ್ನು ಬಳಸುವುದರಿಂದ ಕ್ರಮೇಣವಾಗಿ ಬ್ಯಾಕ್ಟೀರಿಯಾದ ನೈಸರ್ಗಿಕ ಸಮತೋಲನದಲ್ಲಿ ಸಮಸ್ಯೆ ಉಂಟಾಗಿ ಅದು ಕೆಲವು ಚರ್ಮದ ಅಲರ್ಜಿ ಅಂತ ಸಮಸ್ಯೆಯನ್ನು ಹುಟ್ಟು ಹಾಕಬಹುದು. ಇನ್ನು ಯೋನಿ ಸ್ವಚ್ಛತಾ ಉತ್ಪನ್ನಗಳನ್ನು ಬಳಸಲು ಇಂಥದ್ದೇ ನಿರ್ದಿಷ್ಟ ವಯಸ್ಸು ಎಂಬುವುದಿಲ್ಲ ಮಹಿಳೆಯರು ಹುಡುಗಿಯರು ಎಲ್ಲರೂ ಬಳಸಬಹುದು ಆದರೆ ವೈಯಕ್ತಿಕ ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿದ ಬಳಿಕ ಈ ಉತ್ಪನ್ನಗಳನ್ನು ಬಳಸುವುದು ಸೂಕ್ತ.
ಅಡ್ಡ ಪರಿಣಾಮಗಳು:
ಫೆಮಿನಾಯ್ನ್ ವಾಸ್ ಅಥವಾ ಯೋನಿ ವಾಶ್ ಅನ್ನು ಪ್ರತಿದಿನ ಬಳಸಿದರೆ ಅದರಿಂದ ಅಡ್ಡ ಪರಿಣಾಮಗಳು ಉಂಟಾಗುತ್ತವೆ ಎಂದು ತಜ್ಞರು ಹೇಳುತ್ತಾರೆ. ಯೋನಿಯಲ್ಲಿ ತುರಿಕೆ, ಡ್ರೈನೆಸ್, ಅಲರ್ಜಿ ಮೊದಲಾದವು ಉಂಟಾಗುವ ಸಾಧ್ಯತೆ ಇದೆ ಸಹಜವಾಗಿಯೇ ಯೋನಿ ವಾಶ್ ನಲ್ಲಿ ಸುಗಂಧದ ದ್ರವ್ಯಗಳನ್ನು ಬಳಸುತ್ತಾರೆ ಇದರಿಂದ ಕಠಿಣ ರಾಸಾಯನಿಕ ಗಳನ್ನು ಬಳಸುವ ಸಾಧ್ಯತೆ ಇದೆ ಬಳಸುತ್ತಾ ಹೋದರೆ ಬ್ಯಾಕ್ಟೀರಿಯಾ ಗಳ ನೈಸರ್ಗಿಕ ಸಮತೋಲನ ತಪ್ಪುತ್ತದೆ, ಜೊತೆಗೆ ಸಾಕಷ್ಟು ಸ್ತ್ರೀ ಸಂಬಂಧಿ ಕಾಯಿಲೆಗಳು ಉದ್ಭವವಾಗಬಹುದು.
ಯೋನಿ ಆರೋಗ್ಯ ಕಾಪಾಡಿಕೊಳ್ಳುವುದು ಹೇಗೆ?
ಮಹಿಳೆಯರು ತಮ್ಮ ಯೋನಿಯನ್ನು ಅಥವಾ ಜನನಾಂಗವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಅಂದ್ರೆ ಕೇವಲ ಇಂಟಿಮೇಟ್ ವಾಶ್ ಅಥವಾ ಯೋನಿ ವಾಶ್ ಗಳನ್ನು ಬಳಸುವುದು ಮಾತ್ರವಲ್ಲ ಕೆಲವು ಸಹಜ ಪ್ರಕ್ರಿಯೆಗಳನ್ನು ಅಭ್ಯಾಸ ಮಾಡಿಕೊಳ್ಳುವುದರ ಮೂಲಕ ಯೋನಿಯ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಹೇಗೆ ಎಂಬುದನ್ನು ನೋಡೋಣ.
ಜನನಾಂಗದ ನೈರ್ಮಲ್ಯ:
ನಾವು ದಿನವೂ ಹೇಗೆ ದೇಹದ ಹೊರಭಾಗವನ್ನ ಸ್ವಚ್ಛವಾಗಿ ಇಟ್ಟುಕೊಳ್ಳುತ್ತೇವೆಯೋ, ಅದೇ ರೀತಿ ಜನನಾಂಗ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯ ಪ್ರತಿದಿನ ಬೆಚ್ಚಗಿನ ನೀರು ಪಿ ಎಚ್ ಸಮತೋಲಿತ ಅಥವಾ ಸುಗಂಧ ಇಲ್ಲದೇ ಇರುವಂತಹ ಸೋಪಿನಿಂದ ಸ್ವಚ್ಛಗೊಳಿಸಿಕೊಳ್ಳಬಹುದು ಹೆಚ್ಚು ರಾಸಾಯನಿಕ ಬಳಸಿ ತಯಾರಿಸಲಾದ ಸೋಪ್ ಅಥವಾ ವಾಶ್ ಗಳನ್ನು ಬಳಸಬೇಡಿ. ಹೀಗೆ ಮಾಡುವುದರಿಂದ ಆ ಭಾಗದಲ್ಲಿ ಉಂಟಾಗುವ ಕಿರಿಕಿರಿ ಸೋಂಕು, ಅಲರ್ಜಿ ಮೊದಲಾದವುಗಳನ್ನು ತಡೆಗಟ್ಟಲು ಸಾಧ್ಯವಿದೆ.
ಬಿಗಿಯಾದ ಒಳ ಉಡುಪು:
ಆದಷ್ಟು ಸ್ವಚ್ಛವಾಗಿರುವ ಹತ್ತಿ ಬಟ್ಟೆಯ ಒಳಉಡುಪನ್ನೇ ಧರಿಸುವ ಅಭ್ಯಾಸ ಮಾಡಿಕೊಳ್ಳಬೇಕು. ಜೊತೆಗೆ ತೇವಾಂಶ ಇಲ್ಲದೆ ಇರುವ ರೀತಿಯಲ್ಲಿ ಒಳ ಉಡುಪು ಬೇಗ ತೇವಗೊಂಡರೆ ಅದನ್ನು ಬದಲಾಯಿಸಬೇಕು. ಇನ್ನು ಹೆಚ್ಚು ಟೈಟ್ ಅಥವಾ ಬಿಗಿಯಾಗಿರುವ ಬಟ್ಟೆಯನ್ನು ಧರಿಸಬಾರದು. ಯೋನಿ ಭಾಗ ಹೆಚ್ಚು ತೇವಾಂಶದಿಂದ ಕೂಡಿದ್ದರೆ ಯಿಸ್ಟ್ ಅಥವಾ ಬ್ಯಾಕ್ಟೀರಿಯಾ ಬೆಳವಣಿಗೆ ಆಗುವ ಸಾಧ್ಯತೆ ಇರುತ್ತದೆ.
ಸುರಕ್ಷಿತ ಲೈಂಗಿಕ ಅಭ್ಯಾಸ:
ಸಂಗಾತಿ ಜೊತೆಗೆ ಸಂಭೋಗದಲ್ಲಿ ತೊಡಗಿಕೊಳ್ಳುವುದು ಸಾಮಾನ್ಯವೇ ಆದರೂ ಕೂಡ ಈ ಸಮಯದಲ್ಲಿ ಯೋನಿಯ ಆರೋಗ್ಯದ ಬಗ್ಗೆ ಎಚ್ಚರಿಕೆ ವಹಿಸಬೇಕು ಯಾಕೆಂದರೆ ಲೈಂಗಿಕ ಅಭ್ಯಾಸದ ಬಳಿಕ ನೀವು ಸ್ವಚ್ಛತೆಯನ್ನ ರೂಡಿಸಿಕೊಳ್ಳದೆ ಇದ್ದಲ್ಲಿ ಲೈಂಗಿಕವಾಗಿ ಹರಡುವ ಸೋಂಕುಗಳ ಅಪಾಯ ಎದುರಿಸಬೇಕಾಗುತ್ತದೆ.
ಉತ್ತಮ ಆಹಾರ:
ದೇಹದ ಹಲವು ಸಮಸ್ಯೆಗಳಿಗೆ ನಾವು ಸರಿಯಾದ ರೀತಿಯಲ್ಲಿ ಸೇವಿಸುವ ಆಹಾರ ಬಹಳ ಮುಖ್ಯ ಪರಿಹಾರವಾಗಿದೆ. ಸಮತೋಲಿತ ಹಾಗೂ ಪೌಷ್ಟಿಕ ಆಹಾರವನ್ನು ಸೇವಿಸಿದರೆ ದೇಹದಲ್ಲಿ ಪ್ರತಿರಕ್ಷಣಾ ಶಕ್ತಿಯು ಕೂಡ ಹೆಚ್ಚಾಗುತ್ತದೆ. ದೇಹ ಡಿಹೈಡ್ರೆಡ್ ಆಗದಂತೆ ನೋಡಿಕೊಳ್ಳುವುದು ಬಹಳ ಮುಖ್ಯ ಸರಿಯಾದ ಆಹಾರವನ್ನು ಸೇವಿಸಿದರೆ ಸೋಂಕುಗಳನ್ನು ತಡೆಗಟ್ಟಬಹುದು ಹಾಗೇನೇ ಬಹಳ ಬೇಗ ಸೋಂಕುಗಳು ಗುಣಮುಖ ಆಗಲು ಕೂಡ ಸಹಾಯಕವಾಗುತ್ತದೆ.
ಸುಗಂಧ ದ್ರವ್ಯ ಬಳಕೆ ತಪ್ಪಿಸಿ:
ಯೋನಿಯ ಭಾಗದಲ್ಲಿ ಇರುವಂತಹ ದುರ್ವಾಸನೆ ಹೋಗಬೇಕು ಅಥವಾ ವಾಸನೆ ಬರಬಾರದು ಎನ್ನುವ ಕಾರಣಕ್ಕೆ ಪರಿಮಳಯುಕ್ತ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಇದು ಎಷ್ಟು ಅನಾರೋಗ್ಯಕರ ಸಮಸ್ಯೆಗಳನ್ನು ತರಬಹುದು ಗೊತ್ತಾ? ಯೋನಿ ಭಾಗದಲ್ಲಿ ಸ್ಪ್ರೇ ಮಾಡುವುದು ಅಥವಾ ಲಿಕ್ವಿಡ್ ಬಳಸುವುದನ್ನು ತಪ್ಪಿಸಿ ಹೆಚ್ಚು ಪರಿಮಳಯುಕ್ತವಾಗಿರುವ ಉತ್ಪನ್ನದಲ್ಲಿ ಹೆಚ್ಚು ರಾಸಾಯನಿಕಗಳನ್ನು ಕೂಡ ಬಳಸಿರುತ್ತಾರೆ ಎಂಬುದನ್ನು ಗಮನದಲ್ಲಿಡಿ. ಇದನ್ನು ನೀವು ತಪ್ಪಿಸುತ್ತಾ ಬಂದರೆ ಅಲರ್ಜಿ ಕಿರಿಕಿರಿ ಮೊದಲಾದ ಸಮಸ್ಯೆಗಳಿಂದ ದೂರ ಇರಬಹುದು.
ಈ ರೀತಿ ನಮ್ಮ ತ್ವಚೆಯ ನಮ್ಮ ದೇಹದ ಇತರ ಭಾಗಗಳ ಆರೋಗ್ಯದ ಬಗ್ಗೆ ತಲೆಕೆಡಿಸಿಕೊಂಡಂತೆ ಮಹಿಳೆಯರಲ್ಲಿ ಅತಿ ಮುಖ್ಯವಾಗಿರುವ ಯೋನಿ ಪ್ರದೇಶದ ಸ್ವಚ್ಛತೆಯ ಬಗ್ಗೆಯೂ ಗಮನಹರಿಸಬೇಕು. ಆದರೆ ಯಾವುದೇ ಕಾರಣಕ್ಕೂ ಅತಿಯಾಗಿ ಯೋನಿ ಸ್ವಚ್ಛಗೊಳಿಸುವಂತಹ ಉತ್ಪನ್ನಗಳನ್ನು ಬಳಸಬೇಡಿ ಇದು ಸಾಕಷ್ಟು ಅಡ್ಡ ಪರಿಣಾಮಗಳನ್ನು ಹೊಂದಿದ್ದು ನೀವು ನಿಯಮಿತವಾಗಿ ಬಳಸುತ್ತಾ ಬಂದರೆ ಅದರ ಅಡ್ಡ ಪರಿಣಾಮದ ಸಮಸ್ಯೆಯನ್ನು ನೀವೇ ಎದುರಿಸಬೇಕಾಗುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications











