Latest Updates
-
ಗರ್ಬಾ ರಾತ್ರಿಯಲ್ಲಿ ಸುರಕ್ಷಿತವಾಗಿರಲು ಹೀಗೆ ಮಾಡಿ: ಮಿಶ್ರ ಧರ್ಮದ ಜೋಡಿಗಳಿಗೆ ಅಗತ್ಯವಿರುವ ಐಡಿ ಪರಿಶೀಲನೆ ಮತ್ತು ಹೆಲ್ಪ್ಲೈನ್ -
ಆಯುಧ ಪೂಜೆ: ಕೇವಲ ₹399ರಲ್ಲಿ ಮನೆ ಮತ್ತು ಬಾಲ್ಕನಿ ಅಲಂಕಾರಕ್ಕೆ ಇಲ್ಲಿದೆ ಬೆಸ್ಟ್ ಟಿಪ್ಸ್! -
ಮಳೆಗಾಲದ ನವರಾತ್ರಿ ಪ್ರಯಾಣ: ಉಪವಾಸದ ಆಹಾರ ಹಾಳಾಗದಂತೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ದುರ್ಗಾ ಪೂಜಾ ಸಂಭ್ರಮ: ಇಂದಿನಿಂದ ಕೋಲ್ಕತ್ತಾದಲ್ಲಿ ಬೆಳಗಿನ ಜಾವ 4 ಗಂಟೆಯವರೆಗೆ ಮೆಟ್ರೋ ಸೇವೆ, ಪಂಡಾಲ್ ದರ್ಶನಕ್ಕೆ ಇನ್ನು ಸುಲಭ! -
ನವರಾತ್ರಿ ಗರ್ಬಾ ಆಡುವ ಮುನ್ನ ಈ 9 ನಿಮಿಷದ ವಾರ್ಮ್-ಅಪ್ ಮಿಸ್ ಮಾಡ್ಬೇಡಿ! -
ನವರಾತ್ರಿ ಡೇ 6: ಗರ್ಬಾ ಅಖಾಡದಲ್ಲಿ ಕಪಲ್ಸ್ಗೆ ಇಲ್ಲಿದೆ ಸುವರ್ಣ ನಿಯಮಗಳು! -
ಈಶಾನ್ಯ ಮಾನ್ಸೂನ್ ಆರಂಭ: ಮಳೆಗಾಲದ ತೇವಾಂಶದಿಂದ ಮನೆಯನ್ನು ರಕ್ಷಿಸಲು 30 ನಿಮಿಷಗಳ ಸಿಂಪಲ್ ಪ್ಲಾನ್ -
ದೆಹಲಿ ಮಾಲಿನ್ಯದ ನಡುವೆ ಆರೋಗ್ಯ ರಕ್ಷಣೆ: ರೋಗನಿರೋಧಕ ಶಕ್ತಿ ಹೆಚ್ಚಿಸುವ ಸರಳ ಬಿಸಿ ಆಹಾರಗಳಿವು! -
ವಿಶ್ವ ಆಹಾರ ದಿನ: ಕೇವಲ 15 ನಿಮಿಷದಲ್ಲಿ ಸಿದ್ಧವಾಗುವ ₹120 ಒಳಗಿನ ಬೆಸ್ಟ್ ವೆಜ್ ಪ್ರೋಟೀನ್ ಡಯಟ್ ಪ್ಲಾನ್! -
ವಿಶ್ವ ಬೆನ್ನುಮೂಳೆ ದಿನ: ಬೆನ್ನುನೋವಿಗೆ ಗುಡ್ ಬೈ ಹೇಳಲು ಕೇವಲ 5 ನಿಮಿಷದ 'ಸ್ಪೈನ್ ರಿಸೆಟ್' ರೂಟಿನ್!
ವರ್ಕೌಟ್ ಮಾಡಿದ ತಕ್ಷಣ ತಣ್ಣೀರ ಸ್ನಾನ ಮಾಡಲೇಬಾರದು, ಏಕೆ?
ಬೆಳಗ್ಗೆ ವರ್ಕೌಟ್ ಆದ ತಕ್ಷಣ ತಣ್ಣೀರಿನಲ್ಲಿ ಸ್ನಾನ ಮಾಡಿದರೆ ಮೈ ತಂಪಾಗುವುದು, ಫ್ರೆಷ್ ಫೀಲ್ ನೀಡುವುದು, ಆದರೆ ವರ್ಕೌಟ್ ಆದ ತಕ್ಷಣ ತಣ್ಣೀರ ಸ್ನಾನ ಒಳ್ಳೆಯದಲ್ಲ ಎಂಬುವುದು ಒಳ್ಳೆಯದಲ್ಲ. ಹೌದು ವರ್ಕೌಟ್ ಮಾಡಿದ ತಕ್ಷ ಸ್ನಾನ ಮಾಡಲು ಹೋದರೆ ನೀವು ವರ್ಕೌಟ್ ಮಾಡಿಯೂ ಪ್ರಯೋಜನವಿಲ್ಲ.
ಆದ್ದರಿಂದ ವರ್ಕೌಟ್ ಮುಗಿಸಿ ಎಷ್ಟು ಹೊತ್ತಿನ ಬಳಿಕ ಸ್ನಾನ ಮಾಡಬೇಕು? ವರ್ಕೌಟ್ ಬಳಿಕ ತಣ್ಣೀರಿನಲ್ಲಿ ಸ್ನಾನ ಮಾಡಬೇಕೆ? ಬಿಸಿ ನೀರಿನಲ್ಲಿ ಸ್ನಾನಮಾಡಬೇಕೆ? ಎಂದು ನೋಡೋಣ ಬನ್ನಿ:

ವರ್ಕೌಟ್ ಮಾಡದ ತಕ್ಷಣ ಸ್ನಾನ ಮಾಡಬೇಡಿ
ಹೌದು ನೀವು ದಿನದಲ್ಲಿ 15-20 ನಿಮಿಷ ವರ್ಕೌಟ್ ಮಾಡಿದ ಬಳಿಕ ಸ್ನಾನಕ್ಕೆ ಓಡಬೇಡಿ. ಬದಲಿಗೆ 15- 20 ಕಳೆದ ಬಳಿಕವಷ್ಟೇ ಸ್ನಾನಮಾಡಬೇಕು. ಏಕೆಂದರೆ ವರ್ಕೌಟ್ ಮಾಡಿದಾಗ ಮೈ ಉಷ್ಣಾಂಶ ಹೆಚ್ಚಾಗಿರುತ್ತದೆ. ತಕ್ಷಣವೇ ಸ್ನಾನ ಮಾಡಿದರೆ ಮೈ ಉಷ್ಣಾಂಶ ಕಡಿಮೆಯಾಗುವುದು.
ಈ ಪ್ರಕ್ರಿಯೆ ಜೀರ್ಣಕ್ರಿಯೆ ಹಾಗೂ ಚಯಪಚಯ ಕ್ರಿಯೆಗೆ ಒಳ್ಳೆಯದಲ್ಲ. ನೀವು ವರ್ಕೌಟ್ ಬಳಿಕ ದೇಹ ತಣ್ಣಗಾಗಲು ಬಿಡಬೇಕು, ಇದಕ್ಕೆ 15- ನಿಮಿಷ ಬೇಕು. ಒಂದು ವೇಳೆ ಆಫೀಸ್‌ಗೆ ಹೊತ್ತಾಯ್ತು ಅಂತ ತಕ್ಷಣ ಸ್ನಾನ ಮಾಡುವುದಾದರೆ ಮೊದಲು ಹದ ಬಿಸಿ ನೀರು ಮೈಗೆ ಹಾಕಬೇಕು, ಕೊನೆಗೆ ಬೇಕಾದರೆ ತಣ್ಣೀರು ಮೈಗೆ ಹಾಕಬಹುದು. ಆದಷ್ಟೂ ವರ್ಕೌಟ್ ಆದ ತಕ್ಷಣವೇ ಸ್ನಾನ ಮಾಡಲು ಹೋಗಬೇಡಿ.
ಯೋಗ ಮಾಡುವಾಗ ಸ್ನಾನ ಮಾಡಿ ಯೋಗ ಅಭ್ಯಾಸ ಒಳ್ಳೆಯದು
ನೀವು ಯೋಗಿಗಳನ್ನು ನೋಡಿದರೆ ಮೊದಲು ಸ್ನಾನ ಮಾಡಿ ನಂತರ ಯೋಗ ಮಾಡುತ್ತಾರೆ. ಯೋಗ ಮಾಡುವ ಮುನ್ನ ಯೋಗ ಮಾಡುವುದರಿಂದ ದೇಹ ಫ್ಲಕ್ಸಿಬಲ್ ಆಗಿರಲು ಸಹಕಾರಿ. ಅಲ್ಲದೆ ದೇಹ ಶುದ್ಧವಾಗಿದ್ದರೆ ಮನಸ್ಸಿನ ಏಕಾಗ್ರತೆಗೆ ಸಹಾಯ ಮಾಡುತ್ತದೆ.
ವರ್ಕೌಟ್ ಬಳಿಕ ತಣ್ಣೀರಿನ ಸ್ನಾನ ಒಳ್ಲೆಯದೇ? ಬಿಸಿ ನೀರಿನ ಸ್ನಾನ ಒಳ್ಳೆಯದೇ?
ತಣ್ಣೀರಿನ ಸ್ನಾನ ಒಳ್ಳೆಯದಲ್ಲ, ಬಿಸಿ ನೀರಿನ ಸ್ನಾನ ಒಳ್ಳೆಯದ ಎಂದಲ್ಲ ಹೇಳಲು ಸಾಧ್ಯವಿಲ್ಲ. ಏಕೆಂದರೆ ತಣ್ಣೀರಿನ ಸ್ನಾನಕ್ಕೆ ಅದರದ್ದೇ ಗುಣಗಳು ಇದೆ, ಬಿಸಿ ನೀರಿನ ಸ್ನಾನ ಮಾಡುವುದರಿಂದ ಅದರದ್ದೇ ಆದ ಪ್ರಯೋಜನಗಳಿವೆ, ಇದರ ಬಗ್ಗೆ ನೋಡೋಣ ಬನ್ನಿ:
ಬಿಸಿ ನೀರಿನ ಸ್ನಾನ ಮಾಡುವುದರಿಂದ ದೊರೆಯುವ ಪ್ರಯೋಜನಗಳು
- ರಕ್ತ ಸಂಚಾರಕ್ಕೆ ಒಳ್ಳೆಯದು: ಬಿಸಿ ನೀರಿನ ಸ್ನಾನ ರಕ್ತ ಸಂಚಾರಕ್ಕೆ ತುಂಬಾನೇ ಒಳ್ಳೆಯದು
- ಮೈ ಕೈ ನೋವು ಕಡಿಮೆಯಾಗುವುದು.
- ವಿಶ್ರಾಂತಿಯ ಅನುಭವ ನೀಡುವುದು, ಸಂಜೆ ವರ್ಕೌಟ್ ಮಾಡಿ ಬಿಸಿ ನೀರಿನ ಸ್ನಾನ ಮಾಡಿದರೆ ಒಳ್ಳೆಯ ನಿದ್ದೆ ಬರುವುದು
ತಣ್ಣೀರಿನ ಸ್ನಾನ ಮಾಡುವುದರಿಂದ ದೊರೆಯುವ ಪ್ರಯೋಜನ
- ಊತ, ಉರಿಯೂತ ಈ ಬಗೆಯ ಸಮಸ್ಯೆ ಕಡಿಮೆ ಮಾಡುತ್ತದೆ
- ಸ್ನಾಯುಗಳಲ್ಲಿ ಊತ ಉಂಟಾಗುವುದನ್ನು ತಡೆಗಟ್ಟುತ್ತದೆ
- ಮೈ ಉಷ್ಣಾಂಶ ಕಡಿಮೆಯಾಗುವುದು
- ತಾಜಾತನದ ಅನುಭವ ನೀಡುವುದು.
ಆದ್ದರಿಂದ ವ್ಯಾಯಾಮ ಮಾಡಿದ ಬಳಿಕ ನೀವು ಸ್ನಾನ ಮಾಡುವುದಾದರೆ ಸ್ವಲ್ಪ ಹೊತ್ತು ಬಿಟ್ಟು ಸ್ನಾನ ಮಾಡುವುದು ಒಳ್ಳೆಯದು. ಇನ್ನು ಯೋಗ ಮಾಡುವುದಾದರೆ ಸ್ನಾನ ಮಾಡುವುದು ಯೋಗ ಮಾಡುವುದು ಒಳ್ಳೆಯ ಅಭ್ಯಾಸ. ತುಂಬಾ ಮೈ ಬೆವತರೆ ಮತ್ತೆ ಸ್ನಾನ ಮಾಡಬಹುದು.
ಇತರ ಸಲಹೆ: ಈ ಸೆಕೆಯಲ್ಲಿ ವರ್ಕೌಟ್ ಮಾಡುವಾಗ ತುಂಬಾ ಬಿಗಿಯಾದ ಬಟ್ಟೆ ಧರಿಸಬೇಡಿ, ಒಳ ಉಡುಪು ಕಾಟನ್ ಬಟ್ಟೆ ಆಗಿರಬೇಕು. ವರ್ಕೌಟ್‌ಗೆ ಸೂಟ್ ಆಗುವಂಥ ಕಾಟನ್ ಪ್ಯಾಂಟ್, ಶರ್ಟ್ ಅತ್ಯುತ್ತಮ ಆಯ್ಕೆ, ಆದ್ದರಿಂದ ಈ ಬಗ್ಗೆ ಕೂಡ ಜಾಗ್ರತೆವಹಿಸಬೇಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
