ಯಾರೆಲ್ಲಾ ತೂಕ ಇಳಿಸ್ಬೇಕು ಅಂದು ಕೊಂಡಿದ್ದೀರಾ? ನಿಮಗಾಗಿ ಇಲ್ಲಿದೆ 5:2 ಡಯೇಟ್‌ ಪ್ಲಾನ್‌ !

ಇತ್ತೀಚಿಗೆ ಜನರನ್ನು ಕಾಡುತ್ತಿರುವ ಅತೀ ದೊಡ್ಡ ಆರೋಗ್ಯ ಸಮಸ್ಯೆಗಳಲ್ಲಿ ತೂಕ ಹೆಚ್ಚಾಗುವುದು ಕೂಡ ಒಂದಾಗಿದೆ. ತೂಕ ಇಳಿಸೋದಕ್ಕಾಗಿ ಜಿಮ್‌, ವರ್ಕ್‌ಔಟ್‌, ಯೋಗ ಹೀಗೆ ಮಾಡದೇ ಇರೋ ಪ್ರಯೋಗಗಳೇ ಇಲ್ಲ. ಅತಿಯಾದ ತೂಕವನ್ನು ಇಳಿಸಬೇಕಂದ್ರೆ ಕೇವಲ ವರ್ಕ್‌ಔಟ್‌ ಮಾಡಿದ್ರೆ ಸಾಲೋದಿಲ್ಲ. ಉತ್ತಮ ಆಹಾರ ಶೈಲಿಯನ್ನು ಕೂಡ ಅಳವಡಿಸಿಕೊಳ್ಳುವುದು ತುಂಬಾನೇ ಮುಖ್ಯವಾಗುತ್ತದೆ. ಅದ್ರಲ್ಲೂ 5:2 ಡಯೇಟ್‌ ಪ್ಲಾನ್‌ ತೂಕ ಇಳಿಸಬೇಕು ಅಂತ ಅಂದುಕೊಳ್ಳುತ್ತಿರುವವರಿಗೆ ತುಂಬಾನೇ ಒಳ್ಳೆಯದು. ಅಷ್ಟಕ್ಕು ಏನಿದು 5:2 ಡಯೇಟ್‌ ಪ್ಲಾನ್‌? 5:2 ಡಯೇಟ್‌ ಪ್ಲಾನ್‌ ಮಾಡೋದು ಹೇಗೆ? ತೂಕ ಇಳಿಸಿಕೊಳ್ಳೋದಕ್ಕೆ ಇದು ಯಾವ ರೀತಿ ಸಹಕಾರಿಯಾಗಲಿದೆ ಅನ್ನೋದನ್ನು ತಿಳಿಯೋಣ.

What Is The 5:2 Diet? Know Diet Plan, Recipes, Meal Plan And Benefits In Kannada

ಹೇಗಿರುತ್ತೆ 5:2 ಡಯೇಟ್‌ ಪ್ಲಾನ್‌?
2013 ರಲ್ಲಿ ಮೊದಲ ಬಾರಿ 5:2 ಡಯೇಟ್‌ ಪ್ಲಾನ್‌ ಆರಂಭಮಾಡಲಾಯಿತು. ಈ ಡಯೇಟ್‌ ಪ್ಲಾನ್‌ ಪ್ರಕಾರ ವಾರದಲ್ಲಿ ಐದು ದಿನ ಎಂದಿನಂತೆ ನಿಮ್ಮ ಆಹಾರ ಕ್ರಮ ಇರಬೇಕು. ಆದರೆ ಎರಡು ದಿನಗಳ ಕಾಲ ನೀವು ಉಪವಾಸ ಮಾಡಬೇಕು. ಹಾಗಂತ ಸಂಪೂರ್ಣವಾಗಿ ನೀವು ಎರಡು ದಿನಗಳ ಕಾಲ ಉಪವಾಸ ಇರಬೇಕು ಅಂತೇನಿಲ್ಲ. ಎರಡು ದಿನಗಳ ಕಾಲ ನೀವು ಇಂತಿಷ್ಟು ಕ್ಯಾಲರಿಗಳನ್ನು ಕಡಿಮೆ ಮಾಡಬೇಕು. ಹಾಗೂ ಈ ಡಯೇಟ್‌ ಪ್ಲಾನ್‌ನಲ್ಲಿರುವ ಆಹಾರಗಳನ್ನು ಮಾತ್ರ ಸೇವಿಸಬೇಕು.

ತಜ್ಞರು ಈ ಬಗ್ಗೆ ಏನು ಹೇಳುತ್ತಾರೆ?
ತಜ್ಞರ ಪ್ರಕಾರ 5:2 ಡಯೇಟ್‌ ಎಂಬುವುದು ಇತ್ತೀಚಿನ ದಿನಗಳಲ್ಲಿ ತುಂಬಾನೇ ಪ್ರಖ್ಯಾತಿಯನ್ನು ಪಡೆದಿದೆ. ಇದು ತೂಕ ಇಳಿಸೋದ್ರಲ್ಲಿ ತುಂಬಾನೇ ಸಹಾಯಕಾರಿಯಾಗಿದೆ ಎಂದು ಹೇಳಬಹುದು. ಇದರಿಂದ ನೀವು ಹೆಚ್ಚಿನ ಪ್ರಮಾಣದ ಕ್ಯಾಲೋರಿಯನ್ನು ಕಳೆದುಕೊಳ್ಳಬಹುದು. ಈ ಡಯೇಟ್‌ನಲ್ಲಿ ಎರಡು ದಿನಗಳ ಕಾಲ ಉಪವಾಸ ಮಾಡಬೇಕಾದ ಕಾರಣ. ಇದನ್ನು ಪಾಲಿಸೋದು ಕೊಂಚ ಕಷ್ಟ ಅಂತಾನೇ ಹೇಳಬಹುದು. ಆದರೆ ಆರೋಗ್ಯ ದೃಷ್ಟಿಯಿಂದ ತುಂಬಾನೇ ಒಳ್ಳೆಯದು.

5:2 ಡಯೇಟ್‌ ಸಂದರ್ಭದಲ್ಲಿ ಏನು ತಿನ್ನಬೇಕು?
5:2 ಡಯೇಟ್‌ ಪ್ರಕಾರ ಉಪವಾಸದ ಆ ಎರಡು ದಿನದಲ್ಲಿ ಮಹಿಳೆಯರು 500 ಹಾಗೂ ಪುರುಷರು 600 ಕ್ಯಾಲೋರಿಗಳನ್ನು ಮಾತ್ರ ಸೇವಿಸಬೇಕು. ಉಳಿದ ಐದು ದಿನ ಸಾಮಾನ್ಯವಾಗಿ ನೀವು ಯಾವ ಆಹಾರ ಸೇವಿಸುತ್ತಿರೋ ಆ ಆಹಾರವನ್ನು ಸೇವಿಸಿದರೆ ಸಾಕು. ಹಾಗಂತ ಐದು ದಿನಗಳ ಕಾಲ ಸಿಕ್ಕಾಪಟ್ಟೆ ಕ್ಯಾಲೋರಿ ಇರುವ ಆಹಾರಗಳನ್ನು ಸೇವಿಸಬಾರದು. ಬದಲಾಗಿ ನಿಮ್ಮ ದೇಹಕ್ಕೆ ಎಷ್ಟು ಬೇಕು ಅಷ್ಟು ಪ್ರಮಾಣದಲ್ಲಿ ಕ್ಯಾಲೋರಿಯನ್ನು ಸೇವಿಸಿದರೆ ಸಾಕು.

2 ದಿನದ ಉಪವಾಸದ ಸಂದರ್ಭದಲ್ಲಿ ನಿಮ್ಮ ಆಹಾರ ಕ್ರಮ ಹೀಗಿರಲಿ
ನೀವೇನಾದರೂ ಎರಡು ದಿನಗಳ ಉಪವಾಸದ ಸಂದರ್ಭದಲ್ಲಿ ಬರೀ 500 ಕ್ಯಾಲೋರಿಗಳನ್ನು ಸೇವಿಸೋದಕ್ಕೆ ನಿರ್ಧಾರ ಮಾಡಿದರೆ. ಆ ದಿನ ಬೆಳಗ್ಗಿನ ಉಪಹಾರಕ್ಕೆ 200 ಕ್ಯಾಲೋರಿ, ಮಧ್ಯಾಹ್ನ 100 ಕ್ಯಾಲೋರಿ ಹಾಗೂ ರಾತ್ರಿ ಊಟಕ್ಕೆ 200 ಕ್ಯಾಲೋರಿ ಸೇವಿಸಿದರೆ ಸಾಕು. ಅಥವಾ ರಾತ್ರಿಯ ಊಟವನ್ನು ಬಿಡಲು ನಿರ್ಧರಿಸೋದಾದರೆ ಬೆಳಗ್ಗೆ ಹಾಗೂ ಮಧ್ಯಾಹ್ನ ಸಮನಾಗಿ 250 ಕ್ಯಾಲೋರಿ ಆಹಾರ ಸೇವಿಸಿದರೆ ಸಾಕು.

ಸಾಮಾನ್ಯ ದಿನಗಳಲ್ಲಿ ನೀವು ಅಧಿಕ ಕ್ಯಾಲೋರಿ ಆಹಾರಗಳನ್ನು ಸೇವನೆ ಮಾಡುತ್ತಿದ್ದು ಉಪವಾಸದ ಎರಡು ದಿನಗಳಲ್ಲಿ ನೀವು ಕೇವಲ 500- 600 ಕ್ಯಾಲೋರಿಗಳನ್ನು ಸೇವಿಸೋದು ಕಷ್ಟ. ಹೀಗಾಗಿ ನಿಧಾನವಾಗಿ ನಿಮ್ಮ ಕ್ಯಾಲೋರಿ ಸೇವನೆಯನ್ನು ಕಡಿಮೆ ಮಾಡುತ್ತಾ ಬನ್ನಿ ನೀವೊಂದು ವೇಳೆ 2,000 ಕ್ಯಾಲೋರಿಗಳನ್ನು ಸೇವನೆ ಮಾಡುತ್ತಿದ್ದರೆ ಮುಂದಿನ ವಾರ ಕೊಂಚ ಕಡಿಮೆ ಮಾಡಿ. ಹೀಗೆ ಮಾಡುತ್ತಾ ಬಂದರೆ ತಿಂಗಳ ನಂತರ 500- 600 ಕ್ಯಾಲೋರಿಗಳಿಗೆ ಬಂದಿಳಿಯುತ್ತದೆ.

5:2 ಡಯೇಟ್‌ನಲ್ಲಿ ಏನೆಲ್ಲಾ ತಿನ್ನಬೇಕು?
* ಧಾನ್ಯಗಳು
* ತರಕಾರಿಗಳು
* ಹಣ್ಣುಗಳು
* ಅತಿಯಾದ ಫೈಬರ್‌ಯುಕ್ತ ಆಹಾರಗಳು
* ಆರೋಗ್ಯಕರ ಕೊಬ್ಬು
* ನೇರ ಪ್ರೊಟೀನ್‌
* ಕೆಂಪು ಮಾಂಸ
* ಪಾನೀಯಗಳು

ವಾರದ ಊಟದ ಕ್ರಮ ಹೀಗಿರಲಿ :
ಸೋಮವಾರ : ಸಾಮಾನ್ಯವಾಗಿರಲಿ
ಮಂಗಳವಾರ : ಉಪವಾಸ
ಬುಧವಾರ : ಸಾಮಾನ್ಯವಾಗಿರಲಿ
ಗುರುವಾರ : ಉಪವಾಸ
ಶುಕ್ರವಾರ : ಸಾಮಾನ್ಯವಾಗಿರಲಿ
ಶನಿವಾರ : ಸಾಮಾನ್ಯವಾಗಿರಲಿ
ಭಾನುವಾರ : ಸಾಮಾನ್ಯವಾಗಿರಲಿ

ಉಪವಾಸದ ದಿನ ಈ ಆಹಾರಗಳನ್ನು ಸೇವಿಸಿ :
* ಸ್ವಲ್ಪ ಪ್ರಮಾಣದಲ್ಲಿ ಬೇಯಿಸಿದ ತರಕಾರಿಗಳು
*ಯೋರ್ಗಟ್‌ ಜೊತೆಗೆ ಬೆರಿ ಹಣ್ಣುಗಳನ್ನು ಸೇವಿಸಿ
* ಬೇಯಿಸಿದ ಮೊಟ್ಟೆಗಳು
* ಬೇಯಿಸಿದ ಮೀನು ಅಥವಾ ಮಾಂಸ
* ಅನ್ನದ ಜೊತೆಗೆ ಬೇಯಿಸಿದ ಹೂಕೋಸು
* ಸೂಪ್‌ (ತರಕಾರಿಯಿಂದ ತಯಾರಿಸಿದ್ದರೆ ಒಳ್ಳೆಯದು)
* ಕಡಿಮೆ ಕ್ಯಾಲೋರಿ ಹೊಂದಿರುವ ಕಪ್ ಸೂಪ್‌ ಕುಡಿಯಿರಿ
* ಬ್ಲಾಕ್‌ ಕಾಫಿ
* ಬ್ಲಾಕ್‌ ಟೀ
* ನೀರು

5:2 ಡಯೇಟ್‌ ತೂಕ ಕಡಿಮೆ ಮಾಡಲು ಸಹಾಯ ಮಾಡುತ್ತಾ?
5:2 ಡಯೇಟ್‌ ತೂಕ ಇಳಿಸಬೇಕು ಅನ್ನೋ ಉದ್ದೇಶ ಹೊಂದಿರುವವರಿಗೆ ತುಂಬಾನೇ ಒಳ್ಳೆಯದು. ಯಾಕಂದ್ರೆ ಇದು ತೂಕ ಇಳಿಸೋದಕ್ಕೆ ತುಂಬಾನೇ ಸಹಾಕಾರಿಯಾಗಲಿದೆ ಅಂತಾನೇ ಹೇಳಬಹುದು. ಈ ಡಯೇಟ್‌ನ ಪ್ರಮುಖ ಉದ್ದೇಶ ದೇಹದೊಳಗಡೆ ಹೋಗುವ ಕ್ಯಾಲೋರಿ ಅಂಶವನ್ನು ನಿಯಂತ್ರಿಸುವುದು. 5:2 ಡಯೇಟ್‌ನಲ್ಲಿ ಎರಡು ದಿನಗಳ ಕಾಲ ಉಪವಾಸ ಮಾಡುವುದರಿಂದ 3-24 ವಾರಗಳಲ್ಲಿ 3-8% ನಷ್ಟು ತೂಕವನ್ನು ಕಡಿಮೆ ಮಾಡಬಹುದು. ಹೀಗಾಗಿ ನಿಮ್ಮ ದಿನನಿತ್ಯದ ವ್ಯಾಯಾಮದ ಜೊತೆಗೆ 5:2 ಡಯೇಟ್‌ ಮಾಡುವುದು ತೂಕ ಇಳಿಸಲು ತುಂಬಾನೇ ಉಪಯೋಗಕಾರಿ ಎನ್ನಬಹುದು.

5:2 ಡಯೇಟ್‌ ನ ನೀವು ಚಾಚು ತಪ್ಪದೇ ಪಾಲಿಸಿದ್ದಲ್ಲಿ ಖಂಡಿತ ನೀವು ನಿಮ್ಮ ದೇಹದ ತೂಕವನ್ನು ಇಳಿಸಿಕೊಳ್ಳಬಹುದು. ಹಾಗೂ ಆರೋಗ್ಯವಾಗಿಯೂ ಇರಬಹುದು. ಇನ್ನೂ ಆರೋಗ್ಯ ಸಮಸ್ಯೆ ಇರುವವರು ಇದನ್ನು ಪಾಲಿಸುವುದಕ್ಕಿಂತಲೂ ಮೊದಲು ತಜ್ಞರ ಸಲಹೆ ಪಡೆದುಕೊಂಡರೆ ಉತ್ತಮ. ತಜ್ಞರ ಸಲಹೆಯ ನಂತರವಷ್ಟೇ ಮುಂದುವರಿಯಿರಿ.

Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.

English summary

What Is The 5:2 Diet? Know Diet Plan, Recipes, Meal Plan And Benefits In Kannada

What Is The 5:2 Diet? Know the details about 5:2 Diet Plan, Recipes, Meal Plan And Benefits. Read More..
X
Desktop Bottom Promotion