Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ನೀವು ಪ್ರತಿದಿನ 12-14 ಗಂಟೆ ಉಪವಾಸ ಮಾಡಿದರೆ ದೇಹದ ಮೇಲಾಗುವ ಪ್ರಭಾವವೇನು?
ಎಲ್ಲಾ ಧರ್ಮದಲ್ಲಿ ಕೆಲವೊಂದು ಸಂದರ್ಭದಲ್ಲಿ ಉಪವಾಸ ಆಚರಣೆ ಇರುತ್ತದೆ, ಇದೊಂದು ಆಚರಣೆಯಂತೆ ಜನರು ಆಚರಿಸುತ್ತಾರೆ, ಆದರೆ ಈ ಉಪವಾಸದಿಂದ ಮಾಡುವುದರಿಂದ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇನ್ನು ಕೆಲವರು ಮೈ ತೂಕ ನಿಯಂತ್ರಣಕ್ಕೆ ಉಪವಾಸ ಮಾಡುತ್ತಾರೆ, ಅದನ್ನು ಇಂಟರ್‌ಮೀಡಿಯೆಟ್ ಫಾಸ್ಟಿಂಗ್ ಎಂದು ಕರೆಯುತ್ತಾರೆ.
ಇನ್ನು ನೀವು ರಾತ್ರಿ 7 ಗಂಟೆಯ ಒಳಗಡೆ ಸೇವಿಸಬೇಕು, ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂದು ಹೇಳುತ್ತಾರೆ, ಬೆಳಗ್ಗೆ 7 ಗಂಟೆಗೆ ತಿಂದರೆ ಇನ್ನು ತಿನ್ನುವುದು ಬೆಳಗ್ಗೆ 8-9 ಗಂಟೆಗೆ. ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು ಎಂದು ಹೇಳಲಾಗುವುದು. ಆರೋಗ್ಯ ತಜ್ಞರು ನೀವು 14 ಗಂಟೆ ಉಪವಾಸ ಮಾಡುವುದು ಒಳ್ಳೆಯದು ಎಂದು ಹೇಳುತ್ತಾರೆ. ಈ 14 ಗಂಟೆ ಉಪವಾಸ ಮಾಡುವುದರಿಂದ ದೇಹದ ಮೇಲಾಗುವ ಪ್ರಭಾವವೇನು ಎಂದು ನೋಡೋಣ ಬನ್ನಿ:

ಕೊಬ್ಬು ಕರಗುವುದು
ನೀವು 12-14 ಗಂಟೆ ಉಪವಾಸ ಮಾಡಿದಾಗ ದೇಹದಲ್ಲಿ ಸಂಗ್ರಹವಾಗಿದ್ದ ಕೊಬ್ಬಿನಂಶ ಕರಗುವುದು. ಏಕೆಂದರೆ ಈ ರೀತಿ 12-14 ಗಂಟೆ ಏನೂ ತಿನ್ನದಿದ್ದರೆ ಲಿವರ್ ಕೆಟೊನೆ ಉತ್ಪತ್ತಿ ಮಾಡುತ್ತದೆ. ಇದು ದೇಹದಲ್ಲಿ ಸಂಗ್ರಹವಾಗಿರುವ ಕೊಬ್ಬು ಕರಗಿಸುವುದು ಹಾಗೂ ಮೆದುಳು ಹಾಗೂ ಸ್ನಾಯುಗಳಿಗೆ ಶಕ್ತಿ ತುಂಬುವುದು.
ಮಧುಮೇಹಿಗಳಿಗೆ ಒಳ್ಳೆಯದು
ನೀವು 14 ಗಂಟೆ ಉಪವಾಸ ಮಾಡುವುದರಿಂದ ಮಧುಮೇಹ ತಡೆಗಟ್ಟಲು, ಮಧುಮೇಹವಿದ್ದರಿಗೆ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಸಹಕಾರಿ. ಏಕೆಂದರೆ ಚಯಪಚಯ ಕ್ರಿಯೆ ಉತ್ಪತ್ತಿಯಾಗುವುದು, ಇದರಿಂದ ಸ್ನಾಯುಗಳು ಹಾನಿಯಾಗಿದ್ದರೆ ಅದು ಸರಿಯಾಗಲು ಸಹಕಾರಿ.
ಕ್ಯಾನ್ಸರ್‌ನಂಥ ಅಪಾಯ ತಡೆಗಟ್ಟುತ್ತದೆ
ನೀವು ಸಂಜೆ ಊಟ ಮಾಡಿ ರಾತ್ರಿ ಏನೂ ತಿನ್ನದೆ ಇದ್ದರೆ ಆರೋಗ್ಯಕ್ಕೆ ಒಳ್ಳೆಯದು, ಇದರಿಂದ ಜೀವಕಣಗಳಿಗೆ ಒಳ್ಳೆಯದು ಹಾಗೂ ಕ್ಯಾನ್ಸರ್ ಹಾಗೂ ಮತ್ತಿತರ ಆರೋಗ್ಯ ಸಂಬಂಧಿಸಿದ ಸಮಸ್ಯೆ ತಡೆಗಟ್ಟಲು ಸಹಕಾರಿ.
ಹಾರ್ಮೋನ್‌ಗಳನ್ನು ಸಮತೋಲನದಲ್ಲಿಡುತ್ತದೆ
ದಿನದಲ್ಲಿ 12-14 ಗಂಟೆ ಉಪವಾಸ ಇರುವುದರಿಂದ ದೇಹದಲ್ಲಿ ಹಾರ್ಮೋನ್‌ಗಳು ಸಮತೋಲನದಲ್ಲಿರುತ್ತದೆ. ಏಕೆಂದರೆ ನಾವು ಇಷ್ಟು ಹೊತ್ತು ಉಪವಾಸವಿದ್ದರೆ ಚಯಪಚಯ ಕ್ರಿಯೆ ಉತ್ತಮವಾಗುವುದು.
ಉರಿಯೂತದ ಸಮಸ್ಯೆ ಕಡಿಮೆಯಾಗುವುದು
ಉರಿಯೂತದ ಸಮಸ್ಯೆ ಬಂದರೆ ತುಂಬಾನೇ ಅಸ್ವಸ್ಥತೆ ಕಾಡುವುದು, ಅದನ್ನು ತಡೆಗಟ್ಟಲು ಇದು ಸಹಕಾರಿ. ಏಕೆಂದರೆ ಈ ರೀತಿ ಉಪವಾಸವಿದ್ದಾಗ ಉರಿಯೂತದ ಸಮಸ್ಯೆ ಉಂಟು ಮಾಡುವ ಸಿ ಕ್ರಿಯೇಟಿವ್ ಪ್ರೊಟೀನ್ ಹಾಗೂ ಇಂಟರ್‌ಲೆಕ್ಯೂನ್ ಕಡಿಮೆಯಾಗುವುದು, ಆದ್ದರಿಂದ ಉರಿಯೂತದ ಸಮಸ್ಯೆ ತಡೆಗಟ್ಟಲು ಸಹಕಾರಿ.
ಮೈ ತೂಕ ನಿಯಂತ್ರಣದಲ್ಲಿಡಲು ಸಹಕಾರಿ
ನೀವು ಹೀಗೆ ಪ್ರತಿನಿತ್ಯ 12-14 ಗಂಟೆ ಉಪವಾಸ ಮಾಡುವುದರಿಂದ ಮೈ ತೂಕ ನಿಯಂತ್ರಣದಲ್ಲಿಡಲು ಸಹಕಾರಿಯಾಗಿದೆ. ಇದನ್ನು ತುಂಬಾ ಸೆಲೆಬ್ರಿಟಿಗಳು ಅನುಸರಿಸುತ್ತಿದ್ದಾರೆ, ಅವರು 7 ಗಂಟೆಯ ಮೊದಲೇ ಆಹಾರ ಸೇವಿಸಿ ತೂಕ ನಿಯಂತ್ರಣ ಮಾಡುತ್ತಿದ್ದಾರೆ.
ಈ ರೀತಿ ಪ್ರತಿನಿತ್ಯ ಉಪವಾಸ ಮಾಡುವುದರಿಂದ ತೊಂದರೆ ಇದೆಯೇ?
ಏನೂ ತೊಂದರೆಯಿಲ್ಲ, ಏಕೆಂದರೆ ನೀವು ಸಂಪೂರ್ಣ ಉಪವಾಸ ಮಾಡುವುದಿಲ್ಲ, ನಿಮ್ಮ ಆಹಾರವನ್ನು ಮಾಮೂಲಿ ರೀತಿಯೇ ಸೇವಿಸಬಹುದು. ಆದರೆ ಸ್ವಲ್ಪ ಬೇಗ ಅಂದರೆ 7 ಗಂಟೆಯ ಒಳಗಡೆ ಸೇವಿಸಿ, ಹೀಗೆ ಆಹಾರ ಸೇವಿಸುವುದರಿಂದ ಬೆಳಗ್ಗೆ ಬ್ರೇಕ್‌ಫಾಸ್ಟ್‌ಗೆ 12-1 ಗಂಟೆ ಬ್ರೇಕ್ ಸಿಗುತ್ತೆ, ಈ ವಿಧಾನ ಟ್ರೈ ಮಾಡಿ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ನೀವು 12 ಗಂಟೆ ಉಪವಾಸವನ್ನು ರಾತ್ರಿ ಹೊತ್ತಿನಲ್ಲಿ ಮಾಡಿ ಹಗಲಿನಲ್ಲಿ ಮಾಡಿದರೆ ಸುಸ್ತಾಗುವುದು, ಅಲ್ಲದೆ ರಾತ್ರಿ ಹೊಟ್ಟೆ ತುಂಬಾ ತಿಂದು ಒಳ್ಳೆಯದಲ್ಲ, ಬದಲಿಗೆ ಬೆಳಗ್ಗೆ, ಮಧ್ಯಾಹ್ನ ಚೆನ್ನಾಗಿ ತಿಂದು ಸಂಜೆ ಸ್ವಲ್ಪ ಆಹಾರ ಸೇವಿಸಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications