Latest Updates
-
ಅಕ್ಟೋಬರ್ 1 ರಿಂದ ಎಸಿ, ಟಿವಿ ಬೆಲೆ ಏರಿಕೆ: ಹಬ್ಬದ ಆಫರ್ ಬಳಸಿಕೊಂಡು ಹಣ ಉಳಿಸುವುದು ಹೇಗೆ? -
ವಿಶ್ವ ಹೃದಯ ದಿನ: ನಿಮ್ಮ ಊಟದ ತಟ್ಟೆಯಲ್ಲಿ ಈ ಸಣ್ಣ ಬದಲಾವಣೆ ಮಾಡಿದರೆ ಹೃದಯ ಸದಾ ಆರೋಗ್ಯ! -
ಬ್ಯಾಂಕ್ ಮುಷ್ಕರ ವಾಪಸ್: ಇಂದಿನಿಂದ ಬ್ಯಾಂಕ್ಗಳು ಎಂದಿನಂತೆ ಓಪನ್, ಗ್ರಾಹಕರಿಗೆ ಸಿಹಿ ಸುದ್ದಿ; 5 ದಿನಗಳ ಕೆಲಸದ ಬಗ್ಗೆ ಅಪ್ಡೇಟ್ -
ವಾಕಿಂಗ್ ಹೋಗುವಾಗ ಬೀದಿ ನಾಯಿಗಳ ಕಾಟವೇ? ಸುರಕ್ಷಿತವಾಗಿರಲು ಈ ಸರಳ ಟಿಪ್ಸ್ ಪಾಲಿಸಿ -
ಗರ್ಭನಿರೋಧಕಗಳ ಬಗ್ಗೆ ಮುಜುಗರವೇ? ದಂಪತಿಗಳಿಗಾಗಿ ಇಲ್ಲಿದೆ ಸಂಪೂರ್ಣ ಸುರಕ್ಷಿತ ಮಾರ್ಗದರ್ಶಿ -
ಕೇರಳ-ಕರ್ನಾಟಕ ಕರಾವಳಿಯಲ್ಲಿ ಬೃಹತ್ ಅಲೆಗಳ ಆರ್ಭಟ: ನಿಮ್ಮ ಮನೆ ಮತ್ತು ವಾಹನಗಳ ಸುರಕ್ಷತೆಗೆ ಇಲ್ಲಿದೆ ತುರ್ತು ಸಲಹೆಗಳು -
ಇನ್ಮುಂದೆ ಪ್ಯಾಕೆಟ್ ಆಹಾರದ ಮೇಲೆ ಕೆಂಪು ಷಡ್ಕೋನ: ಆರೋಗ್ಯಕ್ಕೆ ಅಪಾಯವಿದ್ದರೆ ಹೀಗೆ ಎಚ್ಚರಿಸುತ್ತೆ FSSAI! -
ವಿಶ್ವ ಪ್ರವಾಸೋದ್ಯಮ ದಿನ: ದೆಹಲಿ, ರಾಜಸ್ಥಾನದ ಸ್ಮಾರಕಗಳಿಗೆ ಇಂದೇ ಉಚಿತ ಪ್ರವೇಶ, ಮಿಸ್ ಮಾಡ್ಬೇಡಿ! -
ಭಾರೀ ಮಳೆ ಎಚ್ಚರಿಕೆ: ಹೊರಗೆ ಜಾಗಿಂಗ್ ಬೇಡ, ಮನೆಯಲ್ಲೇ ಮಾಡಿ ಈ 15 ನಿಮಿಷದ ಸಿಂಪಲ್ ವರ್ಕೌಟ್ -
ಡೇಟಿಂಗ್ ಆಪ್ಗಳಲ್ಲಿ ಹನಿ ಟ್ರ್ಯಾಪ್: ಮೊದಲ ಭೇಟಿಯಲ್ಲೇ ಹಣ ಕಳೆದುಕೊಳ್ಳದಿರಲು ಈ ಸುರಕ್ಷತಾ ಟಿಪ್ಸ್ ಪಾಲಿಸಿ
ಹಸಿ ಮೆಣಸಿನ ಕಾಯಿ ತುಂಬಾ ತಿಂದರೆ ಎಷ್ಟು ಡೇಂಜರ್ ಗೊತ್ತಾ?
ಬಿಗ್‌ಬಾಸ್ ಮನೆಯಲ್ಲಿ ಟಾಸ್ಕ್ ಹೆಸರಿನಲ್ಲಿ ಗಜಕೇಸರಿ ತಂಡ ಸಂಪತ್ತಿಗೆ ಸವಾಲ್ ತಂಡಕ್ಕೆ ಮೆಣಸಿನಕಾಯಿ ತಿನ್ನುವ ಟಾಸ್ಕ್ ನೀಡಿತ್ತು. ಒಂದು ಬೌಲ್ ಹಸಿ ಮೆಣಸಿನಕಾಯಿ ತಿನ್ನಬೇಕು ಎಂದಾಗ 'ಅಷ್ಟು ತಿಂದರೆ ಮನುಷ್ಯ ಬದುಕಿರಲು ಸಾಧ್ಯನಾ?' ಅಂತ ವರ್ತೂರ್ ಸಂತೋಷ್ ಪ್ರಶ್ನೆ ಮಾಡಿದರು. ಬಿಗ್‌ಬಾಸ್ ಕೂಡ ಅಮಾನವೀಯ ಟಾಸ್ಕ್ ನೀಡಬೇಡಿ ಎಂಬ ಸೂಚನೆ ನೀಡಿತು.
ಕೊನೆಗೆ 20-20 ಹಸಿಮೆಣಸಿನಕಾಯಿ ತಿನ್ನಬೇಕೆಂದು ವರ್ತೂರು ಸಂತೋಷ್ ಹಾಗೂ ತನೀಷಾ ಅವರಿಗೆ ನೀಡಲಾಯಿತು, ಅವರು 20 ಹಸಿ ಮೆಣಸಿನಕಾಯಿ ತಿಂದು ಆಟದಲ್ಲಿ ಗೆದ್ದರು. ಆದರೆ ಇಷ್ಟೊಂದು ಮೆಣಸಿನಕಾಯಿ ತಿಂದರೆ ಆರೋಗ್ಯಕ್ಕೆ ಏನೂ ಆಗುವುದಿಲ್ಲವೇ ಎಂಬ ಪ್ರಶ್ನೆ ಬಹುತೇಕ ವೀಕ್ಷಕರಿಗೆ ಕಾಡಿತು.

ನೀವು ಸ್ವಲ್ಪ ಖಾರದ ಆಹಾರ ತಿಂದಾಗ ಮಲವಿಸರ್ಜನೆಗೆ ಹೋದಾಗ ಉರಿಯಾಗುವುದು, ಅಲ್ಲದೆ ಖಾರ ತುಂಬಾ ತಿಂದಾಗ ಹೊಟ್ಟೆ ಉರಿಯಾಗುತ್ತೆ, ಅದರಲ್ಲೂ ಅಸಿಡಿಟಿ ಇರುವವರು ಹೊಟ್ಟೆ ನೋವಿನಿಂದ ಒದ್ದಾಡಿ ಬಿಡುತ್ತಾರೆ. ಆದ್ದರಿಂದ ಟಾಸ್ಕ್ ಹೆಸರಿನಲ್ಲಿ ತುಂಬಾ ಖಾರ ಸೇವಿಸಿದ್ದು ಆರೋಗ್ಯ ದೃಷ್ಟಿಯಿಂದ ನೋಡುವುದಾದರೆ ತುಂಬಾನೇ ಅಪಾಯಕಾರಿ. ಕೆಲವು ಕಡೆ ಸ್ವಲ್ಪ ಖಾರ ಅಧಿಕ ತಿನ್ನುತ್ತಾರೆ, ಆದರೆ 20-30 ಕಾಯಿ ಮೆಣಸಿನಕಾಯಿ ಖಾರ ತಿಂದ್ರೆ ಮೈ ಬಿಸಿಯಾಗುವುದು, ಬೆವರುವುದು, ಉರಿ ಮುಂತಾದ ಸಮಸ್ಯೆ ಎದುರಿಸಬೇಕಾಗುವುದು.
ಅತೀ ಹೆಚ್ಚು ಖಾರ ತಿನ್ನುವುದರಿಂದ ಉಂಟಾಗುವ ಸಮಸ್ಯೆಗಳೇನು ಎಂದು ನೋಡುವುದಾದರೆ...
ಅಲ್ಸರ್ ಉಂಟಾಗುವುದು
ಅತೀ ಹೆಚ್ಚು ಖಾರ ತಿನ್ನುವುದರಿಂದ ಹೊಟ್ಟೆಯಲ್ಲಿಹೊಟ್ಟೆ ಹುಣ್ಣಾಗುವ ಸಾಧ್ಯತೆ ಇದೆ. ಇನ್ನು ಅಲ್ಸರ್ ಸಮಸ್ಯೆ ಇರುವವರು ಖಾತ ತುಂಬಾ ತಿನ್ನುವುದರಿಂದ ಈ ಸಮಸ್ಯೆ ಮತ್ತಷ್ಟು ಹೆಚ್ಚಾಗುವುದು, ತುಂಬಾನೇ ಹೊಟ್ಟೆ ನೀವು ಉಂಟಾಗುವುದು.
ಜೀರ್ಣಕ್ರಿಯೆಗೆ ತೊಂದರೆಯಾಗುವುದು
ಖಾರ ಹೆಚ್ಚಾಗಿ ತಿಂದರೆ ಜೀರ್ಣಕ್ರಿಯೆಗೆ ತುಂಬಾನೇ ತೊಂದರೆ ಉಂಟಾಗುವುದು, ಎದೆಯುರಿ, ಅಸಿಡಿಟಿ, ಬೇಧಿ, ಗ್ಯಾಸ್ಟ್ರಿಕ್, ಹೊಟ್ಟೆ ಹಾಳಾಗುವುದು ಹೀಗೆ ಅನೇಕ ಸಮಸ್ಯೆಗಳನ್ನು ಉಂಟು ಮಾಡುತ್ತದೆ. ಆದ್ದರಿಂದ ಖಾರ ಮಿತಿಯಲ್ಲಿ ತಿನ್ನಿ.
ವಾಂತಿ, ಬೇಧಿ
ಖಾರ ಹೆಚ್ಚಾಗಿ ತಿಂದಾಗ ವಾಂತಿ ಬೇಧಿ ಉಂಟಾಗುವುದು, ಇದರಿಮದ ಕಿಬ್ಬೊಟ್ಟೆಯಲ್ಲಿ ನೋವು, ವಾಂತಿ ಈ ಬಗೆಯ ಸಮಸ್ಯೆ ಉಂಟು ಮಾಡಬಹುದು. ಹೀಗೆ ಖಾರ ತಿಂದಾಗ ತುಪ್ಪ, ಬೆಣ್ಣೆ, ಕಾಟೇಕ್ ಚೀಸ್, ತಣ್ಣನೆಯ ಹೊಟ್ಟೆಯುರಿ ಕಡಿಮೆ ಮಾಡಲು ಸಹಾಯ ಮಾಡುವುದು.
ಮಾನಸಿಕ ಒತ್ತಡ ಹೆಚ್ಚಾಗುವುದು
ಅತ್ಯಧಿಕ ಖಾರ ತಿಂದಾಗ ದೇಹವು ಎಂಡೋಪ್ರಿನ್ಸ್ ಎಂಬ ಹಾರ್ಮೋನ್‌ಗಳು ಬಿಡುಗಡೆಯಾಗುತ್ತದೆ, ಇದರಿಂದ ಮಾನಸಿಕ ಒತ್ತಡ ಹೆಚ್ಚಾಗುವುದು.
ಬಾಯಿ ಹುಣ್ಣು ಉಂಟಾಗುವುದು
ಉಸಿರಾಡಲು ತೊಂದರೆಯಾಗುವುದು, ಬಾಯಲ್ಲಿ ಹುಣ್ಣಾಗುವುದು, ವಾಂತಿ ಉಂಟಾಗುವುದು, ಬಾಯಲ್ಲಿ ಸೋಂಕು ಉಂಟಾಗುವುದು.
ಮೈ ತುಂಬಾನೇ ಬೆವರುವುದು
ಹೆಚ್ಚು ಖಾರ ತಿಂದರೆ ಮೈ ತುಂಬಾನೇ ಬೆವರುವುದು, ಸೆಕೆ -ಸೆಕೆ ಅನಿಸುವುದು ಅಲ್ಲದೆ ತುಂಬಾನೇ ಹಿಂಸೆ ಅನಿಸುವುದು
ಕಿಡ್ನಿ ಲಿವರ್‌ನ ಆರೋಗ್ಯಕ್ಕೆ ಒಳ್ಳೆಯದಲ್ಲ
ಹಸಿ ಮೆಣಸನ್ನು ತುಂಬಾನೇ ಹೆಚ್ಚಾಗಿ ತಿನ್ನುವುದರಿಂದ ಕಿಡ್ನಿ ಆರೋಗ್ಯಕ್ಕೆ ಒಳ್ಳೆಯದಲ್ಲ, ಲಿವರ್‌ಗೂ ಒಳ್ಳೆಯದಲ್ಲ, ಅಲ್ಲದೆ ಬ್ರೈನ್ ಟ್ರಾಕ್ಸಿಸಿಟಿ ಉಂಟು ಮಾಡುತ್ತೆ
ಹಸಿ ಮೆಣಸನ್ನು ಅಲ್ಪ ಪ್ರಮಾಣದಲ್ಲಿ ಸೇವಿಸಿದರೆ ದೇಹಕ್ಕೆ ಈ ಪ್ರಯೋಜನಗಳಿವೆ
* ಕ್ಯಾನ್ಸರ್, ಹೃದಯ ಸಂಬಂಧಿ ಸಮಸ್ಯೆ, ಪಾರ್ಶ್ವವಾಯು ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
* ಮಧುಮೇಹಿಗಳಿಗೆ ತುಂಬಾನೇ ಒಳ್ಳೆಯದು
ದೇಹದ ರಕ್ತದಲ್ಲಿ ಸಕ್ಕರೆಯಂಶ ನಿಯಂತ್ರಣದಲ್ಲಿಡಲು ಹಸಿ ಮೆಣಸು ಸಹಾಯ ಮಾಡುತ್ತದೆ.
* ಮೈ ತೂಕ ನಿಯಂತ್ರಿಸುತ್ತದೆ
ಹಸಿ ಮೆಣಸಿನಕಾಯಿ ಬೊಜ್ಜು ಕರಗಿಸುತ್ತದೆ, ಆದ್ದರಿಂದ ಮೈ ತೂಕ ನಿಯಂತ್ರಣದಲ್ಲಿಡಲು ಸಹಕಾರಿ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
