Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಪ್ರತಿದಿನ ಜೀರಿಗೆ ನೀರು ಕುಡಿದರೆ ದೇಹಕ್ಕೆ ಇಷ್ಟೆಲ್ಲಾ ಪ್ರಯೋಜನಗಳಿವೆ, ಒಬೆಸಿಟಿಯೂ ತಡೆಗಟ್ಟಬಹುದು
ದೇಹದಲ್ಲಿ ಉಷ್ಣಾಂಶ ಹೆಚ್ಚಾದಾಗ ಜೀರಿಗೆ ನೀರು ಮಾಡಿ ಕುಡಿಯುತ್ತೇವೆ, ಆದರೆ ಈ ಜೀರಿಗೆ ನೀರು ಪ್ರತಿದಿನ ಕುಡಿದರೆ ಏನಾಗುತ್ತದೆ? ಇದರಿಂದ ದೊರೆಯುವ ಪ್ರಯೋಜನವೇನು ಎಂದು ನೋಡೋಣ ಬನ್ನಿ;
ಜೀರಿಗೆಯಲ್ಲಿ Antioxidants ಅಧಿಕವಿದೆ
ಇದರಲ್ಲಿ ಆಂಟಿಆಕ್ಸಿಡೆಂಟ್ ಇದ್ದು ದೇಹದಲ್ಲಿ ಆಕ್ಸಿಡೇಟಿವ್ ಸ್ಟ್ರೆಸ್ ತಡೆಗಟ್ಟಲು ಸಹಕಾರಿ. ಇದು ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಅನೇಕ ಆರೋಗ್ಯ ಸಮಸ್ಯೆ ತಡೆಗಟ್ಟಲು ಸಹಕಾರಿ.

ಜೀರ್ಣಕ್ರಿಯೆಗೆ ಒಳ್ಳೆಯದು
ಪ್ರತಿದಿನ ಜೀರಿಗೆ ನೀರು ಕುಡಿದರೆ ಜೀರ್ಣಕ್ರಿಯೆಗೆ ತುಂಬಾ ಒಳ್ಳೆಯದು. ಅಲ್ಲದೆ ಗ್ಯಾಸ್ಟ್ರಿಕ್ ಸಮಸ್ಯೆ ತಡೆಗಟ್ಟಲು ಸಹಕಾರಿ. ಇದು ಅಜೀರ್ಣ, ಬೇಧಿ, ವಾಂತಿ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ. ನೀವು ಊಟವಾದ ಬಳಿಕ ಅಥವಾ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಜೀರಿಗೆ ನೀರು ಕುಡಿಯಿರಿ.
ಚಯಪಚಯ ಕ್ರಿಯೆಗೆ ಒಳ್ಳೆಯದು, ಅಲ್ಲದೆ ಮೈ ಬೊಜ್ಜು ಹೆಚ್ಚಾಗದಂತೆ ತಡೆಗಟ್ಟುತ್ತದೆ
ಈ ಜೀರಿಗೆ ನೀರು ಕುಡಿದಾಗ ಚಯಪಚಯ ಕ್ರಿಯೆ ಉತ್ತಮವಾಗಿ ನಡೆಯುವುದರಿಂದ ಜೀರ್ಣಕ್ರಿಯೆಗೆ ತುಂಬಾನೇ ಒಳ್ಳೆಯದು, ಇದರಿಂದಾಗ ಮೈ ತೂಕ ಹೆಚ್ಚಾಗುವುದಿಲ್ಲ, ನೀವು ಈ ಜೀರಿಗೆ ನೀರು ಕುಡಿದು ವ್ಯಾಯಾಮ ಮಾಡಿದರೆ ಮೈ ತೂಕ ಕರಗಿಸಲು ತುಂಬಾನೇ ಸಹಕಾರಿ.
ಉರಿಯೂತದ ಸಮಸ್ಯೆ
ಉರಿಯೂತದ ಸಮಸ್ಯೆ ಇರುವವರು ಈ ಜೀರಿಗೆ ನೀರು ಕುಡಿಯುವುದು ಒಳ್ಳೆಯದು. ಇದರಲ್ಲಿರುವ ಅಂಶ ಉರಿಯೂತ ತಡೆಗಟ್ಟುವುದು ಅಲ್ಲದೆ ಒಬೆಸಿಟಿ ಸಮಸ್ಯೆ ತಡೆಗಟ್ಟಲೂ ಸಹಕಾರಿ. ಆದ್ದರಿಂದ ದಿನದಲ್ಲಿ 1-2 ಜೀರಿಗೆ ನೀರು ಕುಡಿಯಲು ತುಂಬಾನೇ ಸಹಕಾರಿ.
ಕ್ಯಾನ್ಸರ್ ತಡೆಗಟ್ಟುತ್ತದೆ
ಈ ಜೀರಿಗೆ ನೀರು ಕುಡಿಯುವುದರಿಂದ ಅನೇಕ ಬಗೆಯ ಕ್ಯಾನ್ಸರ್ ತಡೆಗಟ್ಟಲು ಸಹಕಾರಿ, ಅಲ್ಲದೆ ಕ್ಯಾನ್ಸರ್ ಕಣಗಳು ವೇಗವಾಗಿ ಹರಡುವುದನ್ನು ತಡೆಗಟ್ಟಲು ಸಹಕಾರಿ.
ಸಕ್ಕರೆಯಂಶ ನಿಯಂತ್ರಣದಲ್ಲಿಡುತ್ತದೆ
ಟೈಪ್ 2 ಮಧುಮೇಹ ಇರುವವರು ಈ ಜೀರಿಗೆ ಕುಡಿಯುವುದರಿಂದ ರಕ್ತದಲ್ಲಿ ಸಕ್ಕರೆಯಂಶ ಹೆಚ್ಚಾಗದಂತೆ ತಡೆಯಬಹುದು.
ದೇಹವನ್ನು ತಂಪಾಗಿಡುವುದು ಹಾಗೂ ದೇಹದಲ್ಲಿ ನೀರಿನಂಶ ಕಾಪಾಡುತ್ತದೆ
ಈ ಬೇಸಿಗೆಯಲ್ಲಿ ಜೀರಿಗೆ ನೀರು ಕುಡಿಯುವುದರಿಂದ ದೇಹ ತಂಪಾಗಿ ಇರುತ್ತದೆ. ಇನ್ನು ಬೇಸಿಗೆಯಲ್ಲಿ ದೇಹದಲ್ಲಿ ನೀರಿನಂಶ ಕಾಪಾಡಲು ಸಹಕಾರಿ.
ಅಸಿಡಿಟಿ ತಡೆಗಟ್ಟುತ್ತದೆ
ಜೀರಿಗೆ ನೀರು ಕುಡಿಯುವುದರಿಂದ ಅಸಿಡಿಟಿ ಸಮಸ್ಯೆ ತಡೆಗಟ್ಟುವುದು, ಜೀರಿಗೆ ನೀರು ಕುಡಿಯುವುದರಿಂದ ಎದೆಯುರಿ, ಹೊಟ್ಟೆ ಉಬ್ಬುವುದು, ಮಲಬದ್ಧತೆ ಈ ಬಗೆಯ ಸಮಸ್ಯೆ ತಡೆಗಟ್ಟಲು ಸಹಕಾರಿ.
ರಕ್ತ ಹೀನತೆ ತಡೆಗಟ್ಟುವುದು
ಜೀರಿಗೆಯಲ್ಲಿ ಕಬ್ಬಿಣಂಶ ಇರುವುದರಿಂದ ರಕ್ತದಲ್ಲಿ ಹಿಮೋಗ್ಲೋಬಿನ್ ಹೆಚ್ಚಿಸುವುದು, ಇದರಿಂದ ರಕ್ತಹೀನತೆ ತಡೆಗಟ್ಟಲು ಸಹಕಾರಿ.
ಹೃದಯದ ಆರೋಗ್ಯಕ್ಕೆ, ತ್ವಚೆಯ ಆರೋಗ್ಯಕ್ಕೆ ಒಳ್ಳೆಯದು
ಜೀರಿಗೆಯಲ್ಲಿರುವ ಆ್ಯಂಟಿಆಕ್ಸಿಡೆಂಟ್ ದೇಹವನ್ನು ಡಿಟಾಕ್ಸ್ ಮಾಡಲು ಸಹಕಾರಿ. ಇದು ತ್ವಚೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು. ಕೂದಲಿನ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು.
ಮುಟ್ಟಿನ ಸಮಯದಲ್ಲಿ ಜೀರಿಗೆ ನೀರು ಒಳ್ಳೆಯದು
ಮುಟ್ಟಿನ ಸಮಯದಲ್ಲಿ ಕೆಲವರಿಗೆ ಅಸಾಧ್ಯ ಕಿಬ್ಬೊಟ್ಟೆ ನೋವು ಉಂಟಾಗುವುದು. ಈ ಸಮಯದಲ್ಲಿ ಜೀರಿಗೆ ನೀರು ಮಾಡಿ ಕುಡಿದರೆ ಹೊಟ್ಟೆ ನೋವು ಕಡಿಮೆಯಾಗುವುದು. ನೀವು ಪಿಜಿ ಅಥವಾ ಹಾಸ್ಟಲ್‌ನಲ್ಲಿದ್ದರೆ ಜೀರಿಗೆ ಹುರಿದು ಪುಡಿ ಮಾಡಿ ಡಬ್ಬದಲ್ಲಿ ಹಾಕಿ ಕೊಂಡೊಯ್ಯಿರಿ. ನಂತರ 1 ಚಮಚ ಪುಡಿಯನ್ನು ಬಿಸಿ ನೀರಿಗೆ ಹಾಕಿ ಕುಡಿಯಬಹುದು.
ಕೆಲವರಿಗೆ ಜೀರಿಗೆ ನೀರು ಕುಡಿಯಲು ಇಷ್ಟವಾಗಲ್ಲ, ಆದರೆ ನೀವು ಜೀರಿಗೆ ನೀರು ಸ್ವಲ್ಪ ಬಿಸಿ ಬಿಸಿ ಇರುವಾಗಲೇ ಸೇವಿಸಿದರೆ ರುಚಿ ಇಷ್ಟವಾಗುವುದು. ಬೆಳಗ್ಗೆ ಇದಕ್ಕೆ ನಿಂಬೆರಸ ಹಾಕಿ ಕುಡಿಯಬಹುದು.
ಇದರಿಂದ ಅಡ್ಡಪರಿಣಾಮವಿದೆಯೇ?
ಜೀರಿಗೆ ನೀರು ಒಂದು ಅಥವಾ 2 ಲೋಟ ಕುಡಿಯಿರಿ, ಇಲ್ಲದಿದ್ದರೆ ಶೀತವಾಗಬಹುದು, ಇನ್ನು ಕೆಲವರು ಎದೆಯುರಿ ಸಮಸ್ಯೆ ಕಂಡು ಬರಬಹುದು. ಆದ್ದರಿಂದ 1-2 ಲೋಟ ನೀರು ಕುಡಿದರೆ ಸಾಕು.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications