Latest Updates
-
ಆಪಲ್ ಸೆಪ್ಟೆಂಬರ್ 9ರ ಇವೆಂಟ್: ಐಫೋನ್ 18 ಮತ್ತು ಫೋಲ್ಡಬಲ್ ಫೋನ್ ಲಾಂಚ್ ಆಗುತ್ತಾ? -
ಸಂಡೇಸ್ ಆನ್ ಸೈಕಲ್: ಮಳೆಯಲ್ಲಿ ಸೈಕ್ಲಿಂಗ್ ಮಾಡುವಾಗ ಈ 5 ಸುರಕ್ಷತಾ ನಿಯಮಗಳನ್ನು ಪಾಲಿಸಿ! -
ಸುಪ್ರೀಂ ಕೋರ್ಟ್ ಮಹತ್ವದ ಆದೇಶ: ತಾಯಿ ದುಡಿಯುತ್ತಿದ್ದರೂ ಮಕ್ಕಳ ಜೀವನಾಂಶ ಪಾವತಿಸುವುದು ತಂದೆಯ ಕರ್ತವ್ಯ! -
ಡೆಂಗ್ಯೂ ಭೀತಿ: ಕೇವಲ 10 ನಿಮಿಷದಲ್ಲಿ ನಿಮ್ಮ ಮನೆಯಲ್ಲಿ ಸೊಳ್ಳೆಗಳ ಸಂತಾನೋತ್ಪತ್ತಿ ತಡೆಯಿರಿ -
ಹಬ್ಬದ ಸೀಸನ್: ಕಲಬೆರಕೆ ಆಹಾರದಿಂದ ಎಚ್ಚರ! ಮಹಾರಾಷ್ಟ್ರ FDA ಕಠಿಣ ತಪಾಸಣೆ ಆರಂಭ -
ಶಿಕ್ಷಕರ ದಿನಾಚರಣೆ 2026: ನಿಮ್ಮ ಪೋಸ್ಟ್ ಟ್ರೆಂಡ್ ಆಗಲು ಬೆಸ್ಟ್ ಕ್ಯಾಪ್ಷನ್ಸ್ ಮತ್ತು ಗಿಫ್ಟ್ ಐಡಿಯಾಗಳು! -
ಮಳೆಗಾಲದ ಎಚ್ಚರಿಕೆ: ಹೊರಗೆ ವಾಕಿಂಗ್ ಹೋಗುವ ಮುನ್ನ ಈ ವಿಷಯ ಗಮನಿಸಿ, ಮನೆಯಲ್ಲೇ ಫಿಟ್ ಆಗಿರಿ -
ಗೃಹಹಿಂಸೆಯ ಸುಳಿಯಲ್ಲಿ ಸಿಲುಕಿದ್ದೀರಾ? ಸುರಕ್ಷಿತವಾಗಿ ಪಾರಾಗಲು ಈ ಮಾರ್ಗದರ್ಶಿ ಮತ್ತು ತುರ್ತು ಸಹಾಯವಾಣಿಗಳು ನಿಮಗೆ ನೆರವಾಗಲಿವೆ -
ಗಣೇಶ ಹಬ್ಬ 2026: ಬೆಂಗಳೂರಿನಲ್ಲಿ PoP ಮೂರ್ತಿಗಳ ಮೇಲೆ ಕಠಿಣ ನಿಷೇಧ, ಪರಿಸರ ಸ್ನೇಹಿ ಗಣಪತಿಯನ್ನು ಪತ್ತೆ ಹಚ್ಚುವುದು ಹೇಗೆ? -
ವೈ-ವೈ ನೂಡಲ್ಸ್ ಕಂಪನಿಗೆ FSSAI ಬಿಗ್ ಶಾಕ್: ಉತ್ಪಾದನೆ ಸ್ಥಗಿತ, ಅಸಲಿ ಕಾರಣವೇನು?
ಆಯುರ್ವೇದದ ಪ್ರಕಾರ ಯಾವ ಪಾತ್ರೆಯಲ್ಲಿ ನೀರು ಕುಡಿದ್ರೆ ಉತ್ತಮ?
ಹಿಂದಿನ ಕಾಲದಲ್ಲಿ ಜನ ನೂರಾರು ವರ್ಷಗಳ ಕಾಲ ಬದುಕುತ್ತಿದ್ದರು. ಅದಕ್ಕೆ ಕಾರಣ ಅವರು ಅನುಸರಿಸುತ್ತಿದ್ದ ಜೀವನ ಶೈಲಿ. ಆಹಾರ ಮಾತ್ರವಲ್ಲ ಅವರು ಕುಡಿಯುವ ನೀರು ಗಾಳಿ ಆಹಾರ ತುಂಬಾನೇ ಶುದ್ಧವಾಗಿತ್ತು. ಹಿಂದಿನ ಕಾಲದ ಜನ ಚಿಕ್ಕ-ಪುಟ್ಟ ವಿಚಾರಗಳ ಕಡೆಗೆ ಸೂಕ್ಷ್ಮವಾಗಿ ಗಮನ ಹರಿಸುತ್ತಿದ್ದರು. ನೀರನ್ನು ಕೂಡ ಅವರು ಮಣ್ಣು, ತ್ರಾಮದ ಹೀಗೆ ವಿವಿಧ ರೀತಿಯ ಪಾತ್ರೆಯಲ್ಲಿ ಸಂಗ್ರಹಿಸಿ ಕುಡಿಯುತ್ತಿದ್ದರು. ಇದರಿಂದ ಅವರ ಆರೋಗ್ಯವು ತುಂಬಾನೇ ಉತ್ತಮವಾಗಿತ್ತು.
ಇತ್ತೀಚಿನ ಕಾಲದಲ್ಲಿ ನೀರನ್ನು ಶುದ್ಧೀಕರಿಸುವ ಮೆಷಿನ್ ಗಳು ಲಗ್ಗೆ ಇಟ್ಟಿದ್ದು, ಜನ ಪಾತ್ರೆಯಲ್ಲಿ ನೀರು ಸಂಗ್ರಹಿಸುವ ಪದ್ಧತಿಯನ್ನು ಮರೆತು ಬಿಟ್ಟಂತಿದೆ. ಆದರೆ ತಜ್ಞರ ಪ್ರಕಾರ ಈ ಆಧುನಿಕ ಉಪಕರಣಗಳಿಗಿಂತ ಹಾಳೆಯ ಮಾದರಿಯ ಮಡಿಕೆಗಳೇ ಬೆಸ್ಟ್ ಅಂತ ಹೇಳುತ್ತಾರೆ. ಅಷ್ಟಕ್ಕು ನೀರನ್ನು ಸಂಗ್ರಹಿಸಲು ಯಾವ ರೀತಿಯ ಪಾತ್ರೆ ಬಳಕೆ ಮಾಡಬೇಕು. ಇದರ ಪ್ರಯೋಜನಗಳು ಏನು? ಈ ಬಗ್ಗೆ ತಜ್ಞರು ಏನು ಹೇಳುತ್ತಾರೆ ಅನ್ನೋದನ್ನು ತಿಳಿಯೋಣ.

ಕುಡಿಯುವ ನೀರನ್ನು ಎಂತಹ ಪಾತ್ರೆಯಲ್ಲಿ ಸಂಗ್ರಹಿಸಿ ಇಡಬೇಕು?
ಮಣ್ಣಿನ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು :
ಇಂದಿಗೂ ಕೆಲವು ಮನೆಗಳಲ್ಲಿ ನೀರನ್ನು ಸಂಗ್ರಹಿಸಲು ಮಣ್ಣಿನ ಪಾತ್ರೆ ಅಥವಾ ಜಗ್ ಬಳಸುತ್ತಾರೆ. ಹಳ್ಳಿಯಲ್ಲಿ ಮಾತ್ರ ಈಗಲೂ ಈ ಪದ್ಧತಿ ಜೀವಂತವಾಗಿರೋದು. ಅವರಿಗೆ ಯಾವ ಫ್ರಿಡ್ಜ್, ಫಿಲ್ಟರ್ ಬೇಕಾಗಿಲ್ಲ. ಮಣ್ಣಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ, ತಂಪಾದ ನೀರನ್ನು ಕುಡಿಯುತ್ತಾರೆ. ಮಣ್ಣಿನ ಪಾತ್ರೆಯಲ್ಲಿ ನೀರನ್ನು ಸಂಗ್ರಹಿಸಿ ಇಟ್ಟರೆ ಅದು ನೀರನ್ನು ತಂಪಾಗಿಸುವ ಸಾಮರ್ಥ್ಯವನ್ನು ಹೊಂದಿರುತ್ತದೆ.
ಅಷ್ಟೇ ಅಲ್ಲ, ಇದು ದೇಹದ ಉಷ್ಣತೆಯನ್ನು ಸಮತೋಲನಗೊಳಿಸುತ್ತದೆ. ಇದರಿಂದ ಅಸಿಡಿಟಿ ಮತ್ತು ಗ್ಯಾಸ್ಟ್ರಿಕ್ ಸಮಸ್ಯೆಯನ್ನು ನಿವಾರಿಸಿಕೊಳ್ಳಬಹುದು. ಬೇಸಿಗೆ ಕಾಲದಲ್ಲಿ ಇದನ್ನು ಬಳಸುವುದು ಉತ್ತಮ. ಎಲ್ಲಾ ಋತುಮಾನದಲ್ಲೂ ಮಣ್ಣಿನ ಪಾತ್ರೆ ಬಳಕೆ ಮಾಡಬಹುದು. ಯಾವುದೇ ಸಮಸ್ಯೆಯಿಲ್ಲ. ಸಿಟಿಯಲ್ಲಿದ್ದರೂ ಪರವಾಗಿಲ್ಲ. ಒದು ಚಿಕ್ಕ ಮಣ್ಣಿನ ಮಡಿಕೆ ತಂದು ಅದರಲ್ಲಿ ನೀರನ್ನಿಟ್ಟು ಕುಡಿಯಿರಿ. ಆರೋಗ್ಯಕ್ಕೆ ಒಳ್ಳೆಯದು.
ತಾಮ್ರದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಆಗುವ ಪ್ರಯೋಜನಗಳು :
ತಾಮ್ರದ ಪಾತ್ರೆಯಲ್ಲಿ ನೀರನ್ನು ಇಟ್ಟರೆ ಆ ನೀರು ಬೆಚ್ಚಗಿರುತ್ತದೆ. ಮತ್ತು ರುಚಿ ಸಿಹಿಯಾಗಿರುತ್ತದೆ. ಇದು ದೇಹದ ಆಂತರಿಕ ಶಾಖವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರಕ್ತಹೀನತೆ ಮತ್ತು ಕಬ್ಬಿಣದ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಶೀತ ವಾತಾವರಣದಲ್ಲಿ ತಾಮ್ರದ ಪಾತ್ರೆ ಬಳಕೆ ಮಾಡಿದರೆ ಉತ್ತಮ.
ಚಿನ್ನದ ಪಾತ್ರೆಯಲ್ಲಿ ನೀರು ಕುಡಿಯುವುದರಿಂದ ಆಗುವ ಲಾಭಗಳು :
ಚಿನ್ನದ ಪಾತ್ರೆಯಲ್ಲಿ ನೀರನ್ನು ಇಟ್ಟು ಕುಡಿದರೆ ನೀರು ತಂಪಾಗಿರುತ್ತದೆ. ಮತ್ತು ಅದರ ರುಚಿ ಸಿಹಿಯಾಗಿರುತ್ತದೆ. ಇದು ನಿಮ್ಮ ರೋಗನಿರೋಧಕ ಶಕ್ತಿ, ಮನಸ್ಸು ಮತ್ತು ಫಲವತ್ತತೆಯನ್ನು ಹೆಚ್ಚಿಸುತ್ತಂತೆ. ಹಿಂದಿನ ಕಾಲದಲ್ಲಿ ರಾಜರು ಮತ್ತು ಚಕ್ರವರ್ತಿಗಳು ಚಿನ್ನದ ಪಾತ್ರೆಗಳಲ್ಲಿ ಮಾತ್ರ ನೀರು ಕುಡಿಯುತ್ತಿದ್ದರು.
ಕಬ್ಬಿಣದ ಪಾತ್ರೆಯಲ್ಲಿಟ್ಟ ನೀರು ಕುಡಿಯಬೇಡಿ :
ಆಯುರ್ವೇದದ ಪ್ರಕಾರ ಕುಡಿಯುವ ನೀರನ್ನು ಕಬ್ಬಿಣದ ಪಾತ್ರೆಯಲ್ಲಿ ಇಡಬಾರದು. ಇದು ಚರ್ಮದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಇನ್ನೂ ಹಿತ್ತಾಳೆಯಲ್ಲಿ ಸಂಗ್ರಹಿಸಿದ ನೀರು ಕುಡಿಯಬಹುದು. ಈ ನೀರು ಭಾರವಾಗಿರುತ್ತದೆ. ಮತ್ತು ನಮ್ಮ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನೀವು ಬೆಳ್ಳಿಯ ಪಾತ್ರೆಯಲ್ಲಿ ಇರಿಸಲಾದ ನೀರನ್ನು ಸಹ ಕುಡಿಯಬಹುದು. ಇದು ನೀರನ್ನು ತಂಪಾಗಿರಿಸುವ ಸಾಮರ್ಥ್ಯ ಹೊಂದಿದೆ.
ಪರಿಸರ ಮಾಲಿನ್ಯದಿಂದಾಗಿ ಶುದ್ಧ ನೀರು ಲಭ್ಯವಾಗುತ್ತಿಲ್ಲ. ಹೀಗಾಗಿ ಕುದಿಸಿ ಆರಿಸಿದ ನೀರನ್ನೇ ಕುಡಿಯಿರಿ. ಇದು ನಿಮ್ಮ ಆರೋಗ್ಯಕ್ಕೆ ಯಾವುದೇ ರೀತಿ ತೊಂದರೆ ಉಂಟು ಮಾಡೊದಿಲ್ಲ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
