Latest Updates
-
ಸೈಫ್-ಕರೀನಾ ಪ್ರೇಮಪತ್ರದ ರಹಸ್ಯ: ನಿಮ್ಮ ಸಂಬಂಧವನ್ನೂ ಗಟ್ಟಿಗೊಳಿಸಲು ಈ ಸಿಂಪಲ್ ಟಿಪ್ಸ್ ಫಾಲೋ ಮಾಡಿ! -
ಈರುಳ್ಳಿ ಬೆಲೆ ಏರಿಕೆ: ಬಜೆಟ್ ಉಳಿಸಲು ಮತ್ತು ಈರುಳ್ಳಿ ದೀರ್ಘಕಾಲ ಸಂಗ್ರಹಿಸಲು ಸರಳ ಟಿಪ್ಸ್ -
ಏಕಾದಶಿ ಉಪವಾಸ: ಆರೋಗ್ಯಕರವಾಗಿರಲು ₹300ರಲ್ಲಿ ಪೌಷ್ಟಿಕ ಆಹಾರದ ಪ್ಲಾನ್ ಇಲ್ಲಿದೆ! -
ಸ್ಯಾಮ್ಸಂಗ್ One UI 9 ಅಪ್ಡೇಟ್: ನಿಮ್ಮ ಫೋನ್ಗೆ ಬಂದಿದೆಯೇ? ಸುರಕ್ಷಿತವಾಗಿ ಇನ್ಸ್ಟಾಲ್ ಮಾಡುವುದು ಹೇಗೆ? -
ಮಳೆಗಾಲದಲ್ಲಿ ಫಿಟ್ ಆಗಿರಲು 12 ನಿಮಿಷಗಳ ಇಂಡೋರ್ ವರ್ಕೌಟ್: ಜಿಮ್ ಇಲ್ಲದೆ ಮನೆಯಲ್ಲೇ ಮಾಡಿ! -
ವೈಫ್ ಅಪ್ರಿಶಿಯೇಷನ್ ಡೇ: ನಿಮ್ಮ ಮಡದಿಗೆ ಈ ವಿಶೇಷ ದಿನದಂದು ನೀಡಬಹುದಾದ ಸರಳ ಮತ್ತು ಸುಂದರ ಸರ್ಪ್ರೈಸ್ಗಳು ಇಲ್ಲಿವೆ! -
ಮಳೆಗಾಲದ ಎಚ್ಚರಿಕೆ: ನಿಮ್ಮ ಮನೆ ಮತ್ತು ಬಾಲ್ಕನಿ ಸೋರಿಕೆ ತಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಮರೆವಿನ ಕಾಯಿಲೆಗೆ ವಿದಾಯ: ಮೆದುಳಿನ ಆರೋಗ್ಯಕ್ಕೆ ಭಾರತೀಯ ಶೈಲಿಯ 'ಮೈಂಡ್ ಡಯಟ್' ಹೀಗಿರಲಿ! -
2026ರ ಏಷ್ಯನ್ ಗೇಮ್ಸ್: ಮೊದಲ ದಿನವೇ ಭಾರತಕ್ಕೆ ಪದಕದ ಬೇಟೆ! ಪಂದ್ಯಗಳ ಸಂಪೂರ್ಣ ವೇಳಾಪಟ್ಟಿ ಮತ್ತು ಲೈವ್ ಅಪ್ಡೇಟ್ಸ್ ಇಲ್ಲಿದೆ -
ದೆಹಲಿ-ಎನ್ಸಿಆರ್ನಲ್ಲಿ ಕಲುಷಿತ ಗಾಳಿ: ವಾಕಿಂಗ್ ಹೋಗುವ ಮುನ್ನ ಈ ಎಚ್ಚರಿಕೆ ಮರೆಯದಿರಿ!
ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಕಷಾಯ ಯಾವ ಹೊತ್ತಿಗೆ ಕುಡಿಯಬೇಕು?
ಈಗಂತೂ ಪ್ರತಿಯೊಂದು ಮನೆಯಲ್ಲಿ ಕಷಾಯ ಮಾಡಿ ಕುಡಿಯುವುದು ಇದ್ದೇ ಇದೆ. ಕೆಲವರಂತೂ ಕೊರೊನಾ ಭಯಕ್ಕೆ ಸಿಕ್ಕಾಪಟ್ಟೆ ಕಷಾಯ ಮಾಡಿ ಕುಡಿಯುವವರೂ ಇದ್ದಾರೆ. ಏನೇ ಆಗಲಿ ಅತಿಯಾದರೆ ಅಮೃತವೂ ವಿಷವಾದೀತು.

ಕೆಮ್ಮು, ಶೀತ ಇವೆಲ್ಲಾ ಮಳೆಗಾಲದಲ್ಲಿ ಕಾಡುವುದು ಸಹಜ. ಇವುಗಳನ್ನು ತಡೆಗಟ್ಟುವಲ್ಲಿ ಕಷಾಯ ತುಂಬಾ ಪರಿಣಾಮರಿ. ಅಲ್ಲದೆ ಕಷಾಯ ಕುಡಿಯುವುದರಿಂದ ದೇಹದಲ್ಲಿ ರೋಗ ನಿರೋಧಕ ಶಕ್ತಿ ಕೂಡ ಹೆಚ್ಚಾಗುವುದು.
ಆದರೆ ಈ ಕಷಾಯ ಯಾವಾಗ ಕುಡಿದರೆ ಒಳ್ಳೆಯದು ಎಂಬುವುದು ಮಾತ್ರ ಬಹುತೇಕರಿಗೆ ಗೊತ್ತಿರುವುದಿಲ್ಲ. ಆಯುರ್ವೇದದ ಪ್ರಕಾರ ಮನುಷ್ಯರಲ್ಲಿ ಮೂರು ರೀತಿಯ ಶರೀರ ಪ್ರವೃತ್ತಿ ಕಾಣಬಹುದು. ವಾತ, ಪಿತ್ತ, ಕಫ... ಈ ಮೂರು ಬಗೆಯ ಶರೀರದವರ ಗುಣಗಳು ಭಿನ್ನವಾಗಿರುತ್ತದೆ. ಆಯುರ್ವೇದ ಔಷಧಿ ನೀಡುವಾಗ ಶರೀರದ ಬಗೆ ತಿಳಿದುಕೊಂಡು ಔಷಧಿ ನೀಡುತ್ತಾರೆ, ಹೀಗಾಗಿ ಆ ಔಷಧಿ ತುಂಬಾ ಪರಿಣಾಮಕಾರಿಯಾಗಿರುತ್ತದೆ.'
ಕಷಾಯ ಕೂಡ ಅಷ್ಟೇ ಬಗೆಯ ಶರೀರದವರು ಯಾವಾಗ ಕಷಾಯ ಕುಡಿದರೆ ಒಳ್ಳೆಯದೆಂದು ಆಯುರ್ವೇದ ಹೇಳಿದೆ, ಬನ್ನಿ ಈ ಕುರಿತು ಹೆಚ್ಚಿನ ಮಾಹಿತಿ ತಿಳಿಯೋಣ:

ಶರೀರದ ಬಗೆಗಳು
ವಾತ: ಯಾರು ವಾತ ಶರೀರ ಹೊಂದಿದ್ದಾರೋ ಅವರು ಸಂಜೆ ಹೊತ್ತಿನಲ್ಲಿ ಉಗುರು ಬೆಚ್ಚಗಿನ ಕಷಾಯ ಕುಡಿಯುವುದು ಒಳ್ಳೆಯದು
ಪಿತ್ತ: ಪಿತ್ತ ಶರೀರ ಹೊಂದಿರುವವರು ಕಷಾಯವನ್ನು ಬೆಳಗ್ಗೆ ಮತ್ತು ಸಂಜೆ ಕುಡಿಯಬಹುದು, ಆದರೆ ಮಧ್ಯಾಹ್ನದ ಹೊತ್ತಿನಲ್ಲಿ ಕುಡಿಯುವುದು ಒಳ್ಳೆಯದಲ್ಲ. ಪಿತ್ತ ಶರೀರ ಗುಣ ಹೊಂದಿರುವವರು ಕಷಾಯವನ್ನು ರೂಮಿನ ಉಷ್ಣತೆಯಲ್ಲಿ ಸೇವಿಸುವುದು ಒಳ್ಳೆಯದು.
ಕಫ: ಇನ್ನು ಕಫ ದೋಷ ಹೊಂದಿರುವವರು ಕಷಾಯವನ್ನು ಯಾವ ಹೊತ್ತಿನಲ್ಲಿ ಬೇಕಾದರೂ ಕುಡಿಯಬಹುದು. ಆದರೆ ಇವರು ಬಿಸಿ ಬಿಸಿಯಾದ ಕಷಾಯ ಕುಡಿಯಬೇಕು, ಕುಡಿಯುವಾಗ ಇದಕ್ಕೆ ಜೇನು ಸೇರಿಸಿ ಕುಡಿಯಬೇಕು.

ನಿಮ್ಮ ದೇಹ ಯಾವ ಬಗೆಯದು ಗೊತ್ತಿಲ್ಲವೆಂದರೆ ಏನು ಮಾಡಬೇಕು?
ನಿಮಗೆ ನಿಮ್ಮ ಶರೀರ ವಾತ, ಪಿತ್ತ, ಕಫ ಇವುಗಳಲ್ಲಿ ಯಾವ ಬಗೆಯದು ಎಂದು ತಿಳಿಯದಿದ್ದರೆ ಉಗುರು ಬೆಚ್ಚಗಿನ ಬಿಸಿಯಲ್ಲಿ ಅಥವಾ ರೂಮಿನ ಉಷ್ಣತೆಯಲ್ಲಿ ಕಷಾಯವನ್ನು ಸೇವಿಸಿ.

ಕೆಮ್ಮು, ನೆಗಡಿ, ಶೀತ ಕಡಿಮೆ ಮಾಡುವ ಕಷಾಯ
- ಸ್ವಲ್ಪ ಅಮೃತ ಬಳ್ಳಿಯ ಕಾಂಡವನ್ನು ಜಜ್ಜಿ ಅದನ್ನು ನೀರಿನ ಜೊತೆ ಹಾಕಿ ಕುದಿಸಿ ಆ ನೀರು ಕುಡಿಯಬಹುದು.
- ಸ್ವಲ್ಪ ತುಳಸಿ, ಕಾಳು ಮೆಣಸು, ಶುಂಠಿ ಜಜ್ಜಿ ಒಂದು ಲೀಟರ್ ನೀರು ಹಾಕಿ ಕುದಿಸಿ, ನಂತರ ಅದಕ್ಕೆ ಜೇನು, ಸ್ವಲ್ಪ ನಿಂಬೆರಸ ಬೆರೆಸಿ ಕುಡಿಯಬಹುದು.
- ಸ್ವಲ್ಪ ಟೀ ಪುಡಿ, ಅರಿಶಿಣ, ಕಾಳು ಮೆಣಸು, ಬೆಲ್ಲ ಹಾಕಿ ಕುದಿಸಿ, ಅದಕ್ಕೆ ನಿಂಬೆರಸ ಬೆರೆಸಿ ಕುಡಿಯಬಹುದು.ಹೀಗೆ ಕಷಾಯವನ್ನು ಹಲವಾರು ರೀತಿಯಲ್ಲಿ ಮಾಡಿ ಕುಡಿಯಬಹುದು.

ಕಷಾಯವನ್ನು ಎಷ್ಟು ತೆಗೆದುಕೊಳ್ಳಬೇಕು?
ಕಷಾಯವನ್ನು ತುಂಬಾ ಕುಡಿದರೆ ಹೊಟ್ಟೆ ಉರಿ, ಹೊಟ್ಟೆ ನೋವು, ಬಾಯಿ ಹುಣ್ಣು, ಬೇಧಿ ಮುಂತಾದ ಸಮಸ್ಯೆ ಬರುವುದು. ನೀವು ಕಷಾಯವನ್ನು ದಿನದಲ್ಲಿ ಒಂದು ಬಾರಿ ತೆಗೆದುಕೊಂಡರೆ ಸಾಕು. ತುಂಬಾ ಕೆಮ್ಮು, ನೆಗಡಿ ಇದ್ದರೆ ದಿನದಲ್ಲಿ ಎರಡು ಬಾರಿ ತೆಗೆದುಕೊಂಡು ಅದು ಸ್ವಲ್ಪ ಕಡಿಮೆಯಾದ ಮೇಲೆ ಒಂದು ಬಾರಿ ಕುಡಿಯಿರಿ.



Click it and Unblock the Notifications
