Latest Updates
-
ಮನೆಯವರ ವಿರೋಧದ ನಡುವೆ ಮದುವೆ: ಅಲಹಾಬಾದ್ ಹೈಕೋರ್ಟ್ನಿಂದ ಜೋಡಿಗಳಿಗೆ ಸಿಕ್ಕಿತು ಭರ್ಜರಿ ರಕ್ಷಣೆ! -
ಮಳೆ ನಂತರ ದೆಹಲಿ-ಎನ್ಸಿಆರ್ನಲ್ಲಿ ಶುದ್ಧ ಗಾಳಿ: ನಿಮ್ಮ ಮನೆಯನ್ನು ಫ್ರೆಶ್ ಆಗಿಡಲು ಈ ಸರಳ ಟಿಪ್ಸ್ ಪಾಲಿಸಿ! -
ಯೋಗಿನಿ ಏಕಾದಶಿ: ಮಧುಮೇಹಿಗಳು ಉಪವಾಸ ಮಾಡುವಾಗ ಈ ಆರೋಗ್ಯ ಟಿಪ್ಸ್ ಮರೆಯದಿರಿ! -
ವಿಶ್ವ ಜನಸಂಖ್ಯಾ ದಿನ: ಉಚಿತ ಗರ್ಭನಿರೋಧಕಗಳು ಮತ್ತು ನಿಮ್ಮ ಗೌಪ್ಯತೆ ಬಗ್ಗೆ ತಿಳಿಯಲೇಬೇಕಾದ ಸತ್ಯಗಳು -
ಭಾರತ-ಇಂಗ್ಲೆಂಡ್ ಟಿ20 ಪಂದ್ಯದ ರೋಚಕತೆ ನಡುವೆ ಫಿಟ್ ಆಗಿರಲು ಈ 7 ನಿಮಿಷದ ಟಿಪ್ಸ್ ಮಿಸ್ ಮಾಡ್ಬೇಡಿ! -
ಮಳೆಗಾಲದ ಡೇಟಿಂಗ್: ಬಜೆಟ್ ಸ್ನೇಹಿ ಐಡಿಯಾಗಳು ಮತ್ತು ಸುರಕ್ಷಿತವಾಗಿರಲು ಇಲ್ಲಿವೆ ಬೆಸ್ಟ್ ಟಿಪ್ಸ್! -
ಕೋಲ್ಕತ್ತಾದಲ್ಲಿ ಭಾರಿ ಮಳೆ: ನಿಮ್ಮ ಬಾಲ್ಕನಿ ಮತ್ತು ಗಿಡಗಳನ್ನು ಸುರಕ್ಷಿತವಾಗಿಡಲು ಈ ಟಿಪ್ಸ್ ಮಿಸ್ ಮಾಡಬೇಡಿ! -
ಮಳೆಗಾಲದಲ್ಲಿ ಹೊಟ್ಟೆಯ ಸಮಸ್ಯೆ ಕಾಡ್ತಿದೆಯಾ? ಆರೋಗ್ಯವಾಗಿರಲು ಈ ಆಹಾರ ಪದ್ಧತಿ ಪಾಲಿಸಿ -
ಧಮಾಲ್ 4 ರಿಲೀಸ್: ಅಜಯ್ ದೇವಗನ್ ಕಾಮಿಡಿ ಹಬ್ಬಕ್ಕೆ ಫ್ಯಾಮಿಲಿ ಜೊತೆ ರೆಡಿಯಾಗಿ! -
ಸಮಲಿಂಗಿ ಜೋಡಿಗಳೇ ಎಚ್ಚರ: ಗಿಫ್ಟ್ ಟ್ಯಾಕ್ಸ್ನಿಂದ ಪಾರಾಗಲು ಈ ದಾಖಲೆಗಳು ಕಡ್ಡಾಯ!
ಬೆಡ್ ಟೀ ಕುಡಿಯುವುದರಿಂದ ಈ ಸಮಸ್ಯೆಗಳಾಗಬಹುದು ಎಚ್ಚರಿಕೆ!
ಭಾರತದಲ್ಲಿ ಚಹಾವು ಕೇವಲ ಪಾನೀಯವಲ್ಲ ಅದು ಕೆಲವು ಜನರಿಗೆ ಭಾವನೆಯಾಗಿದೆ. ಅವರ ದಿನವು ಚಹಾದೊಂದಿಗೆ ಪ್ರಾರಂಭವಾಗಿ, ದಿನ ಮುಗಿಯುವುದು ಸಹ ಚಹಾ ಕುಡಿದ ಮೇಲೆಯೇ. ಕುಟುಂಬದೊಂದಿಗೆ ಆಗಿರಲಿ ಅಥವಾ ಸ್ನೇಹಿತರೊಂದಿಗೆ ಪಾರ್ಟಿ ಆಗಿರಲಿ, ಜನರು ಚಹಾ ಕುಡಿಯುವ ಅವಕಾಶವನ್ನು ಹುಡುಕುತ್ತಿರುತ್ತಾರೆ. ಚಹಾದ ಅನುಕೂಲಗಳು ಸಾಕಷ್ಟಿದ್ದರೂ, ಅದನ್ನು ಸರಿಯಾದ ಸಮಯದಲ್ಲಿ ಕುಡಿಯದಿದ್ದರೆ, ನಿಮ್ಮ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ.
ಹೆಚ್ಚಿನ ಜನರು ಬೆಳಗ್ಗೆ ಎದ್ದ ಕೂಡಲೇ ಚಹಾ ಕುಡಿಯುತ್ತಾರೆ. ಆದರೆ ತಜ್ಞರ ಪ್ರಕಾರ, ಬೆಡ್ ಟೀ ಆರೋಗ್ಯಕ್ಕೆ ಹಾನಿಕಾರಕವಾಗಿದೆ. ಎದ್ದ ಕೂಡಲೇ ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದು ನಿಮ್ಮ ಆರೋಗ್ಯಕ್ಕೆ ಒಳ್ಳೆಯದಲ್ಲ. ಖಾಲಿ ಹೊಟ್ಟೆಯಲ್ಲಿ ಚಹಾ ನಿಮ್ಮ ಆರೋಗ್ಯವನ್ನು ಹೇಗೆ ಹಾಳುಮಾಡುತ್ತದೆ ಎಂಬುದನ್ನು ತಿಳಿಯಿರಿ.

ಖಾಲಿ ಹೊಟ್ಟೆಯಲ್ಲಿ ಚಹಾ ಸೇವಿಸಿದರೆ ಈ ಸಮಸ್ಯೆಗಳು ಉಂಟಾಗಬಹುದು ಎಚ್ಚರಿಕೆ:
- ಖಾಲಿ ಹೊಟ್ಟೆಯ ಚಹಾವನ್ನು ಕುಡಿಯುವುದರಿಂದ ನಿಮ್ಮ ದೇಹದ ಆಸಿಡ್ ಮತ್ತು ಕ್ಷಾರೀಯ ಸಮತೋಲನವನ್ನು ಹಾನಿಗೊಳ್ಳುತ್ತದೆ, ಇದರಿಂದಾಗಿ ಜೀರ್ಣ ವ್ಯವಸ್ಥೆಗೆ ತೊಂದರೆಯಾಗುತ್ತದೆ. ಜೀರ್ಣ ವ್ಯವಸ್ಥೆಗೆ ತೊಂದರೆಯಾದರೆ ಮುಂದೆ ಸಾಕಷ್ಟು ಸಮಸ್ಯೆಗಳಾಗುತ್ತದೆ.
- ಚಹಾ ಮೂತ್ರವರ್ಧಕವಾಗಿದ್ದು, ದೇಹದಿಂದ ನೀರನ್ನು ತೆಗೆದುಹಾಕುತ್ತದೆ. ನಿದ್ರೆಯಿಂದ ಎದ್ದಾಗ, ರಾತ್ರಿಯಿಡೀ ನೀರು ಕುಡಿಯದ ಕಾರಣ, ದೇಹವು ನಿರ್ಜಲೀಕರಣಗೊಳ್ಳುತ್ತದೆ. ಈ ಸಮಯದಲ್ಲಿ ಚಹಾ ಕುಡಿಯುವುದರಿಂದ ಸಮಸ್ಯೆ ಉಂಟಾಗುತ್ತದೆ.
- ಖಾಲಿ ಹೊಟ್ಟೆಯಲ್ಲಿ ಚಹಾ ಕುಡಿಯುವುದರಿಂದ ವಾಯು ಸಮಸ್ಯೆ ಉಂಟಾಗುತ್ತದೆ. ಹಾಲಿನಲ್ಲಿ ಲ್ಯಾಕ್ಟೋಸ್ ಇರುವುದರಿಂದ ರಾತ್ರಿಯಿಡೀ ಖಾಲಿಯಿದ್ದ ಹೊಟ್ಟೆಗೆ ಲ್ಯಾಕ್ಟೋಸ್ ಸಿಕ್ಕರೆ ಮಲಬದ್ಧತೆ ಮತ್ತು ವಾಯು ಸಮಸ್ಯೆಗಳು ಉಂಟಾಗಬಹುದು.
ಚಹಾದ ಅಡ್ಡಪರಿಣಾಮಗಳನ್ನು ಕಡಿಮೆ ಮಾಡುವ ವಿಧಾನ ಇಲ್ಲಿದೆ:
ಚಹಾ ಇಲ್ಲದೆ ಹಾಸಿಗೆಯಿಂದ ಎದ್ದೇಳಲು ಸಾಧ್ಯವಾಗದಿದ್ದರೆ, ಅದರ ನಷ್ಟವನ್ನು ಕಡಿಮೆ ಮಾಡಲು ನೀವು ಕೆಲವು ವಿಧಾನಗಳನ್ನು ಅಳವಡಿಸಿಕೊಳ್ಳಬಹುದು. ಮೊದಲು ಎದ್ದು ನೀರು ಕುಡಿಯಬೇಕು, ಹಣ್ಣು ತಿನ್ನಬೇಕು. ಇದರ ನಂತರ, ಚಹಾವನ್ನು ಕುಡಿಯಬಹುದು. ಆರಂಭದಲ್ಲಿ ಇದು ಸಮಸ್ಯೆಯಾಗಬಹುದು, ಆದರೆ ಈ ಅಭ್ಯಾಸವನ್ನು ಬದಲಾಯಿಸುವುದು ಅಷ್ಟು ಕಷ್ಟವಲ್ಲ. ಆದ್ದರಿಂದ ಇನ್ನು ಮುಂದಾದರೂ ಖಾಲಿ ಹೊಟ್ಟೆಯಲ್ಲಿ ಅಂದ್ರೆ, ಬೆಳಗ್ಗೆ ಎದ್ದ ತಕ್ಷಣ ಟೀ ಕುಡಿಯುವುದನ್ನು ತಪ್ಪಿಸಿ. ಇದು ನಿಮ್ಮ ಆರೋಗ್ಯಕ್ಕೆ ಎಂದಿಂದಿಗೂ ಹಾನಿಕಾರಕವೇ ಆಗಿರುತ್ತದೆ.
Disclaimer: ಈ ಲೇಖನದಲ್ಲಿ ಒದಗಿಸಲಾದ ಮಾಹಿತಿಯು ಸಾಮಾನ್ಯ ಮಾಹಿತಿ ಮತ್ತು ಶೈಕ್ಷಣಿಕ ಉದ್ದೇಶಗಳಿಗಾಗಿ ಮಾತ್ರವಾಗಿದೆ. ವೃತ್ತಿಪರ ವೈದ್ಯಕೀಯ ಸಲಹೆ, ರೋಗನಿರ್ಣಯ ಅಥವಾ ಚಿಕಿತ್ಸೆಗೆ ಪರ್ಯಾಯವಾಗಿ ಇದನ್ನು ದೃಢೀಕರಿಸಿಲ್ಲ. ವೈದ್ಯಕೀಯ ಸ್ಥಿತಿಯ ಕುರಿತು ನೀವು ಹೊಂದಿರುವ ಯಾವುದೇ ಪ್ರಶ್ನೆಗಳಿಗೆ ಯಾವಾಗಲೂ ನಿಮ್ಮ ವೈದ್ಯರು ಅಥವಾ ಅರ್ಹ ಆರೋಗ್ಯ ಸಿಬ್ಬಂದಿಯ ಸಲಹೆಯನ್ನು ಪಡೆಯಿರಿ.



Click it and Unblock the Notifications
