Latest Updates
-
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ತುಲಾದಿಂದ ಮೀನ ರಾಶಿವರೆಗಿನ ವಾರ ಭವಿಷ್ಯ! -
Weekly Horoscope: ಮಾರ್ಚ್ 22 ರಿಂದ ಮಾರ್ಚ್ 29ರ ವರೆಗೆ ಮೇಷದಿಂದ ಕನ್ಯಾ ರಾಶಿವರೆಗಿನ ವಾರ ಭವಿಷ್ಯ! -
ಮಳೆಗಾಲಕ್ಕೆ ತಯಾರಾಗಿ: ನಿತ್ಯ ಊಟದೊಂದಿಗೆ ಸವಿಯಲು ರವೆ ಸಂಡಿಗೆ ಮಾಡಿ! -
ಮೀನ ರಾಶಿಯಲ್ಲಿ ಶನಿ-ಮಂಗಳ ಸಂಯೋಗ: ಅಪರೂಪದ ಸಮ್ಮಿಲನವು ತರಲಿದೆ ಬಿಕ್ಕಟ್ಟು, ಆರ್ಥಿಕ ಸಮಸ್ಯೆ! -
ಈ 2 ರಾಶಿಯವರ ಪ್ರೇಮ ಸಂಬಂಧಗಳು ಸಿಹಿ! ಸಣ್ಣಪುಟ್ಟ ಸಮಸ್ಯೆಗಳು ಖಚಿತ -
March 21 Horoscope: ಹೊಸ ಆರಂಭಗಳಲ್ಲಿ ಹಣ ಹೂಡಿಕೆಗೆ ಯೋಗ್ಯ ದಿನ! -
ಒಂದು ಹನಿ ಎಣ್ಣೆ ಇಲ್ಲದೆ ಮಾಡಿ ದಹೀ ಭಲ್ಲಾ! ರುಚಿ, ಆರೋಗ್ಯದಲ್ಲಿ ರಾಜಿ ಇಲ್ಲ.. ತೂಕ ಡಬಲ್ ಇಳಿಯುತ್ತೆ -
ಸುಸ್ತು & ಆಯಾಸದಿಂದ ಬಳಲುತ್ತಿದ್ದೀರಾ? ಈ ರಾಗಿ ಖರ್ಜೂರದ ಲಾಡು ಸೇವಿಸಿ.. ಸಕ್ಕರೆ, ಬೆಲ್ಲ ಬೇಕಿಲ್ಲ.. ಮಾಡೋದು ಹೇಗೆ? -
ಎಂದಾದ್ರೂ ಚೆಟ್ಟಿನಾಡ್ ಚಿಕನ್ ಸವಿದ್ದೀರಾ? ಬಾಯಲ್ಲಿ ನೀರೂರಿರುವ ರುಚಿ.. ಮಸಾಲೆ ರುಬ್ಬದೇ ಮಾಡಿ -
ಕುಂಭ ರಾಶಿಯಲ್ಲಿ ಬುಧ ಮಾರ್ಗಿ: ಈ ರಾಶಿಯವರಿಗೆ ಶುಭಕಾಲ ಆರಂಭ! ಕಷ್ಟಗಳಿಗೆ ಮುಕ್ತಿ.. ಕುಬೇರನ ಕೃಪೆ ಶುರು
ಚಿಂತೆ, ದುಗುಡ, ಖಿನ್ನತೆ ದೂರ ಮಾಡುವುದು ಹೇಗೆ?
ಒಬ್ಬ ವ್ಯಕ್ತಿಗೆ ದೈಹಿಕ ಆರೋಗ್ಯದಷ್ಟೇ ತುಂಬಾ ಮುಖ್ಯವಾದದ್ದು ಮಾನಸಿಕವಾದ ಆರೋಗ್ಯ. ಕೆಲವೊಂದು ವ್ಯಕ್ತಿಗಳನ್ನು ನೋಡುತ್ತೇವೆ, ಮೇಲ್ನೋಟಕ್ಕೆ ಅವರನ್ನು ನೋಡಿದಾಗ ಅವರು ಅನುಭವಿಸುತ್ತಿರುವ ತೊಂದರೆ ಯಾರಿಗೂ ಗೊತ್ತಾಗಿರುವುದಿಲ್ಲ.

ಆದರೆ ಆ ವ್ಯಕ್ತಿ ಖಿನ್ನತೆಯಿಂದ ಬಳಲಿ ಆತ್ಮಹತ್ಯೆಯಂಥ ತಪ್ಪಾದ ನಿರ್ಧಾರ ತೆಗೆದುಕೊಂಡಾಗ ಆತನ ಮಾನಸಿಕ ಸ್ಥಿತಿಯ ಬಗ್ಗೆ ಒಂದು ಸೂಚನೆ ದೊರೆತಿದ್ದರೆ ಬದುಕಿಸಬಹುದಿತ್ತು ಎಂದು ಆ ವ್ಯಕ್ತಿಯ ಆಪ್ತರಿಗೆ ಅನಿಸುವುದುಂಟು.
ಮಾನಸಿಕ ಆರೋಗ್ಯದ ಸಮಸ್ಯೆಯಿರುವ ವ್ಯಕ್ತಿಯಲ್ಲಿ ದೈಹಿಕ ಸಮಸ್ಯೆಯೂ ಕಂಡು ಬರುವುದು. ವಿಶ್ವದಲ್ಲಿ ಪ್ರತೀ 40 ಸೆಕೆಂಡ್‌ಗೆ ಒಬ್ಬ ವ್ಯಕ್ತಿ ಖಿನ್ನತೆಯಿಂದಾಗಿ ಸಾವನ್ನಪ್ಪುತ್ತಿದ್ದಾರೆ. ಇನ್ನು ಪ್ರತಿಯೊಬ್ಬ ವ್ಯಕ್ತಿ ತನ್ನ ಮಾನಸಿಕ ಆರೋಗ್ಯದ ಕಡೆ ತುಂಬಾ ಗಮನ ನೀಡಬೇಕು.
ನಿಮ್ಮ ಮಾನಸಿಕ ಆರೋಗ್ಯ ಸ್ವಾಸ್ಥ್ಯ ಕಾಪಾಡಲು ಈ ಅಂಶಗಳನ್ನು ಪಾಲಿಸಿ:

1. ನಿಮ್ಮ ಪರಿಸ್ಥಿತಿಯನ್ನು ಸ್ವೀಕರಿಸಿ, ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ತಿಳಿದುಕೊಳ್ಳಿ
ಹೆಚ್ಚಿನವರು ತಮ್ಮ ಮಾನಸಿಕ ಆರೋಗ್ಯ ಕೆಟ್ಟಾಗ ಅದನ್ನು ಸ್ವೀಕರಿಸಲು ಸಿದ್ಧವಿರುವುದಿಲ್ಲ. ನಿಮ್ಮ ಮಾನಸಿಕ ಆರೋಗ್ಯ ಹಾಳು ಮಾಡಿರುವ ವಿಷಯ ಯಾವುದು ಅದನ್ನು ಮೊದಲು ಸ್ವೀಕರಿಸಿ, ಇದು ನಿಮ್ಮ ಸಮಸ್ಯೆಗೆ ಪರಿಹಾರ ಕಂಡು ಕೊಳ್ಳಲು ಸಾಧ್ಯವಾಗುತ್ತೆ. ಉದಾಹರಣೆಗೆ ರಿಲೇಷನ್‌ಶಿಪ್ ಸಮಸ್ಯೆಯಾಗಿದ್ದರೆ ಆ ಕಾರಣಕ್ಕೆ ತುಂಬಾ ನೋವು ಅನುಭವಿಸವ ಬದಲು ಅದನ್ನು ಅದನ್ನು ಸ್ವೀಕರಿಸುವ ಪ್ರಯತ್ನ ಮಾಡಿ, ನಿಮ್ಮ ಮನಸ್ಸನ್ನು ಬೇರೆ ಕಡೆ ಕೆಲಸ ಕಾರ್ಯಗಳಲ್ಲಿ ಗಮನ ಹರಿಸಲು ಪ್ರಯತ್ನಿಸಿ.

2. ನಿಮ್ಮ ಸಮಸ್ಯೆಗಳನ್ನು ಆಪ್ತರೊಂದಿಗೆ ಹೇಳಿಕೊಳ್ಳಿ
ಹೆಚ್ಚಿನವರು ಮಾನಸಿಕ ಸಮಸ್ಯೆಯಿಂದ ಬಳಲು ಕಾರಣ ಅವರು ತಮ್ಮ ನೋವನ್ನು ಆಪ್ತರೊಂದಿಗೆ ಹೇಳಿಕೊಳ್ಳಲು ಹೋಗುವುದಿಲ್ಲ, ಇದರಿಂದ ನೋವು ಮತ್ತಷ್ಟು ಹೆಚ್ಚಾಗುವುದು. ನಿಮಗೆ ತುಂಬಾ ಆಪ್ತರಾದ ವ್ಯಕ್ತಿ ಜೊಇತೆ ನಿಮ್ಮ ಸಮಸ್ಯೆ ಹೇಳಿಕೊಳ್ಳಿ, ಅವರ ಜೊತೆ ಹಂಚಿಕೊಳ್ಳಲು ಇಷ್ಟವಾಗದಿದ್ದರೆ ಮನಶಾಸ್ತ್ರಜ್ಞರನ್ನು ಭೇಟಿಯಾಗಿ ಕೌನ್ಸಿಲಿಂಗ್ ತೆಗೆದುಕೊಳ್ಳಿ. ಯಾವುದೇ ಸಮಸ್ಯೆಗೂ ಪರಿಹಾರ ಇದ್ದೇ ಇರುತ್ತದೆ.

3. ನಿದ್ದೆ ಸರಿಯಾಗಿ ಮಾಡಿ
ನಿಮ್ಮ ಮಾನಸಿಕ ಹಾಗೂ ದೈಹಿಕ ಆರೋಗ್ಯಕ್ಕೆ ನಿದ್ದೆ ತುಂಬಾ ಅವಶ್ಯಕ. ನಿದ್ದೆ ಕಡಿಮೆಯಾದರೆ ಅದರ ಪ್ರಭಾವ ಶರೀರದ ಮೇಲೆ ಬೀಳುವುದು. ನಿದ್ದೆ ಕಡಿಮೆಯಾದರೆ ಮೂಡ್ ಸ್ವಿಂಗ್ ಉಂಟಾಗುವುದು. ಆದ್ದರಿಂದ ದಿನದಲ್ಲಿ 6 ಗಂಟೆ ನಿದ್ದೆ ಅವಶ್ಯಕ.

4. ಆರೋಗ್ಯಕರ ಆಹಾರ
ನಿಮ್ಮ ಮಾನಸಿಕ ಆರೋಗ್ಯ ಕಾಪಾಡಿಕೊಳ್ಳಲು ತೆಗೆದುಕೊಳ್ಳುವ ಆಹಾರ ಕೂಡ ಮುಖ್ಯವಾಗಿರುತ್ತದೆ. ಪೋಷಕಾಂಶಗಳು ಅಧಿಕವಿರುವ ಆಹಾರ ಸೇವಿಸಬೇಕು. ಸಂಸ್ಕರಿಸಿದ ಆಹಾರ, ಫಾಸ್ಟ್ ಫುಡ್ಸ್, ಜಂಕ್ ಫುಡ್ಸ್ ಇವುಗಳಿಂದ ದೂರವಿರಿ.

5. ಆತ್ಮ ಗೌರವ
ನಿಮ್ಮ ಆತ್ಮ ಗೌರವಕ್ಕೆ ದಕ್ಕೆಯಾಗದಂತೆ ನೋಡಿಕೊಳ್ಳುವುದು ಅವಶ್ಯಕ, ಆದ್ದರಿಂದ ಧನಾತ್ಮಕ ಯೋಚನೆಗಳನ್ನು ತುಂಬಿ. ಇನ್ನು ನಿಮ್ಮ ಆತ್ಮ ಗೌರವಕ್ಕೆ ದಕ್ಕೆಯಾಗದ ವ್ಯಕ್ತಿಗಳ ಜೊತೆ ಬೆರೆಯಿರಿ, ಇದು ಮಾನಸಿಕ ಒತ್ತಡ ಹೊರಬರಲು ಸಹಾಯ ಮಾಡುತ್ತದೆ.

6. ಕತ್ತಲಾದ ಬೆಳಕು ಬಂದೇ ಬರುತ್ತದೆ ಎಂಬ ಭರವಸೆ ಬಿಡಬೇಡಿ
ಜನರು ಖಿನ್ನತೆಗೆ ಒಳಗಾಗುವುದು ತಮಗೆ ಉಂಟಾದ ನೋವು, ಋಣಾತ್ಮಕ ಚಿಂತನೆಗಳಿಂದ. ಆದರೆ ಜೀವನ ಯಾವತ್ತೂ ಒಂದೇ ರೀತಿ ಇರಲ್ಲ, ಅಲ್ಲದೆ ಈ ಪ್ರಪಂಚದಲ್ಲಿ ಕಷ್ಟಗಳು ನಿಮಗೆ ಮಾತ್ರ ಬಂದಿರುವುದು ಎಂದು ಬಾವಿಸಬೇಡಿ, ಏಕೆಂದರೆ ಎಲ್ಲರ ಬದುಕಿನಲ್ಲಿ ಸಮಸ್ಯೆಗಳಿರುತ್ತದೆ, ಅವುಗಳನ್ನು ಪರಿಹರಿಸುವುದು ಹೇಗೆ ಎಂದು ಚಿಂತಿಸಬೇಕು, ಆದಷ್ಟು ಧನಾತ್ಮಕವಾಗಿ ಯೋಚನೆ ಮಾಡಿ, ಒಳಿತಾಗುತ್ತದೆ ಎಂಬ ಭರವಸೆ ಇರಲಿ, ಇವುಗಳಿಂದ ನಿಮ್ಮ ಖಿನ್ನತೆ ಹೊರದೂಡಬಹುದು.

7. ವ್ಯಾಯಾಮ
ಇನ್ನು ಮಾನಸಿಕ ಆರೋಗ್ಯ ಕಾಪಾಡುವಲ್ಲಿ ದೈಹಿಕ ವ್ಯಾಯಾಮ ಕೂಡ ಪ್ರಮುಖ ಪಾತ್ರವಹಿಸುತ್ತದೆ. ಧ್ಯಾನ ಮಾಡಿ, ಯೋಗ ಮಾಡಿ ಇವೆಲ್ಲಾ ಖಿನ್ನತೆ ಹೊರದೂಡಲು ಸಹಕಾರಿ. ದಿನದಲ್ಲಿ ಅರ್ಧ ಗಂಟೆ ಯೋಗ, ಧ್ಯಾನಕ್ಕಾಗಿ ಮೀಸಲಿಡಿ, ಇದು ದೇಹ ಹಾಗೂ ಮಾನಸಿಕ ಆರೋಗ್ಯದ ಮೇಲೆ ಧನಾತ್ಮಕ ಪ್ರಯೋಜನವನ್ನು ಬೀಡುತ್ತದೆ.

ಖಿನ್ನತೆಯ ಪ್ರಾರಂಭಿಕ ಲಕ್ಷಣಗಳು
- ಇತರರ ಜೊತೆ ಬೆರೆಯದೆ ದೂರ ಸರಿಯುವುದು
- ಭರವಸೆಯೇ ಇಲ್ಲದವರಂತೆ ಮಾತನಾಡುವುದು
- ದೇಹದಲ್ಲಿ ಚೈತ್ನಯವೇ ಇಲ್ಲದಿರುವುದು
- ಮೂಡ್ ಸ್ವಿಂಗ್
- ಮಾದಕ ವ್ಯಸನಕ್ಕೆ ದಾಸರಾಗುವುದು
- ದೇಹಕ್ಕೆ ಹಾನಿ ಮಾಡಲು ಪ್ರಯತ್ನಿಸುವುದು
- ಗೊಂದಲ
- ದಿನನಿತ್ಯದ ಕೆಲಸದಲ್ಲಿ ಆಸಕ್ತಿ ತೋರದೆ ಇರುವುದು
- ಏಕಾಗ್ರತೆ ಇಲ್ಲದಿರುವುದು
- ತುಂಬಾ ತಿನ್ನುವುದು ಅಥವಾ ಸ್ವಲ್ಪವೇ ತಿನ್ನುವುದು
ಮನೆಯಲ್ಲಿ ಈ ಲಕ್ಷಣಗಳು ಇತರ ಸದಸ್ಯರಲ್ಲಿ ಕಂಡು ಬಂದರೆ ಕೂಡಲೇ ಎಚ್ಚರವಹಿಸಿ, ನಿರ್ಲಕ್ಷ್ಯ ಮಾಡಿದರೆ ಅವರು ಆತ್ಮಹತ್ಯೆಯಂಥ ತಪ್ಪಾದ ನಿರ್ಧಾರ ತೆಗೆದುಕೊಳ್ಳುತ್ತಾರೆ. ಅವರಲ್ಲಿ ಧನಾತ್ಮಕ ಯೋಚನೆ ತುಂಬಿ, ಅಗ್ಯತಬಿದ್ದರೆ ಕೌನ್ಸಿಲಿಂಗ್ ಮಾಡಿಸಿ.



Click it and Unblock the Notifications