Latest Updates
-
ಐಫೋನ್ 18 ಪ್ರೋ ಮತ್ತು ಡ್ಯುವೋ ಭಾರತದಲ್ಲಿ ಲಾಂಚ್: ಬೆಲೆ, ಆಫರ್ ಮತ್ತು ಪ್ರಿ-ಆರ್ಡರ್ ಮಾಹಿತಿ ಇಲ್ಲಿದೆ! -
ವಿಶ್ವ ಆತ್ಮಹತ್ಯೆ ತಡೆ ದಿನ: ಮಾನಸಿಕ ಆರೋಗ್ಯ ಸುಧಾರಿಸಲು 10 ನಿಮಿಷದ ಸಿಂಪಲ್ ಮಾರ್ನಿಂಗ್ ರೂಟೀನ್ ಮತ್ತು ಹೆಲ್ಪ್ಲೈನ್ ವಿವರಗಳು -
ವಿಚ್ಛೇದನದ ನಂತರವೂ ಜೀವನಾಂಶ ಪಡೆಯಬಹುದೇ? ಮಧ್ಯಪ್ರದೇಶ ಹೈಕೋರ್ಟ್ನಿಂದ ಮಹತ್ವದ ತೀರ್ಪು! -
ದೆಹಲಿ ವಾಯು ಮಾಲಿನ್ಯ: ಮನೆಯಲ್ಲಿ ಶುದ್ಧ ಗಾಳಿ ಪಡೆಯಲು ಈ ಸರಳ ಟಿಪ್ಸ್ ಪಾಲಿಸಿ -
ಪ್ಯಾಕ್ ಮಾಡಿದ ಆಹಾರದ ಮೇಲೆ 'ರೆಡ್ ಹೆಕ್ಸಗನ್' ಎಚ್ಚರಿಕೆ: ಇನ್ಮುಂದೆ ತಿನ್ನುವ ಮುನ್ನ ಈ ವಿಷಯ ಗಮನಿಸಿ! -
ಆಪಲ್ 'ಸರ್ಪ್ರೈಸ್ ಆಂಡ್ ಶೈನ್' ಈವೆಂಟ್: ಐಫೋನ್ 18 ಪ್ರೋ ಮತ್ತು ಫೋಲ್ಡಬಲ್ ಆಲ್ಟ್ರಾ ಲಾಂಚ್, ಭಾರತದಲ್ಲಿ ಬೆಲೆ ಎಷ್ಟು? -
ಟಾಟಾ ಮುಂಬೈ ಮ್ಯಾರಥಾನ್ ಡ್ರೀಮ್ ರನ್: ಇಂದೇ ನೋಂದಣಿ ಮುಕ್ತಾಯ, ಓಟಕ್ಕೆ ಸಜ್ಜಾಗಲು 20 ನಿಮಿಷದ ಪ್ಲಾನ್ ಇಲ್ಲಿದೆ! -
ಲೈವ್-ಇನ್ ಸಂಬಂಧಕ್ಕೂ ಅನ್ವಯವಾಗುತ್ತೆ 498A: ಕಲ್ಕತ್ತಾ ಹೈಕೋರ್ಟ್ ಮಹತ್ವದ ತೀರ್ಪು ಮತ್ತು ನೀವು ತಿಳಿಯಲೇಬೇಕಾದ ಸುರಕ್ಷತಾ ಕ್ರಮಗಳು -
ಬೆಂಗಳೂರಿನ ಬಿಸಿಲಿಗೆ ಹೈರಾಣಾಗಿದ್ದೀರಾ? ಎಸಿ ಇಲ್ಲದೆ ಮನೆ ತಂಪು ಮಾಡೋದು ಹೇಗೆ? ಇಲ್ಲಿದೆ ಸಿಂಪಲ್ ಟಿಪ್ಸ್ -
ವೆಜ್ ಥಾಲಿ ಬೆಲೆ ಗಗನಕ್ಕೆ: ಕಡಿಮೆ ಖರ್ಚಿನಲ್ಲಿ ಪೌಷ್ಟಿಕ ಊಟ ತಯಾರಿಸುವ ಸರಳ ಟಿಪ್ಸ್
ನಿಮಗೆ ತಿಳಿದಿರದ ಕೋಕಂ ಅಥವಾ ಪುನರ್ಪುಳಿಯ ಆರೋಗ್ಯ ಪ್ರಯೋಜನಗಳಿವು
ಕೋಕಂ ಅಥವಾ ಆಡು ಭಾಷೆಯಲ್ಲಿ ಪುನರ್ಪುಳಿ ಎಂದು ಕರೆಯಲ್ಪಡುವ ಈ ಹಣ್ಣು ಬೇಸಿಗೆಯಲ್ಲಿ ಫೇಮಸ್. ಬಿರುಬಿಸಿಲಿನಿಂದ ದಣಿದಾಗ, ಇದರ ಜ್ಯೂಸ್ ಮಾಡಿ ಸೇವಿಸಿದರೆ, ಮನಸ್ಸಿಗೆ ಉಲ್ಲಾಸದ ಜೊತೆಗೆ ದೇಹಕ್ಕೆ ತಂಪು.
ಒಣಗಿದ ಕೋಕಮ್ ಅನ್ನು ಹುಣಸೆಹಣ್ಣಿಗೆ ಪರ್ಯಾಯವಾಗಿ ಅನೇಕ ಭಕ್ಷ್ಯಗಳಲ್ಲಿ ಬಳಸಲಾಗುತ್ತದೆ ಏಕೆಂದರೆ ಇದು ಹುಳಿ ರುಚಿ ಮತ್ತು ಸೌಮ್ಯವಾದ ಸಿಹಿಯನ್ನು ಹೊಂದಿರುತ್ತದೆ. ಅಡುಗೆ ಉದ್ದೇಶಕ್ಕಾಗಿ ಮಾತ್ರವಲ್ಲದೆ, ಕೋಕಮ್ ಅನ್ನು ವಿವಿಧ ಆರೋಗ್ಯ ಪ್ರಯೋಜನಗಳಿಗಾಗಿ ಬಳಸಬಹುದು ಎಂದು ನಿಮಗೆ ತಿಳಿದಿದೆಯೇ?. ಕೋಕಮ್ ಅಥವಾ ಪುನರ್ಪುಳಿ ಜ್ಯೂಸ್ ಅಥವಾ ಹಣ್ಣು ಸೇವನೆಯಿಂದ ಆರೋಗ್ಯಕ್ಕೆ ಏನು ಲಾಭ ಎಂಬುದನ್ನು ಇಲ್ಲಿ ನೋಡೋಣ.
ಕೋಕಮ್‌ನ ಅಪರೂಪದ ಆರೋಗ್ಯ ಪ್ರಯೋಜನಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಅಸಿಡಿಟಿಗೆ ಉತ್ತಮ ಪರಿಹಾರ:
ಇಂದಿನ ವೇಗದ ಬದುಕಿನಲ್ಲಿ, ಅಸಿಡಿಟಿಯು ಮುಖ್ಯ ಜೀರ್ಣಕಾರಿ ಸಮಸ್ಯೆಯಾಗಿದೆ. ಆದರೆ ಕೋಕಮ್ ಪಲ್ಪ್ ಈ ಸಮಸ್ಯೆಯಿಂದ ನಿಮಗೆ ಪರಿಹಾರ ನೀಡುತ್ತದೆ. ನೀವು ಮಾಡಬೇಕಾಗಿರುವುದು ಇಷ್ಟೇ, ಇದನ್ನು ಜ್ಯೂಸ್ ಅಥವಾ ಶರಬತ್ ರೂಪದಲ್ಲಿ ಸೇವಿಸಿ.

ಚರ್ಮ ಸಮಸ್ಯೆ ನಿವಾರಿಸುವುದು:
ನೀವು ಬಿರುಕು ಬಿಟ್ಟ ಹಿಮ್ಮಡಿಗಳನ್ನು ಎದುರಿಸುತ್ತಿದ್ದರೆ ಅದನ್ನು ಗುಣಪಡಿಸಲು ಕೋಕಂ ಪೇಸ್ಟ್ ಅನ್ನು ಬಳಸಿ. ಇದನ್ನು ಸಾಬೂನುಗಳು, ಚರ್ಮದ ಲೋಷನ್‌ಗಳು ಮತ್ತು ಮುಲಾಮುಗಳಂತಹ ಸೌಂದರ್ಯವರ್ಧಕ ಉತ್ಪನ್ನಗಳನ್ನು ಉತ್ಪಾದಿಸಲು ಬಳಸಲಾಗುತ್ತದೆ. ತೆಂಗಿನ ಎಣ್ಣೆಯೊಂದಿಗೆ ಕೋಕಮ್ ಪೇಸ್ಟ್ ಒಡೆದ ಹಿಮ್ಮಡಿಗಳನ್ನು ಗುಣಪಡಿಸಲು ಪರಿಣಾಮಕಾರಿಯಾಗಿದೆ, ಜೊತೆಗೆ ಇದು ಚರ್ಮದ ದದ್ದುಗಳು ಮತ್ತು ಗುಳ್ಳೆಗಳಿಗೆ ಪರಿಹಾರವಾಗಿದೆ.

ದೇಹ ತಂಪಾಗಿಸುವುದು:
ಕೋಕಂ ಅಥವಾ ಪುನರ್ಪುಳಿ ಎಂಬ ತಿನ್ನಬಹುದಾದ ಹಣ್ಣನ್ನು ಶರಬತ್ತು ಅಥವಾ ಜ್ಯೂಸ್ ಆಗಿ ತಯಾರಿಸಿದಾಗ ನಿಮ್ಮ ಬಾಯಾರಿಕೆ ನೀಗುತ್ತದೆ. ಜೊತೆಗೆ ಹೀಗೆ ಮಾಡುವುದರಿಂದ ನಿಮ್ಮ ದೇಹವೂ ತಂಪಾಗುತ್ತದೆ, ಏಕೆಂದರೆ ಇದರಲ್ಲಿ ದೇಹವನ್ನು ತಂಪಾಗಿಸುವ ಗುಣ ಇದೆ.

ಜೀರ್ಣಾಂಗವ್ಯೂಹದ ಆರೋಗ್ಯಕ್ಕೆ ಒಳ್ಳೆಯದು:
ಕೋಕಮ್ ಅದರ ಬ್ಯಾಕ್ಟೀರಿಯಾ ವಿರೋಧಿ ಗುಣವು ಅಜೀರ್ಣ ಮತ್ತು ವಾಯು ಮುಂತಾದ ಗ್ಯಾಸ್ಟ್ರಿಕ್ ಸಮಸ್ಯೆಗಳನ್ನು ಗುಣಪಡಿಸುತ್ತದೆ. ಜೊತೆಗೆ ಕರುಳಿನಲ್ಲಿರುವ ಉತ್ತಮ ಬ್ಯಾಕ್ಟೀರಿಯಾವನ್ನು ರಕ್ಷಿಸಿ, ಹೊಟ್ಟೆಯಿಂದ ಹಾನಿಕಾರಕ ಬ್ಯಾಕ್ಟೀರಿಯಾವನ್ನು ನಾಶಮಾಡಲು ಇದು ಸಹಕಾರಿಯಾಗಿದೆ.

ಜೀವಕೋಶಗಳ ಪುನರುತ್ಪಾದನೆ:
ಕೋಕಮ್ ಗಾರ್ಸಿನಾಲ್ ಎಂಬ ಶಕ್ತಿಶಾಲಿ ಅಂಶದಲ್ಲಿ ಸಮೃದ್ಧವಾಗಿದ್ದು, ಇದು ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿದೆ. ಉತ್ಕರ್ಷಣ ನಿರೋಧಕಗಳು ನಮ್ಮ ದೇಹದಲ್ಲಿ ಸ್ವತಂತ್ರ ರಾಡಿಕಲ್ಗಳನ್ನು ತಡೆಯುತ್ತದೆ. ಈ ಮೂಲಕ ಕೋಕಮ್ ಕ್ಯಾನ್ಸರ್, ಹೃದಯ ರೋಗಗಳು ಮತ್ತು ಮಧುಮೇಹದಂತಹ ಆರೋಗ್ಯ ಸಮಸ್ಯೆಗಳನ್ನು ಅಭಿವೃದ್ಧಿಪಡಿಸುವ ಸಾಧ್ಯತೆಗಳನ್ನು ಕಡಿಮೆ ಮಾಡುತ್ತದೆ. ಗಾರ್ಸಿನಾಲ್ ಜೀವಕೋಶಗಳ ಪುನರುತ್ಪಾದನೆ ಮತ್ತು ಹೊಸ ಕೋಶಗಳ ರಚನೆಯನ್ನು ಉತ್ತೇಜಿಸುತ್ತದೆ.

ಕೊಲೆಸ್ಟ್ರಾಲ್ ಮಟ್ಟವನ್ನು ನಿಯಂತ್ರಿಸುವುದು:
ಹೈಡ್ರಾಕ್ಸಿ ಸಿಟ್ರಿಕ್ ಆಮ್ಲ ಎಂದು ಕರೆಯಲ್ಪಡುವ ಸಂಯುಕ್ತವು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಪ್ರಯೋಜನಕಾರಿಯಾಗಿದೆ. ಕೋಕಮ್ ಈ ಸಂಯುಕ್ತದ ಶ್ರೀಮಂತ ಮೂಲವಾಗಿದ್ದು, ಸ್ಥೂಲಕಾಯತೆಯನ್ನು ತಡೆಯುವುದಲ್ಲದೇ, ಅತಿಯಾಗಿ ತೂಕ ಹೆಚ್ಚಾಗುವುದನ್ನು ತಡೆಯುತ್ತದೆ.

ಮಧುಮೇಹದ ವಿರುದ್ಧ ಹೋರಾಡುವುದು:
ಕೋಕಮ್ ಸೇವನೆಯು ಸ್ವತಂತ್ರ ರಾಡಿಕಲ್ಗಳನ್ನು ನಿಗ್ರಹಿಸಲು ಸಹಾಯ ಮಾಡುತ್ತದೆ ಮತ್ತು ಆಕ್ಸಿಡೀಕರಣದ ವೇಗವನ್ನು ಕಡಿಮೆ ಮಾಡುತ್ತದೆ. ಹುಳಿ ಹಣ್ಣಿನಲ್ಲಿರುವ ಸಕ್ರಿಯ ಅಂಶವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುತ್ತದೆ ಈ ಮೂಲಕ ಮಧುಮೇಹದ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಆತಂಕ ಮತ್ತು ಖಿನ್ನತೆಯನ್ನು ಪರಿಹರಿಸುವುದು:
ಕೋಕಂನಲ್ಲಿರುವ ಹೈಡ್ರಾಕ್ಸಿಲ್ ಸಿಟ್ರಿಕ್ ಆಮ್ಲವು ನಮ್ಮ ದೇಹದಲ್ಲಿ ಸಿರೊಟೋನಿನ್ ಹಾರ್ಮೋನ್ ಅನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಸಿರೊಟೋನಿನ್ ನಮ್ಮ ಮನಸ್ಥಿತಿಯನ್ನು ನಿಯಂತ್ರಿಸಲು ಮತ್ತು ಖಿನ್ನತೆ ಹಾಗೂ ಆತಂಕದಿಂದ ಮಾನಸಿಕವಾಗಿ ಶಾಂತಗೊಳಿಸಲು ಕಾರ್ಯನಿರ್ವಹಿಸುತ್ತದೆ.
ಇದಲ್ಲದೆ, ಕೋಕಮ್ ಬಿ ಜೀವಸತ್ವಗಳು, ಸಿಟ್ರಿಕ್ ಆಮ್ಲ, ಪೊಟ್ಯಾಸಿಯಮ್, ಮ್ಯಾಂಗನೀಸ್, ಆಸ್ಕೋರ್ಬಿಕ್ ಆಮ್ಲ ಮತ್ತು ಅಂತಹ ಅನೇಕ ಅಗತ್ಯ ಪೋಷಕಾಂಶಗಳಿಂದ ತುಂಬಿರುತ್ತದೆ, ಇದು ನಮ್ಮ ಆರೋಗ್ಯಕ್ಕೆ ಪ್ರಯೋಜನಗಳನ್ನು ನೀಡುತ್ತದೆ.



Click it and Unblock the Notifications
