Latest Updates
-
ಸಿಲಿಂಡರ್ 3 ತಿಂಗಳು ಬರಬೇಕೆ? ಇನ್ಮುಂದೆ ಗ್ಯಾಸ್ ಚಿಂತೆ ಬೇಡ.. LPG ಉಳಿಸಲು ಇಲ್ಲಿದೆ 5 ಸ್ಮಾರ್ಟ್ ಟಿಪ್ಸ್ -
ಅಕ್ಕಿ ಬೇಡ, ಉದ್ದಿನಬೇಳೆ ಬೇಡ.. 15 ನಿಮಿಷದ ಹೆಸರು ಬೇಳೆ-ತರಕಾರಿ ಇಡ್ಲಿ! ಉಳಿದ ಇಡ್ಲಿ ಫ್ರೆಶ್ ಆಗಿಡೋದು ಹೇಗೆ? -
ಗ್ಯಾಸ್ ಇಲ್ವಾ? ಚಿಂತೆ ಬೇಡ.. ಒಲೆ ಹಚ್ಚದೇ ಮಾಡುವ 5 ಆರೋಗ್ಯಕರ ಊಟಗಳಿವು! -
ಮಿಕ್ಸಿಯಲ್ಲೇ ಮಾಡಿ ಕಬ್ಬಿನ ಹಾಲು! ಕಬ್ಬು ಇಲ್ಲದೆಯೇ ಶುದ್ಧವಾದ ಹಾಲು ಮಾಡೋದು ಹೇಗೆ? ರಸ್ತೆ ಬದಿಗಿಂತ ರುಚಿ -
ಮಘಾ ನಕ್ಷತ್ರಕ್ಕೆ ಕೇತು.. ಈ ಎಲ್ಲಾ ರಾಶಿಯವರ ಜೀವನದಲ್ಲಿ ಭಾರಿ ಬದಲಾವಣೆ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? -
10 ನಿಮಿಷಗಳ ಅಪ್ಪೆ.. ಹೆಸರುಕಾಳು ಮತ್ತು ಬಟಾಣಿ ಬಳಸಿ ಮಾಡುವ ರೆಸಿಪಿ! ಮೃದುವಾಗಿ ಮಾಡೋದು ಹೇಗೆ ಗೊತ್ತಾ? -
ವಿವಾಹಿತ ದಂಪತಿಗಳಿಗೂ ಈ ದಿನ ಸಂತೋಷದಾಯಕ! ಸಂಗಾತಿ ಮೇಲೆ ಡೌಟ್ ಬೇಡ -
March 13 Horoscope: ಶುಭ ಕಾರ್ಯ ಸಂಬಂಧಿತ ಚರ್ಚೆಗಳಿವೆ -
ಬೇಸಿಗೆಯಲ್ಲಿ ಈ ಗಂಜಿ ಕುಡಿಯಿರಿ.. ಕೊಬ್ಬು ಕಡಿಮೆ, ದೇಹಕ್ಕೂ ತಂಪು! ಈ ಗಂಜಿಯ ಆರೋಗ್ಯ ರಹಸ್ಯ ಇಲ್ಲಿದೆ -
30 ವರ್ಷಗಳ ಬಳಿಕ ಸೂರ್ಯ-ಶನಿ ಸಂಯೋಗ! ಯಾರಿಗೆ ಶುಭ? ಯಾರಿಗೆ ಸಮಸ್ಯೆ? 12 ರಾಶಿಗಳ ಜಾತಕ ತಿಳಿಯಿರಿ
ಸ್ಯಾನಿಟೈಸರ್‌ಗೂ, ಸೋಂಕು ನಿವಾರಕ ಲಿಕ್ವಿಡ್‌ಗೂ ಏನು ವ್ಯತ್ಯಾಸ ಗೊತ್ತಾ?
ಕರೋನಾ ವೈರಸ್ ಕಾಯಿಲೆ ಇಡೀ ಜಗತ್ತನ್ನೆ ಬದಲಾಯಿಸಿಬಿಟ್ಟಿದೆ. ಅದರ ವಿಭಿನ್ನ ಗುಣಲಕ್ಷಣಗಳಿಂದಾಗಿ ನಾವು ನಮ್ಮ ಜೀವನಶೈಲಿಯಲ್ಲಿ ಹಲವು ಬದಲಾವಣೆಗಳನ್ನು ಮಾಡಿಕೊಂಡಿದ್ದೇವೆ. ತಬ್ಬಿಕೊಳ್ಳುವುದು, ಒಬ್ಬರಿಗೊಬ್ಬರು ಮುಟ್ಟಿಕೊಳ್ಳುವ ಪರಿಪಾಠವನ್ನೇ ನಾವು ಈ ವೈರಸ್ ನಿಂದಾಗಿ ಮರೆತುಬಿಟ್ಟಿದ್ದೇವೆ.

ಇದೀಗ ನಮಗೆಲ್ಲರಿಗೂ ತಿಳಿದಿರುವಂತೆ ಎರಡು ಪ್ರಮುಖ ವಿಚಾರಗಳಿವೆ. ಈ ಎರಡು ಅಂಶಗಳಿಂದಾಗಿ ನಾವು ಈ ವೈರಸ್ ನಿಂದ ದೂರವಿರಬಹುದು. ತೊಳೆಯುವುದು ಮತ್ತು ಎಲ್ಲವನ್ನೂ ಸ್ಯಾನಿಟೈಸ್ ಮಾಡುವುದು. ಸೋಂಕು ನಿವಾರಕ ಲಿಕ್ವಿಡ್ ಗಳನ್ನು ಬಳಸಿ ಆಗಾಗ ಸ್ವಚ್ಛತೆಯನ್ನು ನೀವಿರುವ ಪ್ರದೇಶದಲ್ಲಿ ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗಿದೆ.
ಆದರೆ ಕೆಲವರು ಸ್ಯಾನಿಟೈಸ್ ಮಾಡುವುದು ಮತ್ತು ಸೋಂಕುನಿವಾರಕಗಳೆರಡು ಒಂದೇ ಎಂದು ಭಾವಿಸಿದ್ದಾರೆ. ಆದರೆ ಇವೆರಡೂ ಕೂಡ ಬೇರೆಬೇರೆಯಾಗಿರುತ್ತದೆ. ಸ್ಯಾನಿಟೈಸರ್ ಮತ್ತು ಡಿಸ್ ಇನ್ಫೆಕ್ಟೆಂಟ್‌ಗಳಲ್ಲಿ ಬಳಸಲಾಗುವ ರಾಸಾಯನಿಕಗಳು ವಿಭಿನ್ನವಾಗಿರುತ್ತದೆ. ಹಾಗಾದ್ರೆ ಇವೆರಡರ ನಡುವಿನ ವ್ಯತ್ಯಾಸವನ್ನು ತಿಳಿದುಕೊಳ್ಳೋಣ ಬನ್ನಿ...

ಸೋಂಕು ನಿವಾರಕ ಲಿಕ್ವಿಡ್ VS ಸ್ಯಾನಿಟೈಸರ್
ಡಿಸ್ಇನ್ಫೆಕ್ಟಿಂಗ್ ಹಲವು ವಿಧದ ಎಲ್ಲಾ ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಕೊಲ್ಲಲು ಬಳಸಲಾಗುವುದು, ಏಕೆಂದರೆ ಸ್ಯಾನಿಟೈಸರ್ ಸೋಂಕು ನಿವಾರಕ ಲಿಕ್ವಿಡ್‌ನಷ್ಟು ಸ್ಟ್ರಾಂಗ್ ಅಲ್ಲ, ಸ್ಯಾನಿಟೈಸರ್ ಎಲ್ಲಾ ಬ್ಯಾಕ್ಟಿರಿಯಾ ಕೊಲ್ಲುವುದಿಲ್ಲ, ನೆಲದಲ್ಲಿರುವ ಹಾಗೂ ವಸ್ತುಗಳಲ್ಲಿರುವ ಬ್ಯಾಕ್ಟಿರಿಯಾ ಕೊಲ್ಲಲು ಸೋಂಕು ನಿವಾರಕ ತುಂಬಾ ಪರಿಣಾಮಕಾರಿ.
ಬ್ಲೀಚ್ ನಂತಹ ಕೆಲವು ಪ್ರೊಡಕ್ಟ್ ಗಳಲ್ಲಿ ಸ್ಯಾನಿಟೈಸರ್ ಮತ್ತು ಡಿಸ್ಇನ್ಫೆಕ್ಟೆಂಟ್ ಎರಡೂ ಗುಣಗಳೂ ಇದೆ. ಇದು ಬ್ಯಾಕ್ಟೀರಿಯಾ ಮತ್ತು ವೈರಸ್ ಗಳನ್ನು ಕೊಲ್ಲುತ್ತದೆ ಆದರೆ ಎಲ್ಲವನ್ನೂ ಅಲ್ಲ. ಆದರೆ ಇದು ಡಲ್ಯೂಟೆಡ್ ಆಗಿರುವುದರಿಂದಾಗಿ ಸ್ಯಾನಿಟೈಸರ್ ಮಾಡುವ ಕೆಲಸವನ್ನೂ ಕೂಡ ಮಾಡುತ್ತದೆ.

ಮನೆ ಸ್ವಚ್ಛತೆಗೆ ಸೋಂಕು ನಿವಾತಕ ಲಿಕ್ವಿಡ್ ಬೆಸ್ಟ್
ಮನೆ ಸ್ವಚ್ಛತೆಗೆ ಸ್ಯಾನಿಟೈಸರ್ ಬಳಸಿ ಮಾಡಲು ಸಾಧ್ಯವಿಲ್ಲ, ಅದಕ್ಕೆ ಸೋಂಕು ನಿವಾರಕ ಲಿಕ್ವಿಡ್ ಬಳಸಬೇಕು. ಕ್ಲೀನ್ ಮಾಡಬೇಕಾಗಿರುವ ಕೆಲವು ಜಾಗಗಳು ಉದಾಹರಣೆಗೆ ಬಾಗಿಲಿನ ಬೆಲ್ ಗಳು, ಬಾಗಿಲ ಕೀಲಿಕೈಗಳು ಇತ್ಯಾದಿ ಮನೆಯ ವಸ್ತುಗಳನ್ನು ಕೇವಲ ಸ್ಯಾನಿಟೈಸ್ ಮಾಡಿದರೆ ಸಾಕಾಗುವುದಿಲ್ಲ ಬದಲಾಗಿ ಡಿಸ್ಇನ್ಫೆಕ್ಟಿಂಗ್ ಲಿಕ್ವಿಡ್ ಬಳಸಿ ಸ್ವಚ್ಛಗೊಳಿಸಬೇಕಾಗುತ್ತದೆ. ಈ ಲಿಕ್ವಿಡ್ ಗಳನ್ನು ಸಿಂಕ್ ಮತ್ತು ಟಾಯ್ಲೆಟ್ ಗಳನ್ನು ಸ್ವಚ್ಛಗೊಳಿಸುವುದಕ್ಕೂ ಬಳಸಬಹುದು.

ಕೈಗಳಿಗೆ ಸ್ಯಾನಿಟೈಸರ್ ಬಳಸಿ
ನಿಮ್ಮ ಕೈಗಳನ್ನ ಪ್ರತಿ ಬಾರಿ ಊಟ ಮಾಡುವುದಕ್ಕೂ ಮುನ್ನ ಸ್ಯಾನಿಟೈಸ್ ಮಾಡಬೇಕಾಗುತ್ತದೆ. ನಿಮ್ಮ ಕೈಗಳಿಗೆ ಡಿಸ್ಇನ್ಫೆಕ್ಟೆಂಟ್ ಬಳಕೆ ಮಾಡಲು ಸಾಧ್ಯವಿಲ್ಲ ಯಾಕೆಂದರೆ ಇದು ನಿಮ್ಮ ಚರ್ಮವನ್ನು ಹಾನಿಗೊಳಿಸಬಹುದು ಮತ್ತು ಇವು ವಿಷಕಾರಿಯಾಗಿರುವ ಸಾಧ್ಯತೆ ಇದೆ. ಕೈಗಳಲ್ಲಿರುವ ಬ್ಯಾಕ್ಟೀರಿಯ ಮತ್ತು ವೈರಸ್ ಗಳನ್ನು ಕೊಲ್ಲಲು ಸ್ಯಾನಿಟೈಸ್ ಮಾಡಿದರೆ ಸಾಕಾಗುತ್ತದೆ. ನೆಲದಲ್ಲಿರುವ ಬ್ಯಾಕ್ಟೀರಿಯಾ ಕೊಲ್ಲಲು ನೆಲ ಒರೆಸಿ ಮತ್ತು ನಂತರ ಕೈಗಳನ್ನು ತೊಳೆದು ಸ್ವಚ್ಛಗೊಳಿಸಿ.

ದಿನಸಿ ವಸ್ತುಗಳ ಸ್ವಚ್ಛತೆ ಹೇಗೆ
ಮಾರುಕಟ್ಟೆಯಿಂದ ತಂದಿರುವ ಎಲ್ಲಾ ದಿನಸಿ ಮತ್ತು ಆಹಾರ ವಸ್ತುಗಳನ್ನು ನೀವು ಸ್ಯಾನಿಟೈಸ್ ಮಾಡಬಹುದು ಅಂದರೆ ನೀವು ಅವುಗಳನ್ನು ನೀರಿನಲ್ಲಿ ತೊಳೆಯಬಹುದು ಅಥವಾ ಒದ್ದೆ ಬಟ್ಟೆಯಿಂದ ಒರೆಸಬಹುದು. ಆದರೆ ಇಂಥ ಆಹಾರವಸ್ತುಗಳಿಗೆ ಸೋಂಕು ನಿವಾರಕ ಲಿಕ್ವಿಡ್ ಹಾಕಬಾರದು. ಯಾವುದೇ ಕಾರಣಕ್ಕೆ ಸ್ಯಾನಿಟೈಸರ್ ಅಥವಾ ಸೋಂಕು ನಿವಾರಕ ಲಿಕ್ವಿಡ್ ಬಳಸಿ ತೊಳೆಯಬಾರದು.
ಸಲಹೆ: ಕೊರೊನಾ ಸೋಂಕು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಸ್ಯಾನಿಟೈಸರ್ ಹಾಗೂ ಸೋಂಕು ನಿವಾರಕ ವಸ್ತುಗಳನ್ನು ಬಳಸಿ ವೈರಸ್, ಬ್ಯಾಕ್ಟಿರಿಯಾಗಳನ್ನು ಕೊಲ್ಲಿ, ನಿಮ್ಮನ್ನು, ನಿಮ್ಮ ಮನೆಯವರನ್ನು ಸೋಂಕಿನಿಂದ ರಕ್ಷಿಸಿ, ಅನಗ್ಯತವಾಗಿ ಹೊರಗಡೆ ಸುತ್ತಾಡಬೇಡಿ, ಹೊರಗಡೆ ಹೋಗುವಾಗ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ನಿಮ್ಮ ಬಳಿಯೇ ಇರಲಿ, ಆಗಾಗ ಬಳಸುತ್ತಾ ಇರಿ.



Click it and Unblock the Notifications











